ರೈಲ್ವೇ ಸಚಿವಾಲಯ
ಪ್ರಯಾಣಿಕರ ಎಲ್ಲಾ ಸೇವೆಗಳ ಒಂದು-ನಿಲುಗಡೆ ಲಭ್ಯತೆಗಾಗಿ ರೈಲ್ ಒನ್ ಅಪ್ಲಿಕೇಶನ್ ಬಿಡುಗಡೆ
प्रविष्टि तिथि:
01 JUL 2025 3:19PM by PIB Bengaluru
ಪ್ರಯಾಣಿಕರ ಸೌಲಭ್ಯಗಳನ್ನು ಸುಧಾರಿಸಲು ರೈಲ್ವೆ ನಿರಂತರವಾಗಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಹೊಸ ಪೀಳಿಗೆಯ ರೈಲುಗಳನ್ನು ಪರಿಚಯಿಸುವುದು, ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡುವುದು, ಹಳೆಯ ಬೋಗಿಗಳನ್ನು ಹೊಸ ಎಲ್.ಹೆಚ್.ಬಿ ಬೋಗಿಗಳಾಗಿ ನವೀಕರಿಸುವುದು ಮತ್ತು ಇನ್ನೂ ಅನೇಕ ಉಪಕ್ರಮಗಳ ಮೂಲಕ ಕಳೆದ ದಶಕದಲ್ಲಿ ಪ್ರಯಾಣಿಕರ ಅನುಭವವನ್ನು ಸುಧಾರಿಸಿವೆ.
ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಇಂದು ನವದೆಹಲಿಯ ಇಂಡಿಯಾ ಹ್ಯಾಬಿಟ್ಯಾಟ್ ಸೆಂಟರ್ ನಲ್ಲಿ ರೈಲ್ವೆ ಮಾಹಿತಿ ವ್ಯವಸ್ಥೆಗಳ ಕೇಂದ್ರದ (ಸಿ.ಆರ್.ಐ.ಎಸ್) 40ನೇ ಸಂಸ್ಥಾಪನಾ ದಿನದಂದು ರೈಲ್ ಒನ್ ಎಂಬ ಹೊಸ ಅಪ್ಲಿಕೇಶನ್ ಬಿಡುಗಡೆ ಮಾಡಿದರು. ರೈಲ್ ಒನ್ ರೈಲ್ವೆಯೊಂದಿಗೆ ಪ್ರಯಾಣಿಕರ ವ್ಯವಸ್ಥೆ ಸುಧಾರಿಸುವತ್ತ ಗಮನಹರಿಸಿದೆ.

ಇದು ಬಳಕೆದಾರ ಸ್ನೇಹಿ ವ್ಯವಸ್ಥೆಯೊಂದಿಗೆ ಸಮಗ್ರ, ಆಲ್-ಇನ್-ಒನ್ ಅಪ್ಲಿಕೇಶನ್ ಆಗಿದೆ. ಆಂಡ್ರಾಯ್ಡ್ ಪ್ಲೇ ಸ್ಟೋರ್ ಮತ್ತು ಐಒಎಸ್ ಆಪ್ ಸ್ಟೋರ್ ನಲ್ಲಿ ಅಪ್ಲಿಕೇಶನ್ ಡೌನ್ ಲೋಡ್ ಮಾಡಲು ಮುಕ್ತವಾಗಿ ಲಭ್ಯವಿದೆ. ಇದು ಎಲ್ಲಾ ಪ್ರಯಾಣಿಕರ ಸೇವೆಗಳನ್ನು ಒಂದಡೆ ಸಂಯೋಜಿಸುತ್ತದೆ ಉದಾಹರಣೆಗೆ:
● 3% ರಿಯಾಯಿತಿಯೊಂದಿಗೆ ಕಾಯ್ದಿರಿಸದ ಮತ್ತು ಪ್ಲಾಟ್ಫಾರ್ಮ್ ಟಿಕೆಟ್ ಗಳು
● ಲೈವ್ ರೈಲು ಟ್ರ್ಯಾಕಿಂಗ್
● ಕುಂದುಕೊರತೆ ಪರಿಹಾರ
● ಇ-ಕೇಟರಿಂಗ್, ಪೋರ್ಟರ್ ಬುಕಿಂಗ್ ಮತ್ತು ಯಾತ್ರೆಯ ಕೊನೆಯ ಮೈಲು ತನಕದ ಟ್ಯಾಕ್ಸಿ ಸೇವೆ ಹೊಂದಿದೆ
ಐ.ಆರ್.ಸಿ.ಟಿ.ಸಿ.ಯಲ್ಲಿ ಕಾಯ್ದಿರಿಸಿದ ಟಿಕೆಟ್ ನೀಡುವುದನ್ನು ಮುಂದುವರಿಸಲಾಗುತ್ತದೆ. ಐ.ಆರ್.ಸಿ.ಟಿ.ಸಿ.ಯೊಂದಿಗೆ ಪಾಲುದಾರಿಕೆ ಹೊಂದಿರುವ ಇತರ ಅನೇಕ ವಾಣಿಜ್ಯ ಅಪ್ಲಿಕೇಶನ್ ಗಳಂತೆ ರೈಲ್ ಒನ್ ಅಪ್ಲಿಕೇಶನ್ ಅನ್ನು ಸಹ ಐ.ಆರ್.ಸಿ.ಟಿ.ಸಿ. ಅಧಿಕೃತಗೊಳಿಸಿದೆ.
ರೈಲ್ ಒನ್ ಎಂ.ಪಿನ್ ಅಥವಾ ಬಯೋಮೆಟ್ರಿಕ್ ಮೂಲಕ ಲಾಗಿನ್ ನೊಂದಿಗೆ ಸಿಂಗಲ್-ಸೈನ್-ಆನ್ ಅನ್ನು ಒಳಗೊಂಡಿದೆ. ಇದು ಅಸ್ತಿತ್ವದಲ್ಲಿರುವ ರೈಲ್ ಕನೆಕ್ಟ್ ಮತ್ತು ಯುಟಿಎಸ್ ದೃಢೀಕರಣ/ ರುಜುವಾತುಗಳನ್ನು ಸಹ ಬೆಂಬಲಿಸುತ್ತದೆ. ಬಹು ಅಪ್ಲಿಕೇಶನ್ ಗಳನ್ನು ಹೊಂದುವ ಅಗತ್ಯವಿಲ್ಲದ ಕಾರಣ ಅಪ್ಲಿಕೇಶನ್ ಜಾಗ ಉಳಿಸುತ್ತದೆ.
ಡಿಸೆಂಬರ್ 2025ರ ವೇಳೆಗೆ ಆಧುನಿಕ ಪ್ರಯಾಣಿಕರ ಮೀಸಲಾತಿ ವ್ಯವಸ್ಥೆ (ಪಿ.ಆರ್.ಎಸ್)
ಸಿ.ಆರ್.ಐ.ಎಸ್. ನ ಸಂಪೂರ್ಣ ತಂಡವನ್ನು ಅದರ ಸಂಸ್ಥಾಪನಾ ದಿನದಂದು ಕೇಂದ್ರ ರೈಲ್ವೆ ಸಚಿವರು ಅಭಿನಂದಿಸಿದರು. ಭಾರತೀಯ ರೈಲ್ವೆಯ ಡಿಜಿಟಲ್ ಕೋರ್ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವತ್ತ ಗಮನಹರಿಸಬೇಕೆಂದು ಅವರು ಸಿ.ಆರ್.ಐ.ಎಸ್. ಗೆ ತಿಳಿಸಿದರು.
