ಪ್ರಧಾನ ಮಂತ್ರಿಯವರ ಕಛೇರಿ
ಶ್ರೀಲಂಕಾದ ತಮಿಳು ಸಮುದಾಯದ ನಾಯಕರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ
Posted On:
05 APR 2025 9:49PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಶ್ರೀಲಂಕಾದ ಕೊಲಂಬೊದಲ್ಲಿ ತಮಿಳು ಸಮುದಾಯದ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಭೇಟಿಯ ಸಮಯದಲ್ಲಿ ಪ್ರಧಾನಿ ಮೋದಿಯವರು, ತಮಿಳು ಸಮುದಾಯದ ನಾಯಕರಾದ ತಿರು ಆರ್. ಸಂಪಂತನ್ ಮತ್ತು ತಿರು ಮಾವೈ ಸೇನಾತಿರಾಜ ಅವರ ನಿಧನಕ್ಕೆ ಸಂತಾಪ ಸೂಚಿಸಿದರು.
ಇದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಪ್ರಧಾನಿ ಮೋದಿಯವರು,
“ಶ್ರೀಲಂಕಾದ ತಮಿಳು ಸಮುದಾಯದ ನಾಯಕರನ್ನು ಭೇಟಿಯಾಗುವುದು ಯಾವಾಗಲೂ ಸಂತೋಷದ ವಿಷಯವಾಗಿದೆ. ಈ ಸಂದರ್ಭದಲ್ಲಿ ಅವರ ನಾಯಕರಾದ ತಿರು ಆರ್. ಸಂಪಂತನ್ ಮತ್ತು ತಿರು ಮಾವೈ ಸೇನಾತಿರಾಜ ಅವರ ನಿಧನಕ್ಕೆ ನನ್ನ ಸಂತಾಪ ಸೂಚಿಸಿದೆನು. ಇಬ್ಬರೂ ನನಗೆ ವೈಯಕ್ತಿಕವಾಗಿ ಪರಿಚಿತರು. ಸಂಯುಕ್ತ ಶ್ರೀಲಂಕಾ ದೇಶದೊಳಗೆ ತಮಿಳು ಸಮುದಾಯಕ್ಕೆ ಸಮಾನತೆ, ಘನತೆ ಮತ್ತು ನ್ಯಾಯಯುತ ಜೀವನ ನಡೆಸಲು ಅಚಲ ಬದ್ಧತೆಯನ್ನು ನಾಯಕರು ಪುನರುಚ್ಛರಿಸಿದ್ದಾರೆ. ನನ್ನ ಈ ಭೇಟಿಯ ಸಂದರ್ಭದಲ್ಲಿ ಚಾಲನೆ ನೀಡಲಾದ ಅನೇಕ ಯೋಜನೆಗಳು ಮತ್ತು ಉಪಕ್ರಮಗಳು ಶ್ರೀಲಂಕಾದ ತಮಿಳು ಸಮುದಾಯದವರ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಪ್ರಗತಿಗೆ ಕೊಡುಗೆ ನೀಡುತ್ತವೆ ಎಂಬ ನಂಬಿಕೆ ನನ್ನದು” ಎಂದು ಬರೆದುಕೊಂಡಿದ್ದಾರೆ.
“இலங்கையில் உள்ள தமிழ் சமூகத்தினரது தலைவர்களை சந்திக்கின்றமை எப்பொழுதும் மகிழ்ச்சிக்குரிய ஒரு விடயமாகும். பெருமதிப்புக்குரிய தமிழ் தலைவர்களான திரு இரா. சம்பந்தன் மற்றும் திரு மாவை சேனாதிராஜா ஆகியோரது மறைவுக்கு இச்சந்தர்ப்பத்தில் அனுதாபம் தெரிவித்தேன், அவர்கள் இருவருமே தனிப்பட்ட ரீதியில் எனக்கு தெரிந்தவர்கள். அத்துடன், ஐக்கிய இலங்கைக்குள் தமிழ் சமூகத்திற்கு சமத்துவம், கௌரவம் மற்றும் நீதி ஆகியவற்றுடனான வாழ்க்கைக்கான எமது அசைக்கமுடியாத அர்ப்பணிப்பு இச்சந்திப்பின்போது மீண்டும் வலியுறுத்தப்பட்டது. எனது விஜயத்தின்போது ஆரம்பித்துவைக்கப்பட்ட பல திட்டங்களும் முன்னெடுப்புகளும் அவர்களது சமூக, பொருளாதார மற்றும் கலாசார முன்னேற்றத்துக்கான பங்களிப்பை வழங்கும்.”
*****
(Release ID: 2119492)
Visitor Counter : 10
Read this release in:
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam