ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ವೇವ್ಸ್ ಬಜಾರ್: ಮಾಧ್ಯಮ ಮತ್ತು ಮನರಂಜನೆಗಾಗಿ ಮಹೋನ್ನತ (ಅಲ್ಟಿಮೇಟ್) ಬಿಸಿನೆಸ್ ಸಹಯೋಗ ಕೇಂದ್ರ

Posted On: 03 MAR 2025 4:56PM by PIB Bengaluru

ಮಾಧ್ಯಮ ಮತ್ತು ಮನರಂಜನಾ ಉದ್ಯಮವು ಅಭೂತಪೂರ್ವ ಡಿಜಿಟಲ್ ರೂಪಾಂತರಕ್ಕೆ ಸಾಕ್ಷಿಯಾಗಿದೆ, ಮತ್ತು ವಿಕಾಸದ ಕೇಂದ್ರ ಭಾಗದಲ್ಲಿ ಇರುವುದೇ ವೇವ್ಸ್ ಬಜಾರ್ – ಇದು ಜಾಗತಿಕ ಮನರಂಜನಾ ಪರಿಸರ ವ್ಯವಸ್ಥೆಯಾದ್ಯಂತ ವೃತ್ತಿಪರರು, ವ್ಯವಹಾರಗಳು ಮತ್ತು ಸೃಷ್ಟಿಕರ್ತರನ್ನು ಸಂಪರ್ಕಿಸಲು ವಿನ್ಯಾಸಗೊಳಿಸಲಾದ ಕ್ರಾಂತಿಕಾರಿ ಆನ್ಲೈನ್ ಮಾರುಕಟ್ಟೆ. ತಡೆರಹಿತ ಸಹಯೋಗವನ್ನು ಬೆಳೆಸುವ ಧ್ಯೇಯದೊಂದಿಗೆ, ವೇವ್ಸ್ ಬಜಾರ್ ಮಾಧ್ಯಮ ಮತ್ತು ಮನರಂಜನಾ ಉದ್ಯಮಕ್ಕೆ ಮಹೋನ್ನತ  ವ್ಯವಹಾರ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ, ವೃತ್ತಿಪರರಿಗೆ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಲು, ಹೊಸ ಅವಕಾಶಗಳನ್ನು ಕಂಡುಹಿಡಿಯಲು ಮತ್ತು ಹೆಚ್ಚಿನ ಮೌಲ್ಯದ ಪಾಲುದಾರಿಕೆಯಲ್ಲಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.

ವೇವ್ಸ್ ಬಜಾರ್ ಉದ್ಘಾಟನೆ

ವೇವ್ಸ್ ಬಜಾರ್ ಅನ್ನು 2025ರ ಜನವರಿ 27 ರಂದು ಹೊಸದಿಲ್ಲಿಯ  ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ, ರೈಲ್ವೆ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಮತ್ತು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರು ಅಧಿಕೃತವಾಗಿ ಪ್ರಾರಂಭಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು ಉಪಸ್ಥಿತರಿದ್ದರು; ಸಂಸ್ಕೃತಿ ಸಚಿವಾಲಯ ಕಾರ್ಯದರ್ಶಿ ಶ್ರೀ ಅರುಣೀಶ್ ಚಾವ್ಲಾ; ಖ್ಯಾತ ಭಾರತೀಯ ಚಲನಚಿತ್ರ ನಿರ್ಮಾಪಕ ಶ್ರೀ ಶೇಖರ್ ಕಪೂರ್; ಮತ್ತು ಪ್ರಸಾರ ಭಾರತಿ. ಶ್ರೀ ಗೌರವ್ ದ್ವಿವೇದಿ ಉಪಸ್ತಿತರಿದ್ದರು.

ವೇವ್ಸ್ ಬಜಾರ್ ಎಂಬುದು ಒಂದು ರೀತಿಯ ಇ-ಮಾರುಕಟ್ಟೆ ಸ್ಥಳವಾಗಿದ್ದು, ಇದು ಚಲನಚಿತ್ರ, ದೂರದರ್ಶನ, ಅನಿಮೇಷನ್, ಗೇಮಿಂಗ್, ಜಾಹೀರಾತು, ಎಕ್ಸ್ಆರ್, ಸಂಗೀತ, ಧ್ವನಿ ವಿನ್ಯಾಸ, ರೇಡಿಯೋ ಮತ್ತು ಇತರ ವಿಷಯಗಳನ್ನು ಒಳಗೊಂಡಂತೆ ಮಾಧ್ಯಮ ಮತ್ತು ಮನರಂಜನಾ ಸ್ಪೆಕ್ಟ್ರಮ್ ನಾದ್ಯಂತದ ಮಧ್ಯಸ್ಥಗಾರರನ್ನು ಒಟ್ಟುಗೂಡಿಸುತ್ತದೆ. ಈ ವೇದಿಕೆಯು ಖರೀದಿದಾರರು ಮತ್ತು ಮಾರಾಟಗಾರರ ನಡುವಿನ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ, ಉದ್ಯಮ ವೃತ್ತಿಪರರು ತಮ್ಮ ಪರಿಣತಿಯನ್ನು ಸುಲಭವಾಗಿ ಪ್ರದರ್ಶಿಸಬಹುದು, ಸಂಭಾವ್ಯ ಗ್ರಾಹಕರೊಂದಿಗೆ ಸಂಪರ್ಕ ಸಾಧಿಸಬಹುದು ಮತ್ತು ಅರ್ಥಪೂರ್ಣ ಸಹಯೋಗಗಳನ್ನು ಪಡೆಯಬಹುದು ಎಂಬುದನ್ನು  ಖಚಿತಪಡಿಸುತ್ತದೆ.

