ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)
azadi ka amrit mahotsav

ತಮಿಳುನಾಡಿನಲ್ಲಿ 1,853 ಕೋಟಿ ರೂ. ವೆಚ್ಚದಲ್ಲಿ ಪರಮಕುಡಿ-ರಾಮನಾಥಪುರಂ ವಿಭಾಗದ (ಎನ್‌ ಎಚ್‌ 87) ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಸಂಪುಟ ಅನುಮೋದನೆ

Posted On: 01 JUL 2025 3:13PM by PIB Bengaluru

ತಮಿಳುನಾಡಿನಲ್ಲಿ ಪರಮಕುಡಿ - ರಾಮನಾಥಪುರಂ ವಿಭಾಗದ (46.7 ಕಿ.ಮೀ) ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಯೋಜನೆಯನ್ನು ಹೈಬ್ರಿಡ್ ಆನ್ಯುಯಿಟಿ ಮೋಡ್ (ಎಚ್‌ ಎ ಎಂ) ನಲ್ಲಿ ಅಭಿವೃದ್ಧಿಪಡಿಸಲಾಗುವುದು, ಇದರ ಒಟ್ಟು ಬಂಡವಾಳ ವೆಚ್ಚ 1,853 ಕೋಟಿ ರೂ.

ಪ್ರಸ್ತುತ, ಮಧುರೈ, ಪರಮಕುಡಿ, ರಾಮನಾಥಪುರಂ, ಮಂಟಪಂ, ರಾಮೇಶ್ವರಂ ಮತ್ತು ಧನುಷ್ಕೋಡಿ ನಡುವಿನ ಸಂಪರ್ಕವು ಅಸ್ತಿತ್ವದಲ್ಲಿರುವ ದ್ವಿಪಥ ರಾಷ್ಟ್ರೀಯ ಹೆದ್ದಾರಿ 87 (ಎನ್‌ ಎಚ್-87) ಮತ್ತು ಸಂಬಂಧಿತ ರಾಜ್ಯ ಹೆದ್ದಾರಿಗಳ ಮೇಲೆ ಅವಲಂಬಿತವಾಗಿದೆ, ಇದು ಹೆಚ್ಚಿನ ಸಂಚಾರ ಪ್ರಮಾಣದಿಂದಾಗಿ, ವಿಶೇಷವಾಗಿ ಜನನಿಬಿಡ ಪ್ರದೇಶಗಳು ಮತ್ತು ಕಾರಿಡಾರ್‌ ನಾದ್ಯಂತದ ಪ್ರಮುಖ ಪಟ್ಟಣಗಳಲ್ಲಿ ಗಮನಾರ್ಹ ದಟ್ಟಣೆ‌ ಉಂಟಾಗುತ್ತದೆ. ಈ ಸವಾಲುಗಳನ್ನು ಪರಿಹರಿಸಲು, ಯೋಜನೆಯು ಪರಮಕುಡಿಯಿಂದ ರಾಮನಾಥಪುರಂವರೆಗಿನ ಸುಮಾರು 46.7 ಕಿಮೀ ಎನ್‌ ಎಚ್‌-87 ಅನ್ನು ಚತುಷ್ಪಥವಾಗಿ ಮೇಲ್ದರ್ಜೆಗೇರಿಸುತ್ತದೆ. ಇದು ಅಸ್ತಿತ್ವದಲ್ಲಿರುವ ಕಾರಿಡಾರ್‌ ನ ದಟ್ಟಣೆಯನ್ನು ಕಡಿಮೆ ಮಾಡುತ್ತದೆ, ಸುರಕ್ಷತೆಯನ್ನು ಸುಧಾರಿಸುತ್ತದೆ ಮತ್ತು ಪರಮಕುಡಿ, ಸತಿರಕುಡಿ, ಅಚುಂದನ್ವಾಯಲ್ ಮತ್ತು ರಾಮನಾಥಪುರಂನಂತಹ ವೇಗವಾಗಿ ಬೆಳೆಯುತ್ತಿರುವ ಪಟ್ಟಣಗಳ ಚಲನಶೀಲತೆಯ ಅಗತ್ಯಗಳನ್ನು ಪೂರೈಸುತ್ತದೆ.

