ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
ಮೇ 2025 ರಲ್ಲಿ 20.06 ಲಕ್ಷ ನಿವ್ವಳ ಸದಸ್ಯರೊಂದಿಗೆ ಇ.ಪಿ.ಎಫ್.ಒ ಸಾರ್ವಕಾಲಿಕ ಅತ್ಯಧಿಕ ಸೇರ್ಪಡೆ ದಾಖಲಿಸಿದೆ; ಇ.ಪಿ.ಎಫ್.ಒ ಗೆ 9.42 ಲಕ್ಷ ಹೊಸ ಸದಸ್ಯರು ದಾಖಲಾಗಿದ್ದಾರೆ
ಈ ಐತಿಹಾಸಿಕ ಸಾಧನೆಯು ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೂರದರ್ಶಿ ನಾಯಕತ್ವ ಮತ್ತು ಯುವಜನ ಪರ, ಕಾರ್ಮಿಕ ಪರ ಸುಧಾರಣೆಗಳಿಗೆ ಸರ್ಕಾರದ ಅಚಲ ಬದ್ಧತೆಯ ನೇರ ಪರಿಣಾಮವಾಗಿದೆ: ಡಾ. ಮಾಂಡವಿಯಾ
Posted On:
21 JUL 2025 3:51PM by PIB Bengaluru
ನೌಕರರ ಭವಿಷ್ಯ ನಿಧಿ ಸಂಸ್ಥೆ (ಇ.ಪಿ.ಎಫ್.ಒ) ಮೇ 2025 ರ ತಾತ್ಕಾಲಿಕ ವೇತನದಾರರ ಡೇಟಾವನ್ನು ಬಿಡುಗಡೆ ಮಾಡಿದೆ, ಇದು 20.06 ಲಕ್ಷ ಸದಸ್ಯರ ನಿವ್ವಳ ಸೇರ್ಪಡೆಯನ್ನು ಬಹಿರಂಗಪಡಿಸಿದೆ, ಇದು ಏಪ್ರಿಲ್ 2018ರಲ್ಲಿ ವೇತನದಾರರ ದತ್ತಾಂಶ ಟ್ರ್ಯಾಕಿಂಗ್ ಪ್ರಾರಂಭವಾದಾಗಿನಿಂದ ದಾಖಲಾದ ಅತ್ಯಧಿಕ ಸೇರ್ಪಡೆಯಾಗಿದೆ. ಈ ಅಂಕಿ ಅಂಶವು ಹಿಂದಿನ ಏಪ್ರಿಲ್ 2025 ರ ತಿಂಗಳಿಗೆ ಹೋಲಿಸಿದರೆ ಪ್ರಸ್ತುತ ತಿಂಗಳಲ್ಲಿ ನಿವ್ವಳ ವೇತನದಾರರ ಸೇರ್ಪಡೆಯಲ್ಲಿ ಶೇ.4.79 ಹೆಚ್ಚಳವನ್ನು ಪ್ರತಿನಿಧಿಸುತ್ತದೆ.
ಇದಲ್ಲದೆ, ವರ್ಷದಿಂದ ವರ್ಷದ ವಿಶ್ಲೇಷಣೆಯು ಮೇ 2024 ಕ್ಕೆ ಹೋಲಿಸಿದರೆ ನಿವ್ವಳ ವೇತನ ಸೇರ್ಪಡೆಯು ಶೇ.2.84 ರಷ್ಟು ಹೆಚ್ಚಾಗಿದೆ ಎಂದು ತೋರಿಸುತ್ತದೆ, ಇದು ಹೆಚ್ಚಿದ ಉದ್ಯೋಗಾವಕಾಶಗಳು ಮತ್ತು ಇ.ಪಿ.ಎಫ್.ಒ ದ ಪರಿಣಾಮಕಾರಿ ಸಂಪರ್ಕ ಉಪಕ್ರಮಗಳಿಂದ ಬಲಪಡಿಸಲಾದ ಉದ್ಯೋಗಿ ಸೌಲಭ್ಯಗಳ ಬಗ್ಗೆ ಹೆಚ್ಚುತ್ತಿರುವ ಜಾಗೃತಿಯನ್ನು ಪ್ರತಿಬಿಂಬಿಸುತ್ತದೆ.
