ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
ನವದೆಹಲಿಯ ಅಂಗನವಾಡಿ ಕೇಂದ್ರಗಳಿಗೆ ಹೋಲಿಸ್ಟಿಕ್ ಹೆಲ್ತ್ ಅಂಡ್ ನ್ಯೂಟ್ರಿಷನ್ ಚಾಂಪಿಯನ್ ಲ್ಯೂಕ್ ಕುಟಿನ್ಹೋ ಅವರು ಭೇಟಿ ನೀಡಿದರು
ಪೋಷಣಾ ಅಭಿಯಾನದ ಅನುಷ್ಠಾನ ಮತ್ತು ಸಕ್ಷಮ್ ಅಂಗನವಾಡಿ ಮತ್ತು ಪೋಷಣ್ 2.0 ಮೂಲಕ ಅಪೌಷ್ಟಿಕತೆಯನ್ನು ನಿವಾರಿಸಲು ಕೇಂದ್ರ ಸರ್ಕಾರದ ಬದ್ಧತೆಯನ್ನು ಭೇಟಿಯ ಸಂದರ್ಭದಲ್ಲಿ ವೀಕ್ಷಿಸಿದರು
Posted On:
28 FEB 2025 2:44PM by PIB Bengaluru
ಹೆಸರಾಂತ ಹೋಲಿಸ್ಟಿಕ್ ಆರೋಗ್ಯ ತರಬೇತುದಾರ ಮತ್ತು ಲ್ಯೂಕ್ ಕುಟಿನ್ಹೋ ಹೋಲಿಸ್ಟಿಕ್ ಹೀಲಿಂಗ್ ಸಿಸ್ಟಮ್ಸ್ ಸಹ-ಸಂಸ್ಥಾಪಕರಾದ ಶ್ರೀ ಲ್ಯೂಕ್ ಕುಟಿನ್ಹೋ ಅವರು ಇಂದು ಪೋಷಣಾ ಅಭಿಯಾನದ ಅನುಷ್ಠಾನವನ್ನು ನೇರವಾಗಿ ವೀಕ್ಷಿಸಲು ಕುಸುಂಪುರ್ ಪಹಾರಿ ಐಸಿಡಿಎಸ್ ಪ್ರಾಜೆಕ್ಟ್ ಎಡಬ್ಲ್ಯೂಸಿ 55 ಮತ್ತು 59 ನಲ್ಲಿರುವ ಆರ್ ಕೆ ಪುರಂನಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದರು.
ಈ ಭೇಟಿಯು ಸಕ್ಷಮ್ ಅಂಗನವಾಡಿ ಮತ್ತು ಪೋಷಣ್ 2.0 (ಮಿಷನ್ ಪೋಷಣ್ 2.0) ಮೂಲಕ ಅಪೌಷ್ಟಿಕತೆಯನ್ನು ನಿಭಾಯಿಸುವ ಭಾರತ ಸರ್ಕಾರದ ಬದ್ಧತೆಗೆ ಹೊಂದಿಕೆಯಾಗುತ್ತದೆ, ಇದರಲ್ಲಿ ಸಾಮಾಜಿಕ ನಡವಳಿಕೆಯ ಬದಲಾವಣೆ ಮತ್ತು ಸಮುದಾಯದ ಭಾಗವಹಿಸುವಿಕೆ ಪ್ರಮುಖ ಅಂಶವಾಗಿದೆ.


ಭೇಟಿಯ ಸಮಯದಲ್ಲಿ, ಶ್ರೀ ಕುಟಿನ್ಹೋ ಅವರು ಸಮುದಾಯದಲ್ಲಿ ಪೌಷ್ಟಿಕಾಂಶ ಮತ್ತು ಬಾಲ್ಯದ ಶಿಕ್ಷಣವನ್ನು ಬಲಪಡಿಸುವಲ್ಲಿ ತೊಡಗಿರುವ ಪ್ರಮುಖ ಪಾಲುದಾರರಾದ ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಸಂವಾದ ನಡೆಸಿದರು. ಅವರು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳೊಂದಿಗೆ ಸಂವಾದ ನಡೆಸಿದರು ಮತ್ತು ಉತ್ತಮ ಪೋಷಣೆ ಮತ್ತು ಆರೋಗ್ಯಕರ ಜೀವನಶೈಲಿಯ ಅಭ್ಯಾಸಗಳತ್ತ ಎಲ್ಲರನ್ನೂ ಪ್ರೇರೇಪಿಸಿದರು.

