@font-face { font-family: 'Poppins'; src: url('/fonts/Poppins-Regular.ttf') format('truetype'); font-weight: 400; font-style: normal; } body { font-family: 'Poppins', sans-serif; } .hero { background: linear-gradient(to right, #003973, #e5e5be); color: white; padding: 60px 30px; text-align: center; } .hero h1 { font-size: 2.5rem; font-weight: 700; } .hero h4 { font-weight: 300; } .article-box { background: white; border-radius: 10px; box-shadow: 0 8px 20px rgba(0,0,0,0.1); padding: 40px 30px; margin-top: -40px; position: relative; z-index: 1; } .meta-info { font-size: 1em; color: #6c757d; text-align: center; } .alert-warning { font-weight: bold; font-size: 1.05rem; } .section-footer { margin-top: 40px; padding: 20px 0; font-size: 0.95rem; color: #555; border-top: 1px solid #ddd; } .global-footer { background: #343a40; color: white; padding: 40px 20px 20px; margin-top: 60px; } .social-icons i { font-size: 1.4rem; margin: 0 10px; color: #ccc; } .social-icons a:hover i { color: #fff; } .languages { font-size: 0.9rem; color: #aaa; } footer { background-image: linear-gradient(to right, #7922a7, #3b2d6d, #7922a7, #b12968, #a42776); } body { background: #f5f8fa; } .innner-page-main-about-us-content-right-part { background:#ffffff; border:none; width: 100% !important; float: left; border-radius:10px; box-shadow: 0 8px 20px rgba(0,0,0,0.1); padding: 0px 30px 40px 30px; margin-top: 3px; } .event-heading-background { background: linear-gradient(to right, #7922a7, #3b2d6d, #7922a7, #b12968, #a42776); color: white; padding: 20px 0; margin: 0px -30px 20px; padding: 10px 20px; } .viewsreleaseEvent { background-color: #fff3cd; padding: 20px 10px; box-shadow: 0 .5rem 1rem rgba(0, 0, 0, .15) !important; } } @media print { .hero { padding-top: 20px !important; padding-bottom: 20px !important; } .article-box { padding-top: 20px !important; } }
WAVES BANNER 2025
ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಭಾರತವು ಜಾಗತಿಕ ಕಂಟೆಂಟ್‌ ಕೇಂದ್ರವಾಗಲು ಇದು ಅದ್ಭುತ ಸಮಯ: ಶ್ರದ್ಧಾ ಕಪೂರ್


ಕಂಟೆಂಟ್ ಸೃಷ್ಟಿಯಲ್ಲಿ ಭಾರತ ಅಭೂತಪೂರ್ವ ಏರಿಕೆಯನ್ನು ಕಾಣುತ್ತಿದೆ: ಇನ್‌ಸ್ಟಾಗ್ರಾಮ್ ಮುಖ್ಯಸ್ಥ ಆಡಮ್ ಮೊಸ್ಸೆರಿ

ವೇವ್ಸ್ 2025ರ ಫೈರ್‌ ಸೈಡ್‌ ಚಾಟ್‌ ನಲ್ಲಿ ಪ್ರವೃತ್ತಿಗಳು ಮತ್ತು ವೈರಾಲಿಟಿಯ ಬಗ್ಗೆ ಚರ್ಚೆ

 Posted On: 02 MAY 2025 5:43PM |   Location: PIB Bengaluru

"ಇಂದು, ಸ್ಮಾರ್ಟ್‌ಫೋನ್ ಹೊಂದಿರುವ ಯಾರಾದರೂ ಕಂಟೆಂಟ್ ಸೃಷ್ಟಿಕರ್ತ ಮತ್ತು ನಿರ್ಮಾಪಕರಾಗಬಹುದು" ಎಂದು ಖ್ಯಾತ ನಟಿ ಶ್ರದ್ಧಾ ಕಪೂರ್ ಹೇಳಿದರು, ಇನ್‌ಸ್ಟಾಗ್ರಾಮ್‌ ನಂತಹ ವೇದಿಕೆಗಳ ಮೂಲಕ ಕಂಟೆಂಟ್ ಪ್ರಜಾಪ್ರಭುತ್ವೀಕರಣವಾಗಿರುವುದನ್ನು ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು. ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ನೈಜ ಉಪಸ್ಥಿತಿಗೆ ಹೆಸರುವಾಸಿಯಾದ ಶ್ರದ್ಧಾ, ಭಾರತದ ಆಳವಾದ ಕಥೆ ಹೇಳುವ ಪರಂಪರೆಯನ್ನು ಒತ್ತಿ ಹೇಳಿದರು. "ನಾವು ಕಥೆಗಳನ್ನು ಕೇಳುತ್ತಾ ಬೆಳೆದಿದ್ದೇವೆ - ಅದು ನಾವು ಯಾರೆಂಬುದರ ಭಾಗವಾಗಿದೆ" ಎಂದು ಅವರು ಹೇಳಿದರು.

