ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
azadi ka amrit mahotsav

ಸ್ಥೂಲಕಾಯ ಸಮಸ್ಯೆ ವಿರುದ್ಧ ಹೋರಾಡಲು ನಮ್ಮ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೃಷ್ಟಿಕೋನ ಸಂಪೂರ್ಣವಾಗಿ ಸರಿಯಾಗಿದೆ: ಶ್ರೀ ಲ್ಯೂಕ್ ಕೌಟಿನ್ಹೋ


ಮಕ್ಕಳು ಮತ್ತು ವಯಸ್ಕರಿಗೆ ಜಂಕ್ ಫುಡ್ ನಿಯಂತ್ರಣ ಮತ್ತು ಅಪಾಯದ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ, ಬೊಜ್ಜು ಸಾಂಕ್ರಾಮಿಕವಾಗಿದೆ: ಶ್ರೀ ಲ್ಯೂಕ್

Posted On: 28 FEB 2025 4:19PM by PIB Bengaluru

ಸ್ಥೂಲಕಾಯ ಸಮಸ್ಯೆ ವಿರುದ್ಧ ಹೋರಾಡಲು ನಮ್ಮ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೃಷ್ಟಿಕೋನ ಸಂಪೂರ್ಣವಾಗಿ ಸರಿಯಾಗಿದೆ ಎಂದು ಶ್ರೀ ಲ್ಯೂಕೆ ಕೌಟಿನೋ ಹೇಳಿದ್ದಾರೆ. ಅವರು ನವದೆಹಲಿಯಲ್ಲಿಂದು ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಶ್ರೀ ಲ್ಯೂಕ್ ಕೌಟಿನ್ಹೋ ಅವರು ಪ್ರಸಿದ್ಧ ಸಮಗ್ರ ಆರೋಗ್ಯ ತರಬೇತುದಾರರು ಮತ್ತು ಲ್ಯೂಕ್ ಕೌಟಿನ್ಹೋ ಹೋಲಿಸ್ಟಿಕ್ ಹೀಲಿಂಗ್ ಸಿಸ್ಟಮ್ಸ್‌ನ ಸಹ-ಸಂಸ್ಥಾಪಕರು. ಅವರು ಮಾಧ್ಯಮ ಸಮಾವೇಶದಲ್ಲಿ ಭಾಗವಹಿಸಲು ದೆಹಲಿ ಪ್ರವಾಸ ಕೈಗೊಂಡಿದ್ದಾರೆ.

ಪೌಷ್ಠಿಕತೆ ಕುರಿತು ಮಾತನಾಡಿದ ಶ್ರೀ ಲ್ಯೂಕ್, ಮೂರು ವಿಷಯಗಳ ಮೇಲೆ ನಾವು ಗಮನಹರಿಸಬೇಕಾಗಿದೆ. ಮೊದಲನೆಯದಾಗಿ, ಮಕ್ಕಳ ಮಟ್ಟದಲ್ಲಿಯೇ ಸರಿಯಾದ ಪೋಷಣೆಯನ್ನು ಪಡೆಯಲು ಪ್ರಾರಂಭಿಸಬೇಕು. ಎರಡನೆಯದಾಗಿ, ದೇಶದಾದ್ಯಂತ  ನಮ್ಮ ವೈವಿಧ್ಯಮಯ ವಿವಿಧ ಭಾಷೆಗಳಲ್ಲಿ ಪೋಷಣೆಯ ಬಗ್ಗೆ ಸರಿಯಾದ ಶಿಕ್ಷಣ ಮತ್ತು ಮೂರನೆಯದಾಗಿ, ರಾಗಿಯಂತಹ ಸ್ಥಳೀಯ ಪೌಷ್ಠಿಕಾಂಶ ಹೊಂದಿರುವ ಆಹಾರ ದೊರೆಯುವಂತೆ ಮಾಡಬೇಕಾಗಿದೆ. ಮಕ್ಕಳು ಮತ್ತು ವಯಸ್ಕರಿಗೆ ಜಂಕ್ ಫುಡ್ ನಿಯಂತ್ರಣ ಮತ್ತು ಜಾಗೃತಿ ಮೂಡಿಸಬೇಕು. ಬೊಜ್ಜು ಸಾಂಕ್ರಾಮಿಕಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದ ಶ್ರೀ ಲ್ಯೂಕ್, "ಶ್ರೀ ಮೋದಿ ಅವರು ಸ್ಥಳೀಯ ಪೌಷ್ಠಿಕಾಂಶವಿರುವ ಆಹಾರ ಬಳಸಲು ನಮ್ಮನ್ನು ಪ್ರೋತ್ಸಾಹಿಸಿದ್ದಾರೆ. ಈ ಆಹಾರಗಳೊಂದಿಗೆ ನಾವು ನೈಸರ್ಗಿಕ ಸಮತೋಲಿತ ಆಹಾರವನ್ನು ಕಾಪಾಡಿಕೊಳ್ಳಬಹುದು ಮತ್ತು ಪ್ರೋಟೀನ್‌ಗಳು, ಕಾರ್ಬೋ ಹೈಡ್ರೇಟ್‌ಗಳು, ಕೊಬ್ಬು ಮತ್ತು ಪ್ರೋಟಿನ್ ಮ್ಯಾಕ್ರೋನ್‌ಗಳನ್ನು ಬೆಂಬಲಿಸಬಹುದು" ಎಂದು ಹೇಳಿದರು.

