ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕಳೆದ 11 ವರ್ಷಗಳಿಂದ, ನಮ್ಮ ವಿವಿಧ ಉಪಕ್ರಮಗಳು ರೈತರ ಸಮೃದ್ಧಿಯನ್ನು ಹೆಚ್ಚಿಸಿವೆ ಮತ್ತು ಕೃಷಿ ಕ್ಷೇತ್ರದ ಒಟ್ಟಾರೆ ಪರಿವರ್ತನೆಯನ್ನು ಖಚಿತಪಡಿಸಿದೆ: ಪ್ರಧಾನಮಂತ್ರಿ 


ರೈತರ ಕಲ್ಯಾಣಕ್ಕಾಗಿ ನಮ್ಮ ಪ್ರಯತ್ನಗಳು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ  ಶಕ್ತಿಯೊಂದಿಗೆ ಮುಂದುವರಿಯಲಿದೆ: ಪ್ರಧಾನಮಂತ್ರಿ 

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ, ಕಿಸಾನ್ ಫಸಲ್ ಬಿಮಾ ಮತ್ತು ರೈತರ ಕಲ್ಯಾಣಕ್ಕಾಗಿ ಹೆಚ್ಚುತ್ತಿರುವ ಎಂ.ಎಸ್‌.ಪಿ.ಯಂತಹ ಪ್ರಮುಖ ಉಪಕ್ರಮಗಳನ್ನು ಪ್ರಧಾನಮಂತ್ರಿಯವರು ವಿವರಿಸಿದರು

Posted On: 07 JUN 2025 11:32AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಳೆದ 11 ವರ್ಷಗಳಲ್ಲಿ ಕೇಂದ್ರ ಸರ್ಕಾರದ ರೈತ ಪರ ಉಪಕ್ರಮಗಳ ದೂರಗಾಮಿ ಪರಿಣಾಮವನ್ನು ವಿವರಿಸಿದರು, "ಈ ಉಪಕ್ರಮಗಳು ಕೃಷಿ ಹಾಗೂ ಕೃಷಿಕ ಸಮುದಾಯದ ಘನತೆ ಮತ್ತು ಸಮೃದ್ಧಿಯ ಮಹತ್ವದ ಹಂತವನ್ನು ಗುರುತಿಸುತ್ತವೆ" ಎಂದು ಹೇಳಿದರು.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಮತ್ತು ಕಿಸಾನ್ ಫಸಲ್ ಬಿಮಾದಂತಹ ಪ್ರಮುಖ ಉಪಕ್ರಮಗಳ ಮಹತ್ವವನ್ನು ವಿವರಿಸಿದ ಅವರು, ರೈತರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ಕೈಗೊಂಡಿರುವ ಪ್ರಮುಖ ಕ್ರಮಗಳ ಕುರಿತು ವಿವರಿಸಿದರು.

ಕನಿಷ್ಠ ಬೆಂಬಲ ಬೆಲೆಯಲ್ಲಿ (ಎಂ.ಎಸ್.ಪಿ.) ಮಾಡಿರುವ ನಿರಂತರ ಹೆಚ್ಚಳದಿಂದಾಗಿ, ದೇಶದ ಆಹಾರ ಉತ್ಪಾದಕರು ತಮ್ಮ ಬೆಳೆಗಳಿಗೆ ನ್ಯಾಯಯುತ ಬೆಲೆಯನ್ನು ಪಡೆಯುತ್ತಿದ್ದಾರೆ ಮಾತ್ರವಲ್ಲದೆ ಅವರ ಆದಾಯದಲ್ಲಿ ಏರಿಕೆಯನ್ನು ಅನುಭವಿಸುತ್ತಿದ್ದಾರೆ ಎಂದು ಪ್ರಧಾನಮಂತ್ರಿಯವರು ತಿಳಿಸಿದರು.

ಕಷ್ಟಪಟ್ಟು ದುಡಿಯುವ ನಮ್ಮ ದೇಶದ ರೈತರಿಗೆ ಸೇವೆ ಸಲ್ಲಿಸುವುದು ತಮ್ಮ ಸರ್ಕಾರಕ್ಕೆ ದೊರಕಿರುವ ಒಂದು ಭಾಗ್ಯವಾಗಿದೆ ಎಂದು ಶ್ರೀ ಮೋದಿ ಅವರು ಹೇಳಿದರು.  ಕಳೆದ 11 ವರ್ಷಗಳನ್ನು ಉಪಕ್ರಮಗಳ ರೂಪದಲ್ಲಿ ಪ್ರತಿಬಿಂಬಿಸಿದ ಅವರು, ಸರ್ಕಾರದ ವಿವಿಧ ಉಪಕ್ರಮಗಳು ರೈತರಲ್ಲಿ ಸಮೃದ್ಧಿಯನ್ನು ಹೆಚ್ಚಿಸಿದೆ ಮಾತ್ರವಲ್ಲದೆ ಕೃಷಿ ಕ್ಷೇತ್ರದ ಒಟ್ಟಾರೆ ಪರಿವರ್ತನೆಗೆ ಕೊಡುಗೆ ನೀಡಿದೆ ಎಂದು ಹೇಳಿದರು.

"ಮಣ್ಣಿನ ಆರೋಗ್ಯ ಮತ್ತು ನೀರಾವರಿಯಂತಹ ಪ್ರಮುಖ ಅಂಶಗಳ ಬಗ್ಗೆ ಕೇಂದ್ರ ಸರ್ಕಾರವು ಹೆಚ್ಚು ಗಮನ ಹರಿಸಿದೆ, ಇದು ಹೆಚ್ಚು ಪ್ರಯೋಜನಕಾರಿಯಾಗಿದೆ" ಎಂದು ಪ್ರಧಾನಮಂತ್ರಿ ವಿವಿಧ ಉಪಕ್ರಮಗಳನ್ನು ಉಲ್ಲೇಖಿಸಿ ಮಾತನಾಡಿದರು,

"ರೈತರ ಕಲ್ಯಾಣಕ್ಕಾಗಿ ನಮ್ಮ ಪ್ರಯತ್ನಗಳು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಶಕ್ತಿಯೊಂದಿಗೆ ಮುಂದುವರಿಯುತ್ತದೆ" ಎಂದು ಶ್ರೀ ಮೋದಿ ಅವರು ಹೇಳಿದರು.  "ನಾವು ನಮ್ಮ ರೈತರ ಘನತೆ ಮತ್ತು ಏಳಿಗೆಗಾಗಿ ಕೆಲಸ ಮಾಡಿದ್ದೇವೆ" ಎಂದು ಅವರು ಹೇಳಿದರು. 

 ಪ್ರಧಾನಮಂತ್ರಿಯವರು ಎಕ್ಸ್ ತಾಣದಲ್ಲಿ ಈ ರೀತಿಯ ಸಂದೇಶ ಹಂಚಿಕೊಂಡಿದೆ;

"हमारे किसान भाई-बहनों को पहले जहां छोटी-छोटी जरूरतों के लिए भी उधार लेने को मजबूर होना पड़ता था, वहीं बीते 11 साल में हमारी सरकार के निर्णयों से उनका जीवन बहुत आसान हुआ है। पीएम किसान सम्मान निधि हो या फिर किसान फसल बीमा, हमने उनके कल्याण के लिए कई अहम कदम उठाए हैं। अब एमएसपी में निरंतर बढ़ोतरी से देश के अन्नदाताओं को ना सिर्फ फसलों की उचित कीमत मिल रही है, बल्कि उनकी आय भी बढ़ रही है।

 #11YearsOfKisanSamman

 

"ನಮ್ಮ ಕಷ್ಟಪಟ್ಟು ದುಡಿಯುವ ರೈತರಿಗೆ ಸೇವೆ ಸಲ್ಲಿಸುವುದು ನಮ್ಮ ಸೌಭಾಗ್ಯವಾಗಿದೆ. ಕಳೆದ 11 ವರ್ಷಗಳಿಂದ, ನಮ್ಮ ವಿವಿಧ ಉಪಕ್ರಮಗಳು ರೈತರ ಸಮೃದ್ಧಿಯನ್ನು ಹೆಚ್ಚಿಸಿವೆ ಮತ್ತು ಕೃಷಿ ಕ್ಷೇತ್ರದ ಒಟ್ಟಾರೆ ಪರಿವರ್ತನೆಯನ್ನು ಖಾತರಿಪಡಿಸಿದೆ. ನಾವು ಮಣ್ಣಿನ ಆರೋಗ್ಯ ಮತ್ತು ನೀರಾವರಿಯಂತಹ ವಿಷಯಗಳ ಮೇಲೆ ಕೇಂದ್ರೀಕರಿಸಿದ್ದೇವೆ, ಇದು ಹೆಚ್ಚು ಪ್ರಯೋಜನಕಾರಿಯಾಗಿದೆ. ರೈತಾಪಿ ವರ್ಗದ ಕಲ್ಯಾಣಕ್ಕಾಗಿ ನಮ್ಮ ಪ್ರಯತ್ನಗಳು ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಶಕ್ತಿಯೊಂದಿಗೆ ಮುಂದುವರಿಯುತ್ತದೆ. 

#11YearsOfKisanSamman

 

"ನಮ್ಮ ರೈತರ ಘನತೆ ಮತ್ತು ಸಮೃದ್ಧಿಗಾಗಿ ನಾವು ಹೇಗೆ ಕೆಲಸ ಮಾಡಿದ್ದೇವೆ ಎಂಬುದರ ಒಂದು ನೋಟ ಈ ಸರಣಿಯಲ್ಲಿದೆ. ಅದನ್ನು ಇಲ್ಲಿ ಓದಬಹುದು. 

#11YearsOfKisanSamman

 

 

*****


(Release ID: 2135038) Visitor Counter : 3