ಈ ಸಾಧನೆಯ ಕುರಿತು ಮಾತನಾಡಿದ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಹಾಗೂ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ, "ಇ.ಪಿ.ಎಫ್.ಒ ಮೇ 2025 ರಲ್ಲಿ ಸಾರ್ವಕಾಲಿಕ ಅತ್ಯಧಿಕ ನಿವ್ವಳ ಸದಸ್ಯರ ಸೇರ್ಪಡೆಯನ್ನು ದಾಖಲಿಸಿದೆ, ಇದು ಭಾರತದ ಔಪಚಾರಿಕ ಉದ್ಯೋಗ ವಲಯವು ಬೆಳೆಯುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಈ ಐತಿಹಾಸಿಕ ಸಾಧನೆಯು ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೂರದರ್ಶಿ ನಾಯಕತ್ವ ಮತ್ತು ಯುವಜನರ ಪರ, ಕಾರ್ಮಿಕರ ಪರ ಸುಧಾರಣೆಗಳಿಗೆ ಸರ್ಕಾರದ ಅಚಲ ಬದ್ಧತೆಯ ನೇರ ಪರಿಣಾಮವಾಗಿದೆ. ಪ್ರಧಾನ ಮಂತ್ರಿಯವರ ಮಾರ್ಗದರ್ಶನದಲ್ಲಿ, ವ್ಯವಹಾರ ಮಾಡುವ ಸುಲಭತೆ ಮತ್ತು ಆರ್ಥಿಕ ಸಬಲೀಕರಣದ ಮೇಲಿನ ನಮ್ಮ ಗಮನವು ಸ್ಪಷ್ಟ ಫಲಿತಾಂಶಗಳನ್ನು ನೀಡುತ್ತಿದೆ ಮತ್ತು ವಿಕಸಿತ ಭಾರತಕ್ಕಾಗಿ ಬಲವಾದ ಮತ್ತು ಅಂತರ್ಗತ ಕಾರ್ಮಿಕ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ನಾವು ಬದ್ಧರಾಗಿದ್ದೇವೆ" ಎಂದು ಹೇಳಿದರು.
ಇ.ಪಿ.ಎಫ್.ಒ ವೇತನದಾರರ ದತ್ತಾಂಶದ (ಮೇ 2025) ಮುಖ್ಯಾಂಶಗಳು ಈ ಕೆಳಗಿನಂತಿವೆ:
ಹೊಸ ಚಂದಾದಾರರು:
ಇ.ಪಿ.ಎಫ್.ಒ ಮೇ 2025 ರಲ್ಲಿ ಸುಮಾರು 9.42 ಲಕ್ಷ ಹೊಸ ಚಂದಾದಾರರನ್ನು ನೋಂದಾಯಿಸಿಕೊಂಡಿದೆ, ಇದು ಏಪ್ರಿಲ್ 2025 ಕ್ಕಿಂತ ಶೇ.11.04 ರಷ್ಟು ಹೆಚ್ಚಳವನ್ನು ತೋರಿಸುತ್ತದೆ. ಹೊಸ ಚಂದಾದಾರರ ಈ ಹೆಚ್ಚಳಕ್ಕೆ ಹೆಚ್ಚುತ್ತಿರುವ ಉದ್ಯೋಗಾವಕಾಶಗಳು, ಉದ್ಯೋಗಿ ಸೌಲಭ್ಯಗಳ ಬಗ್ಗೆ ಹೆಚ್ಚಿದ ಅರಿವು ಮತ್ತು ಇ.ಪಿ.ಎಫ್.ಒ ದ ಯಶಸ್ವಿ ಸಂಪರ್ಕ ಕಾರ್ಯಕ್ರಮಗಳು ಕಾರಣವೆಂದು ಹೇಳಬಹುದು.
