ಭಾರೀ ಕೈಗಾರಿಕೆಗಳ ಸಚಿವಾಲಯ
ಪ್ರಧಾನಮಂತ್ರಿ ಮೋದಿ ಅವರ ಹಸಿರು ಸಾರಿಗೆ ದೃಷ್ಟಿಕೋನದಡಿಯಲ್ಲಿ ಭಾರತವು ಮೊಟ್ಟಮೊದಲ ಇ-ಟ್ರಕ್ ಪ್ರೋತ್ಸಾಹಕ ಯೋಜನೆಯನ್ನು ಜಾರಿಗೆ ತಂದಿದೆ
ಸರಕು ಸಾಗಣೆ ಹೊರಸೂಸುವಿಕೆಯನ್ನು ಕಡಿತಗೊಳಿಸಲು ಮತ್ತು ಮೇಕ್ ಇನ್ ಇಂಡಿಯಾವನ್ನು ಉತ್ತೇಜಿಸಲು ಹೆಚ್ ಡಿ ಕುಮಾರಸ್ವಾಮಿ ಅವರು ಬದಲಾವಣೆ ತರುವ ಇ-ಟ್ರಕ್ ಯೋಜನೆಗೆ ಚಾಲನೆ ನೀಡಿದ್ದಾರೆ
ನೆಟ್ ಝೀರೋ ಸರಕು ಸಾಗಣೆಗಾಗಿ ಎಲೆಕ್ಟ್ರಿಕ್ ಟ್ರಕ್ ಗಳಿಗೆ ₹9.6 ಲಕ್ಷ ಪ್ರೋತ್ಸಾಹಧನವನ್ನು ಭಾರತ ಸರ್ಕಾರ ಅನಾವರಣಗೊಳಿಸಿದೆ
5,600 ಇ-ಟ್ರಕ್ ಗಳು, ಸ್ವಚ್ಛ ನಗರಗಳು: ಪ್ರಧಾನಮಂತ್ರಿ ಇ-ಡ್ರೈವ್ ಭಾರತದ ಹಸಿರು ಸರಕು ಸಾಗಣೆ ಕ್ರಾಂತಿಯನ್ನು ವೇಗಗೊಳಿಸುತ್ತದೆ
Posted On:
11 JUL 2025 2:57PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವ ಮತ್ತು ಕೇಂದ್ರ ಬೃಹತ್ ಕೈಗಾರಿಕೆಗಳು ಮತ್ತು ಉಕ್ಕು ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರ ಮಾರ್ಗದರ್ಶನದಲ್ಲಿ, ಭಾರತ ಸರ್ಕಾರದ ಬೃಹತ್ ಕೈಗಾರಿಕೆಗಳ ಸಚಿವಾಲಯ (ಎಂ.ಎಚ್.ಐ), ಪ್ರಧಾನಮಂತ್ರಿ ಇ-ಡ್ರೈವ್ ಉಪಕ್ರಮದ ಅಡಿಯಲ್ಲಿ ಎಲೆಕ್ಟ್ರಿಕ್ ಟ್ರಕ್ ಗಳಿಗೆ (ಇ-ಟ್ರಕ್) ಆರ್ಥಿಕ ಪ್ರೋತ್ಸಾಹ ನೀಡುವ ಅಭೂತಪೂರ್ವ ಯೋಜನೆಯನ್ನು ಪ್ರಾರಂಭಿಸಿದೆ. ದೇಶದ ಸ್ವಚ್ಛ, ದಕ್ಷ ಮತ್ತು ಸುಸ್ಥಿರ ಸರಕು ಸಾಗಣೆಯ ಪರಿವರ್ತನೆಯನ್ನು ವೇಗಗೊಳಿಸುವ ಗುರಿಯನ್ನು ಹೊಂದಿರುವ ಭಾರತ ಸರ್ಕಾರವು ಎಲೆಕ್ಟ್ರಿಕ್ ಟ್ರಕ್ ಗಳಿಗೆ ನೇರ ಬೆಂಬಲವನ್ನು ನೀಡುತ್ತಿರುವುದು ಇದೇ ಮೊದಲು.