ಈ ಯೋಜನೆಯು 5 ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳು (ಎನ್ ಎಚ್-38, ಎನ್ ಎಚ್-85, ಎನ್ ಎಚ್-36, ಎನ್ ಎಚ್-536, ಮತ್ತು ಎನ್ ಎಚ್-32) ಮತ್ತು 3 ರಾಜ್ಯ ಹೆದ್ದಾರಿಗಳೊಂದಿಗೆ (ಎಸ್ ಎಚ್‌-47, ಎಸ್ ಎಚ್‌-29, ಎಸ್ ಎಚ್‌-34) ಸಂಯೋಜಿಸುತ್ತದೆ, ಇದು ದಕ್ಷಿಣ ತಮಿಳುನಾಡಿನಾದ್ಯಂತ ಪ್ರಮುಖ ಆರ್ಥಿಕ, ಸಾಮಾಜಿಕ ಮತ್ತು ಲಾಜಿಸ್ಟಿಕ್ಸ್ ಕೇಂದ್ರಗಳಿಗೆ ತಡೆರಹಿತ ಸಂಪರ್ಕವನ್ನು ಒದಗಿಸುತ್ತದೆ. ಹೆಚ್ಚುವರಿಯಾಗಿ, ನವೀಕರಿಸಿದ ಕಾರಿಡಾರ್ 2 ಪ್ರಮುಖ ರೈಲು ನಿಲ್ದಾಣಗಳು (ಮಧುರೈ ಮತ್ತು ರಾಮೇಶ್ವರಂ), 1 ವಿಮಾನ ನಿಲ್ದಾಣ (ಮಧುರೈ) ಮತ್ತು 2 ಸಣ್ಣ ಬಂದರುಗಳೊಂದಿಗೆ (ಪಂಬನ್ ಮತ್ತು ರಾಮೇಶ್ವರಂ) ಸಂಪರ್ಕ ಸಾಧಿಸುವ ಮೂಲಕ ಬಹು-ಮಾದರಿ ಏಕೀಕರಣವನ್ನು ಹೆಚ್ಚಿಸುತ್ತದೆ, ಇದರಿಂದಾಗಿ ಪ್ರದೇಶದಾದ್ಯಂತ ಸರಕು ಮತ್ತು ಪ್ರಯಾಣಿಕರ ವೇಗದ ಚಲನೆಗೆ ಅನುಕೂಲವಾಗುತ್ತದೆ.

ಯೋಜನೆ ಪೂರ್ಣಗೊಂಡ ನಂತರ, ಪರಮಕುಡಿ-ರಾಮನಾಥಪುರಂ ವಿಭಾಗವು ಪ್ರಾದೇಶಿಕ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ, ಪ್ರಮುಖ ಧಾರ್ಮಿಕ ಮತ್ತು ಆರ್ಥಿಕ ಕೇಂದ್ರಗಳ ನಡುವಿನ ಸಂಪರ್ಕವನ್ನು ಬಲಪಡಿಸುತ್ತದೆ, ರಾಮೇಶ್ವರಂ ಮತ್ತು ಧನುಷ್ಕೋಡಿಯಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ ಮತ್ತು ವ್ಯಾಪಾರ ಮತ್ತು ಕೈಗಾರಿಕಾ ಬೆಳವಣಿಗೆಗೆ ಹೊಸ ಮಾರ್ಗಗಳನ್ನು ತೆರೆಯುತ್ತದೆ. ಈ ಯೋಜನೆಯು ಸುಮಾರು 8.4 ಲಕ್ಷ ಮಾನವ ದಿನಗಳ ಪ್ರತ್ಯಕ್ಷ ಮತ್ತು 10.45 ಲಕ್ಷ ಮಾನವ ದಿನಗಳ ಪರೋಕ್ಷ ಉದ್ಯೋಗವನ್ನು ಸೃಷ್ಟಿಸುತ್ತದೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳವಣಿಗೆ, ಪ್ರಗತಿ ಮತ್ತು ಸಮೃದ್ಧಿಗೆ ಹೊಸ ಮಾರ್ಗಗಳನ್ನು ತೆರೆಯುತ್ತದೆ.