ನೀವು ನಿರ್ಮಾಣ ಪಾಲುದಾರರನ್ನು ಹುಡುಕುತ್ತಿರುವ ಚಲನಚಿತ್ರ ನಿರ್ಮಾಪಕರಾಗಿರಲಿ, ಸರಿಯಾದ ವೇದಿಕೆಯನ್ನು ಹುಡುಕುವ ಜಾಹೀರಾತುದಾರರಾಗಿರಲಿ, ಹೂಡಿಕೆದಾರರನ್ನು ಹುಡುಕುತ್ತಿರುವ ಗೇಮ್ ಡೆವಲಪರ್ ಆಗಿರಲಿ ಅಥವಾ ಜಾಗತಿಕ ಪ್ರೇಕ್ಷಕರಿಗೆ ನಿಮ್ಮ ಕೆಲಸವನ್ನು ಪ್ರದರ್ಶಿಸಲು ಬಯಸುವ ಕಲಾವಿದರಾಗಿರಲಿ, ವೇವ್ಸ್ ಬಜಾರ್ ಉದ್ಯಮ ವೃತ್ತಿಪರರಿಗೆ ನೆಟ್ವರ್ಕ್ ಮಾಡಲು, ಸಹಕರಿಸಲು ಮತ್ತು ತಮ್ಮ ವ್ಯವಹಾರಗಳನ್ನು ಬೆಳೆಸಲು ಕ್ರಿಯಾತ್ಮಕ ಸ್ಥಳವನ್ನು ಒದಗಿಸುತ್ತದೆ.

ವೇವ್ಸ್ ಬಜಾರ್ ಪ್ರಮುಖ ಲಕ್ಷಣಗಳು ಮತ್ತು ಪ್ರಯೋಜನಗಳು.

ಸಮಗ್ರ ಉದ್ಯಮ ಏಕೀಕರಣ - ಚಲನಚಿತ್ರ, ದೂರದರ್ಶನ, ಸಂಗೀತ, ಗೇಮಿಂಗ್, ಅನಿಮೇಷನ್, ಜಾಹೀರಾತು ಮತ್ತು ಎಕ್ಸ್ಆರ್, ಎಆರ್ ಮತ್ತು ವಿಆರ್ನಂತಹ ಉದಯೋನ್ಮುಖ ತಂತ್ರಜ್ಞಾನ ಕ್ಷೇತ್ರಗಳಿಗೆ ಏಕೀಕೃತ ಸ್ಥಳ.

ಜಾಗತಿಕ ವ್ಯಾಪ್ತಿ ಮತ್ತು ಗೋಚರತೆ - ನಿಮ್ಮ ವ್ಯವಹಾರವನ್ನು ಗಡಿಗಳನ್ನು ಮೀರಿ ವಿಸ್ತರಿಸಿ ಮತ್ತು ಮನರಂಜನಾ ಉದ್ಯಮದಲ್ಲಿ ಅಂತರರಾಷ್ಟ್ರೀಯ ಮಧ್ಯಸ್ಥಗಾರರೊಂದಿಗೆ ಸಂಪರ್ಕ ಸಾಧಿಸಿ ಎಂಬುದು ಇದರ ಉದ್ದೇಶ. .

ಅಡೆ-ತಡೆರಹಿತ ನೆಟ್ವರ್ಕಿಂಗ್ ಮತ್ತು ಸಹಯೋಗ - ಸಮಾನ ಮನಸ್ಕ ವೃತ್ತಿಪರರು, ಸೇವಾ ಪೂರೈಕೆದಾರರು, ಖರೀದಿದಾರರು ಮತ್ತು ಹೂಡಿಕೆದಾರರನ್ನು ಭೇಟಿ ಮಾಡಿ, ಸಂವಹನ ನಡೆಸಿ ಮತ್ತು ಸಹಯೋಗ ಮಾಡಿ.

ಸುವ್ಯವಸ್ಥಿತ ಖರೀದಿದಾರ-ಮಾರಾಟಗಾರ ವಹಿವಾಟುಗಳು - ಸೇವಾ ಪೂರೈಕೆದಾರರು ಮತ್ತು ಸಂಭಾವ್ಯ ಗ್ರಾಹಕರ ನಡುವೆ ಸುಗಮ ವ್ಯವಹಾರ ಸಂವಹನಗಳನ್ನು ಸಕ್ರಿಯಗೊಳಿಸುವ ರಚನಾತ್ಮಕವಾದ ಮತ್ತು ಬಳಸಲು ಸುಲಭವಾದ ವೇದಿಕೆ.

