ಪ್ರಧಾನ ಮಂತ್ರಿಯವರ ಕಛೇರಿ
ಭಾರತದ ರಾಷ್ಟ್ರಪತಿ ಅವರಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಗಣ್ಯ ವ್ಯಕ್ತಿಗಳಿಗೆ ಪ್ರಧಾನಮಂತ್ರಿ ಅಭಿನಂದನೆ
Posted On:
13 JUL 2025 10:47AM by PIB Bengaluru
ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಭಾರತದ ರಾಷ್ಟ್ರಪತಿ ಅವರಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವ ನಾಲ್ವರು ಗಣ್ಯ ವ್ಯಕ್ತಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭ ಹಾರೈಕೆಗಳನ್ನು ಸಲ್ಲಿಸಿದ್ದಾರೆ.
ಸಾಮಾಜಿಕ ಮಾಧ್ಯಮ ವೇದಿಕೆ ‘ಎಕ್ಸ್’ ನಲ್ಲಿ ಸರಣಿ ಪೋಸ್ಟ್ ಗಳಲ್ಲಿ, ಪ್ರಧಾನಮಂತ್ರಿ ಅವರು ಪ್ರತಿಯೊಬ್ಬ ನಾಮನಿರ್ದೇಶಿತರ ಕೊಡುಗೆಗಳನ್ನು ಬಿಂಬಿಸಿದ್ದಾರೆ.
ಶ್ರೀ ಉಜ್ವಲ್ ನಿಕಮ್ ಅವರು ಕಾನೂನು ವೃತ್ತಿಗೆ ನೀಡಿದ ಅನುಕರಣೀಯ ಭಕ್ತಿ ಮತ್ತು ಸಾಂವಿಧಾನಿಕ ಮೌಲ್ಯಗಳಿಗೆ ಅಚಲ ಬದ್ಧತೆಯನ್ನು ಪ್ರಧಾನಿ ಶ್ಲಾಘಿಸಿದರು. ಶ್ರೀ ನಿಕಮ್ ಅವರು ಯಶಸ್ವಿ ವಕೀಲರಾಗಿದ್ದು, ಪ್ರಮುಖ ಕಾನೂನು ಪ್ರಕರಣಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಮತ್ತು ಸಾಮಾನ್ಯ ನಾಗರಿಕರ ಘನತೆಯನ್ನು ಎತ್ತಿಹಿಡಿಯಲು ನಿರಂತರವಾಗಿ ಕೆಲಸ ಮಾಡಿದ್ದಾರೆ ಎಂದು ಅವರು ಹೇಳಿದರು. ಶ್ರೀ ನರೇಂದ್ರ ಮೋದಿ ಅವರು ರಾಜ್ಯಸಭೆಗೆ ಅವರ ನಾಮನಿರ್ದೇಶನವನ್ನು ಸ್ವಾಗತಿಸಿದರು ಮತ್ತು ಅವರ ಸಂಸದೀಯ ಪಾತ್ರದಲ್ಲಿ ಯಶಸ್ಸನ್ನು ಹಾರೈಸಿದರು.
