WAVES BANNER 2025
ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಅಮೃತಾಸ್ಯ: 2025ರ ವೇವ್ಸ್ ಶೃಂಗಸಭೆಯಲ್ಲಿ ಮಧ್ಯಪ್ರದೇಶವು ರಾಜ್ಯದ ಶ್ರೀಮಂತ ಕಲಾತ್ಮಕ ಪರಂಪರೆಯನ್ನು ಪ್ರದರ್ಶಿಸಿತು

 प्रविष्टि तिथि: 02 MAY 2025 8:23PM |   Location: PIB Bengaluru

ವೇವ್ಸ್ ಶೃಂಗಸಭೆ 2025ರ ಎರಡನೇ ದಿನ ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ನಲ್ಲಿ 'ಅಮೃತಾಸ್ಯ: ಮಧ್ಯಪ್ರದೇಶ'ದ ಅದ್ಭುತ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ಈ ಭವ್ಯ ಕಾರ್ಯಕ್ರಮವು ಮಧ್ಯಪ್ರದೇಶದ ಕಲಾತ್ಮಕ ಸೊಬಗಿಗೆ ವರ್ಣರಂಜಿತ ಗೌರವ ಸಲ್ಲಿಸಿತು, ರಾಜ್ಯದ ವೈವಿಧ್ಯಮಯ ನೃತ್ಯ ಸಂಪ್ರದಾಯಗಳ ಮನೋಹರ ಪ್ರದರ್ಶನ ಪ್ರೇಕ್ಷಕರನ್ನು ಬೆರಗುಗೊಳಿಸಿತು.

ಈ ಪ್ರದರ್ಶನವು ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರಗಳೊಂದಿಗೆ ರಾಜ್ಯದ ಜಾನಪದ ಮತ್ತು ಬುಡಕಟ್ಟು ಸಂಪ್ರದಾಯಗಳ ಆಕರ್ಷಕ ಮಿಶ್ರಣವನ್ನು ಒಳಗೊಂಡಿತ್ತು. ವರ್ಣ, ಲಯ ಮತ್ತು ಚಲನೆಯಿಂದ ಶ್ರೀಮಂತವಾಗಿದ್ದ ಈ ನೃತ್ಯವು ರಾಜ್ಯದ ಸಾಂಸ್ಕೃತಿಕ ಅಸ್ಮಿತೆಯನ್ನು ವ್ಯಾಖ್ಯಾನಿಸುವ ಸಂಪ್ರದಾಯದ ಅಮರ ಚೈತನ್ಯವನ್ನು ಎತ್ತಿ ತೋರಿಸಿತು.

ವೇವ್ಸ್ ಶೃಂಗಸಭೆಯ ಪ್ರೇಕ್ಷಕರು ನೃತ್ಯದ ಮೂಲಕ ಪರಂಪರೆ ಮತ್ತು ಕಥೆ ಹೇಳುವಿಕೆಯನ್ನು ಕೌಶಲ್ಯದಿಂದ ಬೆಸೆದ ಉತ್ಸಾಹಭರಿತ ಪ್ರದರ್ಶನವನ್ನು ಕಣ್ತುಂಬಿಕೊಂಡರು. ಈ ಕಾರ್ಯಕ್ರಮವು ದೇಶಾದ್ಯಂತದ ಸಾಂಸ್ಕೃತಿಕ ಪ್ರತಿನಿಧಿಗಳು, ಗಣ್ಯರು ಮತ್ತು ಕಲಾಭಿಮಾನಿಗಳಿಂದ ಭರಪೂರ ಚಪ್ಪಾಳೆ ಹಾಗೂ ವ್ಯಾಪಕ ಮೆಚ್ಚುಗೆಯನ್ನು ಪಡೆಯಿತು.

'ಅಮೃತಾಸ್ಯ'ವು ಭಾರತದ ವೈವಿಧ್ಯಮಯ ಕಲಾತ್ಮಕ ಪರಂಪರೆಯ ರೋಮಾಂಚಕ ತಾಣವಾಗಿ ಮಧ್ಯಪ್ರದೇಶದ ಸ್ಥಾನವನ್ನು ಮತ್ತೊಮ್ಮೆ ದೃಢಪಡಿಸಿತು ಮತ್ತು ವೇವ್ಸ್ ಶೃಂಗಸಭೆ 2025ರ ವಿಶಾಲ ಗುರಿಗಳಿಗೆ ಅರ್ಥಪೂರ್ಣ ಸಾಂಸ್ಕೃತಿಕ ಆಯಾಮವನ್ನು ಸೇರಿಸಿತು.

 

*****


रिलीज़ आईडी: 2126959   |   Visitor Counter: 18

इस विज्ञप्ति को इन भाषाओं में पढ़ें: English , Urdu , हिन्दी , Marathi , Assamese , Punjabi , Gujarati