ವೈವಿಧ್ಯಮಯಲಿಸ್ಟಿಂಗ್  ಅವಕಾಶಗಳು - ಮಾರಾಟಗಾರರು ಚಲನಚಿತ್ರ ನಿರ್ಮಾಣ ಸೇವೆಗಳು, ವಿಎಫ್ಎಕ್ಸ್, ಜಾಹೀರಾತು, ಧ್ವನಿ ವಿನ್ಯಾಸ, ಸಂಗೀತ ನಿರ್ಮಾಣ , ಗೇಮಿಂಗ್, ಅನಿಮೇಷನ್ ಮತ್ತು ಇತರ ಸಂಗತಿಗಳಂತಹ ವಿಭಾಗಗಳಲ್ಲಿ ತಮ್ಮ ಕೊಡುಗೆಗಳನ್ನು ಪ್ರದರ್ಶಿಸಬಹುದು.

ವಿಶೇಷ ಉದ್ಯಮ ಕಾರ್ಯಕ್ರಮಗಳು  ಮತ್ತು ಮಾರುಕಟ್ಟೆಗಳಿಗೆ ಪ್ರವೇಶ - ವೇವ್ಸ್ ಪ್ಲಾಟ್ ಫಾರ್ಮ್ ಅಡಿಯಲ್ಲಿ ಉದ್ಯಮ-ನಿರ್ದಿಷ್ಟ ಕಾರ್ಯಕ್ರಮಗಳು, ಹೂಡಿಕೆದಾರರ ಸಭೆಗಳು (ಮೀಟ್-ಅಪ್ ಗಳು)  ಮತ್ತು ವಿಶೇಷ ಮಾರುಕಟ್ಟೆ ಸ್ಥಳಗಳಿಗೆ ಪ್ರವೇಶವನ್ನು ಪಡೆಯಬಹುದು.

ವೇವ್ಸ್ ಬಜಾರ್ ರಚನೆಗಳು:

ವೇವ್ಸ್ ಬಜಾರ್ ಅನ್ನು ಅನೇಕ ವಿಭಾಗಗಳಾಗಿ ರಚಿಸಲಾಗಿದೆ, ಪ್ರತಿಯೊಂದೂ ಮಾಧ್ಯಮ ಮತ್ತು ಮನರಂಜನಾ ಉದ್ಯಮದ ನಿರ್ದಿಷ್ಟ ವಿಭಾಗವನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ. ಅವುಗಳು ಈ ಕೆಳಗಿನಂತಿವೆ.  

1. ವೇವ್ಸ್ ಬಜಾರ್: ಜಾಹೀರಾತು ಸೇವೆಗಳಿಗಾಗಿ ಜಾಗತಿಕ ಇ-ಮಾರುಕಟ್ಟೆ

ಜಾಹೀರಾತುದಾರರು, ಮಾರಾಟಗಾರರು ಮತ್ತು ಮಾಧ್ಯಮ ಖರೀದಿದಾರರಿಗೆ ಜಾಹೀರಾತು ಪರಿಹಾರಗಳನ್ನು ಅನ್ವೇಷಿಸಲು ಮತ್ತು ಪಡೆಯಲು ಮೀಸಲಾದ ಸ್ಥಳ. ಮುದ್ರಣದಿಂದ ಡಿಜಿಟಲ್ ವರೆಗೆ ಔಟ್-ಆಫ್-ಹೋಮ್ (ಒಒಹೆಚ್) ಜಾಹೀರಾತುಗಳವರೆಗೆ, ಈ ವಿಭಾಗವು ಬ್ರಾಂಡ್ಗಳನ್ನು ಸರಿಯಾದ ಮಾಧ್ಯಮ ಪಾಲುದಾರರೊಂದಿಗೆ ಸಂಪರ್ಕಿಸುತ್ತದೆ.ಇದರಿಂದ ಅವರ ಪ್ರಚಾರ ಗರಿಷ್ಟ ಮಂದಿಗೆ ತಲುಪುವಂತೆ ನೋಡಿಕೊಳ್ಳುತ್ತದೆ.

2. ವೇವ್ಸ್ ಬಜಾರ್: ಲೈವ್ ಈವೆಂಟ್ಗಳಿಗೆ ಪರಮೋಚ್ಛ  ಮಾರುಕಟ್ಟೆ

ಇದು ಲೈವ್ ಮನರಂಜನಾ ಕ್ಷೇತ್ರದಲ್ಲಿ ಕಾರ್ಯಕ್ರಮ (ಈವೆಂಟ್)  ಸಂಘಟಕರು, ಮಾರಾಟಗಾರರು ಮತ್ತು ಸೇವಾ ಪೂರೈಕೆದಾರರನ್ನು ಒಟ್ಟುಗೂಡಿಸುವುದು. ಇದು ಸಂಗೀತ ಉತ್ಸವಗಳು, ಸಮ್ಮೇಳನಗಳು ಅಥವಾ ಕಾರ್ಪೊರೇಟ್ ಕಾರ್ಯಕ್ರಮಗಳಾಗಿರಲಿ, ಈ ವಿಭಾಗವು ವೃತ್ತಿಪರರಿಗೆ ಅಡೆ ತಡೆರಹಿತ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸಲು ಸಹಯೋಗಿಗಳನ್ನು ಹುಡುಕಲು ಸಹಾಯ ಮಾಡುತ್ತದೆ.

3. ವೇವ್ಸ್ ಬಜಾರ್: ಅನಿಮೇಷನ್ ಮತ್ತು ವಿಎಫ್ಎಕ್ಸ್ ಸೇವೆಗಳಿಗಾಗಿ ಜಾಗತಿಕ ಮಾರುಕಟ್ಟೆ

ಅನಿಮೇಷನ್ ಸ್ಟುಡಿಯೋಗಳು, ವಿಷುಯಲ್ ಎಫೆಕ್ಟ್ಸ್ ಕಲಾವಿದರು ಮತ್ತು ಪೋಸ್ಟ್-ಪ್ರೊಡಕ್ಷನ್ ಹೌಸ್ಗಳಿಗೆ ತಮ್ಮ ಪರಿಣತಿಯನ್ನು ಪ್ರದರ್ಶಿಸಲು ಒಂದು ಕೇಂದ್ರವಾಗಿದೆ. ಚಲನಚಿತ್ರ ನಿರ್ಮಾಪಕರು, ಗೇಮ್ ಡೆವಲಪರ್ ಗಳು ಮತ್ತು ಬ್ರಾಂಡ್ ಗಳು ತಮ್ಮ ಅನಿಮೇಷನ್ ಮತ್ತು ವಿಎಫ್ ಎಕ್ಸ್ ಅಗತ್ಯಗಳಿಗೆ ಸರಿಯಾದ ಪ್ರತಿಭೆಯನ್ನು ಇಲ್ಲಿ ಅನ್ವೇಷಿಸಬಹುದು.

4. ವೇವ್ಸ್ ಬಜಾರ್: ಎಕ್ಸ್ಆರ್, ವಿಆರ್ ಮತ್ತು ಎಆರ್ ಸೇವೆಗಳ ಜಾಗತಿಕ ಮಾರುಕಟ್ಟೆ

ವಿಸ್ತೃತ ರಿಯಾಲಿಟಿ (ಎಕ್ಸ್ಆರ್) ವೃತ್ತಿಪರರಿಗಾಗಿ ವಿನ್ಯಾಸಗೊಳಿಸಲಾದ ವಿಭಾಗವು ವರ್ಚುವಲ್ ರಿಯಾಲಿಟಿ (ವಿಆರ್), ವರ್ಧಿತ ರಿಯಾಲಿಟಿ (ಎಆರ್) ಮತ್ತು ಮಿಶ್ರ ರಿಯಾಲಿಟಿ (ಎಂಆರ್)ಯಲ್ಲಿ  ನಾವೀನ್ಯಕಾರರನ್ನು ಆಳವಾದ ಅನುಭವಗಳ ಮೂಲಕ ತಮ್ಮ ವಿಷಯ ಸಾಮಗ್ರಿಯನ್ನು ಎತ್ತರಿಸಲು  ಬಯಸುವ ವ್ಯವಹಾರಗಳೊಂದಿಗೆ ಸಂಪರ್ಕಿಸುತ್ತದೆ.

5. ವೇವ್ಸ್ ಬಜಾರ್: ಚಲನಚಿತ್ರಗಳಿಗೆ ಜಾಗತಿಕ ಮಾರುಕಟ್ಟೆ ಸ್ಥಳ

ಚಲನಚಿತ್ರ ನಿರ್ಮಾಪಕರು, ವಿತರಕರು ಮತ್ತು ಹೂಡಿಕೆದಾರರಿಗೆ ಒನ್-ಸ್ಟಾಪ್ ತಾಣ. ಈ ವಿಭಾಗವು ಚಲನಚಿತ್ರ ಯೋಜನೆಗಳನ್ನು ಪ್ರದರ್ಶಿಸಲು, ಸ್ವಾಧೀನಪಡಿಸಿಕೊಳ್ಳಲು ಮತ್ತು ಸಹಕರಿಸಲು ಅವಕಾಶಗಳನ್ನು ಒದಗಿಸುತ್ತದೆ, ಸೃಷ್ಟಿಕರ್ತರು ಮತ್ತು ಹಣಕಾಸುದಾರರ ನಡುವಿನ ಅಂತರವನ್ನು ಬೆಸೆಯುತ್ತದೆ.

6. ವೇವ್ಸ್ ಬಜಾರ್: ಗೇಮ್ ತಯಾರಕರಿಗೆ  ಗ್ರ್ಯಾಂಡ್ ಮಾರ್ಕೆಟ್ ಪ್ಲೇಸ್

ಗೇಮಿಂಗ್ ಡೆವಲಪರ್ ಗಳು, ಸ್ಟುಡಿಯೋಗಳು ಮತ್ತು ಪ್ರಕಾಶಕರಿಗೆ, ಈ ಸ್ಥಳವು ಹೂಡಿಕೆದಾರರು, ಧ್ವನಿ ಕಲಾವಿದರು, ಸಂಯೋಜಕರು ಮತ್ತು ಮಾರ್ಕೆಟಿಂಗ್ ತಜ್ಞರೊಂದಿಗೆ ಸಂಪರ್ಕವನ್ನು ಸುಗಮಗೊಳಿಸುತ್ತದೆ.