ಅಂಗನವಾಡಿ ಕೇಂದ್ರಗಳಲ್ಲಿ ಮೂಲಸೌಕರ್ಯ ಮತ್ತು ಸೇವಾ ವಿತರಣೆಯನ್ನು ಮೇಲ್ವಿಚಾರಣೆ ಮಾಡುವ ಸುಧಾರಿತ ಐಟಿ ಆಡಳಿತ ಸಾಧನವಾದ ‘ಪೋಷಣ ಟ್ರ್ಯಾಕರ್’ ಅಪ್ಲಿಕೇಶನ್ ಮೂಲಕ ಪೌಷ್ಟಿಕಾಂಶದ ಸೇವೆಗಳ ನೈಜ-ಸಮಯದ ಟ್ರ್ಯಾಕಿಂಗ್ ಅನ್ನು ಹೇಗೆ ಮಾಡಲಾಗುತ್ತಿದೆ ಎಂಬುದನ್ನು ಶ್ರೀ ಕುಟಿನ್ಹೋ ಅವರು ಸ್ವಾನುಭವದ ಮೂಲಕ ಸನಿಹದಿಂದ ನೋಡಿದರು. 24 ಭಾಷೆಗಳಲ್ಲಿ ಲಭ್ಯವಿರುವ ಈ ಉಪಕರಣವು, ಫಲಾನುಭವಿಗಳಿಗೆ ಸುಧಾರಿತ ಸೇವಾ ದಕ್ಷತೆಯನ್ನು ಖಾತ್ರಿಪಡಿಸುವ ಮೂಲಕ ನೈಜ-ಸಮಯದ ಡೇಟಾ ಸಂಗ್ರಹಣೆ ಮತ್ತು ಉದ್ದೇಶಿತ ಮಧ್ಯಸ್ಥಿಕೆಗಳನ್ನು ಸುಗಮಗೊಳಿಸಿದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಬೊಜ್ಜು (ಸ್ಥೂಲಕಾಯ) ವಿರೋಧಿ ಅಭಿಯಾನ ಮತ್ತು ಅಡುಗೆಗಾಗಿ ಖಾದ್ಯ ತೈಲವನ್ನು ಕಡಿಮೆ ಬಳಕೆ ಮಾಡಲು ಸ್ಪಷ್ಟವಾದ ಕರೆಯನ್ನು ಶ್ಲಾಘಿಸಿದ ಶ್ರೀ ಲ್ಯೂಕ್, ಪೋಷಣಾ ಅಭಿಯಾನದ ಅಡಿಯಲ್ಲಿ ವಾರ್ಷಿಕ ಜನ ಆಂದೋಲನ ಕಾರ್ಯಕ್ರಮಗಳಾದ ಪೋಷಣಾ ಮಾಹೆ ಮತ್ತು ಪೋಷಣಾ ಪಾಕ್ಷಿಕಗಳ ಮೂಲಕ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಮೂಲಕ ನಡೆಯುತ್ತಿರುವ ಜಾಗೃತಿ ಮತ್ತು ಸಮುದಾಯ ಸಜ್ಜುಗೊಳಿಸುವಿಕೆಯ ಬಗ್ಗೆ ಮಾತನಾಡಿದರು.
ಉತ್ತಮ ಪೋಷಣೆಗಾಗಿ ಕುಟುಂಬದಲ್ಲಿ ಪುರುಷರ ಒಳಗೊಳ್ಳುವಿಕೆಗೆ ಮತ್ತು ಪಾಲ್ಗೊಳ್ಳುವಿಕೆಗೆ ಅವರು ಒತ್ತು ನೀಡಿದರು. ಪೂರಕ ಪೋಷಣೆ ಕಾರ್ಯಕ್ರಮದಲ್ಲಿ ಸಿರಿಧಾನ್ಯ / ರಾಗಿ ಬಳಕೆ ಮತ್ತು ಸಕ್ಷಮ್ ಅಂಗನವಾಡಿ ಮತ್ತು ಮಿಷನ್ ಪೋಷಣ್ 2.0 ಅಡಿಯಲ್ಲಿ 'ಪೋಷಣ್ ಟ್ರ್ಯಾಕರ್' ಅಪ್ಲಿಕೇಶನ್ ಮೂಲಕ ಪೌಷ್ಟಿಕಾಂಶ ಸೇವೆಗಳ ನೈಜ-ಸಮಯದ ಟ್ರ್ಯಾಕಿಂಗ್ ತಂತ್ರಜ್ಞಾನದ ಬಳಕೆಗಾಗಿ ಕೇಂದ್ರ ಸಚಿವಾಲಯದ ಉಪಕ್ರಮಗಳನ್ನು ಅವರು ಶ್ಲಾಘಿಸಿದರು.

