ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕರಾದ ಶ್ರೀಮತಿ ತುಳಸಿ ಗಬ್ಬಾರ್ಡ್ ಅವರಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭೇಟಿ


ಪ್ರಧಾನಮಂತ್ರಿಗಳಿಂದ ವಾಷಿಂಗ್ಟನ್ ಡಿ.ಸಿಯಲ್ಲಿ ಅಧ್ಯಕ್ಷ ಟ್ರಂಪ್ ಅವರೊಂದಿಗಿನ ಅತ್ಯಂತ ಫಲಪ್ರದ ಚರ್ಚೆಗಳ ಮೆಲುಕು

ಅಮೆರಿಕ ಭೇಟಿಯ ಸಂದರ್ಭದಲ್ಲಿ ತುಳಸಿ ಗಬ್ಬಾರ್ಡ್ ಅವರೊಂದಿಗಿನ ಸಂವಾದ ಮತ್ತು ಸಹಕಾರ ವರ್ಧನೆಯಲ್ಲಿ ಅವರ ಪಾತ್ರದ ಬಗ್ಗೆ ಪ್ರಧಾನಮಂತ್ರಿ ಶ್ಲಾಘನೆ

ಅಧ್ಯಕ್ಷ ಟ್ರಂಪ್ ಅವರ ಎರಡನೇ ಆಡಳಿತಾವಧಿಯಲ್ಲಿ ಅಮೆರಿಕದಿಂದ ಭಾರತಕ್ಕೆ ತುಳಸಿ ಅವರ ಮೊದಲ ಭೇಟಿಯ ವಿಶೇಷ ಮಹತ್ವದ ಬಗ್ಗೆ ಪ್ರಧಾನಮಂತ್ರಿ ಪ್ರಸ್ತಾಪ

ಅಧ್ಯಕ್ಷ ಟ್ರಂಪ್ ಅವರಿಗೆ ಪ್ರಧಾನಮಂತ್ರಿಗಳ ಆತ್ಮೀಯ ಶುಭಾಶಯ; ಈ ವರ್ಷಾಂತ್ಯದಲ್ಲಿ ಅವರನ್ನು ಭಾರತಕ್ಕೆ ಸ್ವಾಗತಿಸಲು ಎದುರು ನೋಡುತ್ತಿರುವುದಾಗಿ ಪ್ರಧಾನಮಂತ್ರಿ ಹೇಳಿಕೆ

Posted On: 17 MAR 2025 8:52PM by PIB Bengaluru

ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕರಾದ ಶ್ರೀಮತಿ ತುಳಸಿ ಗಬ್ಬಾರ್ಡ್ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು. 

ಕಳೆದ ತಿಂಗಳು ವಾಷಿಂಗ್ಟನ್ ಡಿ.ಸಿ.ಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಧ್ಯಕ್ಷರಾದ ಟ್ರಂಪ್ ಅವರೊಂದಿಗೆ ನಡೆಸಿದ ಫಲಪ್ರದ ಚರ್ಚೆಗಳನ್ನು ಪ್ರಧಾನಮಂತ್ರಿಗಳು ನೆನಪು ಮಾಡಿಕೊಂಡರು. 

ಅಮೆರಿಕಕ್ಕೆ ಭೇಟಿ ನೀಡಿದ ಸಮಯದಲ್ಲಿ ಶ್ರೀಮತಿ ತುಳಸಿ ಗಬ್ಬಾರ್ಡ್ ಅವರೊಂದಿಗಿನ ಸಂವಾದದ ಬಗ್ಗೆ ಕೂಡ ಪ್ರಧಾನಮಂತ್ರಿ ಪ್ರಸ್ತಾಪಿಸಿದರು ಮತ್ತು ರಕ್ಷಣಾ ವಲಯ, ನಿರ್ಣಾಯಕ ತಂತ್ರಜ್ಞಾನಗಳು, ಭಯೋತ್ಪಾದನೆ ನಿಗ್ರಹ ಮತ್ತು ಜಾಗತಿಕ ಸವಾಲುಗಳನ್ನು ಎದುರಿಸಲು ಸಹಕಾರವನ್ನು ಬಲಪಡಿಸುವಲ್ಲಿ ತುಳಸಿ ಅವರ ನಿರ್ಣಾಯಕ ಪಾತ್ರವನ್ನು ಶ್ಲಾಘಿಸಿದರು. 

ಅಧ್ಯಕ್ಷರಾದ ಟ್ರಂಪ್ ಅವರ ಎರಡನೇ ಆಡಳಿತಾವಧಿಯಲ್ಲಿ ಅಮೆರಿಕದಿಂದ ಭಾರತಕ್ಕೆ ತುಳಸಿ ಗಬ್ಬಾರ್ಡ್ ಅವರ ಮೊದಲ ಉನ್ನತ ಮಟ್ಟದ ಭೇಟಿ ಇದಾಗಿದೆ ಎಂದು ಅವರ ಭೇಟಿಯ ವಿಶೇಷ ಮಹತ್ವವನ್ನು ಪ್ರಧಾನಮಂತ್ರಿ ತಿಳಿಸಿದರು.

ಅಧ್ಯಕ್ಷ ಟ್ರಂಪ್ ಅವರಿಗೆ ಪ್ರಧಾನಮಂತ್ರಿಗಳು ತಮ್ಮ ಆತ್ಮೀಯ ಶುಭಾಶಯಗಳನ್ನು ತಿಳಿಸಿದರು ಮತ್ತು ಈ ವರ್ಷಾಂತ್ಯದಲ್ಲಿ ಟ್ರಂಪ್ ಅವರನ್ನು ಭಾರತಕ್ಕೆ ಸ್ವಾಗತಿಸಲು ಭಾರತದ 1.4 ಶತಕೋಟಿ ಜನರು  ಎದುರು ನೋಡುತ್ತಿದ್ದಾರೆ ಎಂದು ಪ್ರಧಾನಮಂತ್ರಿ ಹೇಳಿದರು.

 

*****


(Release ID: 2112058) Visitor Counter : 14