"ಭಾರತವು ಜಾಗತಿಕ ಕಂಟೆಂಟ್‌ ಕೇಂದ್ರವಾಗಲು ಇದು ಅದ್ಭುತ ಸಮಯ" ಎಂದು ಅವರು ಹೇಳಿದರು, ಡಿಜಿಟಲ್ ತಂತ್ರಜ್ಞಾನ, ಕೈಗೆಟುಕುವ ಡೇಟಾ ಮತ್ತು ಉತ್ಸಾಹಭರಿತ ಯುವ ಜನಸಂಖ್ಯೆಯ ಸಂಯೋಜನೆಯನ್ನು ಪ್ರಸ್ತಾಪಿಸಿ, ಪ್ರಸ್ತುತ ಕ್ಷಣವನ್ನು ಭಾರತದ ಕಂಟೆಂಟ್ ಸೃಷ್ಟಿಕರ್ತರಿಗೆ ಸುವರ್ಣಯುಗ ಎಂದು ಬಣ್ಣಿಸಿದರು. ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಯಶೋಗಾಥೆಯನ್ನು ವಿವರಿಸಿದ ಶ್ರದ್ಧಾ, ಕಂಟೆಂಟ್‌ ನಲ್ಲಿನ ನೈಜತೆಯ ಶಕ್ತಿಯನ್ನು ಮತ್ತಷ್ಟು ಒತ್ತಿ ಹೇಳಿದರು. "ಕಂಟೆಂಟ್ ಹೃದಯದಿಂದ ಬಂದಾಗ, ಅದು ಸಹಜವಾಗಿ ಜನರೊಂದಿಗೆ ಸಂಪರ್ಕ ಸಾಧಿಸುತ್ತದೆ. ನಾನು ಯಾವಾಗಲೂ ಕಾರ್ಯತಂತ್ರದಿಂದ ಮಾತನಾಡುವ ಬದಲು ಪ್ರಾಮಾಣಿಕ ವಿಷಯವನ್ನು ಪೋಸ್ಟ್ ಮಾಡಲು ಪ್ರಯತ್ನಿಸುತ್ತೇನೆ" ಎಂದು ಅವರು ಒತ್ತಿ ಹೇಳಿದರು.

ಭಾರತದ ಮೀಮ್ ಸಂಸ್ಕೃತಿಯ ನಿರಂತರವಾಗಿ ಬೆಳೆಯುತ್ತಿರುವ ಪ್ರಭಾವದ ಕುರಿತು ಶ್ರದ್ಧಾ ಮಾತನಾಡಿದರು. ಟ್ರೆಂಡಿಂಗ್ ಆಡಿಯೋ ಮತ್ತು ಹ್ಯಾಶ್‌ಟ್ಯಾಗ್‌ ಗಳೊಂದಿಗೆ ಇನ್‌ಸ್ಟಾಗ್ರಾಮ್‌ ನಂತಹ ವೇದಿಕೆಗಳು Gen Z ಪ್ರೇಕ್ಷಕರನ್ನು ತೊಡಗಿಸಿಕೊಳ್ಳುವಲ್ಲಿ ಹೇಗೆ ಪ್ರಮುಖ ಪಾತ್ರ ವಹಿಸುತ್ತವೆ ಎಂಬುದರ ಬಗ್ಗೆಯೂ ಮಾತನಾಡಿದರು. "ಪ್ರತಿ ಪೀಳಿಗೆಯು ತನ್ನದೇ ಆದ ವಿಶಿಷ್ಟ ಧ್ವನಿಯನ್ನು ಕಂಡುಕೊಳ್ಳುವುದರೊಂದಿಗೆ, ಪ್ರವೃತ್ತಿಗಳು ಎಷ್ಟು ಬೇಗನೆ ರೂಪುಗೊಳ್ಳುತ್ತವೆ ಮತ್ತು ವಿಕಸನಗೊಳ್ಳುತ್ತವೆ ಎಂಬುದನ್ನು ನೋಡುವುದು ಗಮನಾರ್ಹವಾಗಿದೆ" ಎಂದು ಅವರು ಹೇಳಿದರು.

