ಪಂಚಾಯತ್ ರಾಜ್ ಸಚಿವಾಲಯ
azadi ka amrit mahotsav

2025ರ ಮಾರ್ಚ್‌ 5ರಂದು ನವದೆಹಲಿಯಲ್ಲಿನಡೆಯಲಿರುವ ರಾಷ್ಟ್ರೀಯ ಸಮಾವೇಶದಲ್ಲಿಮಾದರಿ ಮಹಿಳಾ ಸ್ನೇಹಿ ಗ್ರಾಮ ಪಂಚಾಯಿತಿಗಳ ಉಪಕ್ರಮಕ್ಕೆ ಚಾಲನೆ ನೀಡಲಾಗುವುದು


ಕೇಂದ್ರ ರಾಜ್ಯ ಸಚಿವರಾದ ಪ್ರೊ. ಎಸ್‌.ಪಿ. ಸಿಂಗ್‌ ಬಘೇಲ್‌ ಮತ್ತು ಶ್ರೀಮತಿ ಅನುಪ್ರಿಯಾ ಪಟೇಲ್‌ ಈ ಸಂದರ್ಭದಲ್ಲಿಉಪಸ್ಥಿತರಿರಲಿದ್ದಾರೆ

ಅಂತಾರಾಷ್ಟ್ರೀಯ ಮಹಿಳಾ ದಿನದಂದು ದೇಶಾದ್ಯಂತ ರಾಷ್ಟ್ರವ್ಯಾಪಿ ಮಹಿಳಾ ಗ್ರಾಮ ಸಭೆಗಳನ್ನು ಆಯೋಜಿಸಲಾಗುವುದು

Posted On: 04 MAR 2025 3:44PM by PIB Bengaluru

ತಳಮಟ್ಟದಲ್ಲಿ ಲಿಂಗ-ಸೂಕ್ಷ್ಮ ಆಡಳಿತವನ್ನು ಮುನ್ನಡೆಸುವ ಮಹತ್ವದ ಕ್ರಮದಲ್ಲಿ, ಪಂಚಾಯತ್‌ ರಾಜ್‌ ಸಚಿವಾಲಯವು 2025ರ ಮಾರ್ಚ್‌ 5ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಲಿರುವ ರಾಷ್ಟ್ರೀಯ ಸಮಾವೇಶದಲ್ಲಿ ಮಾದರಿ ಮಹಿಳಾ ಸ್ನೇಹಿ ಗ್ರಾಮ ಪಂಚಾಯಿತಿಗಳನ್ನು (ಎಂಡಬ್ಲ್ಯುಎಫ್‌ಜಿಪಿ) ಅಭಿವೃದ್ಧಿಪಡಿಸುವ ಪರಿವರ್ತಕ ಉಪಕ್ರಮವನ್ನು ಪ್ರಾರಂಭಿಸಲಿದೆ. ಈ ಕಾರ್ಯಕ್ರಮವು ಸಚಿವಾಲಯದ ಅಂತಾರಾಷ್ಟ್ರೀಯ ಮಹಿಳಾ ದಿನ 2025ರ ಆಚರಣೆಯ ಭಾಗವಾಗಿದೆ ಮತ್ತು ಗ್ರಾಮೀಣ ಆಡಳಿತದ ಮೇಲೆ ಶಾಶ್ವತ ಪರಿಣಾಮ ಬೀರಲು ಸಜ್ಜಾಗಿದೆ. ದೇಶಾದ್ಯಂತ ಗ್ರಾಮ ಪಂಚಾಯಿತಿಗಳಲ್ಲಿ ಮಹಿಳೆಯರು ಮತ್ತು ಬಾಲಕಿಯರಿಗೆ ಸುರಕ್ಷತೆ, ಒಳಗೊಳ್ಳುವಿಕೆ ಮತ್ತು ಲಿಂಗ ಸಮಾನತೆಯನ್ನು ಖಚಿತಪಡಿಸುತ್ತದೆ. ಈ ಸಮಾವೇಶದಲ್ಲಿಕೇಂದ್ರ ಪಂಚಾಯತ್‌ ರಾಜ್‌ ಮತ್ತು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ರಾಜ್ಯ ಸಚಿವ ಪ್ರೊ. ಎಸ್‌.ಪಿ. ಸಿಂಗ್‌ ಬಘೇಲ್‌ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕೇಂದ್ರ ರಾಜ್ಯ ಸಚಿವೆ ಶ್ರೀಮತಿ ಅನುಪ್ರಿಯಾ ಪಟೇಲ್‌ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿಪಂಚಾಯತ್‌ ರಾಜ್‌ ಸಚಿವಾಲಯದ ಕಾರ್ಯದರ್ಶಿ ಶ್ರೀ ವಿವೇಕ್‌ ಭಾರದ್ವಾಜ್‌, ಪಂಚಾಯತ್‌ ರಾಜ್‌ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಸುಶೀಲ್‌ ಕುಮಾರ್‌ ಲೋಹಾನಿ ಮತ್ತು ವಿವಿಧ ಸಚಿವಾಲಯಗಳು, ಇಲಾಖೆಗಳು, ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಂಸ್ಥೆಗಳು (ಎಸ್‌ಐಆರ್‌ಡಿ ಮತ್ತು ಪಿಆರ್‌ಗಳು) ಮತ್ತು ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ (ಯುಎನ್‌ಎಫ್‌ಎ) ನಂತಹ ಅಂತಾರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಮುಖ್ಯವಾಗಿ ಚುನಾಯಿತ ಪ್ರತಿನಿಧಿಗಳು ಮತ್ತು ಆಯ್ದ ಗ್ರಾಮ ಪಂಚಾಯಿತಿಗಳ ಅಧಿಕಾರಿಗಳು ಸೇರಿದಂತೆ ಸುಮಾರು 350 ಭಾಗವಹಿಸುವವರು ಸಮ್ಮೇಳನದಲ್ಲಿಭೌತಿಕವಾಗಿ ಅಥವಾ ವರ್ಚುವಲ್‌ ಮೂಲಕ ಭಾಗವಹಿಸಲಿದ್ದಾರೆ. ಭಾಗವಹಿಸುವವರಲ್ಲಿದೇಶದಾದ್ಯಂತದ ಪ್ರತಿ ಜಿಲ್ಲೆಯ ಕನಿಷ್ಠ ಒಂದು ಗ್ರಾಮ ಪಂಚಾಯಿತಿಯಿಂದ ಚುನಾಯಿತ ಮುಖ್ಯಸ್ಥರು ಮತ್ತು ಅಧಿಕಾರಿಗಳು ಸೇರುತ್ತಾರೆ.

