ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸಂಸತ್ತಿನ ಉಭಯ ಸದನಗಳಲ್ಲಿ ವಕ್ಫ್ ಮಸೂದೆ ಅಂಗೀಕಾರ ಮಹತ್ವದ ಕ್ಷಣ -  ಪ್ರಧಾನಮಂತ್ರಿ ಶ್ಲಾಘನೆ.

Posted On: 04 APR 2025 8:19AM by PIB Bengaluru

ಸಂಸತ್ತಿನ ಉಭಯ ಸದನಗಳಿಂದ ವಕ್ಫ್ (ತಿದ್ದುಪಡಿ) ಮಸೂದೆ ಮತ್ತು ಮುಸಲ್ಮಾನ್ ವಕ್ಫ್ (ರದ್ದತಿ) ಮಸೂದೆಯ ಅಂಗೀಕಾರವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಶ್ಲಾಘಿಸಿದ್ದಾರೆ. ಇದು ಸಾಮಾಜಿಕ-ಆರ್ಥಿಕ ನ್ಯಾಯ, ಪಾರದರ್ಶಕತೆ ಮತ್ತು ಒಳಗೊಂಡ ಬೆಳವಣಿಗೆಗಾಗಿ ಸಾಮೂಹಿಕ ಅನ್ವೇಷಣೆಯಲ್ಲಿ ಒಂದು ಮಹತ್ವದ ಕ್ಷಣವಾಗಿದೆ ಎಂದು ಅವರು ಹೇಳಿದ್ದಾರೆ. 

ಅವರು ಎಕ್ಸ್ ನ ಥ್ರೆಡ್ ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ:

"ಸಂಸತ್ತಿನ ಎರಡೂ ಸದನಗಳು ವಕ್ಫ್ (ತಿದ್ದುಪಡಿ) ಮಸೂದೆ ಮತ್ತು ಮುಸಲ್ಮಾನ್ ವಕ್ಫ್ (ರದ್ದತಿ) ಮಸೂದೆಯನ್ನು ಅಂಗೀಕರಿಸಿರುವುದು ಸಾಮಾಜಿಕ-ಆರ್ಥಿಕ ನ್ಯಾಯ, ಪಾರದರ್ಶಕತೆ ಮತ್ತು ಒಳಗೊಂಡ ಬೆಳವಣಿಗೆಗಾಗಿ ನಮ್ಮ ಸಾಮೂಹಿಕ ಅನ್ವೇಷಣೆಯಲ್ಲಿ ಒಂದು ಮಹತ್ವದ ಕ್ಷಣವಾಗಿದೆ. ಇದು ವಿಶೇಷವಾಗಿ ಧ್ವನಿ ಮತ್ತು ಅವಕಾಶ ಎರಡನ್ನೂ ನಿರಾಕರಿಸಲ್ಪಟ್ಟು ದೀರ್ಘಕಾಲದಿಂದ ಅಂಚಿನಲ್ಲೇ ಉಳಿದವರಿಗೆ ನೆರವಾಗಲಿದೆ." 

"ಸಂಸದೀಯ ಮತ್ತು ಸಮಿತಿ ಚರ್ಚೆಗಳಲ್ಲಿ ಭಾಗವಹಿಸಿದ, ತಮ್ಮ ದೃಷ್ಟಿಕೋನಗಳನ್ನು ಹಂಚಿಕೊಂಡ ಮತ್ತು ಈ ಶಾಸನಗಳಿಗೆ ಬಲ ತುಂಬಲು ಕೊಡುಗೆ ನೀಡಿದ ಎಲ್ಲಾ ಸಂಸತ್ ಸದಸ್ಯರಿಗೆ ಕೃತಜ್ಞತೆಗಳು. ಸಂಸದೀಯ ಸಮಿತಿಗೆ ತಮ್ಮ ಅಮೂಲ್ಯವಾದ ಸಲಹೆ, ಅಭಿಪ್ರಾಯ ಕಳುಹಿಸಿದ ಅಸಂಖ್ಯಾತ ಜನರಿಗೂ ವಿಶೇಷ ಧನ್ಯವಾದಗಳು. ಮತ್ತೊಮ್ಮೆ, ವ್ಯಾಪಕ ಚರ್ಚೆ ಮತ್ತು ಸಂವಾದದ ಮಹತ್ವವು ಪುನಃ ದೃಢೀಕೃತವಾಗಿದೆ." 

"ದಶಕಗಳ ಕಾಲ, ವಕ್ಫ್ ವ್ಯವಸ್ಥೆಯು ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಕೊರತೆಗೆ ಸಮಾನಾರ್ಥಕವಾಗಿತ್ತು. ಇದು ವಿಶೇಷವಾಗಿ ಮುಸ್ಲಿಂ ಮಹಿಳೆಯರು, ಬಡ ಮುಸ್ಲಿಮರು, ಪಸ್ಮಾಂಡಾ ಮುಸ್ಲಿಮರ ಹಿತಾಸಕ್ತಿಗಳಿಗೆ ಹಾನಿ ಮಾಡಿತು. ಸಂಸತ್ತು ಅಂಗೀಕರಿಸಿದ ಶಾಸನಗಳು ಪಾರದರ್ಶಕತೆಯನ್ನು ಹೆಚ್ಚಿಸಲಿವೆ ಮತ್ತು ಜನರ ಹಕ್ಕುಗಳನ್ನು ರಕ್ಷಿಸಲಿವೆ." 

"ನಾವು ಈಗ ಹೆಚ್ಚು ಆಧುನಿಕವಾಗಿರುವ ಮತ್ತು ಸಾಮಾಜಿಕ ನ್ಯಾಯಕ್ಕೆ ಸೂಕ್ಷ್ಮವಾಗಿರುವ ಚೌಕಟ್ಟಿನ ಯುಗವನ್ನು ಪ್ರವೇಶಿಸಲಿದ್ದೇವೆ. ಒಟ್ಟಾರೆಯಾಗಿ, ಪ್ರತಿಯೊಬ್ಬ ನಾಗರಿಕರ ಘನತೆಗೆ ಆದ್ಯತೆ ನೀಡಲು ನಾವು ಬದ್ಧರಾಗಿದ್ದೇವೆ. ಇದು ನಾವು ಸದೃಢ, ಇನ್ನಷ್ಟು ಒಳಗೊಂಡ ಮತ್ತು ಹೆಚ್ಚು ಸಹಾನುಭೂತಿಯ ಭಾರತವನ್ನು ಹೇಗೆ ನಿರ್ಮಿಸಲಿದ್ದೇವೆ ಎಂಬುದರ ನಿದರ್ಶನವಾಗಿದೆ."

 

 

“संसद के दोनों सदनों से वक्फ (संशोधन) विधेयक और मुसलमान वक्फ (निरसन) विधेयक का पारित होना देश के लिए एक ऐतिहासिक क्षण है। यह सामाजिक-आर्थिक न्याय, पारदर्शिता और समावेशी विकास की हमारी सामूहिक प्रतिबद्धता को सामने लाता है। यह विशेष रूप से उन लोगों के लिए फायदेमंद होगा, जो लंबे समय से हाशिये पर रहे हैं, जिनकी आवाज अनसुनी रही और जिन्हें अवसरों से वंचित रहना पड़ा है।”

“उन सभी सांसदों का हृदय से आभार, जिन्होंने संसद और कमेटी की चर्चाओं में हिस्सा लिया और अपने विचार रखे। इन चर्चाओं ने विधेयक को और सशक्त बनाने का काम किया है। इस अवसर पर संसदीय समिति को अपना बहुमूल्य सुझाव भेजने वाले अनगिनत लोगों का भी मैं विशेष रूप से आभार व्यक्त करना चाहता हूं। इससे एक बार फिर यह पता चलता है कि व्यापक बहस और संवाद कितना महत्वपूर्ण होता है।”

“दशकों से वक्फ व्यवस्था में पारदर्शिता और जवाबदेही की कमी नजर आ रही थी। इससे मुख्य रूप से हमारी मुस्लिम माताओं-बहनों, गरीब और पसमांदा मुसलमान भाई-बहनों के हितों को बहुत नुकसान हो रहा था। अब संसद द्वारा पारित विधेयक पारदर्शिता को बढ़ाने के साथ-साथ लोगों के अधिकारों की रक्षा में भी मददगार बनेगा।”

“इसके साथ ही हम एक ऐसे युग में प्रवेश करेंगे, जो आज के समय के अनुरूप होने के साथ ही सामाजिक न्याय को लेकर प्रतिबद्ध होगा। देश के हर नागरिक की गरिमा को प्राथमिकता मिले, इसके लिए हम संकल्पबद्ध हैं। यह मार्ग ज्यादा सशक्त, समावेशी और संवेदनशील भारत के निर्माण में काफी महत्वपूर्ण होने वाला है।”

 

 

*****


(Release ID: 2118697) Visitor Counter : 8