7. ವೇವ್ಸ್ ಬಜಾರ್: ರೇಡಿಯೋ ಮತ್ತು ಪಾಡ್ಕಾಸ್ಟ್ಗಾಗಿ ಜಾಗತಿಕ ಮಾರುಕಟ್ಟೆ

ರೇಡಿಯೋ ಕೇಂದ್ರಗಳು, ಪಾಡ್ಕಾಸ್ಟರ್ಗಳು ಮತ್ತು ಆಡಿಯೊ ವಿಷಯ ಸೃಷ್ಟಿಕರ್ತರಿಗೆ ತಮ್ಮ ಸೇವೆಗಳನ್ನು ಪಟ್ಟಿ ಮಾಡಲು, ಪ್ರಾಯೋಜಕರನ್ನು ಹುಡುಕಲು ಮತ್ತು ನಿರಂತರವಾಗಿ ಬೆಳೆಯುತ್ತಿರುವ ಡಿಜಿಟಲ್ ಆಡಿಯೊ ಭೂದೃಶ್ಯದೊಳಗಿನ ಯೋಜನೆಗಳಲ್ಲಿ ಸಹಕರಿಸಲು ಮೀಸಲಾದ ಸ್ಥಳ.

8. ವೇವ್ಸ್ ಬಜಾರ್: ಕಾಮಿಕ್ಸ್ ಮತ್ತು ಇ-ಬುಕ್ಸ್ ಜಾಗತಿಕ ಮಾರುಕಟ್ಟೆ

ಲೇಖಕರು, ಚಿತ್ರಕಾರರು ಮತ್ತು ಪ್ರಕಾಶಕರು ತಮ್ಮ ಕಥೆಗಳನ್ನು ಜಾಗತಿಕ ಪ್ರೇಕ್ಷಕರಿಗೆ ತಲುಪಿಸಲು  ವಿತರಕರು ಮತ್ತು ವಿಷಯ ವೇದಿಕೆಗಳೊಂದಿಗೆ ಸಂಪರ್ಕ ಸಾಧಿಸಬಹುದು. ಈ ವಿಭಾಗವು ಸೃಜನಶೀಲ ಉದ್ಯಮವು ಡಿಜಿಟಲ್ ಮತ್ತು ಭೌತಿಕ ಸ್ವರೂಪಗಳಲ್ಲಿ ಅಭಿವೃದ್ಧಿ ಹೊಂದುವುದನ್ನು ಖಚಿತಪಡಿಸುತ್ತದೆ.

9. ವೇವ್ಸ್ ಬಜಾರ್: ವೆಬ್-ಸರಣಿಗಾಗಿ ಜಾಗತಿಕ ಮಾರುಕಟ್ಟೆ

ಒಟಿಟಿ ವೇದಿಕೆಗಳು (ಪ್ಲಾಟ್ಫಾರ್ಮ್ಗಳು), ಸ್ವತಂತ್ರ ಸೃಷ್ಟಿಕರ್ತರು ಮತ್ತು ಡಿಜಿಟಲ್ ಸ್ಟುಡಿಯೋಗಳು ಹೊಸ ಪ್ರತಿಭೆಗಳನ್ನು ಅನ್ವೇಷಿಸಬಹುದು, ಪಿಚ್ ಯೋಜನೆಗಳನ್ನು ರೂಪಿಸಬಹುದು ಮತ್ತು ವಿಶ್ವಾದ್ಯಂತ ಸ್ಟ್ರೀಮಿಂಗ್ ಪ್ರೇಕ್ಷಕರಿಗಾಗಿ ಎಪಿಸೋಡಿಕ್ ವಿಷಯದ ಮೇಲೆ ಸಹಯೋಗ ಮಾಡಬಹುದು.

10. ವೇವ್ಸ್ ಬಜಾರ್: ಸಂಗೀತ ಮತ್ತು ಧ್ವನಿಗಾಗಿ ಜಾಗತಿಕ ಮಾರುಕಟ್ಟೆ

ಮೂಲ ಸಂಯೋಜನೆಗಳು ಮತ್ತು ಆಡಿಯೊ ಪರಿಹಾರಗಳನ್ನು ಹುಡುಕುತ್ತಿರುವ ಚಲನಚಿತ್ರ ನಿರ್ಮಾಪಕರು, ಜಾಹೀರಾತುದಾರರು ಮತ್ತು ಗೇಮಿಂಗ್ ಕಂಪನಿಗಳೊಂದಿಗೆ ತೊಡಗಿಸಿಕೊಳ್ಳಲು ಸಂಗೀತ ಸಂಯೋಜಕರು, ಧ್ವನಿ ವಿನ್ಯಾಸಕರು ಮತ್ತು ನಿರ್ಮಾಣ ಸಂಸ್ಥೆಗಳಿಗೆ ಮೀಸಲಾದ ಪರಿಸರ ವ್ಯವಸ್ಥೆ.

ವೇವ್ಸ್ ಬಜಾರ್ ಗೆ ಯಾರು ಸೇರಬಹುದು?