ಅಸ್ತಿತ್ವದಲ್ಲಿರುವ ಪಿ.ಆರ್.ಎಸ್. ಅಪ್ ಗ್ರೇಡ್ ಮಾಡುವಲ್ಲಿ ಸಾಧಿಸಿದ ಪ್ರಗತಿಗಾಗಿ ಸಚಿವರು ಸಿ.ಆರ್.ಐ.ಎಸ್. ತಂಡವನ್ನು ಶ್ಲಾಘಿಸಿದರು. ಆಧುನಿಕ ಪಿ.ಆರ್.ಎಸ್ ಪ್ರಸ್ತುತ ಲೋಡ್ ಅನ್ನು 10 ಪಟ್ಟು ನಿರ್ವಹಿಸಲು ಚುರುಕಾದ, ಬಹುಭಾಷಾ ಮತ್ತು ಸ್ಕೇಲೆಬಲ್ ಆಗಿರುತ್ತದೆ. ಇದು ಪ್ರತಿ ನಿಮಿಷಕ್ಕೆ 1.5 ಲಕ್ಷ ಟಿಕೆಟ್ ಬುಕಿಂಗ್ ಮತ್ತು 40 ಲಕ್ಷ ವಿಚಾರಣೆಗಳನ್ನು ಮಾಡುವ ಸಾಮರ್ಥ್ಯ ಹೊಂದಿರುತ್ತದೆ.
ಹೊಸ ಪಿ.ಆರ್.ಎಸ್ ಎಲ್ಲಾ ರೀತಿಯ ಪ್ರಯಾಣಿಕರನ್ನೂ ಒಳಗೊಂಡಿರುತ್ತದೆ. ಇದು ಸೀಟು ಆಯ್ಕೆ ಮತ್ತು ದರ ಪಟ್ಟಿಗಾಗಿ ಸುಧಾರಿತ ಕಾರ್ಯಗಳನ್ನು ಮತ್ತು ದಿವ್ಯಾಂಗರು, ವಿದ್ಯಾರ್ಥಿಗಳು ಮತ್ತು ರೋಗಿಗಳಿಗೆ ಸಂಯೋಜಿತ ಆಯ್ಕೆಗಳನ್ನು ಸಹ ಹೊಂದಿರುತ್ತದೆ.
ಭವಿಷ್ಯವನ್ನು ವ್ಯಾಖ್ಯಾನಿಸುವ ತಂತ್ರಜ್ಞಾನ
ಭಾರತೀಯ ರೈಲ್ವೆಯನ್ನು ಭಾರತದ ವಿಕಾಸ ಯಾತ್ರೆಯ ಬೆಳವಣಿಗೆಯ ಎಂಜಿನ್ ಮಾಡುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಪರಿಕಲ್ಪನೆಯ ದೃಷ್ಟಿಕೋನದಿಂದ ನಡೆಸಲ್ಪಡುತ್ತಿದೆ. ರೈಲ್ ಒನ್ ಅಪ್ಲಿಕೇಶನ್ ನ ಉದ್ಘಾಟನೆಯು ತಂತ್ರಜ್ಞಾನವನ್ನು ಪ್ರಜಾಪ್ರಭುತ್ವಗೊಳಿಸುವ ಮತ್ತು ಪ್ರತಿಯೊಬ್ಬ ಪ್ರಯಾಣಿಕರಿಗೆ ವಿಶ್ವ ದರ್ಜೆಯ ಚಲನಶೀಲತೆಯನ್ನು ತಲುಪಿಸುವ ಭಾರತೀಯ ರೈಲಿನ ಬದ್ಧತೆ ಪುನರುಚ್ಚರಿಸುತ್ತದೆ.
*****
(रिलीज़ आईडी: 2141404)
आगंतुक पटल : 31
इस विज्ञप्ति को इन भाषाओं में पढ़ें:
Odia
,
English
,
Gujarati
,
Urdu
,
हिन्दी
,
Marathi
,
Bengali
,
Assamese
,
Punjabi
,
Tamil
,
Telugu
,
Malayalam