ಉಕ್ಕು ಸಚಿವಾಲಯ
ಉಕ್ಕು ಸಚಿವಾಲಯದ ಹೊಸ ಜಾಲತಾಣ ಕಾರ್ಯಾರಂಭ
ತನ್ನ ಕಾರ್ಯಾಚರಣೆಯಲ್ಲಿ ಪಾರದರ್ಶಕತೆ, ಲಭ್ಯತೆ ಮತ್ತು ಕಾರ್ಯಕ್ಷಮತೆಯನ್ನು ವರ್ಧಿಸಲು ವಿನ್ಯಾಸಗೊಳಿಸಲಾದ ಉಕ್ಕು ಸಚಿವಾಲಯದ ಹೊಸ ಜಾಲತಾಣ ಅನಾವರಣ
Posted On:
16 MAY 2025 1:36PM by PIB Bengaluru
ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕೆಗಳ ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಮೇ 16, 2025 ರಂದು ಹೊಸದಿಲ್ಲಿಯ ಉದ್ಯೋಗ ಭವನದಲ್ಲಿ ಉಕ್ಕು ಸಚಿವಾಲಯದ ಹೊಸ ಜಾಲತಾಣಕ್ಕೆ (ವೆಬ್‌ಸೈಟ್) ಚಾಲನೆ ನೀಡಿದರು.

ಹೊಸ ಜಾಲತಾಣವನ್ನು ಅದರ ಕಾರ್ಯಾಚರಣೆಗಳಲ್ಲಿ ಪಾರದರ್ಶಕತೆ, ಪ್ರವೇಶಸಾಧ್ಯತೆ ಮತ್ತು ದಕ್ಷತೆಯನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾಗಿದೆ. ಜಾಲತಾಣ ಆಧುನಿಕ, ಬಳಕೆದಾರ ಸ್ನೇಹಿ ಇಂಟೆರ್ ಫೇಸ್ ಅನ್ನು ಹೊಂದಿದ್ದು, ಸಂದರ್ಶಕರು ನ್ಯಾವಿಗೇಟ್ ಮಾಡಲು ಮತ್ತು ಸಂಬಂಧಿತ ಮಾಹಿತಿಯನ್ನು ಹುಡುಕುವುದನ್ನು ಸುಲಭಗೊಳಿಸುತ್ತದೆ. ಹೊಸದಾಗಿ ಪ್ರಾರಂಭಿಸಲಾದ ವೆಬ್‌ಸೈಟ್ ನ ಪ್ರಮುಖ ಲಕ್ಷಣಗಳು ಇಂತಿವೆ:
- ಬಳಕೆದಾರ ಸ್ನೇಹಿ ಇಂಟರ್ಫೇಸ್: ಜಾಲತಾಣವು ಸ್ಪಷ್ಟ ಮತ್ತು ಪ್ರತ್ಯಕ್ಷ ಅನುಭವವನ್ನು ಒದಗಿಸುತ್ತದೆ, ಭಾಗೀದಾರರು/ಪಾಲುದಾರರು ನೀತಿ ದಾಖಲೆಗಳು, ಉದ್ಯಮದ ದತ್ತಾಂಶಗಳು (ಡೇಟಾ) ಮತ್ತು ವಿವಿಧ ಉಪಕ್ರಮಗಳ ಮಾಹಿತಿಯನ್ನು ತ್ವರಿತವಾಗಿ ಪಡೆಯುವುದನ್ನು ಖಚಿತಪಡಿಸುತ್ತದೆ.
- ವರ್ಧಿತ ಸೈಬರ್ ಭದ್ರತೆ: ಸೂಕ್ಷ್ಮ ದತ್ತಾಂಶಗಳನ್ನು (ಡೇಟಾವನ್ನು) ರಕ್ಷಿಸಲು ಮತ್ತು ಸಚಿವಾಲಯದ ಆನ್ಲೈನ್ ಉಪಸ್ಥಿತಿಯ ಸಮಗ್ರತೆಯನ್ನು ಖಚಿತಪಡಿಸಿಕೊಳ್ಳಲು ವೆಬ್‌ಸೈಟ್ ಇತ್ತೀಚಿನ ಸೈಬರ್ ಭದ್ರತಾ ಕ್ರಮಗಳನ್ನು ಅಳವಡಿಸಿಕೊಂಡಿದೆ.
- ಜಿ.ಐ.ಜಿ.ಡಬ್ಲ್ಯು. (GIGW) ಅನುಸರಣೆ: ಜಾಲತಾಣವು ಭಾರತೀಯ ಸರ್ಕಾರಿ ವೆಬ್ಸೈಟ್ಗಳಿಗಾಗಿರುವ ಇತ್ತೀಚಿನ ಮಾರ್ಗಸೂಚಿಗಳನ್ನು (GIGW) ಸಹ ಅನುಸರಿಸುತ್ತದೆ, ಇದು ಅಂಗವಿಕಲರು ಸೇರಿದಂತೆ ಎಲ್ಲಾ ನಾಗರಿಕರಿಗೆ ಪ್ರವೇಶವನ್ನು ಖಚಿತಪಡಿಸುತ್ತದೆ.
- ಜಾಲತಾಣವು ಸಾರ್ವಜನಿಕರಿಗೆ ಉತ್ತಮ ಸಂಪರ್ಕವನ್ನು ಒದಗಿಸುವ ಸಲುವಾಗಿ ವಿವಿಧ ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ.

ಈ ಹೊಸ ಜಾಲತಾಣವು ಆಡಳಿತವನ್ನು ಸುಧಾರಿಸಲು ಮತ್ತು ಭಾರತೀಯ ಉಕ್ಕಿನ ಕ್ಷೇತ್ರದ ಬೆಳವಣಿಗೆಯನ್ನು ಉತ್ತೇಜಿಸಲು ತಂತ್ರಜ್ಞಾನವನ್ನು ಬಳಸಿಕೊಳ್ಳುವ ಸರ್ಕಾರದ ಬದ್ಧತೆಯಲ್ಲಿ ಮಹತ್ವದ ಹೆಜ್ಜೆಯನ್ನು ಪ್ರತಿನಿಧಿಸುತ್ತದೆ. ಈ ಜಾಲತಾಣವು ಉತ್ಪಾದನಾ ಅಂಕಿಅಂಶಗಳು, ನೀತಿ ನವೀಕರಣಗಳು ಮತ್ತು ವಿವಿಧ ಯೋಜನೆಗಳು ಮತ್ತು ಉಪಕ್ರಮಗಳ ವಿವರಗಳನ್ನು ಒಳಗೊಂಡಂತೆ ಭಾರತೀಯ ಉಕ್ಕಿನ ಉದ್ಯಮದ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡುತ್ತದೆ. ಇದು ಸಂವಾದಾತ್ಮಕ ಪರಿಕರಗಳು, ಸಾಧನಗಳಾದ್ಯಂತ ತಡೆರಹಿತ ಪ್ರವೇಶಕ್ಕಾಗಿ ಸ್ಪಂದಿಸುವ ವಿನ್ಯಾಸ ಮತ್ತು ನಿಯಮಿತ ನವೀಕರಣಗಳನ್ನು ಸಹ ಒಳಗೊಂಡಿದೆ.
ಈ ಕಾರ್ಯಕ್ರಮದಲ್ಲಿ ಉಕ್ಕು ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂದೀಪ್ ಪೌಂಡ್ರಿಕ್ ಮತ್ತು ಉಕ್ಕು ಸಚಿವಾಲಯದ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

*****
(Release ID: 2129108)