ಹಣಕಾಸು ಸಚಿವಾಲಯ
ರಾಷ್ಟ್ರವ್ಯಾಪಿ ಹಣಕಾಸು ಸೇರ್ಪಡೆ ಪರಿಪೂರ್ಣತಾ ಅಭಿಯಾನವು ಮೊದಲ ತಿಂಗಳಲ್ಲಿ ಗಮನಾರ್ಹ ಪ್ರಗತಿಯನ್ನು ಕಂಡಿದೆ
ಜುಲೈ 1, 2025 ರಿಂದ ದೇಶದ ವಿವಿಧ ಜಿಲ್ಲೆಗಳಲ್ಲಿ ಸುಮಾರು 1 ಲಕ್ಷ ಶಿಬಿರಗಳನ್ನು ಆಯೋಜಿಸಲಾಗಿದೆ
ಪ್ರಧಾನಮಂತ್ರಿ ಜನ ಧನ್ ಯೋಜನೆಯಲ್ಲಿ ಸುಮಾರು 6.6 ಲಕ್ಷ ಹೊಸ ಖಾತೆಗಳನ್ನು ತೆರೆಯಲಾಗಿದೆ; ಒಂದು ತಿಂಗಳಲ್ಲಿ ಮೂರು ಜನಸುರಕ್ಷಾ ಯೋಜನೆಗಳ ಅಡಿಯಲ್ಲಿ 22 ಲಕ್ಷಕ್ಕೂ ಹೆಚ್ಚು ಹೊಸ ನೋಂದಣಿಗಳನ್ನು ಮಾಡಲಾಗಿದೆ
Posted On:
31 JUL 2025 7:54PM by PIB Bengaluru
ಜುಲೈ 1 ರಿಂದ ಸೆಪ್ಟೆಂಬರ್ 30, 2025 ರವರೆಗೆ ನಡೆಯುತ್ತಿರುವ ರಾಷ್ಟ್ರವ್ಯಾಪಿ ಹಣಕಾಸು ಜಾಗೃತಿ ಪರಿಪೂರ್ಣತಾ ಅಭಿಯಾನವು ತನ್ನ ಮೊದಲ ತಿಂಗಳಲ್ಲೇ ಮಹತ್ವದ ಮೈಲಿಗಲ್ಲು ಸಾಧಿಸಿದೆ. ಈ ಪರಿವರ್ತನಾತ್ಮಕ ಯೋಜನೆಗಳ ಉದ್ದೇಶಿತ ಪ್ರಯೋಜನಗಳನ್ನು ಪ್ರತಿಯೊಬ್ಬ ಅರ್ಹ ನಾಗರಿಕನು ಪಡೆಯಲು ಸಾಧ್ಯವಾಗುವಂತೆ ಮಾಡಲು, ಎಲ್ಲಾ ಗ್ರಾಮ ಪಂಚಾಯಿತಿಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಮಗ್ರ ವ್ಯಾಪ್ತಿಯನ್ನು ಖಚಿತಪಡಿಸಿಕೊಳ್ಳಲು ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆ ಈ ಉಪಕ್ರಮವನ್ನು ನಡೆಸುತ್ತಿದೆ.
ಪ್ರಮುಖ ಯೋಜನೆಗಳಾದ ಪ್ರಧಾನ ಮಂತ್ರಿ ಜನಧನ್ ಯೋಜನೆ (ಪಿಎಂಜೆಡಿವೈ), ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (ಪಿಎಂಜೆಜೆಬಿವೈ), ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿ ಎಂ ಎಸ್ ಬಿ ವೈ), ಮತ್ತು ಅಟಲ್ ಪಿಂಚಣಿ ಯೋಜನೆ (ಎಪಿವೈ)ಗಳ ಪ್ರಯೋಜನಗಳು ಸುಮಾರು 2.70 ಲಕ್ಷ ಗ್ರಾಮ ಪಂಚಾಯಿತಿಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪ್ರತಿಯೊಬ್ಬ ಅರ್ಹ ನಾಗರಿಕರಿಗೆ ತಲುಪುವಂತೆ ಖಚಿತಪಡಿಸಿಕೊಳ್ಳುವುದು ಇದರ ಉದ್ದೇಶವಾಗಿದೆ.