ಮೆಟಾದ ಇನ್‌ಸ್ಟಾಗ್ರಾಮ್‌ ಮುಖುಸ್ಥ ಆಡಮ್ ಮೊಸ್ಸೆರಿ, ಭಾರತದಲ್ಲಿ ಡಿಜಿಟಲ್ ಕಂಟೆಂಟ್‌ ಸೃಷ್ಟಿಯ ತ್ವರಿತ ರೂಪಾಂತರದ ಕುರಿತು ತಮ್ಮ ಒಳನೋಟಗಳನ್ನು ಹಂಚಿಕೊಳ್ಳುವ ಮೂಲಕ ಜಾಗತಿಕ ದೃಷ್ಟಿಕೋನವನ್ನು ಪ್ರಸ್ತುತಪಡಿಸಿದರು. ಡಿಜಿಟಲ್ ಮೂಲಸೌಕರ್ಯದಲ್ಲಿನ ಕ್ರಾಂತಿಯತ್ತ ಗಮನಸೆಳೆದ ಅವರು, ಡೇಟಾದ ವೆಚ್ಚ ಕಡಿಮೆಯಾಗುತ್ತಿರುವುದು ಮತ್ತು ಹೆಚ್ಚಿನ ವೇಗದ ಇಂಟರ್ನೆಟ್‌ ನ ವ್ಯಾಪಕ ಲಭ್ಯತೆಯು ಕಂಟೆಂಟ್ ರಚನೆಕಾರರಿಗೆ ಹೊಸ ಬಾಗಿಲುಗಳನ್ನು ಹೇಗೆ ತೆರೆದಿದೆ ಎಂಬುದನ್ನು ತಿಳಿಸಿದರು. "ಭಾರತವು ಕಂಟೆಟ್‌ ರಚನೆಯಲ್ಲಿ ಅಭೂತಪೂರ್ವ ಏರಿಕೆಯನ್ನು ಕಾಣುತ್ತಿದೆ" ಎಂದು ಮೊಸ್ಸೆರಿ ಹೇಳಿದರು, ಭಾರತೀಯರು ಡಿಜಿಟಲ್ ಜಗತ್ತಿನೊಂದಿಗೆ ತೊಡಗಿಸಿಕೊಳ್ಳುವುದನ್ನು ಪರಿವರ್ತಿಸುವಲ್ಲಿ ತಂತ್ರಜ್ಞಾನವು ವಹಿಸಿರುವ ಪ್ರಮುಖ ಪಾತ್ರವನ್ನು ಅವರು ಶ್ಲಾಘಿಸಿದರು.

ಇನ್‌ಸ್ಟಾಗ್ರಾಮ್‌ ನಲ್ಲಿ ಅಭಿವ್ಯಕ್ತಿಯ ಪ್ರಬಲ ಸಾಧನವಾಗಿ ಮಾರ್ಪಟ್ಟಿರುವ ರೀಲ್ಸ್‌ ನ ಬಗ್ಗೆಯೂ ಆಳವಾಗಿ ಚರ್ಚಿಸಲಾಯಿತು. "ದೃಶ್ಯ ವಿಷಯವು ಅಂತರ್ಗತವಾಗಿ ಹೆಚ್ಚು ಆಕರ್ಷಕ ಮತ್ತು ಪ್ರಭಾವಶಾಲಿಯಾಗಿದೆ. ರೀಲ್‌ ಗಳು ವ್ಯಕ್ತಿಗಳಿಗೆ ಸಂಕ್ಷಿಪ್ತ ಮತ್ತು ಪ್ರಭಾವಶಾಲಿ ರೀತಿಯಲ್ಲಿ ಕಥೆಗಳನ್ನು ಹೇಳಲು ಅನುವು ಮಾಡಿಕೊಡುತ್ತವೆ, ಜಾಗತಿಕ ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸಲು ಸೃಜನಶೀಲ ವೇದಿಕೆಯನ್ನು ಒದಗಿಸುತ್ತವೆ" ಎಂದು ಮೊಸ್ಸೆರಿ ಹೇಳಿದರು.

"ಸೃಜನಾತ್ಮಕ ಅಭಿವ್ಯಕ್ತಿಯನ್ನು ಸಕ್ರಿಯಗೊಳಿಸುವುದು: GenZ ಕಂಟೆಂಟ್‌ ಅನ್ನು ಹೇಗೆ ಬಳಸುತ್ತದೆ" ಎಂಬ ವಿಷಯದ ಕುರಿತು ನಡೆದ ಸಂವಾದ ಗೋಷ್ಠಿಯು ಕೇವಲ ಸಂವಾದವಾಗಿರಲಿಲ್ಲ; ಅದು ಭಾರತದ ಅಪರಿಮಿತ ಸೃಜನಶೀಲ ಸಾಮರ್ಥ್ಯ ಮತ್ತು ಮುಂದಿನ ಪೀಳಿಗೆಯ ಡಿಜಿಟಲ್ ಕಥೆಗಾರರನ್ನು ಸಬಲೀಕರಣಗೊಳಿಸುವಲ್ಲಿ ತಂತ್ರಜ್ಞಾನವು ವಹಿಸುವ ಪರಿವರ್ತಕ ಪಾತ್ರದ ಆಚರಣೆಯಾಗಿತ್ತು. ಡಿಜಿಟಲ್ ಪ್ಲಾಟ್‌ಫಾರ್ಮ್‌ ಗಳು ಕಂಟೆಂಟ್ ರಚನೆಯನ್ನು ಪ್ರಜಾಪ್ರಭುತ್ವಗೊಳಿಸುವುದನ್ನು ಮುಂದುವರೆಸುತ್ತಿರುವುದರಿಂದ, ಸಂಸ್ಕೃತಿ, ತಂತ್ರಜ್ಞಾನ ಮತ್ತು ಸೃಜನಶೀಲತೆಯ ಸಂಗಮವು ‌GenZ ಗಾಗಿ ಕಂಟೆಂಟ್ ಬಳಕೆಯ ಭವಿಷ್ಯವನ್ನು ಹೇಗೆ ರೂಪಿಸುತ್ತಿದೆ ಎಂಬುದನ್ನು ಗೋಷ್ಠಿಯು ಚರ್ಚಿಸಿತು.

 

*****


Release ID: (Release ID: 2126761)   |   Visitor Counter: 14