ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಅನ್ವಿಲ್‌ (ವೇದಿಕೆ)ನಲ್ಲಿ ಭಾರತದ ಸ್ವಂತ ಸುಭದ್ರ ಮತ್ತು ಸುರಕ್ಷಿತ ಬ್ರೌಸರ್‌: ತೀವ್ರ ಸ್ಪರ್ಧೆಯ ನಂತರ, ಭಾರತೀಯ ಬ್ರೌಸರ್‌ ಅನ್ನು ಐಒಎಸ್‌, ಆಂಡ್ರಾಯ್ಡ್‌ ಮತ್ತು ವಿಂಡೋಸ್‌ನೊಂದಿಗೆ ಹೊಂದಿಕೆಯಾಗುವಂತೆ ಮಾಡುವ ಕಾರ್ಯವನ್ನು ಎಂಇಐಟಿವೈ ನಿಯೋಜಿಸಿದೆ


ಭಾರತವು ಸೇವಾ ರಾಷ್ಟ್ರದಿಂದ ಉತ್ಪನ್ನ ರಾಷ್ಟ್ರವಾಗಲು ಪ್ರಯತ್ನಿಸುತ್ತಿದೆ: ಕೇಂದ್ರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್‌

ಜೊಹೋ ಭಾರತದ ವೆಬ್‌ ಬ್ರೌಸರ್‌ ಚಾಲೆಂಜ್‌ಅನ್ನು ಗೆದ್ದಿದೆ, ಟೀಮ್‌ ಪಿಂಗ್‌ ಮತ್ತು ಟೀಮ್‌ ಅಜ್ನಾ 1 ಮತ್ತು 2ನೇ ರನ್ನರ್‌ಅಪ್‌ ಆಗಿದೆ; ಜಿಯೋ ವಿಶ್ವಕರ್ಮದ ಮಲ್ಟಿ ಪ್ಲಾಟ್‌ಫಾರ್ಮ್‌ ವಿನ್ಯಾಸಕ್ಕೆ ವಿಶೇಷ ಉಲ್ಲೇಖ

Posted On: 20 MAR 2025 8:01PM by PIB Bengaluru

ವಿಶ್ವ ಸಂತಸ ದಿನದ ಸಂದರ್ಭದಲ್ಲಿ, ಭಾರತ ಸರ್ಕಾರವು ಸುರಕ್ಷಿತ ಮತ್ತು ನವೀನ ಡಿಜಿಟಲ್‌ ಪರಿಹಾರಗಳ ಮೂಲಕ ನಾಗರಿಕರನ್ನು ಸಬಲೀಕರಣಗೊಳಿಸುವ ಬದ್ಧತೆಯನ್ನು ಪುನರುಚ್ಚರಿಸಿತು. 282 ಶತಕೋಟಿ ಡಾಲರ್‌ ಆದಾಯವನ್ನು ಉತ್ಪಾದಿಸುವ ಭಾರತದ ಐಟಿ ಕ್ಷೇತ್ರದ ಗಮನವು ದೇಶೀಯ ಹಾರ್ಡ್‌ವೇರ್‌ ಮತ್ತು ಸಾಫ್ಟ್‌ವೇರ್‌ ಉತ್ಪನ್ನಗಳನ್ನು ರಚಿಸುವತ್ತ ಸಾಗುತ್ತಿದೆ. ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಎಂಇಐಟಿವೈ) ಆತ್ಮನಿರ್ಭರ ಭಾರತ ಉಪಕ್ರಮದ ಅಡಿಯಲ್ಲಿ ದೇಶೀಯ ವೆಬ್‌ ಬ್ರೌಸರ್‌ಅನ್ನು ಅಭಿವೃದ್ಧಿಪಡಿಸುವ ಮಹತ್ವಾಕಾಂಕ್ಷೆಯ ಸವಾಲನ್ನು ಪ್ರಾರಂಭಿಸುವ ಮೂಲಕ ತಾಂತ್ರಿಕ ಸ್ವಾವಲಂಬನೆಯತ್ತ ದೂರದೃಷ್ಟಿಯ ಹೆಜ್ಜೆ ಇಟ್ಟಿದೆ. ನಾವೀನ್ಯತೆಯನ್ನು ಉತ್ತೇಜಿಸುವ ಮತ್ತು ಡಿಜಿಟಲ್‌ ಸ್ವಾತಂತ್ರ್ಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಈ ಹೆಗ್ಗುರುತು ಉಪಕ್ರಮವನ್ನು ಬೆಂಗಳೂರಿನ ಸೆಂಟರ್‌ ಫಾರ್‌ ಡೆವಲಪ್ಮೆಂಟ್‌ ಆಫ್‌ ಅಡ್ವಾನ್ಸ್ಡ್‌ ಕಂಪ್ಯೂಟಿಂಗ್‌ (ಸಿ-ಡ್ಯಾಕ್‌) ನಡೆಸಿತು.

ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್‌ ಅವರು ಇಂಡಿಯನ್‌ ವೆಬ್‌ ಬ್ರೌಸರ್‌ ಡೆವಲಪ್ಮೆಂಟ್‌ ಚಾಲೆಂಜ್‌ (ಐಡಬ್ಲ್ಯೂಬಿಡಿಸಿ) ವಿಜೇತರನ್ನು ಘೋಷಿಸಿದರು. 2025ರ ಮಾರ್ಚ್‌ 20ರಂದು ಎಂಇಐಟಿವೈ ಆಯೋಜಿಸಿದ್ದ ಸಮಾರಂಭದಲ್ಲಿ, ಅತ್ಯುತ್ತಮ ಆವಿಷ್ಕಾರಗಳು, ಗಮನಾರ್ಹ ಸೃಜನಶೀಲತೆ, ಪರಿಣತಿ ಮತ್ತು ಭಾರತೀಯ ಅಗತ್ಯಗಳಿಗೆ ಅನುಗುಣವಾಗಿ ವಿಶ್ವಾಸಾರ್ಹ ವೆಬ್‌ ಬ್ರೌಸರ್‌ ಅಭಿವೃದ್ಧಿಯಲ್ಲಿ ಗಮನಾರ್ಹ ದಾಪುಗಾಲು ಹಾಕುವಲ್ಲಿ ಭಾಗವಹಿಸಿದವರ ಬಗ್ಗೆ ಅವರು ಅಪಾರ ಹೆಮ್ಮೆ ವ್ಯಕ್ತಪಡಿಸಿದರು. ಆತ್ಮನಿರ್ಭರ ಭಾರತದ ದೃಷ್ಟಿಕೋನವನ್ನು ಸಾಕಾರಗೊಳಿಸುವಲ್ಲಿಮತ್ತು ಭಾರತದ ಡಿಜಿಟಲ್‌ ಭವಿಷ್ಯವನ್ನು ಸಬಲೀಕರಣಗೊಳಿಸುವಲ್ಲಿಈ ಬೆಳವಣಿಗೆಗಳು ಒಂದು ಹೆಜ್ಜೆ ಮುಂದಿವೆ.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಅಶ್ವಿನಿ ವೈಷ್ಣವ್‌ ಅವರು, ತಂತ್ರಜ್ಞಾನ, ಹಾರ್ಡ್‌ವೇರ್‌ ಮತ್ತು ಸಾಫ್ಟ್‌ವೇರ್‌ ಪರಿಹಾರಗಳಲ್ಲಿ ಸ್ವಾವಲಂಬಿಯಾಗಿರುವ ಸೇವಾ ರಾಷ್ಟ್ರದಿಂದ ಭಾರತವನ್ನು ಉತ್ಪನ್ನ ರಾಷ್ಟ್ರವನ್ನಾಗಿ ಪರಿವರ್ತಿಸುವ ಭಾರತ ಸರ್ಕಾರದ ವಿಶಾಲ ದೃಷ್ಟಿಕೋನವನ್ನು ಒತ್ತಿ ಹೇಳಿದರು. ಈ ದೃಷ್ಟಿಕೋನದ ಭಾಗವಾಗಿ, ಸ್ಥಳೀಯ ವೆಬ್‌ ಬ್ರೌಸರ್‌ಅನ್ನು ಅಭಿವೃದ್ಧಿಪಡಿಸಲು ಐಡಬ್ಲ್ಯೂಬಿಡಿಸಿಯನ್ನು ಪ್ರಾರಂಭಿಸಲಾಯಿತು, ಭಾರತದ ಡಿಜಿಟಲ್‌ ಸ್ವಾವಲಂಬನೆಗೆ ಕೊಡುಗೆ ನೀಡಲು ಉತ್ಸುಕರಾಗಿರುವ ಸ್ಟಾರ್ಟ್‌ಅಪ್‌ಗಳು, ವಿದ್ಯಾರ್ಥಿಗಳು ಮತ್ತು ಸಂಶೋಧಕರಿಂದ ಉತ್ಸಾಹಭರಿತ ಭಾಗವಹಿಸುವಿಕೆಯನ್ನು ಪಡೆಯಿತು. ನಾವೀನ್ಯತೆಯಿಂದ ದೊಡ್ಡ ಪ್ರಮಾಣದ ಉತ್ಪನ್ನೀಕರಣಕ್ಕೆ ಪ್ರಯಾಣವನ್ನು ವೇಗಗೊಳಿಸುವ ಅಗತ್ಯವನ್ನು ಸಚಿವರು ಒತ್ತಾಯಿಸಿದರು, ದೇಶೀಯ ಡಿಜಿಟಲ್‌ ಪರಿಹಾರಗಳನ್ನು ವ್ಯಾಪಕವಾಗಿ ಅಳವಡಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ ಮತ್ತು ಭಾರತದ ಸ್ವಾವಲಂಬನೆಗೆ ಕೊಡುಗೆ ನೀಡುವ ಸ್ಪರ್ಧಾತ್ಮಕ ಸುರಕ್ಷಿತ ಮತ್ತು ಸ್ಕೇಲೆಬಲ್‌ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಸ್ಟಾರ್ಟ್‌ ಅಪ್‌ಗಳು ಮತ್ತು ಉದ್ಯಮವನ್ನು ಪ್ರೋತ್ಸಾಹಿಸುತ್ತದೆ.