"ಡೀಸೆಲ್ ಟ್ರಕ್ ಗಳು ಒಟ್ಟು ವಾಹನಗಳ ಸಂಖ್ಯೆಯಲ್ಲಿ ಕೇವಲ ಶೇ.3 (3%) ರಷ್ಟಿದ್ದರೂ, ಸಾರಿಗೆ ಸಂಬಂಧಿತ ಹಸಿರುಮನೆ ಅನಿಲ ಹೊರಸೂಸುವಿಕೆಯಲ್ಲಿ ಶೇ.42 (42%) ರಷ್ಟು ಕೊಡುಗೆ ನೀಡುತ್ತವೆ ಮತ್ತು ವಾಯು ಮಾಲಿನ್ಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತವೆ. ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವದಿಂದ ಮಾರ್ಗದರ್ಶಿಸಲ್ಪಟ್ಟ ಈ ಪ್ರವರ್ತಕ ಯೋಜನೆಯು, ಎಲೆಕ್ಟ್ರಿಕ್ ಟ್ರಕ್ ಗಳಿಗೆ ಮೀಸಲಾದ ಭಾರತದ ಮೊದಲ ಬೆಂಬಲವಾಗಿದೆ. ಇದು ನಮ್ಮ ರಾಷ್ಟ್ರವನ್ನು ಸುಸ್ಥಿರ ಸರಕು ಸಾಗಣೆ, ಸ್ವಚ್ಛ ಭವಿಷ್ಯ ಮತ್ತು 2070 ರ ವೇಳೆಗೆ ನಮ್ಮ ನಿವ್ವಳ-ಶೂನ್ಯ ಹೊರಸೂಸುವಿಕೆ ಗುರಿಯೊಂದಿಗೆ ಹೊಂದಿಕೆಯಾಗುವ ರೀತಿಯಲ್ಲಿ 2047 ರ ವೇಳೆಗೆ ವಿಕಸಿತ ಭಾರತದ ಸಾಕ್ಷಾತ್ಕಾರದತ್ತ ಕೊಂಡೊಯ್ಯುತ್ತದೆ" ಎಂದು ಕೇಂದ್ರ ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.
ಈ ಯೋಜನೆಯಡಿಯಲ್ಲಿ, ಕೇಂದ್ರ ಮೋಟಾರು ವಾಹನ ನಿಯಮಗಳ (ಸಿ.ಎಂ.ವಿ.ಆರ್) ಅಡಿಯಲ್ಲಿ ವ್ಯಾಖ್ಯಾನಿಸಲಾದ ಎನ್-2 ಮತ್ತು ಎನ್-3 ವರ್ಗದ ಎಲೆಕ್ಟ್ರಿಕ್ ಟ್ರಕ್‌ಗಳಿಗೆ ಬೇಡಿಕೆ ಪ್ರೋತ್ಸಾಹವನ್ನು ವಿಸ್ತರಿಸಲಾಗುತ್ತದೆ.
• ಎನ್-2 ವರ್ಗವು 3.5 ಟನ್ ಗಳಿಗಿಂತ ಹೆಚ್ಚು ಮತ್ತು 12 ಟನ್ ಗಳವರೆಗಿನ ಒಟ್ಟು ವಾಹನ ತೂಕ (ಜಿ.ವಿ.ಡಬ್ಲ್ಯು) ಹೊಂದಿರುವ ಟ್ರಕ್ ಗಳನ್ನು ಒಳಗೊಂಡಿದೆ.
• ಎನ್-3 ವರ್ಗವು 12 ಟನ್ ಗಳಿಗಿಂತ ಹೆಚ್ಚು ಮತ್ತು 55 ಟನ್ ಗಳವರೆಗಿನ ಜಿ.ವಿ.ಡಬ್ಲ್ಯು ಹೊಂದಿರುವ ಟ್ರಕ್ ಗಳನ್ನು ಒಳಗೊಂಡಿದೆ. ಆರ್ಟಿಕ್ಯುಲೇಟೆಡ್ ವಾಹನಗಳ ಸಂದರ್ಭದಲ್ಲಿ, ಪ್ರೋತ್ಸಾಹಕಗಳು ಎನ್-3 ವರ್ಗದ ಪುಲ್ಲರ್ ಟ್ರಾಕ್ಟರುಗಳಿಗೆ ಮಾತ್ರ ಅನ್ವಯಿಸುತ್ತವೆ.
• ವಿಶ್ವಾಸಾರ್ಹತೆ ಮತ್ತು ಕಾರ್ಯಕ್ಷಮತೆಯನ್ನು ಖಚಿತಪಡಿಸಿಕೊಳ್ಳಲು, ಯೋಜನೆಯು ಸಮಗ್ರ ತಯಾರಕ-ಬೆಂಬಲಿತ ವಾರಂಟಿಯನ್ನು ಕಡ್ಡಾಯಗೊಳಿಸುತ್ತದೆ.