ಈ ಉಪಕ್ರಮದ ಪ್ರಾಥಮಿಕ ಉದ್ದೇಶವೆಂದರೆ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ಮಾದರಿ ಮಹಿಳಾ ಸ್ನೇಹಿ ಗ್ರಾಮ ಪಂಚಾಯಿತಿಯನ್ನು ಸ್ಥಾಪಿಸುವುದು, ಇದು ಲಿಂಗ-ಸೂಕ್ಷ್ಮ ಮತ್ತು ಹೆಣ್ಣು ಸ್ನೇಹಿ ಆಡಳಿತ ಅಭ್ಯಾಸಗಳಿಗೆ ದಾರಿದೀಪವಾಗಿ ಕಾರ್ಯನಿರ್ವಹಿಸುತ್ತದೆ. ಈ ಮಾದರಿ ಪಂಚಾಯಿತಿಗಳು ಸುರಕ್ಷಿತ, ಹೆಚ್ಚು ಅಂತರ್ಗತ ಮತ್ತು ಸಾಮಾಜಿಕವಾಗಿ ನ್ಯಾಯಯುತವಾದ ಗ್ರಾಮ ಪಂಚಾಯಿತಿಗಳನ್ನು ರಚಿಸುವ ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಕೋನಕ್ಕೆ ಉದಾಹರಣೆಯಾಗುತ್ತವೆ, ವಿಕಸಿತ ಪಂಚಾಯತ್‌ಗಳ ಮೂಲಕ ವಿಕಸಿತ ಭಾರತವನ್ನು ಸಾಧಿಸುವ ದೊಡ್ಡ ಗುರಿಗೆ ಕೊಡುಗೆ ನೀಡುತ್ತವೆ.

ರಾಷ್ಟ್ರೀಯ ಸಮಾವೇಶದ ಮುಖ್ಯಾಂಶಗಳು:

1.ಮಾದರಿ ಮಹಿಳಾ ಸ್ನೇಹಿ ಗ್ರಾಮ ಪಂಚಾಯಿತಿಗಳಾಗಿ ಅಭಿವೃದ್ಧಿಪಡಿಸಲು ಸಜ್ಜಾಗಿರುವ ಗುರುತಿಸಲಾದ ಗ್ರಾಮ ಪಂಚಾಯಿತಿಗಳ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ತರಬೇತಿಯ ವರ್ಚುವಲ್‌ ಉದ್ಘಾಟನೆ.

2.ಮಾದರಿ ಮಹಿಳಾ ಸ್ನೇಹಿ ಗ್ರಾಮ ಪಂಚಾಯಿತಿಗಳ ಪ್ರಗತಿಯನ್ನು ಪತ್ತೆಹಚ್ಚಲು ಮೇಲ್ವಿಚಾರಣಾ ಡ್ಯಾಶ್‌ ಬೋರ್ಡ್‌ ಅನ್ನು ಪ್ರಾರಂಭಿಸುವುದು.

3.ಮಹಿಳಾ ಸ್ನೇಹಿ ಗ್ರಾಮ ಪಂಚಾಯಿತಿಗಳ ಪರಿಕಲ್ಪನೆಯ ಬಗ್ಗೆ ಪ್ರಸ್ತುತಿಗಳು, ಉತ್ತಮ ಅಭ್ಯಾಸಗಳು ಮತ್ತು ಪರಿವರ್ತನೆಯ ಪ್ರಮುಖ ಅಂಶಗಳನ್ನು ಪ್ರದರ್ಶಿಸುವುದು.

4. ದೇಶಾದ್ಯಂತ ಪಂಚಾಯತ್‌ಗಳಲ್ಲಿಯಶಸ್ವಿ ಮಹಿಳಾ ಸ್ನೇಹಿ ಉಪಕ್ರಮಗಳನ್ನು ಎತ್ತಿ ತೋರಿಸುವ ಮಾಹಿತಿ ವೀಡಿಯೊಗಳ ಪ್ರದರ್ಶನ.

ರಾಷ್ಟ್ರೀಯ ಸಮಾವೇಶದ ನಂತರ, ಸಚಿವಾಲಯವು 2025ರ ಮಾರ್ಚ್‌ 8ರಂದು ರಾಷ್ಟ್ರವ್ಯಾಪಿ ಮಹಿಳಾ ಗ್ರಾಮ ಸಭೆಗಳನ್ನು ಆಯೋಜಿಸುತ್ತದೆ, ಇದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿಮಾದರಿ ಮಹಿಳಾ ಸ್ನೇಹಿ ಗ್ರಾಮ ಪಂಚಾಯಿತಿಗಳ ಉಪಕ್ರಮದ ತಳಮಟ್ಟದ ಪ್ರಾರಂಭವನ್ನು ಸೂಚಿಸುತ್ತದೆ.

 

*****


(Release ID: 2108133) Visitor Counter : 10