ವೆಬ್‌ ಬ್ರೌಸರ್‌ ಅಂತರ್ಜಾಲದ ಪ್ರಾಥಮಿಕ ಹೆಬ್ಬಾಗಿಲಾಗಿ ಕಾರ್ಯನಿರ್ವಹಿಸುತ್ತದೆ, ವೆಬ್‌ ಸರ್ಫಿಂಗ್‌, ಇಮೇಲ್‌, ಇ-ಆಫೀಸ್‌ ಮತ್ತು ಆನ್‌ಲೈನ್‌  ವಹಿವಾಟುಗಳಂತಹ ಚಟುವಟಿಕೆಗಳನ್ನು ಸಕ್ರಿಯಗೊಳಿಸುತ್ತದೆ. ದೇಶೀಯ ಭಾರತೀಯ ಬ್ರೌಸರ್‌ನ ಅನುಕೂಲಗಳು ಅನೇಕ ಪಟ್ಟು ಇವೆ. ಮೊದಲನೆಯದಾಗಿ, ಇದು ವರ್ಧಿತ ಡೇಟಾ ಸುರಕ್ಷ ತೆಯನ್ನು ಖಚಿತಪಡಿಸುತ್ತದೆ, ಬಳಕೆದಾರರ ಡೇಟಾವನ್ನು ದೇಶದ ಗಡಿಯೊಳಗೆ ಇರಿಸಲಾಗುತ್ತದೆ, ಸೂಕ್ಷ್ಮ ಮಾಹಿತಿಯ ಮೇಲೆ ಉತ್ತಮ ನಿಯಂತ್ರಣವನ್ನು ಬೆಳೆಸುತ್ತದೆ. ಎರಡನೆಯದಾಗಿ, ಇದು ಭಾರತದ ಡೇಟಾ ಸಂರಕ್ಷಣಾ ಕಾಯ್ದೆಯನ್ನು ಅನುಸರಿಸುತ್ತದೆ, ಗೌಪ್ಯತೆ ಮತ್ತು ಡೇಟಾ ಸುರಕ್ಷತೆಯ ಅತ್ಯುನ್ನತ ಮಾನದಂಡಗಳಿಗೆ ಬದ್ಧವಾಗಿರುವುದನ್ನು ಖಚಿತಪಡಿಸುತ್ತದೆ. ಹೆಚ್ಚುವರಿಯಾಗಿ, ಭಾರತೀಯ ನಾಗರಿಕರು ಉತ್ಪಾದಿಸುವ ಎಲ್ಲಾ ಡೇಟಾ ಭಾರತದಲ್ಲಿಉಳಿಯುತ್ತದೆ, ಇದು ದೇಶದ ಡಿಜಿಟಲ್‌ ಸಾರ್ವಭೌಮತ್ವವನ್ನು ಹೆಚ್ಚಿಸುತ್ತದೆ. ಇದಲ್ಲದೆ, ಬ್ರೌಸರ್‌ ಐಒಎಸ್‌, ವಿಂಡೋಸ್‌ ಮತ್ತು ಆಂಡ್ರಾಯ್ಡ್ ಸೇರಿದಂತೆ ಎಲ್ಲಾ ಪ್ರಮುಖ ಪ್ಲಾಟ್‌ಫಾರ್ಮ್‌ಗಳೊಂದಿಗೆ ಹೊಂದಿಕೆಯಾಗುತ್ತದೆ, ಸಾಧನಗಳಾದ್ಯಂತ ವ್ಯಾಪಕ ಪ್ರವೇಶ ಮತ್ತು ಬಳಕೆಯನ್ನು ಖಚಿತಪಡಿಸುತ್ತದೆ.

