ಪ್ರಧಾನ ಮಂತ್ರಿಯವರ ಕಛೇರಿ
ಮಾರಿಷಸ್ ಗೆ ಪ್ರಧಾನಮಂತ್ರಿಯವರ ಭೇಟಿ: ಫಲಪ್ರದತೆಯ ವಿವರ
Posted On:
12 MAR 2025 1:56PM by PIB Bengaluru
ಕ್ರ.ಸಂ
|
ಒಪ್ಪಂದ /ತಿಳುವಳಿಕಾ ಒಡಂಬಡಿಕೆ
|
1.
|
ಗಡಿಯಾಚೆಗಿನ ವಹಿವಾಟುಗಳಿಗೆ ಸ್ಥಳೀಯ ಕರೆನ್ಸಿಗಳ (ಭಾರತೀಯ ರೂಪಾಯಿ ಅಥವಾ ಮಾರಿಷಿಯನ್ ರೂಪಾಯಿ) ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ನೀತಿ ಚೌಕಟ್ಟು ರೂಪಿಸಲು ʻಭಾರತೀಯ ರಿಸರ್ವ್ ಬ್ಯಾಂಕ್ʼ ಮತ್ತು ʻಬ್ಯಾಂಕ್ ಆಫ್ ಮಾರಿಷಸ್ʼ ನಡುವೆ ಒಪ್ಪಂದ.
|
2.
|
ಮಾರಿಷಸ್ ಗಣರಾಜ್ಯ ಸರ್ಕಾರ (ಸಾಲಗಾರನಾಗಿ) ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಸಾಲದಾತ ಬ್ಯಾಂಕ್ ಆಗಿ) ನಡುವೆ ಸಾಲ ಸೌಲಭ್ಯ ಒಪ್ಪಂದ
|
3.
|
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಮಾರಿಷಸ್ ಗಣರಾಜ್ಯದ ʻಕೈಗಾರಿಕೆ, ಎಸ್‌ಎಂಇ ಮತ್ತು ಸಹಕಾರ ಸಚಿವಾಲಯ (ಎಸ್‌ಎಂಇ ವಿಭಾಗ) ಹಾಗೂ ಭಾರತ ಗಣರಾಜ್ಯದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ನಡುವೆ ಒಪ್ಪಂದ.
|
4.
|
ಭಾರತ ಗಣರಾಜ್ಯದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ʻಸುಷ್ಮಾ ಸ್ವರಾಜ್ ವಿದೇಶಾಂಗ ಸೇವಾ ಸಂಸ್ಥೆʼ ಮತ್ತು ಮಾರಿಷಸ್ ಗಣರಾಜ್ಯದ ವಿದೇಶಾಂಗ ವ್ಯವಹಾರಗಳು, ಪ್ರಾದೇಶಿಕ ಏಕೀಕರಣ ಮತ್ತು ಅಂತಾರಾಷ್ಟ್ರೀಯ ವ್ಯಾಪಾರ ಸಚಿವಾಲಯದ ನಡುವೆ ಒಪ್ಪಂದ.
|
5.
|
ಮಾರಿಷಸ್ ಸರ್ಕಾರದ ಸಾರ್ವಜನಿಕ ಸೇವೆ ಮತ್ತು ಆಡಳಿತ ಸುಧಾರಣಾ ಸಚಿವಾಲಯ (ಎಂಪಿಎಸ್ಎಆರ್) ಹಾಗೂ ಭಾರತ ಸರ್ಕಾರದ ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆ ಅಡಿಯಲ್ಲಿನ ʻಉತ್ತಮ ಆಡಳಿತಕ್ಕಾಗಿ ರಾಷ್ಟ್ರೀಯ ಕೇಂದ್ರʼದ (ಎನ್‌ಸಿಜಿಜಿ) ನಡುವೆ ತಿಳಿವಳಿಕಾ ಒಡಂಬಡಿಕೆ.
|
6
|
ವಾಣಿಜ್ಯ ಹಡಗುಗಳ ಸಂಚಾರದ ಪೂರ್ವ ಮಾಹಿತಿ ವಿನಿಮಯ (ವೈಟ್ ಶಿಪ್ಪಿಂಗ್) ಕುರಿತು ಭಾರತೀಯ ನೌಕಾಪಡೆ ಮತ್ತು ಮಾರಿಷಸ್ ಸರ್ಕಾರದ ನಡುವೆ ತಾಂತ್ರಿಕ ಒಪ್ಪಂದ.
|
7.