ವೇವ್ಸ್ ಬಜಾರ್ ಮಾಧ್ಯಮ, ಮನರಂಜನೆ ಮತ್ತು ಸೃಜನಶೀಲ ಕ್ಷೇತ್ರಗಳಲ್ಲಿನ ಎಲ್ಲಾ ವೃತ್ತಿಪರರಿಗೆ ಮುಕ್ತವಾಗಿದೆ, ಆದರೆ ಇವುಗಳಿಗೆ ಮಾತ್ರ ಅದು ಸೀಮಿತವಾದುದಲ್ಲ:

ಮಾರಾಟಗಾರರಿಗೆ:

ಚಲನಚಿತ್ರ ನಿರ್ಮಾಪಕರು ಮತ್ತು ಸ್ಟುಡಿಯೋಗಳು - ನಿಮ್ಮ ಚಲನಚಿತ್ರ ಯೋಜನೆಗಳನ್ನು ಪಟ್ಟಿ ಮಾಡಿ ಮತ್ತು ವಿತರಕರು, ಹೂಡಿಕೆದಾರರು ಮತ್ತು ಮಾರಾಟ ಏಜೆಂಟರೊಂದಿಗೆ ಸಂಪರ್ಕ ಸಾಧಿಸಿ.

ಅನಿಮೇಷನ್ ಮತ್ತು ವಿಎಫ್ಎಕ್ಸ್ ಸ್ಟುಡಿಯೋಗಳು - ಚಲನಚಿತ್ರ ನಿರ್ಮಾಪಕರು ಮತ್ತು ಗೇಮಿಂಗ್ ಡೆವಲಪರ್ಗಳಿಗೆ ನಿಮ್ಮ ಪರಿಣತಿಯನ್ನು ಪ್ರದರ್ಶಿಸಿ.

ಗೇಮಿಂಗ್ & ಎಕ್ಸ್ಆರ್ ಡೆವಲಪರ್ಗಳು - ನಿಮ್ಮ ಆಟದ ಯೋಜನೆಗಳಿಗೆ ಹೂಡಿಕೆದಾರರು, ಪಾಲುದಾರರು ಮತ್ತು ಗ್ರಾಹಕರನ್ನು ಹುಡುಕಿ.

ಸಂಗೀತ ಮತ್ತು ಧ್ವನಿ ವೃತ್ತಿಪರರು - ನಿಮ್ಮ ಸಂಯೋಜನೆ, ಸ್ಕೋರಿಂಗ್ ಮತ್ತು ಧ್ವನಿ ವಿನ್ಯಾಸ ಸೇವೆಗಳನ್ನು ಉತ್ತೇಜಿಸಿ.

ಜಾಹೀರಾತು ಮತ್ತು ಮಾರ್ಕೆಟಿಂಗ್ ಏಜೆನ್ಸಿಗಳು - ಮಾಧ್ಯಮ ಅಭಿಯಾನಗಳನ್ನು ಹುಡುಕುತ್ತಿರುವ ಬ್ರಾಂಡ್ ಗಳು ಮತ್ತು ವ್ಯವಹಾರಗಳೊಂದಿಗೆ ಸಂಪರ್ಕ ಸಾಧಿಸಿ.

ರೇಡಿಯೋ ಮತ್ತು ಪಾಡ್ಕಾಸ್ಟ್ ಸೃಷ್ಟಿಕರ್ತರು - ಮಾನ್ಯತೆ ಮತ್ತು ಹಣಗಳಿಸುವ ಅವಕಾಶಗಳನ್ನು ಪಡೆಯಿರಿ.

ಬರಹಗಾರರು ಮತ್ತು ಇ-ಪುಸ್ತಕ ಪ್ರಕಾಶಕರು - ಉತ್ಪಾದನಾ ಸಂಸ್ಥೆಗಳು, ಪ್ಲಾಟ್ ಫಾರ್ಮ್ ಗಳು ಮತ್ತು ವಿಷಯ ಖರೀದಿದಾರರನ್ನು ತಲುಪಿ.

ಖರೀದಿದಾರರಿಗೆ:

ಚಲನಚಿತ್ರ ನಿರ್ಮಾಣ ಸಂಸ್ಥೆಗಳು ಮತ್ತು ಒಟಿಟಿ ಪ್ಲಾಟ್ಫಾರ್ಮ್ಗಳು ವಿಷಯ ಪಡೆಯುವುದಕ್ಕಾಗಿ  ಹುಡುಕುತ್ತಿರುತ್ತವೆ.

ಜಾಹೀರಾತು ಪಾಲುದಾರರನ್ನು ಮಾಧ್ಯಮ ಏಜೆನ್ಸಿಗಳು ಮತ್ತು ಬ್ರಾಂಡ್ ಗಳು ಜಾಹೀರಾತು ಪಾಲುದಾರರನ್ನು ಹುಡುಕುತ್ತಿರುತ್ತವೆ.

ಗೇಮ್ ಡೆವಲಪರ್ ಗಳು ಅನಿಮೇಷನ್ ಮತ್ತು ಧ್ವನಿ ಸೇವೆಗಳನ್ನು ಬಯಸುತ್ತಾರೆ.  

ಈವೆಂಟ್ (ಕಾರ್ಯಕ್ರಮ) ಸಂಘಟಕರಿಗೆ   ಪ್ರಚಾರ ಸಹಯೋಗದ ಅಗತ್ಯವಿರುತ್ತದೆ.

ಸಾರ್ವಜನಿಕ ವಲಯದ ಸಂಸ್ಥೆಗಳು ಸೃಜನಶೀಲ ವಿಷಯ ಪರಿಹಾರಗಳನ್ನು ಹುಡುಕುತ್ತಿರುತ್ತವೆ.  