ಮೊದಲ ತಿಂಗಳೊಳಗೆ, ಈ ಶಿಬಿರಗಳು ಸಮುದಾಯದ ತೊಡಗಿಸಿಕೊಳ್ಳುವಿಕೆ, ದಾಖಲಾತಿ, ನವೀಕರಣ ಮತ್ತು ಜಾಗೃತಿ ಪ್ರಯತ್ನಗಳನ್ನು ಬೆಂಬಲಿಸಲು ಪ್ರಮುಖ ಸಂಪರ್ಕ ಕೇಂದ್ರಗಳಾಗಿ ಕಾರ್ಯನಿರ್ವಹಿಸಿವೆ. ಮೊದಲ ತಿಂಗಳಲ್ಲಿ ವಿವಿಧ ಜಿಲ್ಲೆಗಳಲ್ಲಿ ಒಟ್ಟು 99,753 ಶಿಬಿರಗಳನ್ನು ಆಯೋಜಿಸಲಾಗಿದ್ದು, ಅವುಗಳಲ್ಲಿ 80,462 ಶಿಬಿರಗಳ ಪ್ರಗತಿ ವರದಿಗಳನ್ನು ಈ ಕೆಳಗಿನಂತೆ ಸಂಗ್ರಹಿಸಲಾಗಿದೆ:
ವರ್ಗ
|
ವಿವರಗಳು
|
ಖಾತೆ ತೆರೆಯುವಿಕೆ
|
ಹೊಸ ಪಿಎಂಜೆಡಿವೈ ಖಾತೆಗಳು: 6,65,190
|
ನಿಷ್ಕ್ರಿಯ ಖಾತೆಗಳಿಗಾಗಿ ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ (ಕೆವೈಸಿ) ವಿವರಗಳ ಮರು ಪರಿಶೀಲನೆ:
|
ಪಿಎಂಜೆಡಿವೈ ಖಾತೆಗಳು: 4,73,383
ಇತರ ಉಳಿತಾಯ ಖಾತೆಗಳು: 5,65,051
|
ನಾಮನಿರ್ದೇಶನ ನವೀಕರಣ
|
ಪಿಎಂಜೆಡಿವೈ ಖಾತೆಗಳು: 2,81,188
ಇತರ ಖಾತೆಗಳು: 2,65,617
|
ಸಾಮಾಜಿಕ ಭದ್ರತಾ ಯೋಜನೆ ನೋಂದಣಿ
|
ಪಿಎಂಜೆಜೆಬಿವೈ: 7,46,129
ಪಿ ಎಂ ಎಸ್ ಬಿ ವೈ: 12,36,548
ಎಪಿವೈ: 2,82,905
|
ಪಿಎಂಜೆಜೆಬಿವೈ ಮತ್ತು ಪಿ ಎಂ ಎಸ್ ಬಿ ವೈ ಅಡಿಯಲ್ಲಿ ಇತ್ಯರ್ಥಪಡಿಸಲಾದ ಕ್ಲೇಮುಗಳು
|
6,538
|
ಆರ್ಥಿಕ ಸಾಕ್ಷರತಾ ಕಾರ್ಯಕ್ರಮದ ಗಮನ
|
ಡಿಜಿಟಲ್ ವಂಚನೆ ಜಾಗೃತಿ
ಕ್ಲೇಮ್ ಮಾಡದ ಠೇವಣಿಗಳಿಗೆ ಪ್ರವೇಶ
ಕುಂದುಕೊರತೆ ಪರಿಹಾರ ಕಾರ್ಯವಿಧಾನಗಳು
|
ಅಭಿಯಾನ ಮುಂದುವರೆದಂತೆ, ಸಮಗ್ರ ಮತ್ತು ಸುಸ್ಥಿರ ಅಭಿವೃದ್ಧಿಯ ವಿಶಾಲ ದೃಷ್ಟಿಕೋನಕ್ಕೆ ಅನುಗುಣವಾಗಿ ಗ್ರಾಮ ಪಂಚಾಯಿತಿಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳನ್ನು ಒಳಗೊಳ್ಳಲು ಮತ್ತು ಸಮುದಾಯದ ಭಾಗವಹಿಸುವಿಕೆಯನ್ನು ಗರಿಷ್ಠಗೊಳಿಸಲು ನಿರಂತರ ಪ್ರಯತ್ನಗಳನ್ನು ಮಾಡಲಾಗುವುದು. ಮುಂಬರುವ ಶಿಬಿರಗಳ ಕುರಿತು ಉದ್ದೇಶಿತ ಜಾಹೀರಾತುಗಳು ಮತ್ತು ಪ್ರಚಾರದ ಮೂಲಕ, ಜನರು ಈ ಕೇಂದ್ರಗಳಿಗೆ ಭೇಟಿ ನೀಡಲು ಮತ್ತು ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಪ್ರೋತ್ಸಾಹಿಸಲಾಗುತ್ತದೆ.
ಅನುಷ್ಠಾನದ ಪ್ರತಿಯೊಂದು ಹಂತದಲ್ಲೂ ಪಾಲುದಾರರ ಸಕ್ರಿಯ ಮತ್ತು ಅರ್ಥಪೂರ್ಣ ಭಾಗವಹಿಸುವಿಕೆಯ ಆಧಾರದ ಮೇಲೆ, ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳಿಗೆ ಕೊನೆಯ ಮೈಲಿ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಬದ್ಧವಾಗಿದೆ.
*****
(Release ID: 2151133)