18-25 ವಯೋಮಾನದ ಗುಂಪು ವೇತನದಾರರಲ್ಲಿ ಮುಂಚೂಣಿಯಲ್ಲಿದೆ:
ಡೇಟಾದ ಗಮನಾರ್ಹ ಅಂಶವೆಂದರೆ 18-25 ವಯಸ್ಸಿನ ಗುಂಪಿನ ಪ್ರಾಬಲ್ಯ. ಇ.ಪಿ.ಎಫ್.ಒ 18-25 ವಯೋಮಾನದ ಗುಂಪಿನಲ್ಲಿ 5.60 ಲಕ್ಷ ಹೊಸ ಚಂದಾದಾರರನ್ನು ಸೇರಿಸಿಕೊಂಡಿದೆ, ಇದು ಮೇ 2025 ರಲ್ಲಿ ಸೇರ್ಪಡೆಯಾದ ಒಟ್ಟು ಹೊಸ ಚಂದಾದಾರರಲ್ಲಿ ಗಮನಾರ್ಹವಾದ ಶೇ.59.48 ರಷ್ಟಿದೆ. 2025 ರ ಏಪ್ರಿಲ್ ತಿಂಗಳಿಗೆ ಹೋಲಿಸಿದರೆ ಈ ತಿಂಗಳು 18-25 ವರ್ಷ ವಯಸ್ಸಿನ ಹೊಸ ಚಂದಾದಾರರ ಸಂಖ್ಯೆಯು ಶೇ. 14.53 ರಷ್ಟು ಹೆಚ್ಚಾಗಿದೆ.
ಇದಲ್ಲದೆ, ಮೇ 2025 ರಲ್ಲಿ 18-25 ವರ್ಷ ವಯಸ್ಸಿನವರ ನಿವ್ವಳ ವೇತನದಾರರ ಸೇರ್ಪಡೆಯು ಸರಿಸುಮಾರು 8.73 ಲಕ್ಷವಾಗಿದ್ದು, ಇದು ಹಿಂದಿನ ಏಪ್ರಿಲ್ 2025 ನೇ ತಿಂಗಳಿಗಿಂತ ಶೇ.15.10 ರಷ್ಟು ಹೆಚ್ಚಳ ಮತ್ತು ಮೇ 2024 ರಲ್ಲಿನ ವರ್ಷಕ್ಕಿಂತ ಶೇ.0.11 ರಷ್ಟು ಬೆಳವಣಿಗೆಯಾಗಿದೆ. ಇದು ಹಿಂದಿನ ಪ್ರವೃತ್ತಿಗೆ ಅನುಗುಣವಾಗಿದೆ, ಇದು ಸಂಘಟಿತ ಕಾರ್ಮಿಕಪಡೆಗೆ ಸೇರುವ ಹೆಚ್ಚಿನ ವ್ಯಕ್ತಿಗಳು ಯುವಜನರು, ಪ್ರಾಥಮಿಕವಾಗಿ ಮೊದಲ ಬಾರಿಯ ಉದ್ಯೋಗಾಕಾಂಕ್ಷಿಗಳು ಎಂದು ಸೂಚಿಸುತ್ತದೆ.
ಮರು ಸೇರ್ಪಡೆಯಾದ ಸದಸ್ಯರು:
ಈ ಹಿಂದೆ ಇ.ಪಿ.ಎಫ್.ಒ ತೊರೆದಿದ್ದ ಸುಮಾರು 16.11 ಲಕ್ಷ ಸದಸ್ಯರು ಮೇ 2025 ರಲ್ಲಿ ಮತ್ತೆ ಸೇರಿದ್ದಾರೆ. ಈ ಅಂಕಿ ಅಂಶವು ಏಪ್ರಿಲ್ 2025 ಕ್ಕೆ ಹೋಲಿಸಿದರೆ ಶೇ.2.12 ಹೆಚ್ಚಳವನ್ನು ಸೂಚಿಸುತ್ತದೆ. ಇದು ಮೇ 2024 ಕ್ಕೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ ಶೇ. 14.27 ರಷ್ಟು ಗಮನಾರ್ಹ ಬೆಳವಣಿಗೆಯನ್ನು ತೋರಿಸುತ್ತದೆ. ಈ ಸದಸ್ಯರು ತಮ್ಮ ಉದ್ಯೋಗಗಳನ್ನು ಬದಲಾಯಿಸಿದ್ದಾರೆ ಮತ್ತು ಇ.ಪಿ.ಎಫ್.ಒ ವ್ಯಾಪ್ತಿಗೆ ಒಳಪಟ್ಟ ಸಂಸ್ಥೆಗಳಿಗೆ ಮತ್ತೆ ಸೇರಿದ್ದಾರೆ ಮತ್ತು ಅಂತಿಮ ಇತ್ಯರ್ಥಕ್ಕೆ ಅರ್ಜಿ ಸಲ್ಲಿಸುವ ಬದಲು ತಮ್ಮ ಸಂಗ್ರಹದ ಮೊತ್ತವನ್ನು ವರ್ಗಾಯಿಸಲು ಆಯ್ಕೆ ಮಾಡಿಕೊಂಡಿದ್ದಾರೆ. ಇದರಿಂದಾಗಿ ದೀರ್ಘಕಾಲೀನ ಆರ್ಥಿಕ ಯೋಗಕ್ಷೇಮವನ್ನು ಕಾಪಾಡಿಕೊಂಡು ತಮ್ಮ ಸಾಮಾಜಿಕ ಭದ್ರತಾ ರಕ್ಷಣೆಯನ್ನು ವಿಸ್ತರಿಸಿಕೊಂಡಿದ್ದಾರೆ.