• ಬ್ಯಾಟರಿಯು ಐದು ವರ್ಷಗಳು ಅಥವಾ 5 ಲಕ್ಷ ಕಿಲೋಮೀಟರ್ ಗಳಲ್ಲಿ ಯಾವುದು ಮೊದಲೋ ಅದರ ಖಾತರಿಯನ್ನು ಹೊಂದಿರಬೇಕು.
• ವಾಹನ ಮತ್ತು ಮೋಟಾರ್ ಐದು ವರ್ಷಗಳು ಅಥವಾ 2.5 ಲಕ್ಷ ಕಿಲೋಮೀಟರ್ ಗಳಲ್ಲಿ ಯಾವುದು ಮೊದಲೋ ಅದರ ಖಾತರಿಯನ್ನು ಹೊಂದಿರಬೇಕು.
ಕೈಗೆಟುಕುವಿಕೆಯನ್ನು ಉತ್ತೇಜಿಸಲು, ಪ್ರೋತ್ಸಾಹಕ ಮೊತ್ತವು ಎಲೆಕ್ಟ್ರಿಕ್ ಟ್ರಕ್ ನ ಜಿ.ವಿ.ಡಬ್ಲ್ಯು ಅನ್ನು ಅವಲಂಬಿಸಿರುತ್ತದೆ, ಗರಿಷ್ಠ ಪ್ರೋತ್ಸಾಹಕವನ್ನು ಪ್ರತಿ ವಾಹನಕ್ಕೆ ₹9.6 ಲಕ್ಷಕ್ಕೆ ನಿಗದಿಪಡಿಸಲಾಗಿದೆ. ಈ ಪ್ರೋತ್ಸಾಹಕಗಳನ್ನು ಖರೀದಿ ಬೆಲೆಯಲ್ಲಿ ಮುಂಗಡ ಕಡಿತವಾಗಿ ನೀಡಲಾಗುತ್ತದೆ ಮತ್ತು ಮೊದಲು ಬಂದವರಿಗೆ ಆದ್ಯತೆಯ ಆಧಾರದ ಮೇಲೆ ಪ್ರಧಾನಮಂತ್ರಿ ಇ-ಡ್ರೈವ್ ಪೋರ್ಟಲ್ ಮೂಲಕ ಒ.ಇ.ಎಮ್ ಗಳಿಗೆ ಪಾವತಿ ಮಾಡಲಾಗುತ್ತದೆ.
ಈ ಯೋಜನೆಯು ದೇಶಾದ್ಯಂತ ಸುಮಾರು 5,600 ಇ-ಟ್ರಕ್ ಗಳನ್ನು ನಿಯೋಜಿಸಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ. ರಾಜಧಾನಿಯ ತೀವ್ರ ವಾಯು ಗುಣಮಟ್ಟದ ಸವಾಲುಗಳನ್ನು ಪರಿಹರಿಸುವ ಗುರಿಯನ್ನು ಹೊಂದಿರುವ ದೆಹಲಿಯಲ್ಲಿ ನೋಂದಾಯಿಸಲಾದ 1,100 ಇ-ಟ್ರಕ್ ಗಳಿಗೆ ₹100 ಕೋಟಿ ಅಂದಾಜು ವೆಚ್ಚವನ್ನು ಮೀಸಲಿಡಲಾಗಿದೆ.
ಇದರಿಂದ ಪ್ರಯೋಜನ ಪಡೆಯುವ ಪ್ರಮುಖ ವಲಯಗಳಲ್ಲಿ ಸಿಮೆಂಟ್ ಉದ್ಯಮ, ಬಂದರುಗಳು, ಉಕ್ಕು ಮತ್ತು ಲಾಜಿಸ್ಟಿಕ್ಸ್ ವಲಯಗಳು ಸೇರಿವೆ. ವೋಲ್ವೋ ಐಷರ್, ಟಾಟಾ ಮೋಟಾರ್ಸ್ ಮತ್ತು ಅಶೋಕ್ ಲೇಲ್ಯಾಂಡ್ ನಂತಹ ಹಲವಾರು ಪ್ರಮುಖ ಒ.ಇ.ಎಮ್ ಗಳು ಈಗಾಗಲೇ ಭಾರತದಲ್ಲಿ ಎಲೆಕ್ಟ್ರಿಕ್ ಟ್ರಕ್ ಗಳನ್ನು ತಯಾರಿಸುವಲ್ಲಿ ತೊಡಗಿಸಿಕೊಂಡಿವೆ, ಇದರಿಂದಾಗಿ ಆತ್ಮನಿರ್ಭರ ಭಾರತದ ದೃಷ್ಟಿಕೋನದ ಅಡಿಯಲ್ಲಿ ದೇಶೀಯ ಸಾಮರ್ಥ್ಯಗಳನ್ನು ಹೆಚ್ಚಿಸಲಾಗುತ್ತಿದೆ.

