ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಒಂದು ತಿಂಗಳ ಕಾಲ ಉಚಿತ 4ಜಿ ಸೇವೆಗಳನ್ನು ನೀಡಲು ಬಿ ಎಸ್ ಎನ್ ಎಲ್ 'ಫ್ರೀಡಮ್ ಪ್ಲಾನ್' ಅನ್ನು ಆರಂಭಿಸಿದೆ

Posted On: 01 AUG 2025 6:12PM by PIB Bengaluru

ಭಾರತದ ವಿಶ್ವಾಸಾರ್ಹ ಸರ್ಕಾರಿ ಸ್ವಾಮ್ಯದ ಬೃಹತ್ ಟೆಲಿಕಾಂ ಸಂಸ್ಥೆ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿ ಎಸ್ ಎನ್ ಎಲ್), ಇಂದು ತನ್ನ ಬಹು ನಿರೀಕ್ಷಿತ 'ಫ್ರೀಡಮ್ ಪ್ಲಾನ್' ಅನ್ನು ಪ್ರಾರಂಭಿಸಿದೆ - ಇದು ಸೀಮಿತ ಅವಧಿಯ ₹1 ಕೊಡುಗೆಯಾಗಿದ್ದು, ಇದು ಬಳಕೆದಾರರಿಗೆ ಬಿ ಎಸ್ ಎನ್ ಎಲ್ ನ 4ಜಿ ಮೊಬೈಲ್ ಸೇವೆಗಳನ್ನು ಒಂದು ಪೂರ್ಣ ತಿಂಗಳು ಪರೀಕ್ಷಿಸಲು ಅನುವು ಮಾಡಿಕೊಡುತ್ತದೆ. ಈ ಉಪಕ್ರಮವು ಬಿಎಸ್ ಎನ್ ಎಲ್ ನ ಭಾರತದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತದೆ ಮತ್ತು ನಾಗರಿಕರಿಗೆ ಭಾರತದ ತನ್ನದೇ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ 4ಜಿ ತಂತ್ರಜ್ಞಾನವನ್ನು ಯಾವುದೇ ವೆಚ್ಚವಿಲ್ಲದೆ ಹೊಂದಲು ಅವಕಾಶವನ್ನು ನೀಡುತ್ತದೆ.

ಈ ಯೋಜನೆಯು ಇವುಗಳನ್ನು ಒಳಗೊಂಡಿದೆ:

  • ಅನಿಯಮಿತ   ಕರೆಗಳು (ಸ್ಥಳೀಯ/ಎಸ್ ಟಿಡಿ),
  • ದಿನಕ್ಕೆ 2 ಜಿಬಿ ಹೈ-ಸ್ಪೀಡ್ ಡೇಟಾ,
  • ದಿನಕ್ಕೆ 100 ಎಸ್ ಎಂಎಸ್, ಮತ್ತು
  • ಬಿಎಸ್ಎನ್ ಎಲ್ ಸಿಮ್—ಸಂಪೂರ್ಣವಾಗಿ ಉಚಿತ.

ಈ ಕೊಡುಗೆಯ ಬಗ್ಗೆ ಘೋಷಿಸುತ್ತಾ , ಬಿ ಎಸ್ ಎನ್ ಎಲ್  ನ ಸಿ.ಎಂ.ಡಿ ಶ್ರೀ ಎ. ರಾಬರ್ಟ್ ಜೆ. ರವಿ ಅವರು ಹೀಗೆ ಹೇಳಿದರು:

"ಬಿಎಸ್ಎನ್ ಎಲ್ ಮೇಕ್-ಇನ್-ಇಂಡಿಯಾ ತಂತ್ರಜ್ಞಾನವನ್ನು ಬಳಸಿಕೊಂಡು ದೇಶಾದ್ಯಂತ 100,000 4ಜಿ ಸೈಟ್ಗಳನ್ನು ಹೊರತರುತ್ತಿದೆ ಮತ್ತು ಈ ಉಪಕ್ರಮವು ಸುರಕ್ಷಿತ, ಉತ್ತಮ ಗುಣಮಟ್ಟದ ಮತ್ತು ಕೈಗೆಟುಕುವ ಬೆಲೆಯ ಮೊಬೈಲ್ ಸಂಪರ್ಕದೊಂದಿಗೆ ಡಿಜಿಟಲ್ ಇಂಡಿಯಾವನ್ನು ಸಬಲೀಕರಣಗೊಳಿಸುವತ್ತ ಒಂದು ಪ್ರಮುಖ ಮೈಲಿಗಲ್ಲಾಗಿದೆ ಎಂದು ಅವರು ಹೇಳಿದರು".

ಎಲ್ಲಾ ನಾಗರಿಕರು ಹತ್ತಿರದ ಬಿಎಸ್ಎನ್ ಎಲ್ ಗ್ರಾಹಕ ಸೇವಾ ಕೇಂದ್ರ, ಚಿಲ್ಲರೆ ವ್ಯಾಪಾರಿಗಳ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ಅಥವಾ ಟೋಲ್-ಫ್ರೀ ಸಂಖ್ಯೆ 1800-180-1503 ಗೆ ಕರೆ ಮಾಡುವ ಮೂಲಕ 'ಫ್ರೀಡಮ್ ಪ್ಲಾನ್'  ಅನ್ನು ಪಡೆಯಬಹುದು.

"ಬಿಎಸ್ಎನ್ ಎಲ್  ನ ಮೇಡ್-ಇನ್-ಇಂಡಿಯಾ 4ಜಿ ಯೊಂದಿಗೆ ಸ್ವಾತಂತ್ರ್ಯವನ್ನು ಆಚರಿಸಿರಿ"

 

*****
 


(Release ID: 2151612)