ಮಹಿಳಾ ಸದಸ್ಯತ್ವದಲ್ಲಿ ಹೆಚ್ಚಳ:
ಮೇ 2025 ರಲ್ಲಿ ಸುಮಾರು 2.62 ಲಕ್ಷ ಹೊಸ ಮಹಿಳಾ ಚಂದಾದಾರರು ಇ.ಪಿ.ಎಫ್.ಒ ಗೆ ಸೇರ್ಪಡೆಗೊಂಡಿದ್ದಾರೆ. ಇದು 2025 ರ ಏಪ್ರಿಲ್ ತಿಂಗಳಿಗೆ ಹೋಲಿಸಿದರೆ ಶೇ. 7.08 ರಷ್ಟು ಹೆಚ್ಚಳವನ್ನು ಪ್ರತಿಬಿಂಬಿಸುತ್ತದೆ. ಮೇ 2024 ಕ್ಕೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ ಶೇ. 5.84 ರಷ್ಟು ಬೆಳವಣಿಗೆಯನ್ನು ಸೂಚಿಸುತ್ತದೆ.
ಇದಲ್ಲದೆ, ಈ ತಿಂಗಳಲ್ಲಿ ನಿವ್ವಳ ಮಹಿಳಾ ವೇತನದಾರರ ಸೇರ್ಪಡೆ ಸುಮಾರು 4.25 ಲಕ್ಷವಾಗಿದ್ದು, ಏಪ್ರಿಲ್ 2025 ಕ್ಕೆ ಹೋಲಿಸಿದರೆ ತಿಂಗಳಿಂದ ತಿಂಗಳಿಗೆ ಶೇ. 7.54 ರಷ್ಟು ಹೆಚ್ಚಳ ಮತ್ತು ಮೇ 2024 ಕ್ಕೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ ಶೇ. 15.04 ರಷ್ಟು ಗಮನಾರ್ಹ ಬೆಳವಣಿಗೆಯಾಗಿದೆ. ಮಹಿಳಾ ಸದಸ್ಯರ ಸೇರ್ಪಡೆಯಲ್ಲಿನ ಬೆಳವಣಿಗೆಯು ಹೆಚ್ಚು ಅಂತರ್ಗತ ಮತ್ತು ವೈವಿಧ್ಯಮಯ ಕಾರ್ಮಿಕಪಡೆಯ ಕಡೆಗೆ ವಿಶಾಲವಾದ ಬದಲಾವಣೆಯನ್ನು ಸೂಚಿಸುತ್ತದೆ.
