ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
azadi ka amrit mahotsav

ಕೇಂದ್ರ ಸರ್ಕಾರದಿಂದ "ಅನ್ನ-ಚಕ್ರ" ಸಮರ್ಥ ಪೂರೈಕೆ ಸರಪಳಿ ಸಾಧನ 31 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಅನುಷ್ಠಾನ


ಸಾರ್ವಜನಿಕ ವಿತರಣಾ ವ್ಯವಸ್ಥೆಯ ಸಮರ್ಥ ನಿರ್ವಹಣಾ ತಂತ್ರಗಳ ಮೂಲಕ ವಾರ್ಷಿಕ ಅಂದಾಜು 250 ಕೋಟಿ ರೂ ಉಳಿತಾಯ

Posted On: 19 AUG 2025 5:46PM by PIB Bengaluru

ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಅಡಿಯಲ್ಲಿ "ಅನ್ನ-ಚಕ್ರ" ಸಮರ್ಥ ಪೂರೈಕೆ ಸರಪಳಿ  ಸಾಧನವನ್ನು 31 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಗೆ ತರುವ ಗುರಿ ಹೊಂದಲಾಗಿದ್ದು ಅನುಷ್ಠಾನದ ಸ್ಥಿತಿಗತಿಯ ವಿವರಗಳು ಹೀಗಿದೆ:-

ಅನುಷ್ಠಾನಗೊಳಿಸಲಾಗಿರುವ ಪ್ರದೇಶಗಳು (30 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು): ಪಂಜಾಬ್, ತೆಲಂಗಾಣ, ತಮಿಳುನಾಡು, ರಾಜಸ್ಥಾನ, ಮಿಜೋರಾಂ, ಬಿಹಾರ, ಸಿಕ್ಕಿಂ, ಗುಜರಾತ್, ಆಂಧ್ರಪ್ರದೇಶ, ನಾಗಾಲ್ಯಾಂಡ್, ಛತ್ತೀಸ್‌ಗಢ, ಗೋವಾ, ಜಾರ್ಖಂಡ್, ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶ, ಮೇಘಾಲಯ, ಅಸ್ಸಾಂ, ಉತ್ತರಾಖಂಡ, ಮಧ್ಯಪ್ರದೇಶ, ದೆಹಲಿ, ಜಮ್ಮು ಮತ್ತು ಕಾಶ್ಮೀರ, ಉತ್ತರ ಪ್ರದೇಶ, ಮಹಾರಾಷ್ಟ್ರ, ಅರುಣಾಚಲ ಪ್ರದೇಶ, ಲಡಾಖ್,  ತ್ರಿಪುರಾ, ಕೇರಳ, ಕರ್ನಾಟಕ, ಹರಿಯಾಣ ಮತ್ತು ಒಡಿಶಾ. ಇನ್ನೂ ಮಣಿಪುರದಲ್ಲಿ ಜಾರಿಯಾಗಿಲ್ಲ.

ಸಾರಿಗೆ ವೆಚ್ಚ ಕಡಿತದ ಸಂಭಾವ್ಯತೆಯನ್ನು ಅಂದಾಜು ಮಾಡಲಾಗಿರುವುದು ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್‌)ಯಲ್ಲಿ ಸಮರ್ಥ ತಂತ್ರ ಬಳಕೆಯ ಸಂಭಾವ್ಯ ಪ್ರಯೋಜನಗಳಲ್ಲಿ ಒಂದಾಗಿದೆ.  ವಾರ್ಷಿಕವಾಗಿ ರೂ. 250 ಕೋಟಿ ಉಳಿತಾಯ ಅಂದಾಜು ಮಾಡಲಾಗಿದೆ.

ಭಾರತದ ಆಹಾರ ವಿತರಣಾ ಮಾರ್ಗಗಳ ಪರಿಣಾಮಕಾರಿ ಬಳಕೆಯು ಇಂಗಾಲಾಮ್ಲ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಗಮನಾರ್ಹವಾಗಿ ಕೊಡುಗೆ ನೀಡಿದ್ದು, ಇದು ದೇಶದ ಹವಾಮಾನ ಬದಲಾವಣೆಯ ಬದ್ಧತೆಗಳಿಗೆ ಅನುಗುಣವಾಗಿದೆ.

31 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಪೈಕಿ 30 ರಾಜ್ಯಗಳಲ್ಲಿ ಸಮರ್ಪಕ ಮಾರ್ಗ‌ ಬಳಕೆ ಅಳವಡಿಸಲಾಗಿದೆ.

ಈ ಮಾಹಿತಿಯನ್ನು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ರಾಜ್ಯ ಸಚಿವರಾದ ಶ್ರೀಮತಿ ನಿಮುಬೆನ್ ಜಯಂತಿಭಾಯಿ ಬಂಭಾನಿಯಾ ಅವರು ರಾಜ್ಯಸಭೆಗೆ ಇಂದು ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

 

*****
 


(Release ID: 2158174)
Read this release in: English , Urdu , Hindi , Gujarati