ಈ ಉಪಕ್ರಮವು ಇ-ಟ್ರಕ್ ಗಳ ತಯಾರಕರು ಮತ್ತು ಬಳಕೆದಾರರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿದೆ, ಅವರು ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಯೋಜನೆಯ ಸಾಮರ್ಥ್ಯವನ್ನು ಒಪ್ಪಿಕೊಂಡಿದ್ದಾರೆ.
ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳ (ಸಿ ಪಿ ಎಸ್ ಇ) ಬಲವಾದ ನಾಯಕತ್ವದ ಪ್ರದರ್ಶನದಲ್ಲಿ, ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (ಎಸ್ ಎ ಐ ಎಲ್) ಮುಂದಿನ ಎರಡು ವರ್ಷಗಳಲ್ಲಿ ವಿವಿಧ ಸ್ಥಳಗಳಲ್ಲಿ ನಿಯೋಜನೆಗಾಗಿ 150 ಎಲೆಕ್ಟ್ರಿಕ್ ಟ್ರಕ್ ಗಳನ್ನು ಖರೀದಿಸಲು ಬದ್ಧವಾಗಿದೆ. ಹೆಚ್ಚುವರಿಯಾಗಿ, ಎಸ್.ಎ.ಐ.ಎಲ್ ತನ್ನ ಎಲ್ಲಾ ಘಟಕಗಳಲ್ಲಿ ಬಾಡಿಗೆಗೆ ಪಡೆದ ಎಲ್ಲಾ ವಾಹನಗಳಲ್ಲಿ ಕನಿಷ್ಠ ಶೇ.15 (15%) ರಷ್ಟು ವಿದ್ಯುತ್ ಚಾಲಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಆಂತರಿಕ ಗುರಿಯನ್ನು ನಿಗದಿಪಡಿಸಿದೆ.
ಪ್ರೋತ್ಸಾಹ ಧನಕ್ಕೆ ಅರ್ಹತೆ ಪಡೆಯಲು, ಹಳೆಯ, ಮಾಲಿನ್ಯಕಾರಕ ಟ್ರಕ್ ಗಳನ್ನು ರದ್ದುಗೊಳಿಸುವುದು ಕಡ್ಡಾಯವಾಗಿದೆ, ಇದು ವಾಹನ ಸಮೂಹಗಳನ್ನು ಆಧುನೀಕರಿಸುವ ಮತ್ತು ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಉಭಯ ಪ್ರಯೋಜನವನ್ನು ಖಚಿತಪಡಿಸುತ್ತದೆ.
ಬೃಹತ್ ಕೈಗಾರಿಕಾ ಸಚಿವಾಲಯದ ಈ ದೂರದೃಷ್ಟಿಯ ಉಪಕ್ರಮವು ಸ್ವಾವಲಂಬಿ ವಿದ್ಯುತ್ ಚಲನಶೀಲ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಭಾರತ ಸರ್ಕಾರದ ವಿಶಾಲ ಉದ್ದೇಶಕ್ಕೆ ಅನುಗುಣವಾಗಿದೆ. ಇ-ಟ್ರಕ್ ಗಳನ್ನು ಪ್ರೋತ್ಸಾಹಿಸುವ ಮೂಲಕ, ಈ ಯೋಜನೆಯು ಸಾಗಣೆದಾರರ ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡುವುದು, ಭಾರೀ ವಾಹನ ವಲಯದಲ್ಲಿ ಶುದ್ಧ ಇಂಧನ ಅಳವಡಿಕೆಯನ್ನು ಉತ್ತೇಜಿಸುವುದು ಮತ್ತು ನಗರ ಮತ್ತು ಕೈಗಾರಿಕಾ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟವನ್ನು ಸುಧಾರಿಸುವುದು, ಭಾರತವನ್ನು ಸುಸ್ಥಿರ, ಕಡಿಮೆ ಇಂಗಾಲದ ಭವಿಷ್ಯಕ್ಕೆ ಹತ್ತಿರವಾಗಿಸುವ ಗುರಿಯನ್ನು ಹೊಂದಿದೆ.
*****
(Release ID: 2144076)