ಸಂಪುಟ
azadi ka amrit mahotsav

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಉಪ ಯೋಜನೆಯಡಿಯಲ್ಲಿ 2025-2026ರ ಅವಧಿಗೆ ಆಧುನೀಕರಣಕ್ಕಾಗಿ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮತ್ತು ನೀರು ನಿರ್ವಹಣೆಗೆ ಸಂಪುಟದ ಅನುಮೋದನೆ

Posted On: 09 APR 2025 3:12PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು 2025-2026ರ ಅವಧಿಗೆ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯ (ಪಿಎಂಕೆಎಸ್ ವೈ) ಉಪ-ಯೋಜನೆಯಾಗಿ ಆಧುನೀಕರಣಕ್ಕಾಗಿ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮತ್ತು ನೀರು ನಿರ್ವಹಣೆ(ಎಂ-ಸಿಎಡಿಡಬ್ಲೂಎಂ)ಗೆ ಅನುಮೋದನೆ ನೀಡಿದೆ. ಅದರ ಆರಂಭಿಕ  ಒಟ್ಟು ವೆಚ್ಚ 1600 ಕೋಟಿ ರೂಪಾಯಿಗಳು.

ಈ ನೀರಾವರಿ ಯೋಜನೆಯು, ನೀರು ಸರಬರಾಜು ಜಾಲದ ಆಧುನೀಕರಣವನ್ನು ಹಾಲಿ ಚಾಲ್ತಿಯಲ್ಲಿರುವ ಕಾಲುವೆಗಳು ಅಥವಾ ನಿಯೋಜಿತ ಕ್ಲಸ್ಟರ್‌ ಗಳಲ್ಲಿ ಇತರ ಮೂಲಗಳಿಂದ ಕೃಷಿಗೆ ನೀರನ್ನು ಪೂರೈಸುವ ಗುರಿಯನ್ನು ಹೊಂದಿದೆ. ಇದು ನೆಲದಾಳದಲ್ಲಿ ಒತ್ತಡದ ಪೈಪ್ (ಪ್ರೆಷರೈಸ್ಡ್‌ ಪೈಪ್) ನೀರಾವರಿಯೊಂದಿಗೆ 1 ಹೆಕ್ಟೇರ್ ವರೆಗೆ ರೈತರು ಸ್ಥಾಪಿತ ಮೂಲದಿಂದ ತೋಟದ ಬಾಗಿಲಿನವರೆಗೆ ಸೂಕ್ಷ್ಮ ನೀರಾವರಿಗಾಗಿ ಬಲವಾದ ಪೂರಕ ಮೂಲಸೌಕರ್ಯ ಒದಗಿಸುತ್ತದೆ. ನೀರಿನ ಲೆಕ್ಕಪತ್ರ ನಿರ್ವಹಣೆ ಮತ್ತು ನೀರಿನ ನಿರ್ವಹಣೆಗೆ ಎಸ್ ಸಿಎಡಿಎ, ಇಂಟರ್ನೆಟ್ ಆಫ್ ಥಿಂಗ್ಸ್ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಇದು ತೋಟದ ಮಟ್ಟದಲ್ಲಿ ನೀರಿನ ಬಳಕೆಯ ದಕ್ಷತೆಯನ್ನು (ಡಬ್ಲೂಯುಇ) ಹೆಚ್ಚಿಸುತ್ತದೆ, ಕೃಷಿ ಉತ್ಪಾದನೆ ಮತ್ತು ಉತ್ಪಾದಕತೆಯನ್ನು ವೃದ್ಧಿಸುತ್ತದೆ ಮತ್ತು ಆ ಮೂಲಕ ರೈತರ ಆದಾಯವನ್ನು ಹೆಚ್ಚಿಸುತ್ತದೆ.  

ನೀರಾವರಿ ಸ್ವತ್ತುಗಳ ನಿರ್ವಹಣೆಗಾಗಿ ನೀರಾವರಿ ನಿರ್ವಹಣಾ ವರ್ಗಾವಣೆ (ಐಎಂಟಿ) ಮೂಲಕ ನೀರು ಬಳಕೆದಾರರ ಸೊಸೈಟಿ (ಡಬ್ಲೂಯುಎಸ್) ಯೋಜನೆಗಳನ್ನು ಸುಸ್ಥಿರಗೊಳಿಸಲಾಗುವುದು. ನೀರು ಬಳಕೆದಾರ ಸಂಘಗಳಿಗೆ ಐದು ವರ್ಷಗಳ ಕಾಲ ಎಫ್ ಪಿ ಒ ಅಥವಾ ಪ್ಯಾಕ್ (ಪಿಎಸಿಎಸ್) ನಂತಹ ಅಸ್ತಿತ್ವದಲ್ಲಿರುವ ಆರ್ಥಿಕ ಘಟಕಗಳೊಂದಿಗೆ ಸಂಪರ್ಕ ಸಾಧಿಸಲು ಬೆಂಬಲ ನೀಡಲಾಗುವುದು. ಇದರಿಂದ ಯುವಕರು ಆಧುನಿಕ ನೀರಾವರಿ ವಿಧಾನವನ್ನು ಅಳವಡಿಸಿಕೊಳ್ಳಲು ಕೃಷಿಯತ್ತ ಆಕರ್ಷಿತರಾಗುತ್ತಾರೆ.

ರಾಜ್ಯಗಳಿಗೆ ಹಣಕಾಸು ನೆರವು ಒದಗಿಸುವ ಮೂಲಕ ದೇಶದ ವಿವಿಧ ಕೃಷಿ-ಹವಾಮಾನ ವಲಯಗಳಲ್ಲಿ ಪ್ರಾಯೋಗಿಕ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಆರಂಭಿಕ ಅನುಮೋದನೆ ನೀಡಲಾಗಿದೆ. ಈ ಯೋಜನೆಗಳನ್ನು ರೂಪಿಸುವುದರಲ್ಲಿ ಮತ್ತು ವ್ಯವಸ್ಥೆಯಲ್ಲಿನ ಕಲಿಕೆಯ ಆಧಾರದ ಮೇಲೆ, 16 ನೇ ಹಣಕಾಸು ಆಯೋಗದ ಅವಧಿಗೆ ಅಂದರೆ 2026ರ ಏಪ್ರಿಲ್ ನಿಂದ ರಾಷ್ಟ್ರೀಯ  ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮತ್ತು ನೀರು ನಿರ್ವಹಣೆ ಯೋಜನೆಯನ್ನು ಆರಂಭಿಸಲಾಗುವುದು.

 

*****


(Release ID: 2120407) Visitor Counter : 42