ಭಾಗವಹಿಸಿದವರನ್ನುದ್ದೇಶಿಸಿ ಮಾತನಾಡಿದ ಸಚಿವರು, ಭಾರತದ ಸ್ವಂತ ವೆಬ್‌ ಬ್ರೌಸರ್‌ನ ಅಭಿವೃದ್ಧಿಯು ಸಂಪೂರ್ಣ ಭಾರತೀಯ ಡಿಜಿಟಲ್‌ ಸ್ಟ್ಯಾಕ್‌ ರಚಿಸುವ ನಿಟ್ಟಿನಲ್ಲಿ ಮೊದಲ ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದರು. ಸ್ಟಾರ್ಟ್‌ಅಪ್‌ ಟೀಮ್‌ ಪಿಂಗ್‌ 1ನೇ ರನ್ನರ್‌ ಅಪ್‌ ಹಾಗೂ ಟೀಮ್‌ ಅಜ್ನಾ 2ನೇ ರನ್ನರ್‌ ಅಪ್‌ ಆಗಿ ಹೊರಹೊಮ್ಮಿವೆ. ಅವರ ಅತ್ಯುತ್ತಮ ಕೊಡುಗೆಗಳನ್ನು ಗುರುತಿಸಿ, ವಿಜೇತ, ಮೊದಲ ರನ್ನರ್‌ಅಪ್‌ ಮತ್ತು 2ನೇ ರನ್ನರ್‌ಅಪ್‌ಗೆ ಕ್ರಮವಾಗಿ  1 ಕೋಟಿ ರೂ.,  75 ಲಕ್ಷ  ರೂ. ಮತ್ತು  50 ಲಕ್ಷ  ರೂ. ಬಹುಮಾನವನ್ನು ನೀಡಲಾಯಿತು. ವಿವಿಧ ಪ್ಲಾಟ್‌ಫಾರ್ಮ್‌ಗಳಲ್ಲಿ ಬ್ರೌಸರ್‌ಗಳ ವಿನ್ಯಾಸಕ್ಕಾಗಿ ಜಿಯೋ ವಿಶ್ವಕರ್ಮಗೆ ವಿಶೇಷ ಉಲ್ಲೇಖ ಮಾಡಲಾಯಿತು. ಶ್ರೇಣಿ 2 ಮತ್ತು ಶ್ರೇಣಿ 3 ನಗರಗಳಿಂದ ವಿಜೇತರು ಹೊರಹೊಮ್ಮುವುದನ್ನು ನೋಡಿ ಸಚಿವರು ತೃಪ್ತಿ ವ್ಯಕ್ತಪಡಿಸಿದರು, ಭಾರತದ ಸಣ್ಣ ನಗರಗಳಲ್ಲಿನ ಗಮನಾರ್ಹ ಪ್ರತಿಭೆ ಮತ್ತು ಸಾಮರ್ಥ್ಯ‌ವನ್ನು ಬಿಂಬಿಸಿದರು.