-ಇವರಿಗೆ ಇದು ಸಹಕಾರಿ

ವೇವ್ಸ್ ಬಜಾರ್ ಹೇಗೆ ಕೆಲಸ ಮಾಡುತ್ತದೆ

ವೇವ್ಸ್ ಬಜಾರ್ ಜಾಲತಾಣಕೆ (ವೆಬ್ಸೈಟ್ಗೆ)  ಭೇಟಿ ನೀಡಿ – ವೇದಿಕೆ wavesbazaar.com ಗೆ ಹೋಗಿ ಮತ್ತು  ಅನ್ವೇಷಿಸಲು ಶುರು ಮಾಡಿ.

ಸೈನ್ ಅಪ್ ಮಾಡಿ ಮತ್ತು ನಿಮ್ಮ ಪ್ರೊಫೈಲ್ ರಚಿಸಿ - ಪೂರ್ಣ ಶ್ರೇಣಿಯ ಅವಕಾಶಗಳನ್ನು ಪ್ರವೇಶಿಸಲು ಖರೀದಿದಾರ, ಮಾರಾಟಗಾರ ಅಥವಾ ಹೂಡಿಕೆದಾರರಾಗಿ ನೋಂದಾಯಿಸಿ.

ನಿಮ್ಮ ಸೇವೆಗಳು ಅಥವಾ ಪ್ರಾಜೆಕ್ಟ್ ಅಗತ್ಯಗಳನ್ನು ದಾಖಲು (ಪಟ್ಟಿ)  ಮಾಡಿ - ನಿಮ್ಮ ಕೆಲಸವನ್ನು ಪ್ರದರ್ಶಿಸಿ ಅಥವಾ ನಿಮ್ಮ ವ್ಯವಹಾರ ಆಸಕ್ತಿಗಳಿಗೆ ಅನುಗುಣವಾಗಿ ಲಭ್ಯವಿರುವ ಪಟ್ಟಿಗಳನ್ನು ಅನ್ವೇಷಿಸಿ.

ಸಂಪರ್ಕ ಸಾಧಿಸಿ ಮತ್ತು ಸಹಯೋಗ ಸ್ಥಾಪಿಸಿ - ಉದ್ಯಮ ವೃತ್ತಿಪರರೊಂದಿಗೆ ನೆಟ್ವರ್ಕ್ ಮಾಡಿ, ಸಭೆಗಳನ್ನು ನಿಗದಿಪಡಿಸಿ ಮತ್ತು ಯಶಸ್ವಿ ಸಹಯೋಗಗಳನ್ನು ಪ್ರಾರಂಭಿಸಿ.

ನಿಮ್ಮ ವ್ಯವಹಾರವನ್ನು ಬೆಳೆಸಿ - ನಿಮ್ಮ ಮಾರುಕಟ್ಟೆಯನ್ನು ವಿಸ್ತರಿಸಿ, ಹೊಸ ಆದಾಯದ ಹರಿವುಗಳನ್ನು ಕಂಡುಕೊಳ್ಳಿ ಮತ್ತು ದೀರ್ಘಕಾಲೀನ ಪಾಲುದಾರಿಕೆಯನ್ನು ಸ್ಥಾಪಿಸಿ.

ವೇವ್ಸ್ ಬಜಾರ್ ಉದ್ಯಮಕ್ಕೆ ಗೇಮ್ ಚೇಂಜರ್ ಆಗಿದೆ ಏಕೆ?

ವೇಗವಾಗಿ ವಿಕಸನಗೊಳ್ಳುತ್ತಿರುವ ಡಿಜಿಟಲ್ ಭೂದೃಶ್ಯದಲ್ಲಿ, ವೇವ್ಸ್ ಬಜಾರ್ ಮನರಂಜನಾ ವೃತ್ತಿಪರರು ಸಂಪರ್ಕಿಸುವ ಮತ್ತು ವ್ಯವಹಾರ ಮಾಡುವ ವಿಧಾನದಲ್ಲಿ ಕ್ರಾಂತಿಯನ್ನುಂಟುಮಾಡುತ್ತಿದೆ. ಭೌಗೋಳಿಕ ಅಡೆತಡೆಗಳನ್ನು ತೆಗೆದುಹಾಕುವ ಮೂಲಕ ಮತ್ತು ರಚನಾತ್ಮಕ, ವರ್ಗ-ನಿರ್ದಿಷ್ಟ ಮಾರುಕಟ್ಟೆಯನ್ನು ನೀಡುವ ಮೂಲಕ, ಉದ್ಯಮದ ಪಾಲುದಾರರು  ಸರಿಯಾದ ಪಾಲುದಾರರನ್ನು ವೇಗವಾಗಿ ಕಂಡುಕೊಳ್ಳುತ್ತಾರೆ, ಉತ್ತಮ ಒಪ್ಪಂದಗಳನ್ನು,  ಮಾತುಕತೆಗಳನ್ನು  ಕೈಗೊಳ್ಳುತ್ತಾರೆ ಮತ್ತು ಅವರ ವ್ಯವಹಾರ ಸಾಮರ್ಥ್ಯವನ್ನು ಗರಿಷ್ಠಗೊಳಿಸುತ್ತಾರೆ ಎಂಬುದನ್ನು  ವೇದಿಕೆ ಖಚಿತಪಡಿಸುತ್ತದೆ.