ಬೊಜ್ಜು ವಿರುದ್ಧದ ಅಭಿಯಾನವನ್ನು ಬೆಂಬಲಿಸಿದ ಅವರು, "ಭಾರತೀಯ ನಾಗರಿಕರಾಗಿ ನಮ್ಮ ಪಾತ್ರವನ್ನು ನಿರ್ವಹಿಸಲು ಮತ್ತು ಸರಿಯಾದ ಆಹಾರವನ್ನು ಆಯ್ಕೆ ಮಾಡಲು, ಪ್ರತಿದಿನ ವ್ಯಾಯಾಮ ಮಾಡಲು ಮತ್ತು ನಮ್ಮ ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯದ ಮೇಲೆ ಕೇಂದ್ರೀಕರಿಸಲು ವೈಯಕ್ತಿಕ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ತೆಗೆದುಕೊಳ್ಳಬೇಕು" ಎಂದು ಅವರು ಹೇಳಿದರು.

ಬೊಜ್ಜು ನಿವಾರಿಸಲು, ನಮ್ಮ ಪ್ರಧಾನಮಂತ್ರಿಗಳು ನಮ್ಮ ಆಹಾರಗಳಲ್ಲಿ ಖಾದ್ಯ ತೈಲವನ್ನು  ಶೇಕಡಾ 10 ರಷ್ಟು ಕಡಿಮೆ ಮಾಡುವ ಬಗ್ಗೆ ಮಾತನಾಡಿದ್ದಾರೆ ಎಂದು ಶ್ರೀ ಲ್ಯೂಕೆ ಹೇಳಿದರು. "ನಮಗೆ ಅರಿವು ಮತ್ತು ಸಾವಧಾನತೆ ಬೇಕು ಮತ್ತು ಘರ್-ಕಾ-ಖಾನಾ (ಮನೆಯಲ್ಲಿ ಬೇಯಿಸಿದ ಆಹಾರ)ವನ್ನು ಉತ್ತೇಜಿಸಬೇಕು ಮತ್ತು ಅದಕ್ಕೆ ದೇಶದ ಏಕತೆಯ ಅಗತ್ಯವಿರುತ್ತದೆ, ಪ್ರಧಾನ ಮಂತ್ರಿಯವರ ದೃಷ್ಟಿಕೋನ ಮತ್ತು ಭಾರತವನ್ನು ಆರೋಗ್ಯಕರವಾಗಿಸಲು ನಮ್ಮ ಎಲ್ಲಾ ವೈಯಕ್ತಿಕ ಜವಾಬ್ದಾರಿಯನ್ನು ಇದು ಗೌರವಿಸುತ್ತದೆ" ಎಂದು ಅವರು ಹೇಳಿದರು.

 

 

*****


(Release ID: 2107344) Visitor Counter : 12