ಕಾರಿಡಾರ್ ನಕ್ಷೆ

image.jpeg

ಅನುಬಂಧ - 1: ಯೋಜನೆಯ ವಿವರಗಳು

ವೈಶಿಷ್ಟ್ಯ

ವಿವರಗಳು

ಯೋಜನೆಯ ಹೆಸರು

ಚತುಷ್ಪಥ ಪರಮಕುಡಿ - ರಾಮನಾಥಪುರಂ ವಿಭಾಗ

ಕಾರಿಡಾರ್

ಮಧುರೈ - ಧನುಷ್ಕೋಡಿ ಕಾರಿಡಾರ್ (ಎನ್‌ ಎಚ್-87)

ಉದ್ದ (ಕಿ.ಮೀ)

46.7

ಒಟ್ಟು ಸಿವಿಲ್ ವೆಚ್ಚ (ಕೋಟಿ ರೂ.)

997.63

ಭೂಸ್ವಾಧೀನ ವೆಚ್ಚ (ಕೋಟಿ ರೂ.)

340.94

ಒಟ್ಟು ಬಂಡವಾಳ ವೆಚ್ಚ (ಕೋಟಿ ರೂ.)

1,853.16

ಮೋಡ್

ಹೈಬ್ರಿಡ್ ಆನ್ಯಯಿಟಿ ಮೋಡ್ (ಎಚ್‌ ಎ ಎಂ)

ಸಂಪರ್ಕಿತ ಪ್ರಮುಖ ರಸ್ತೆಗಳು

ರಾಷ್ಟ್ರೀಯ ಹೆದ್ದಾರಿಗಳು - ಎನ್ ಎಚ್-38, ಎನ್ ಎಚ್-85, ಎನ್ ಎಚ್-36, ಎನ್ ಎಚ್-536, ಮತ್ತು ಎನ್ ಎಚ್-32

ರಾಜ್ಯ ಹೆದ್ದಾರಿಗಳು – ಎಸ್‌ ಎಚ್-47, ಎಸ್‌ ಎಚ್ -29, ಎಸ್‌ ಎಚ್ -34

ಸಂಪರ್ಕಗೊಂಡಿರುವ ಆರ್ಥಿಕ / ಸಾಮಾಜಿಕ / ಸಾರಿಗೆ ಕೇಂದ್ರಗಳು

ವಿಮಾನ ನಿಲ್ದಾಣಗಳು: ಮಧುರೈ, ರಾಮನಾದ್ (ನೌಕಾ ವಾಯು ನಿಲ್ದಾಣ)

ರೈಲು ನಿಲ್ದಾಣಗಳು: ಮಧುರೈ, ರಾಮೇಶ್ವರಂ

ಸಣ್ಣ ಬಂದರುಗಳು: ಪಂಬನ್, ರಾಮೇಶ್ವರಂ

ಸಂಪರ್ಕಗೊಂಡಿರುವ ಪ್ರಮುಖ ನಗರಗಳು / ಪಟ್ಟಣಗಳು

ಮಧುರೈ, ಪರಮಕುಡಿ, ರಾಮನಾಥಪುರಂ, ರಾಮೇಶ್ವರಂ

ಉದ್ಯೋಗ ಸೃಷ್ಟಿಯ ಸಾಮರ್ಥ್ಯ

8.4 ಲಕ್ಷ ಮಾನವ ದಿನಗಳು (ಪ್ರತ್ಯಕ್ಷ) ಮತ್ತು 10.5 ಲಕ್ಷ ಮಾನವ ದಿನಗಳು (ಪರೋಕ್ಷ)

ಎಫ್‌ ವೈ-25 ರಲ್ಲಿ ವಾರ್ಷಿಕ ಸರಾಸರಿ ದೈನಂದಿನ ಸಂಚಾರ (ಎಎಡಿಟಿ)

ಅಂದಾಜು 12,700 ಪ್ರಯಾಣಿಕ ಕಾರುಗಳು (ಪಿಸಿಯು)

 

*****

 


(Release ID: 2141205)