ಇಂದು ವೇವ್ಸ್ ಬಜಾರ್ ಗೆ ಸೇರಿ ಮತ್ತು ಜಾಗತಿಕ ಮನರಂಜನಾ ಉದ್ಯಮದಲ್ಲಿ ಅಂತ್ಯವಿಲ್ಲದ ಅವಕಾಶಗಳನ್ನು ಅನ್ ಲಾಕ್ ಮಾಡಿ!

ಈಗ ಇಲ್ಲಿ ನೋಂದಾಯಿಸಿ: wavesbazaar.com

ನವೀಕರಣಗಳು ಮತ್ತು ಉದ್ಯಮದ ಒಳನೋಟಗಳಿಗಾಗಿ ಸಾಮಾಜಿಕ ಮಾಧ್ಯಮದಲ್ಲಿ ನಮ್ಮನ್ನು ಅನುಸರಿಸಿ.

ವೇವ್ಸ್ 2025 ಬಗ್ಗೆ

ಮಾಧ್ಯಮ ಮತ್ತು ಮನರಂಜನಾ (ಎಂ & ಇ) ಕ್ಷೇತ್ರದ ಮೈಲಿಗಲ್ಲು ಕಾರ್ಯಕ್ರಮವಾದ ಮೊದಲ ವಿಶ್ವ ಆಡಿಯೊ ದೃಶ್ಯ ಮತ್ತು ಮನರಂಜನಾ ಶೃಂಗಸಭೆ (ವೇವ್ಸ್) ಯನ್ನು ಭಾರತ ಸರ್ಕಾರವು 2025 ರ ಮೇ 1 ರಿಂದ 4 ರವರೆಗೆ ಮಹಾರಾಷ್ಟ್ರದ ಮುಂಬೈನಲ್ಲಿ ಆಯೋಜಿಸಿದೆ.

ನೀವು ಉದ್ಯಮದ ವೃತ್ತಿಪರರು, ಹೂಡಿಕೆದಾರರು, ಸೃಷ್ಟಿಕರ್ತರು ಅಥವಾ ನಾವೀನ್ಯಕಾರರಾಗಿದ್ದಲ್ಲಿ, ಶೃಂಗಸಭೆಯು ಎಂ &ಇ ಭೂದೃಶ್ಯಕ್ಕೆ ಸಂಪರ್ಕಿಸಲು, ಸಹಯೋಗ ಮಾಡಲು, ನಾವೀನ್ಯತೆ ಮತ್ತು ಕೊಡುಗೆ ನೀಡಲು ಪರಮೋಚ್ಛ  ಜಾಗತಿಕ ವೇದಿಕೆಯನ್ನು ಒದಗಿಸುತ್ತದೆ.

ವೇವ್ಸ್ ಭಾರತದ ಸೃಜನಶೀಲ ಶಕ್ತಿಯನ್ನು ಹೆಚ್ಚಿಸಲು ಸಜ್ಜಾಗಿದೆ, ವಿಷಯ ರಚನೆ, ಬೌದ್ಧಿಕ ಆಸ್ತಿ ಮತ್ತು ತಾಂತ್ರಿಕ ನಾವೀನ್ಯತೆಗಳ ಕೇಂದ್ರವಾಗಿ ಅದರ ಸ್ಥಾನವನ್ನು ಗಟ್ಟಿಗೊಳಿಸುತ್ತದೆ. ಪ್ರಸಾರ, ಮುದ್ರಣ ಮಾಧ್ಯಮ, ದೂರದರ್ಶನ, ರೇಡಿಯೋ, ಚಲನಚಿತ್ರಗಳು, ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್, ಕಾಮಿಕ್ಸ್, ಧ್ವನಿ ಮತ್ತು ಸಂಗೀತ, ಜಾಹೀರಾತು, ಡಿಜಿಟಲ್ ಮಾಧ್ಯಮ, ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳು, ಜೆನೆರೇಟಿವ್ ಎಐ, ವರ್ಧಿತ ರಿಯಾಲಿಟಿ (ಎಆರ್), ವರ್ಚುವಲ್ ರಿಯಾಲಿಟಿ (ವಿಆರ್) ಮತ್ತು ವಿಸ್ತರಿತ ರಿಯಾಲಿಟಿ (ಎಕ್ಸ್ಆರ್)ಗಳು ಅದರ  ಗಮನ ಕೇಂದ್ರೀಕರಿಸುವ  ಕೈಗಾರಿಕೆಗಳು ಮತ್ತು ವಲಯಗಳಾಗಿವೆ.

ಪ್ರಶ್ನೆಗಳಿವೆಯೇ? ಉತ್ತರಗಳನ್ನು ಇಲ್ಲಿ ಹುಡುಕಿ

ಬನ್ನಿ, ನಮ್ಮೊಂದಿಗೆ ಪ್ರಯಾಣಿಸಿ! ವೇವ್ಸ್ ಗಾಗಿ ಈಗ ನೋಂದಾಯಿಸಿ (ಶೀಘ್ರದಲ್ಲೇ ಬರಲಿದೆ!)

 

*****


(Release ID: 2108127) Visitor Counter : 26