ಪ್ರಧಾನಮಂತ್ರಿ ಹೀಗೆ ಹೇಳಿದ್ದಾರೆ;
"ಕಾನೂನು ಕ್ಷೇತ್ರ ಮತ್ತು ನಮ್ಮ ಸಂವಿಧಾನದ ಬಗ್ಗೆ ಶ್ರೀ ಉಜ್ವಲ್ ನಿಕಮ್ ಅವರ ಭಕ್ತಿ ಅನುಕರಣೀಯವಾಗಿದೆ. ಅವರು ಯಶಸ್ವಿ ವಕೀಲರು ಮಾತ್ರವಲ್ಲ, ಪ್ರಮುಖ ಪ್ರಕರಣಗಳಲ್ಲಿ ನ್ಯಾಯವನ್ನು ಪಡೆಯುವಲ್ಲಿ ಮುಂಚೂಣಿಯಲ್ಲಿದ್ದಾರೆ. ತಮ್ಮ ಇಡೀ ಕಾನೂನು ವೃತ್ತಿಜೀವನದಲ್ಲಿ, ಅವರು ಯಾವಾಗಲೂ ಸಾಂವಿಧಾನಿಕ ಮೌಲ್ಯಗಳನ್ನು ಬಲಪಡಿಸಲು ಮತ್ತು ಸಾಮಾನ್ಯ ನಾಗರಿಕರನ್ನು ಯಾವಾಗಲೂ ಘನತೆಯಿಂದ ಕಾಣುವುದನ್ನು ಖಚಿತಪಡಿಸಿಕೊಳ್ಳಲು ಕೆಲಸ ಮಾಡಿದ್ದಾರೆ. ಭಾರತದ ರಾಷ್ಟ್ರಪತಿ ಅವರು ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿರುವುದು ಸಂತೋಷದ ಸಂಗತಿ. ಅವರ ಸಂಸದೀಯ ಇನಿಂಗ್ಸ್ ಗೆ ನನ್ನ ಶುಭ ಹಾರೈಕೆಗಳು" ಎಂದು ಟ್ವೀಟ್ ಮಾಡಿದ್ದಾರೆ.
ಶ್ರೀ ಸಿ. ಸದಾನಂದನ್ ಮಾಸ್ಟರ್ ಅವರ ಬಗ್ಗೆ ಮಾತನಾಡಿದ ಗೌರವಾನ್ವಿತ ಪ್ರಧಾನಮಂತ್ರಿ ಅವರು, ಅವರ ಜೀವನವು ಧೈರ್ಯ ಮತ್ತು ಅನ್ಯಾಯದ ವಿರುದ್ಧದ ಪ್ರತಿರೋಧದ ಸಂಕೇತವಾಗಿತ್ತು ಎಂದು ಬಣ್ಣಿಸಿದರು. ಹಿಂಸಾಚಾರ ಮತ್ತು ಬೆದರಿಕೆಗಳನ್ನು ಎದುರಿಸುತ್ತಿದ್ದರೂ, ಶ್ರೀ ಸದಾನಂದನ್ ಮಾಸ್ಟರ್ ಅವರು ರಾಷ್ಟ್ರೀಯ ಅಭಿವೃದ್ಧಿಗೆ ಬದ್ಧರಾಗಿದ್ದರು ಎಂದು ಅವರು ಹೇಳಿದರು. ಶಿಕ್ಷಕ ಮತ್ತು ಸಮಾಜ ಸೇವಕರಾಗಿ ಅವರ ಕೊಡುಗೆಗಳನ್ನು ಶ್ಲಾಘಿಸಿದ ಪ್ರಧಾನಮಂತ್ರಿ, ಯುವ ಸಬಲೀಕರಣದ ಬಗ್ಗೆ ಅವರ ಉತ್ಸಾಹವನ್ನು ಉಲ್ಲೇಖಿಸಿದರು. ಗೌರವಾನ್ವಿತ ರಾಷ್ಟ್ರಪತಿ ಜೀ ಅವರಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿದ್ದಕ್ಕಾಗಿ ಅವರು ಅವರನ್ನು ಅಭಿನಂದಿಸಿದರು ಮತ್ತು ಅವರ ಹೊಸ ಜವಾಬ್ದಾರಿಗಳಿಗೆ ಶುಭ ಹಾರೈಸಿದರು.
