ಪ್ರಧಾನ ಮಂತ್ರಿಯವರ ಕಛೇರಿ
ಮಹಾತ್ಮ ಫುಲೆ ಅವರ ಜನ್ಮ ದಿನಾಚರಣೆಯಂದು ಪ್ರಧಾನಮಂತ್ರಿ ಮೋದಿ ಗೌರವ ನಮನ
प्रविष्टि तिथि:
11 APR 2025 8:55AM by PIB Bengaluru
ಇಂದು ಮಹಾತ್ಮ ಫುಲೆ ಅವರ ಜನ್ಮ ದಿನಾಚರಣೆ ಪ್ರಯುಕ್ತ ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗೌರವ ಸಲ್ಲಿಸಿದ್ದಾರೆ. ಮಹಾತ್ಮ ಫುಲೆ ಅವರು ಮಾನವೀಯತೆಯ ನಿಜವಾದ ಸೇವಕ ಎಂದು ಶ್ಲಾಘಿಸಿದ್ದಾರೆ.
ಎಕ್ಸ್ ಪೋಸ್ಟ್ ನಲ್ಲಿ ಬರೆದುಕೊಂಡಿರುವ ಪ್ರಧಾನಮಂತ್ರಿಗಳು,
"ಮಾನವಕುಲದ ನಿಜವಾದ ಸೇವಕ ಮಹಾತ್ಮ ಫುಲೆ ಅವರ ಜಯಂತಿಯಂದು ಅವರಿಗೆ ಗೌರವಪೂರ್ವಕ ನಮನಗಳು. ಅವರು ಸಮಾಜದ ತುಳಿತಕ್ಕೊಳಗಾದ ಮತ್ತು ವಂಚಿತ ವರ್ಗಗಳ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ದೇಶಕ್ಕೆ ಅವರು ನೀಡಿದ ಅಮೂಲ್ಯ ಕೊಡುಗೆ ಪ್ರತಿ ಪೀಳಿಗೆಗೂ ಸ್ಫೂರ್ತಿ ನೀಡುತ್ತದೆ." ಎಂದು ಹೇಳಿದ್ದಾರೆ.
*****
(रिलीज़ आईडी: 2120834)
आगंतुक पटल : 38
इस विज्ञप्ति को इन भाषाओं में पढ़ें:
Odia
,
English
,
Urdu
,
Marathi
,
हिन्दी
,
Manipuri
,
Bengali
,
Assamese
,
Punjabi
,
Gujarati
,
Tamil
,
Telugu
,
Malayalam