|
ಭಾರತ ಸರ್ಕಾರದ ಭೂ ವಿಜ್ಞಾನ ಸಚಿವಾಲಯದ ʻಸಾಗರ ಮಾಹಿತಿ ಸೇವೆಗಳ ಭಾರತೀಯ ರಾಷ್ಟ್ರೀಯ ಕೇಂದ್ರʼ (ಐಎನ್‌ಸಿಒಐಎಸ್) ಮತ್ತು ಮಾರಿಷಸ್ ಸರ್ಕಾರದ ಪ್ರಧಾನ ಮಂತ್ರಿ ಕಚೇರಿ(ಪಿಎಂಒ), ಕಾಂಟಿನೆಂಟಲ್ ಶೆಲ್ಫ್, ಕಡಲ ವಲಯಗಳ ಆಡಳಿತ ಮತ್ತು ಅನ್ವೇಷಣೆ (ಸಿಎಸ್‌ಎಂಜೆಡ್‌ಎಇ) ಇಲಾಖೆಯ ನಡುವೆ ತಿಳಿವಳಿಕೆ ಒಪ್ಪಂದ.
|
8.
|
ಜಾರಿ ನಿರ್ದೇಶನಾಲಯ (ಇಡಿ) ಮತ್ತು ಮಾರಿಷಸ್ ಗಣರಾಜ್ಯದ ಹಣಕಾಸು ಅಪರಾಧಗಳ ಆಯೋಗ (ಎಫ್‌ಸಿಸಿ) ನಡುವೆ ಒಪ್ಪಂದ.
|
ಕ್ರ.ಸಂ.
|
ಯೋಜನೆಗಳು
|
1.
|
ಕ್ಯಾಪ್ ಮಾಲ್ಹೌರೆಕ್ಸ್‌ನಲ್ಲಿ ʻಅಟಲ್ ಬಿಹಾರಿ ವಾಜಪೇಯಿ ಸಾರ್ವಜನಿಕ ಸೇವೆ ಮತ್ತು ನಾವಿನ್ಯತಾ ಸಂಸ್ಥೆ, ʻಮಾರಿಷಸ್ ಪ್ರದೇಶ ಆರೋಗ್ಯ ಕೇಂದ್ರʼ ಹಾಗೂ 20 ʻಎಚ್ಐಸಿಡಿಪಿʼ ಯೋಜನೆಗಳ ಉದ್ಘಾಟನೆ (ಹೆಸರನ್ನು ನವೀಕರಿಸಲಾಗುವುದು).
|
ಹಸ್ತಾಂತರ:
1. ಭಾರತೀಯ ನೌಕೆಯ ಮೂಲಕ ಜಲವಿಜ್ಞಾನ ಸಮೀಕ್ಷೆ ಕೈಗೊಂಡ ಬಳಿಕ ಸಿದ್ಧಪಡಿಸಲಾದ ʻಸೇಂಟ್ ಬ್ರಾಂಡನ್ ದ್ವೀಪʼದಲ್ಲಿ ನೌಕಾಪಥನಿರ್ದೇಶನ ಕುರಿತಾದ ಚಾರ್ಟ್‌ನ ಹಸ್ತಾಂತರ.
ಘೋಷಣೆಗಳು:
ಮಾರಿಷಸ್‌ನಲ್ಲಿ ಹೊಸ ಸಂಸತ್ ಭವನ ಸ್ಥಾಪನೆ ಮತ್ತು ಅಭಿವೃದ್ಧಿಯಲ್ಲಿ ಭಾರತದ ಪಾಲುದಾರಿಕೆಯನ್ನು ಮತ್ತಷ್ಟು ಹೆಚ್ಚಿಸುವುದಾಗಿ ಹಾಗೂ ಪರಿಣಾಮಕಾರಿ ಸಮುದಾಯ ಅಭಿವೃದ್ಧಿ ಯೋಜನೆಗಳ ಎರಡನೇ ಹಂತಕ್ಕೆ ಭಾರತದ ಬೆಂಬಲ ವಿಸ್ತರಿಸುವುದಾಗಿ ಪ್ರಧಾನಿ ಮೋದಿ ಅವರು ಈ ಬಾರಿಯ ಭೇಟಿಯ ಸಮಯದಲ್ಲಿ ಘೋಷಿಸಿದರು.
*****
(Release ID: 2110762)
Visitor Counter : 26
Read this release in:
English
,
Urdu
,
Hindi
,
Marathi
,
Nepali
,
Bengali
,
Assamese
,
Manipuri
,
Punjabi
,
Gujarati
,
Odia
,
Telugu
,
Malayalam