ಪ್ರಧಾನಮಂತ್ರಿ ಹೀಗೆ ಹೇಳಿದ್ದಾರೆ;
"ಶ್ರೀ ಸಿ. ಸದಾನಂದನ್ ಮಾಸ್ಟರ್ ಅವರ ಜೀವನವು ಧೈರ್ಯ ಮತ್ತು ಅನ್ಯಾಯಕ್ಕೆ ತಲೆಬಾಗಲು ನಿರಾಕರಿಸುವ ಪ್ರತಿರೂಪವಾಗಿದೆ. ಹಿಂಸಾಚಾರ ಮತ್ತು ಬೆದರಿಕೆಗಳು ರಾಷ್ಟ್ರೀಯ ಅಭಿವೃದ್ಧಿಯತ್ತ ಅವರ ಮನೋಭಾವವನ್ನು ತಡೆಯಲು ಸಾಧ್ಯವಾಗಲಿಲ್ಲ. ಶಿಕ್ಷಕರಾಗಿ ಮತ್ತು ಸಮಾಜ ಸೇವಕರಾಗಿ ಅವರ ಪ್ರಯತ್ನಗಳು ಸಹ ಶ್ಲಾಘನೀಯ. ಅವರು ಯುವ ಸಬಲೀಕರಣದ ಬಗ್ಗೆ ಅತ್ಯಂತ ಉತ್ಸುಕರಾಗಿದ್ದಾರೆ. ಗೌರವಾನ್ವಿತ ರಾಷ್ಟ್ರಪತಿ ಅವರಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿದ್ದಕ್ಕಾಗಿ ಅವರಿಗೆ ಅಭಿನಂದನೆಗಳು. ಸಂಸದರಾಗಿ ಅವರ ಪಾತ್ರಕ್ಕೆ ಶುಭ ಹಾರೈಕೆಗಳು," ಎಂದು ಟ್ವೀಟ್ ಮಾಡಿದ್ದಾರೆ.
ಶ್ರೀ ಹರ್ಷವರ್ಧನ್ ಶ್ರಿಂಗ್ಲಾ ಅವರ ನಾಮನಿರ್ದೇಶನದ ಬಗ್ಗೆ ಮಾತನಾಡಿದ ಗೌರವಾನ್ವಿತ ಪ್ರಧಾನಮಂತ್ರಿ ಅವರು, ಅವರು ರಾಜತಾಂತ್ರಿಕ, ಬೌದ್ಧಿಕ ಮತ್ತು ಕಾರ್ಯತಂತ್ರದ ಚಿಂತಕರಾಗಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ ಎಂದರು. ಭಾರತದ ವಿದೇಶಾಂಗ ನೀತಿಗೆ ಶ್ರೀ ಶ್ರಿಂಗ್ಲಾ ಅವರ ಕೊಡುಗೆಗಳನ್ನು ಮತ್ತು ಭಾರತದ ಜಿ-20 ಅಧ್ಯಕ್ಷತೆಯಲ್ಲಿ ಅವರ ಪಾತ್ರವನ್ನು ಅವರು ಶ್ಲಾಘಿಸಿದರು. ತಮ್ಮನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿರುವುದನ್ನು ನೋಡಿ ತಮಗೆ ಸಂತೋಷವಾಗಿದೆ ಎಂದ ಪ್ರಧಾನಿ, ಅವರ ಒಳನೋಟಗಳು ಸಂಸದೀಯ ಚರ್ಚೆಗಳನ್ನು ಶ್ರೀಮಂತಗೊಳಿಸುತ್ತವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನಮಂತ್ರಿ ಹೀಗೆ ಹೇಳಿದ್ದಾರೆ;
"ಶ್ರೀ ಹರ್ಷವರ್ಧನ್ ಶ್ರಿಂಗ್ಲಾ ಅವರು ರಾಜತಾಂತ್ರಿಕ, ಬೌದ್ಧಿಕ ಮತ್ತು ಕಾರ್ಯತಂತ್ರದ ಚಿಂತಕರಾಗಿ ಉತ್ತಮ ಸಾಧನೆ ಮಾಡಿದ್ದಾರೆ. ವರ್ಷಗಳಲ್ಲಿ, ಅವರು ಭಾರತದ ವಿದೇಶಾಂಗ ನೀತಿಗೆ ಪ್ರಮುಖ ಕೊಡುಗೆಗಳನ್ನು ನೀಡಿದ್ದಾರೆ ಮತ್ತು ನಮ್ಮ ಜಿ-20 ಅಧ್ಯಕ್ಷತೆಗೆ ಕೊಡುಗೆ ನೀಡಿದ್ದಾರೆ. ಅವರನ್ನು ಭಾರತದ ರಾಷ್ಟ್ರಪತಿ ಅವರು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿರುವುದಕ್ಕೆ ಸಂತೋಷವಾಗಿದೆ. ಅವರ ವಿಶಿಷ್ಟ ದೃಷ್ಟಿಕೋನಗಳು ಸಂಸದೀಯ ಕಾರ್ಯಕಲಾಪಗಳನ್ನು ಹೆಚ್ಚು ಶ್ರೀಮಂತಗೊಳಿಸುತ್ತವೆ’’ ಎಂದು ಹೇಳಿದ್ದಾರೆ.
@harshvshringla”
ಡಾ. ಮೀನಾಕ್ಷಿ ಜೈನ್ ಅವರ ನಾಮನಿರ್ದೇಶನದ ಬಗ್ಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ ಅವರು, ಇದು ಅಪಾರ ಸಂತೋಷದ ವಿಷಯ ಎಂದರು. ಅವರು ವಿದ್ವಾಂಸ, ಸಂಶೋಧಕ ಮತ್ತು ಇತಿಹಾಸಕಾರರಾಗಿ ಅವರ ವಿಶಿಷ್ಟ ಕೆಲಸವನ್ನು ಒಪ್ಪಿಕೊಂಡರು ಮತ್ತು ಶಿಕ್ಷಣ, ಸಾಹಿತ್ಯ, ಇತಿಹಾಸ ಮತ್ತು ರಾಜಕೀಯ ವಿಜ್ಞಾನಕ್ಕೆ ಅವರ ಕೊಡುಗೆಗಳನ್ನು ಉಲ್ಲೇಖಿಸಿದರು. ರಾಜ್ಯಸಭೆಯಲ್ಲಿ ಅವರ ಅಧಿಕಾರಾವಧಿಗೆ ಅವರು ಶುಭ ಹಾರೈಸಿದರು.
ಪ್ರಧಾನಮಂತ್ರಿ ಹೀಗೆ ಹೇಳಿದ್ದಾರೆ;
"ಡಾ.ಮೀನಾಕ್ಷಿ ಜೈನ್ ಅವರನ್ನು ಗೌರವಾನ್ವಿತ ರಾಷ್ಟ್ರಪತಿ ಅವರು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿರುವುದು ಅಪಾರ ಸಂತೋಷದ ವಿಷಯವಾಗಿದೆ. ಅವರು ವಿದ್ವಾಂಸರಾಗಿ, ಸಂಶೋಧಕರಾಗಿ ಮತ್ತು ಇತಿಹಾಸಕಾರರಾಗಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಶಿಕ್ಷಣ, ಸಾಹಿತ್ಯ, ಇತಿಹಾಸ ಮತ್ತು ರಾಜ್ಯಶಾಸ್ತ್ರ ಕ್ಷೇತ್ರಗಳಲ್ಲಿ ಅವರ ಕೆಲಸವು ಶೈಕ್ಷಣಿಕ ಸಂವಾದವನ್ನು ಗಮನಾರ್ಹವಾಗಿ ಶ್ರೀಮಂತಗೊಳಿಸಿದೆ. ಅವರ ಸಂಸದೀಯ ಅಧಿಕಾರಾವಧಿಗೆ ಶುಭ ಹಾರೈಕೆಗಳು” ಎಂದು ಹೇಳಿದ್ದಾರೆ.
@IndicMeenakshi”
*****
(Release ID: 2144357)
Read this release in:
Odia
,
English
,
Urdu
,
Hindi
,
Marathi
,
Manipuri
,
Bengali
,
Assamese
,
Punjabi
,
Gujarati
,
Tamil
,
Telugu
,
Malayalam