7ನೇ ಪೋಷಣ್ ಪಾಕ್ಷಿಕ 2025ರ ಅವಧಿಯಲ್ಲಿ ಮಾರ್ಚ್ 18 ರಿಂದ 2ನೇ ಏಪ್ರಿಲ್ 2025 ರವರೆಗೆ, ಮಕ್ಕಳಲ್ಲಿ ಸ್ಥೂಲಕಾಯತೆಯನ್ನು ಪರಿಹರಿಸಲು ಆರೋಗ್ಯಕರ ಜೀವನಶೈಲಿಗೆ ಒತ್ತು ನೀಡಲಾಗಿದೆ, ಜೊತೆಗೆ ಜೀವನದ ಮೊದಲ 1000 ದಿನಗಳ ಮೇಲೆ ಗಮನ ಕೇಂದ್ರೀಕರಿಸುವುದು, ಮೊಡ್ಯುಲರ್ ಅಳವಡಿಕೆಯ ಮೂಲಕ ಸಿಎಮ್‌ಎಂಡ್ಯುಲರ ನಿರ್ವಹಣೆಯ ಮೂಲಕ ಜನಪ್ರಿಯಗೊಳಿಸುವುದು ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಂಟಿ ಕಾರ್ಯದರ್ಶಿ ಅವರು ಹೇಳಿದರು
ದಿನನಿತ್ಯದ ಆಹಾರದಲ್ಲಿ ಸ್ಥಳೀಯವಾಗಿ ದೊರೆಯುವ ಆಹಾರವನ್ನು ಅಳವಡಿಸಿಕೊಳ್ಳುವುದನ್ನು ಉತ್ತೇಜಿಸಲು, ಶ್ರೀ ಲ್ಯೂಕ್ ಕೌಟಿನ್ಹೋ ಅವರು ಸಾಂಕೇತಿಕವಾಗಿ ಕರಿಬೇವಿನ ಸಸಿಯನ್ನು ನೆಟ್ಟರು.

ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದಿಂದ ಪರಿಕಲ್ಪನೆಗೊಳಿಸಿದ ಮತ್ತು ದೀನದಯಾಳ್ ಸಂಶೋಧನಾ ಸಂಸ್ಥೆ (ಡಿ.ಆರ್.ಐ.) ನಿಂದ ಸಂಗ್ರಹಿಸಲಾದ 'ಪೋಷಣ್ ಉತ್ಸವ ಪುಸ್ತಕ'ದ ಪ್ರತಿಯನ್ನು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಂಟಿ ಕಾರ್ಯದರ್ಶಿ ಅವರು ಪ್ರಸ್ತುತಪಡಿಸಿದರು. ಇದು ದೇಶದ ಐತಿಹಾಸಿಕ ಹಾಗೂ ಶ್ರೀಮಂತ ಪಾಕಶಾಲೆಯ ಪರಂಪರೆ ಮತ್ತು ಪೌಷ್ಟಿಕಾಂಶದ ವೈವಿಧ್ಯತೆಯ ಮೆಚ್ಚುಗೆಗಾಗಿ ಸಮಗ್ರ ಮಾಹಿತಿ ಭಂಡಾರವಾಗಿ ಕಾರ್ಯನಿರ್ವಹಿಸುತ್ತದೆ.

ಶ್ರೀ ಕುಟಿನ್ಹೋ ಅವರ ಈ ಭೇಟಿಯು ಸಮಗ್ರ ಪೋಷಣೆ ಮತ್ತು ಬಾಲ್ಯದ ಶಿಕ್ಷಣದ ಪ್ರಾಮುಖ್ಯತೆಯ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ನಿರೀಕ್ಷೆಯಿದೆ, ಆರೋಗ್ಯಕರ ಮತ್ತು ಉತ್ತಮ-ಪೋಷಣೆಯ ಭಾರತವನ್ನು ಸಾಧಿಸುವ ಸಾಮೂಹಿಕ ಧ್ಯೇಯವನ್ನು ಬಲಪಡಿಸುತ್ತದೆ.
*****
(Release ID: 2107461)
Visitor Counter : 11