ಈ ಸಂದರ್ಭದಲ್ಲಿಎಂಇಐಟಿವೈ ಕಾರ್ಯದರ್ಶಿ ಶ್ರೀ ಎಸ್‌. ಕೃಷ್ಣನ್‌ ಅವರು ದೇಶೀಯ ವೆಬ್‌ ಬ್ರೌಸರ್‌ನ ಮಹತ್ವ ಮತ್ತು ಅದರ ವೈಶಿಷ್ಟ್ಯಗಳನ್ನು ಬಿಂಬಿಸಿದರು. ಹೆಚ್ಚುವರಿ ಕಾರ್ಯದರ್ಶಿ ಶ್ರೀ ಅಭಿಷೇಕ್‌ ಸಿಂಗ್‌, ಹೆಚ್ಚುವರಿ ಕಾರ್ಯದರ್ಶಿ ಶ್ರೀ ಭುವನೇಶ್ವರ್‌ ಕುಮಾರ್‌, ಸಿ-ಡ್ಯಾಕ್‌ ಮಹಾನಿರ್ದೇಶಕ ಶ್ರೀ ಇ ಮಗೇಶ್‌, ಸಿಸಿಎ ಶ್ರೀ ಅರವಿಂದ್‌ ಕುಮಾರ್‌, ವಿಜ್ಞಾನಿ ‘ಜಿ’ ಮತ್ತು ಜಿಸಿ (ಆರ್‌ಡಿ) ಶ್ರೀಮತಿ ಸುನೀತಾ ವರ್ಮಾ ಮತ್ತು ಎಂಇಐಟಿವೈ, ಸಿ-ಡ್ಯಾಕ್‌ ಮತ್ತು ಕೈಗಾರಿಕೆಗಳ ಇತರ ಹಿರಿಯ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತನ್ನದೇ ಆದ ಸರ್ಟಿಫಿಕೇಟ್‌ ಟ್ರಸ್ಟ್‌-ಸ್ಟೋರ್‌ನೊಂದಿಗೆ, ಈ ಸ್ಥಳೀಯ ಬ್ರೌಸರ್‌ಗಳು ಭಾರತೀಯ ಬಳಕೆದಾರರ ಅಗತ್ಯಗಳನ್ನು ಪೂರೈಸುತ್ತವೆ ಮತ್ತು ವಿಶ್ವಾಸಾರ್ಹ-ಯೋಗ್ಯ ಡಿಜಿಟಲ್‌ ಸಂವಹನಕ್ಕೆ ಹೊಸ ಮಾನದಂಡವನ್ನು ನಿಗದಿಪಡಿಸುತ್ತವೆ.