ರಾಜ್ಯವಾರು ಕೊಡುಗೆ:
ವೇತನದಾರರ ದತ್ತಾಂಶದ ರಾಜ್ಯವಾರು ವಿಶ್ಲೇಷಣೆಯು ಅಗ್ರ ಐದು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ನಿವ್ವಳ ವೇತನದಾರರಲ್ಲಿ ಸುಮಾರು ಶೇ.59.98 ರಷ್ಟು ಸೇರಿಸಿದ್ದು, ಈ ತಿಂಗಳಲ್ಲಿ ಒಟ್ಟು 12.03 ಲಕ್ಷ ನಿವ್ವಳ ವೇತನದಾರರನ್ನು ಸೇರಿಸಿವೆ ಎಂದು ತೋರಿಸುತ್ತದೆ. ಎಲ್ಲಾ ರಾಜ್ಯಗಳ ಪೈಕಿ, ಮಹಾರಾಷ್ಟ್ರವು ಈ ತಿಂಗಳಲ್ಲಿ ನಿವ್ವಳ ವೇತನದಾರರ ಪಟ್ಟಿಯಲ್ಲಿ ಶೇ.20.33 ರಷ್ಟು ಸೇರಿಸುವ ಮೂಲಕ ಮುಂಚೂಣಿಯಲ್ಲಿದೆ. ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಗುಜರಾತ್, ಹರಿಯಾಣ, ದೆಹಲಿ, ಉತ್ತರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ವೈಯಕ್ತಿಕವಾಗಿ ಈ ತಿಂಗಳಲ್ಲಿ ಒಟ್ಟು ನಿವ್ವಳ ವೇತನದಾರರಲ್ಲಿ ಶೇ.5 ಕ್ಕಿಂತ ಹೆಚ್ಚು ಸೇರಿಸಿವೆ.
ಉದ್ಯಮವಾರು ಪ್ರವೃತ್ತಿಗಳು:
ಉದ್ಯಮವಾರು ದತ್ತಾಂಶದ ಮಾಸಿಕ ಹೋಲಿಕೆಯು ಕೈಗಾರಿಕೆಗಳಲ್ಲಿ ತೊಡಗಿರುವ ಸಂಸ್ಥೆಗಳಲ್ಲಿ ಕೆಲಸ ಮಾಡುವ ನಿವ್ವಳ ವೇತನದಾರರ ಸೇರ್ಪಡೆಯಲ್ಲಿ ಗಮನಾರ್ಹ ಬೆಳವಣಿಗೆಯನ್ನು ತೋರಿಸುತ್ತದೆ.
i. ತಜ್ಞ ಸೇವೆಗಳು
ii. ಜವಳಿ
iii. ಶುಚಿಗೊಳಿಸುವ, ಗುಡಿಸುವ ಸೇವೆಗಳಲ್ಲಿ ತೊಡಗಿರುವ ಏಜೆನ್ಸಿಗಳು
iv. ಎಲೆಕ್ಟ್ರಾನಿಕ್, ಮೆಕ್ಯಾನಿಕ್ ಅಥವಾ ಸಾಮಾನ್ಯ ಎಂಜಿನಿಯರಿಂಗ್ ಉತ್ಪನ್ನಗಳು
v. ಹಣಕಾಸು ಸಂಸ್ಥೆಗಳು
vi. ಉಡುಪು ತಯಾರಿಕೆ
ಮೇ 2025 ರ ತಿಂಗಳಲ್ಲಿ ಒಟ್ಟು ನಿವ್ವಳ ವೇತನದಾರರ ಸೇರ್ಪಡೆಯಲ್ಲಿ, ಸುಮಾರು ಶೇ.44.61 ರಷ್ಟು ತಜ್ಞ ಸೇವೆಗಳಿಂದ ಬಂದಿದೆ, ಅದರಲ್ಲಿ ಸುಮಾರು ಶೇ.51.71 ರಷ್ಟು ಮಾನವಶಕ್ತಿ ಪೂರೈಕೆದಾರರಿಂದ ಬಂದಿದೆ. ಇದಲ್ಲದೆ, ತಜ್ಞ ಸೇವೆಗಳ ವರ್ಗೀಕರಣವು ಈ ಕೆಳಗಿನಂತಿರುತ್ತದೆ:
