ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ವಿಶ್ವ ಜಲ ದಿನದಂದು ಜಲ ಸಂರಕ್ಷಣೆಯ ಬದ್ಧತೆಯನ್ನು ಪುನರುಚ್ಚರಿಸಿದ ಪ್ರಧಾನಮಂತ್ರಿ

Posted On: 22 MAR 2025 10:13AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ಜಲ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ. ಮಾನವ ನಾಗರಿಕತೆಯಲ್ಲಿ ನೀರಿನ ಮಹತ್ವದ ಪಾತ್ರವನ್ನು ಒತ್ತಿ ಹೇಳಿರುವ ಅವರು, ಭವಿಷ್ಯದ ಪೀಳಿಗೆಗೆ ಈ ಅತ್ಯಮೂಲ್ಯ ಸಂಪನ್ಮೂಲವನ್ನು ರಕ್ಷಿಸಲು ಸಾಮೂಹಿಕ ಕ್ರಮವನ್ನು ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.

ಶ್ರೀ ಮೋದಿಯವರು Xನಲ್ಲಿ;

"ವಿಶ್ವ ಜಲ ದಿನವಾದ ಇಂದು, ನೀರನ್ನು ಸಂರಕ್ಷಿಸುವ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವ ನಮ್ಮ ಬದ್ಧತೆಯನ್ನು ನಾವು ಪುನರುಚ್ಚರಿಸುತ್ತೇವೆ. ನೀರು ನಾಗರಿಕತೆಗಳ ಜೀವನಾಡಿಯಾಗಿದ್ದು, ಭವಿಷ್ಯದ ಪೀಳಿಗೆಗಾಗಿ ಅದನ್ನು ರಕ್ಷಿಸುವುದು ಬಹಳ ಮುಖ್ಯ" ಎಂದಿದ್ದಾರೆ.

 

 

*****


(Release ID: 2113979) Visitor Counter : 18