ಭಾರತೀಯ ವೆಬ್‌ ಬ್ರೌಸರ್‌ ಅಭಿವೃದ್ಧಿ ಸವಾಲು

ಇಂಡಿಯನ್‌ ವೆಬ್‌ ಬ್ರೌಸರ್‌ ಡೆವಲಪ್ಮೆಂಟ್‌ ಚಾಲೆಂಜ್‌ ( https://iwbdc.in ) ಅನ್ನು ಪ್ರಾರಂಭಿಸಲಾಯಿತು, ಇದು ವೆಬ್‌ ಬ್ರೌಸಿಂಗ್‌ನಲ್ಲಿ ಪರಿವರ್ತಕ ಪ್ರಯಾಣಕ್ಕೆ ವೇದಿಕೆಯನ್ನು ಕಲ್ಪಿಸಿತು. ಕಲ್ಪನೆ, ಮೂಲಮಾದರಿ ಮತ್ತು ಉತ್ಪನ್ನೀಕರಣ ಎಂಬ ಮೂರು ಪ್ರಗತಿಪರ ಹಂತಗಳಲ್ಲಿ ರಚಿತವಾದ ಈ ಸವಾಲಿಗೆ ಸಿಸಿಎ ಇಂಡಿಯಾ ರೂಟ್‌ ಪ್ರಮಾಣಪತ್ರದೊಂದಿಗೆ ಮೀಸಲಾದ ಟ್ರಸ್ಟ್‌ ಸ್ಟೋರ್‌, ಬ್ರೌಸರ್‌ ಒಳಗೆ ಡಿಜಿಟಲ್‌ ಸಹಿ, ಮಕ್ಕಳ ಸ್ನೇಹಿ ಬ್ರೌಸಿಂಗ್‌, ಪೋಷಕ ನಿಯಂತ್ರಣಗಳು, ಎಲ್ಲಾ ಅಧಿಕೃತ ಭಾರತೀಯ ಭಾಷೆಗಳೊಂದಿಗೆ ತಡೆರಹಿತ ಹೊಂದಾಣಿಕೆ, ವೆಬ್‌ 3 ಬೆಂಬಲ ಮತ್ತು ಅತ್ಯಾಧುನಿಕ ಬ್ರೌಸರ್‌ ಸಾಮರ್ಥ್ಯ‌ಗಳು ಸೇರಿದಂತೆ ನಿರ್ಣಾಯಕ ವೈಶಿಷ್ಟ್ಯಗಳ ಸ್ಪೆಕ್ಟ್ರಮ್‌ನೊಂದಿಗೆ ಬ್ರೌಸರ್‌ಅನ್ನು ವಿನ್ಯಾಸಗೊಳಿಸುವ ಅಗತ್ಯವಿತ್ತು. ಈ ಸ್ಪರ್ಧೆಯು ಸ್ಟಾರ್ಟ್‌ಅಪ್‌ಗಳು, ಉದ್ಯಮದ ನಾಯಕರು ಮತ್ತು ಶಿಕ್ಷಣ ತಜ್ಞರಿಂದ ಅಗಾಧ ಪ್ರತಿಕ್ರಿಯೆಯನ್ನು ಗಳಿಸಿತು, ಇದು ಭಾರತದ ಅಪಾರ ಪ್ರತಿಭೆ ಮತ್ತು ಡಿಜಿಟಲ್‌ ಸಾರ್ವಭೌಮತ್ವದ ಚಾಲನೆಯನ್ನು ಪ್ರದರ್ಶಿಸಿತು. ಕಠಿಣ ಮತ್ತು ಸ್ಪರ್ಧಾತ್ಮಕ ಪ್ರಯಾಣವನ್ನು ಪ್ರಾರಂಭಿಸಿದ ಗಮನಾರ್ಹ 434 ತಂಡಗಳು ಈ ಸವಾಲಿಗೆ ನೋಂದಾಯಿಸಿಕೊಂಡವು. ಸವಾಲು ತೆರೆದುಕೊಳ್ಳುತ್ತಿದ್ದಂತೆ, ಎಂಟು ಅತ್ಯುತ್ತಮ ತಂಡಗಳು ಅಂತಿಮ ಹಂತಕ್ಕೆ ಪ್ರವೇಶಿಸಿದವು, ಅಲ್ಲಿಅವರ ಆವಿಷ್ಕಾರಗಳನ್ನು ಪ್ರತಿಷ್ಠಿತ ತೀರ್ಪುಗಾರರ ಸಮಿತಿಯು ಮೌಲ್ಯಮಾಪನ ಮಾಡಿತು.

 

*****


(Release ID: 2113481) Visitor Counter : 46