ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ
azadi ka amrit mahotsav

ಪಿಎಂ ವಿಕಾಸ್‌ ಯೋಜನೆ ಅಲ್ಪಸಂಖ್ಯಾತ ಸಮುದಾಯಗಳ ಉನ್ನತಿಗೆ ಗಮನ ಹರಿಸಿದೆ

Posted On: 24 MAR 2025 4:33PM by PIB Bengaluru

ಪ್ರಧಾನಮಂತ್ರಿ ವಿರಾಸತ್‌ ಕಾ ಸಂವರ್ಧನ್‌ (ಪಿಎಂ ವಿಕಾಸ್‌) ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಕೇಂದ್ರ ವಲಯದ ಯೋಜನೆಯಾಗಿದ್ದು, ಇದು ಐದು ಹಿಂದಿನ ಯೋಜನೆಗಳಾದ ‘ಸೀಖೋ ಔರ್‌ ಕಮಾವೊ’, ‘ನಯೀ ಮಂಜಿಲ್‌’, ‘ನಯೀ ರೋಶ್ನಿ’ ಮತ್ತು ‘ಯುಎಸ್‌ಟಿಟಿಎಡಿ’ ಮತ್ತು ‘ಹಮಾರಿ ಧರೋಹರ್‌’ ಯೋಜನೆಗಳನ್ನು ಒಟ್ಟುಗೂಡಿಸುತ್ತದೆ ಮತ್ತು ಈ ಕೆಳಗಿನವುಗಳ ಮೂಲಕ ಆರು ಅಧಿಸೂಚಿತ ಅಲ್ಪಸಂಖ್ಯಾತ ಸಮುದಾಯಗಳ ಉನ್ನತಿಯನ್ನು ಕೇಂದ್ರೀಕರಿಸುತ್ತದೆ:


i. ಕೌಶಲ್ಯ ಮತ್ತು ತರಬೇತಿ (ಸಾಂಪ್ರದಾಯಿಕವಲ್ಲದ ಮತ್ತು ಸಾಂಪ್ರದಾಯಿಕ)

ii. ಮಹಿಳಾ ನಾಯಕತ್ವ ಮತ್ತು ಉದ್ಯಮಶೀಲತೆ

iii. ಶಿಕ್ಷ ಣ (ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಓಪನ್‌ ಸ್ಕೂಲಿಂಗ್‌ ಮೂಲಕ)

iv. ಮೂಲಸೌಕರ್ಯ ಅಭಿವೃದ್ಧಿ (ಪ್ರಧಾನ ಮಂತ್ರಿ ಜನ ವಿಕಾಸ್‌ ಕಾರ್ಯಕ್ರಮದ ಮೂಲಕ)

ರಾಷ್ಟ್ರೀಯ ಅಲ್ಪಸಂಖ್ಯಾತರ ಅಭಿವೃದ್ಧಿ ಮತ್ತು ಹಣಕಾಸು ನಿಗಮ (ಎನ್‌ಎಂಡಿಎಫ್‌ಸಿ) ನೀಡುವ ಸಾಲ ಕಾರ್ಯಕ್ರಮಗಳೊಂದಿಗೆ ಫಲಾನುಭವಿಗಳನ್ನು ಸಂಪರ್ಕಿಸುವ ಮೂಲಕ ಸಾಲ ಸಂಪರ್ಕವನ್ನು ಸುಲಭಗೊಳಿಸಲು ಈ ಯೋಜನೆಯು ಅವಕಾಶ ನೀಡುತ್ತದೆ.

ಕರಕುಶಲ ವಸ್ತುಗಳ ರಫು ಉತ್ತೇಜನ ಮಂಡಳಿ (ಇಪಿಸಿಎಚ್‌) ಪಿಎಂ ವಿಕಾಸ್‌ ಯೋಜನೆಯಡಿ ಸಚಿವಾಲಯದ ಜ್ಞಾನ ಪಾಲುದಾರನಾಗಿದ್ದು, ಯೋಜನೆಯ ಸಾಂಪ್ರದಾಯಿಕ ತರಬೇತಿ ಘಟಕಗಳ ಅಡಿಯಲ್ಲಿ ತರಬೇತಿ ಪಡೆದ ಕುಶಲಕರ್ಮಿಗಳಿಗೆ (i) ಮಾರುಕಟ್ಟೆ ಸಂಪರ್ಕಗಳನ್ನು ಒದಗಿಸುವ ದೃಷ್ಟಿಯಿಂದ ಬೆಂಬಲವನ್ನು ವಿಸ್ತರಿಸುತ್ತದೆ; (ii) ತರಬೇತಿಗಾಗಿ ಸಂಬಂಧಿತ ಕೋರ್ಸ್‌ ಮಾಡ್ಯೂಲ್‌ ವಿಷಯದ ಅಭಿವೃದ್ಧಿ; (iii) ಕುಶಲಕರ್ಮಿ ಉತ್ಪನ್ನಗಳಿಗೆ ಬ್ರಾಂಡ್‌ ಸ್ಥಾನೀಕರಣ ಮತ್ತು ದೃಶ್ಯ ವ್ಯಾಪಾರವನ್ನು ಒದಗಿಸುವುದು; (iv) ಸಚಿವಾಲಯದ ಕಾರ್ಯಕ್ರಮಗಳು / ಪ್ರದರ್ಶನದ ಸಮಯದಲ್ಲಿಜಾಗೃತಿ ಕಾರ್ಯಕ್ರಮವನ್ನು ಆಯೋಜಿಸುವುದು; (v) ಉತ್ಪಾದಕ ಸಮೂಹ ಕಂಪನಿಗಳ ರಚನೆಗೆ ಕುಶಲಕರ್ಮಿಗಳನ್ನು ಸಜ್ಜುಗೊಳಿಸುವುದು; ಇತ್ಯಾದಿ.

ಪಿಎಂ ವಿಕಾಸ್‌ ಯೋಜನೆಯಡಿ, ಅನುಷ್ಠಾನ ಪಾಲುದಾರರು ಎನ್‌ಎಸ್‌ಕ್ಯೂಎಫ್‌ ಅಲೈನ್ಡ್ ಸ್ಕಿಲ್‌ ಕಾರ್ಯಕ್ರಮಗಳ ಅಡಿಯಲ್ಲಿ ತರಬೇತಿ ಪಡೆದ ಒಟ್ಟು ಅಭ್ಯರ್ಥಿಗಳಲ್ಲಿ75 ಪ್ರತಿಶತದಷ್ಟು ಉದ್ಯೋಗವನ್ನು ಖಚಿತಪಡಿಸಿಕೊಳ್ಳಬೇಕು.

ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಶ್ರೀ ಕಿರಣ್‌ ರಿಜಿಜು ಅವರು ಇಂದು ರಾಜ್ಯ ಸಭೆಯಲ್ಲಿ ಲಿಖಿತ ಉತ್ತರದಲ್ಲಿಈ ಮಾಹಿತಿಯನ್ನು ನೀಡಿದರು.

 

*****


(Release ID: 2114482) Visitor Counter : 24


Read this release in: English , Urdu , Hindi , Tamil