ಹಣಕಾಸು ಸಚಿವಾಲಯ
azadi ka amrit mahotsav

ಅಟಲ್ ಪಿಂಚಣಿ ಯೋಜನೆ (ಎಪಿವೈ) ಪ್ರಮುಖ ಮೈಲಿಗಲ್ಲು ಸಾಧಿಸಿದೆ, ಒಟ್ಟು ದಾಖಲಾತಿ 8 ಕೋಟಿ ದಾಟಿದೆ

Posted On: 25 JUL 2025 5:44PM by PIB Bengaluru

ಪಿ ಎಫ್‌ ಆರ್‌ ಡಿ ಎ ನಿರ್ವಹಿಸುವ ಭಾರತ ಸರ್ಕಾರದ ಪ್ರಮುಖ ಸಾಮಾಜಿಕ ಭದ್ರತಾ ಯೋಜನೆಯಾದ ಅಟಲ್ ಪಿಂಚಣಿ ಯೋಜನೆ (ಎಪಿವೈ), ಪ್ರಸಕ್ತ ಹಣಕಾಸು ವರ್ಷದಲ್ಲಿ (2025-26) 39 ಲಕ್ಷ ಹೊಸ ಚಂದಾದಾರರ ಸೇರ್ಪಡೆಯೊಂದಿಗೆ ಒಟ್ಟು 8 ಕೋಟಿ ಒಟ್ಟು ದಾಖಲಾತಿಗಳನ್ನು ದಾಟುವ ಮೂಲಕ ಮಹತ್ವದ ಮೈಲಿಗಲ್ಲು ಸಾಧಿಸಿದೆ. ಮೇ 9, 2015 ರಂದು ಪ್ರಾರಂಭವಾದ ಯೋಜನೆಯು 10 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಈ ಮೈಲಿಗಲ್ಲನ್ನು ಸಾಧಿಸಿದೆ.

ಎಲ್ಲಾ ಭಾರತೀಯರಿಗೂ ಸಾರ್ವತ್ರಿಕ ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನು ಸೃಷ್ಟಿಸುವ ಉದ್ದೇಶದಿಂದ ಪ್ರಾರಂಭಿಸಲಾದ ಎಪಿವೈ, ಬಡವರು, ಹಿಂದುಳಿದವರು ಮತ್ತು ಅಸಂಘಟಿತ ವಲಯದ ಕಾರ್ಮಿಕರ ಮೇಲೆ ಕೇಂದ್ರೀಕರಿಸಿದ ಸ್ವಯಂಪ್ರೇರಿತ, ಕೊಡುಗೆ ಪಿಂಚಣಿ ಯೋಜನೆಯಾಗಿದೆ. ಇದರ ಗಮನಾರ್ಹ ಯಶಸ್ಸು ಎಲ್ಲಾ ಬ್ಯಾಂಕುಗಳು, ಅಂಚೆ ಇಲಾಖೆ ಮತ್ತು ಎಸ್‌ ಎಲ್‌ ಬಿ ಸಿ ಗಳು/ಯು ಟಿ ಎಲ್‌ ಬಿ ಸಿ ಗಳ ಸಮರ್ಪಿತ ಮತ್ತು ಅವಿರತ ಪ್ರಯತ್ನಗಳು ಮತ್ತು ಭಾರತ ಸರ್ಕಾರದ ನಿರಂತರ ಬೆಂಬಲದ ಫಲಿತಾಂಶವಾಗಿದೆ. ಪಿ ಎಫ್‌ ಆರ್‌ ಡಿ ಎ ಜನಸಂಪರ್ಕ ಕಾರ್ಯಕ್ರಮಗಳು, ತರಬೇತಿಗಳು, ಬಹುಭಾಷಾ ಕರಪತ್ರಗಳು, ಮಾಧ್ಯಮ ಅಭಿಯಾನಗಳು ಮತ್ತು ನಿಯಮಿತ ಪರಿಶೀಲನೆಗಳ ಮೂಲಕ ದಾಖಲಾತಿಗಳನ್ನು ಸಕ್ರಿಯವಾಗಿ ಉತ್ತೇಜಿಸಿದೆ.

ಎಪಿಐ ಅನ್ನು 'ಸಂಪೂರ್ಣ ರಕ್ಷಣಾ ಕವಚ'ವನ್ನು ಒದಗಿಸಲು ಎಚ್ಚರಿಕೆಯಿಂದ ವಿನ್ಯಾಸಗೊಳಿಸಲಾಗಿದೆ, ಇದರಲ್ಲಿ 60 ವರ್ಷದ ನಂತರ ಚಂದಾದಾರರಿಗೆ ₹1,000 ರಿಂದ ₹5,000 ರವರೆಗಿನ ಖಾತರಿಯ ಮಾಸಿಕ ಪಿಂಚಣಿ, ಚಂದಾದಾರರ ಮರಣದ ನಂತರ ಅವರ ಸಂಗಾತಿಗೆ ಇದೇ ರೀತಿಯ ಪಿಂಚಣಿ ಮತ್ತು ಇಬ್ಬರ ಮರಣದ ನಂತರ ನಾಮನಿರ್ದೇಶಿತರಿಗೆ ಠೇವಣಿ ಮೊತ್ತವನ್ನು ಹಿಂತಿರುಗಿಸುವುದು ಸೇರಿವೆ. ಇದು ಆದಾಯ ತೆರಿಗೆ ಪಾವತಿದಾರರನ್ನು ಹೊರತುಪಡಿಸಿ, 18-40 ವರ್ಷ ವಯಸ್ಸಿನ ಎಲ್ಲಾ ಭಾರತೀಯ ನಾಗರಿಕರಿಗೆ ಮುಕ್ತವಾಗಿದೆ.

"ಎಪಿಐ ನಿಮ್ಮೊಂದಿಗಿದ್ದರೆ, ಜೀವನದ ಸುರಕ್ಷತಾ ಜಾಲವು ನಿಮ್ಮೊಂದಿಗಿರುತ್ತದೆ"

 

*****


(Release ID: 2148667)