ತಜ್ಞ ಸೇವೆಗಳ ಉಪ-ವರ್ಗೀಕರಣ
|
ನಿವ್ವಳ ವೇತನದಾರರು
|
ತಜ್ಞ ಸೇವೆಗಳು (ವರ್ಗೀಕರಿಸಲಾಗಿಲ್ಲ)
|
1,38,294
|
ಮಾನವಶಕ್ತಿ ಪೂರೈಕೆದಾರರು
|
4,62,735
|
ವಿವಿಧ ಚಟುವಟಿಕೆಗಳು
|
1,09,234
|
ಸಾಮಾನ್ಯ ಗುತ್ತಿಗೆದಾರರು
|
87,378
|
ಭದ್ರತಾ ಸೇವೆಗಳು
|
97,172
|
ಒಟ್ಟು
|
8,94,813
|
ದತ್ತಾಂಶ ರಚನೆಯು ನಿರಂತರ ಪ್ರಕ್ರಿಯೆಯಾಗಿರುವುದರಿಂದ ಮತ್ತು ನೌಕರರ ದಾಖಲೆಗಳನ್ನು ನವೀಕರಿಸುವುದು ಸಹ ನಿರಂತರ ಪ್ರಕ್ರಿಯೆಯಾಗಿರುವುದರಿಂದ ಮೇಲಿನ ವೇತನದಾರರ ದತ್ತಾಂಶವು ತಾತ್ಕಾಲಿಕವಾಗಿದೆ. ಹಿಂದಿನ ದತ್ತಾಂಶವನ್ನು ಈ ಕೆಳಗಿನ ಕಾರಣಗಳಿಗಾಗಿ ಪ್ರತಿ ತಿಂಗಳು ನವೀಕರಿಸಲಾಗುತ್ತದೆ:
i. ವೇತನದಾರರ ವರದಿಯನ್ನು ಸಿದ್ಧಪಡಿಸಿದ ನಂತರ ಹಿಂದಿನ ತಿಂಗಳುಗಳ ಇ.ಸಿ.ಆರ್ ಗಳನ್ನು ಸಲ್ಲಿಸಲಾಗುತ್ತಿದೆ.
ii. ವೇತನದಾರರ ವರದಿಯನ್ನು ಸಿದ್ಧಪಡಿಸಿದ ನಂತರ ಈ ಹಿಂದೆ ಸಲ್ಲಿಸಲಾದ ಇ.ಸಿ.ಆರ್ ಗಳನ್ನು ಪರಿಷ್ಕರಿಸಲಾಗುತ್ತಿದೆ.
iii. ವೇತನದಾರರ ವರದಿಯನ್ನು ಸಿದ್ಧಪಡಿಸಿದ ನಂತರ ಹಿಂದಿನ ತಿಂಗಳುಗಳ ನಿರ್ಗಮನ ದಿನಾಂಕವನ್ನು ನಮೂದಿಸಲಾಗುತ್ತಿದೆ.
ಏಪ್ರಿಲ್ 2018 ರಿಂದ, ಇ.ಪಿ.ಎಫ್.ಒ ಸೆಪ್ಟೆಂಬರ್ 2017 ರ ಅವಧಿಯ ನಂತರದ ವೇತನದಾರರ ಡೇಟಾವನ್ನು ಬಿಡುಗಡೆ ಮಾಡುತ್ತಿದೆ. ಮಾಸಿಕ ವೇತನದಾರರ ದತ್ತಾಂಶದಲ್ಲಿ, ಆಧಾರ್ ದೃಢೀಕೃತ ಸಾರ್ವತ್ರಿಕ ಖಾತೆ ಸಂಖ್ಯೆ (ಯು.ಎ.ಎನ್) ಮೂಲಕ ಮೊದಲ ಬಾರಿಗೆ ಇ.ಪಿ.ಎಫ್.ಒ ಗೆ ಸೇರುವ ಸದಸ್ಯರ ಸಂಖ್ಯೆ, ಇ.ಪಿ.ಎಫ್.ಒ ವ್ಯಾಪ್ತಿಯಿಂದ ನಿರ್ಗಮಿಸುವ ಅಸ್ತಿತ್ವದಲ್ಲಿರುವ ಸದಸ್ಯರು ಮತ್ತು ಸದಸ್ಯರಾಗಿ ನಿರ್ಗಮಿಸಿದ ಆದರೆ ಮತ್ತೆ ಸೇರ್ಪಡೆಗೊಂಡವರ ಸಂಖ್ಯೆಯನ್ನು ನಿವ್ವಳ ಮಾಸಿಕ ವೇತನದಾರರೆಂದು ಪರಿಗಣಿಸಲಾಗುತ್ತದೆ.
*****
(Release ID: 2146463)