ಪ್ರಧಾನ ಮಂತ್ರಿಯವರ ಕಛೇರಿ
ಗಂಗಾ ತಲಾವ್ ಗೆ ಪ್ರಧಾನಮಂತ್ರಿ ಭೇಟಿ
Posted On:
12 MAR 2025 5:26PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾರಿಷಸ್ ನ ಪವಿತ್ರ ಗಂಗಾ ತಲಾವ್ ಗೆ ಭೇಟಿ ನೀಡಿದರು. ಅಲ್ಲಿ ಅವರು ಪ್ರಾರ್ಥನೆ ಸಲ್ಲಿಸಿದರು ಮತ್ತು ಭಾರತದ ಪವಿತ್ರ ತ್ರಿವೇಣಿ ಸಂಗಮದ ಪುಣ್ಯ ತೀರ್ಥವನ್ನು ಅರ್ಪಿಸಿದರು.
ಪೂಜ್ಯ ಮಹಾಕುಂಭ ಮೇಳದಿಂದ ಪವಿತ್ರ ನೀರನ್ನು ಗಂಗಾ ತಾಲವ್ ಗೆ ತರುವ ಪ್ರಧಾನಮಂತ್ರಿಯವರ ಇಂಗಿತವು ಎರಡು ರಾಷ್ಟ್ರಗಳ ನಡುವಿನ ಆಧ್ಯಾತ್ಮಿಕ ಏಕತೆಯನ್ನು ಮಾತ್ರವಲ್ಲದೆ, ಉಭಯ ರಾಷ್ಟ್ರಗಳ ನಡುವಿನ ಹಂಚಿತ ಸಾಂಸ್ಕೃತಿಕ ಸಂಬಂಧಗಳ ಬುನಾದಿಯಾಗಿರುವ ಶ್ರೀಮಂತ ಸಂಪ್ರದಾಯಗಳನ್ನು ಪೋಷಿಸುವ ಮತ್ತು ಸಂರಕ್ಷಿಸುವ ಅವರ ಬದ್ಧತೆಯನ್ನೂ ಸೂಚಿಸುತ್ತದೆ.
*****
(Release ID: 2111128)
Visitor Counter : 10
Read this release in:
English
,
Urdu
,
Marathi
,
Hindi
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam