ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಚಲನಚಿತ್ರ ಪೋಸ್ಟರ್ ರಚನೆ ಸ್ಪರ್ಧೆ

Posted On: 24 FEB 2025 7:37PM by PIB Bengaluru

ಕಲೆಯು ಚಲನಚಿತ್ರವನ್ನು ಸಂಧಿಸುವ ಸ್ಥಳ

 

ಪರಿಚಯ

ಭಾರತದ ಸಿನಿಮಾದೊಂದಿಗಿನ ಆಳವಾದ ಸಂಪರ್ಕವು ಅದರ ಐಕಾನಿಕ್ ಚಲನಚಿತ್ರ ಪೋಸ್ಟರ್‌ಗಳಲ್ಲಿ ಪ್ರತಿಫಲಿಸುತ್ತದೆ, ಇದು ಕಥೆಗಳು ಮತ್ತು ಭಾವನೆಗಳನ್ನು ಸೆರೆಹಿಡಿಯುತ್ತದೆ. ಈ ಕಲಾ ಪ್ರಕಾರವನ್ನು ಆಚರಿಸಲು ವಿಶ್ವ ಧ್ವನಿ ದೃಶ್ಯ  ಮತ್ತು ಮನರಂಜನಾ ಶೃಂಗಸಭೆ (ವೇವ್ಸ್) 'ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್ ಸೀಸನ್ 1' ರ ಭಾಗವಾಗಿ ಚಲನಚಿತ್ರ ಪೋಸ್ಟರ್ ರಚನೆ ಚಾಲೆಂಜ್ ಅನ್ನು ಪರಿಚಯಿಸುತ್ತಿದೆ. ಎನ್‌ ಎಫ್‌ ಡಿ ಸಿ-ನ್ಯಾಷನಲ್ ಫಿಲ್ಮ್ ಆರ್ಕೈವ್ ಆಫ್ ಇಂಡಿಯಾ, ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ಫಿಲ್ಮ್ ಆರ್ಕೈವ್ಸ್ ಮತ್ತು ಇಮೇಜ್‌ ನೇಷನ್ ಸ್ಟ್ರೀಟ್ ಆರ್ಟ್‌ ನ ಸಹಯೋಗದೊಂದಿಗೆ, ಈ ಸ್ಪರ್ಧೆಯು ಭಾರತೀಯ ಚಲನಚಿತ್ರ ಪೋಸ್ಟರ್‌ ಗಳ ಶ್ರೀಮಂತ ಪರಂಪರೆಯನ್ನು ಎತ್ತಿ ತೋರಿಸುತ್ತದೆ. ಈಗಾಗಲೇ 296 ನೋಂದಣಿಗಳೊಂದಿಗೆ ಚಾಲೆಂಜ್ ಸೃಜನಶೀಲತೆಯ ರೋಮಾಂಚಕ ಪ್ರದರ್ಶನದ ಭರವಸೆ ನೀಡಿದೆ.

ವಿಶ್ವ ಧ್ವನಿ ದೃಶ್ಯ  ಮತ್ತು ಮನರಂಜನಾ ಶೃಂಗಸಭೆ (ವೇವ್ಸ್) ತನ್ನ ಮೊದಲ ಆವೃತ್ತಿಯಲ್ಲಿ ಇಡೀ ಮಾಧ್ಯಮ ಮತ್ತು ಮನರಂಜನಾ ವಲಯದ (ಎಂ&ಇ) ಸಮನ್ವಯಕ್ಕೆ ಒಂದು ವಿಶಿಷ್ಟ ವೇದಿಕೆಯಾಗಿದೆ.

ಈ ಕಾರ್ಯಕ್ರಮವು ಜಾಗತಿಕ ಮಾಧ್ಯಮ ಮತ್ತು ಮನರಂಜನಾ ಉದ್ಯಮದ ಗಮನವನ್ನು ಭಾರತದತ್ತ ಸೆಳೆಯುವ ಮತ್ತು ಅದನ್ನು ಭಾರತೀಯ ಮಾಧ್ಯಮ ಮತ್ತು ಮನರಂಜನಾ ವಲಯ ಮತ್ತು ಅದರ ಪ್ರತಿಭೆಯೊಂದಿಗೆ ಸಂಪರ್ಕಿಸುವ ಗುರಿಯನ್ನು ಹೊಂದಿರುವ ಪ್ರಮುಖ ಜಾಗತಿಕ ಕಾರ್ಯಕ್ರಮವಾಗಿದೆ.

ಈ ಶೃಂಗಸಭೆಯು ಮೇ 1 ರಿಂದ 4, 2025 ರವರೆಗೆ ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ಮತ್ತು ಜಿಯೋ ವರ್ಲ್ಡ್ ಗಾರ್ಡನ್ಸ್‌ನಲ್ಲಿ ನಡೆಯಲಿದೆ. ಪ್ರಸಾರ ಮತ್ತು ಮಾಹಿತಿ ಮನರಂಜನೆ, ಎವಿಜಿಸಿ-ಎಕ್ಸ್‌ ಆರ್ (ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್, ಕಾಮಿಕ್ಸ್ ಮತ್ತು ವಿಸ್ತೃತ ರಿಯಾಲಿಟಿ), ಡಿಜಿಟಲ್ ಮಾಧ್ಯಮ ಮತ್ತು ನಾವೀನ್ಯತೆ ಮತ್ತು ಚಲನಚಿತ್ರಗಳು ಎಂಬ ನಾಲ್ಕು ಸ್ತಂಭಗಳ ಮೇಲೆ ಕೇಂದ್ರೀಕರಿಸುತ್ತದೆ, ಭಾರತದ ಮನರಂಜನಾ ಉದ್ಯಮದ ಭವಿಷ್ಯವನ್ನು ಪ್ರದರ್ಶಿಸಲು ನಾಯಕರು, ಸೃಷ್ಟಿಕರ್ತರು ಮತ್ತು ತಂತ್ರಜ್ಞರನ್ನು ಒಟ್ಟುಗೂಡಿಸುತ್ತದೆ.

ಚಲನಚಿತ್ರ ಪೋಸ್ಟರ್ ರಚನಾ ಸ್ಪರ್ಧೆಯು ನಾಲ್ಕನೇ ಸ್ತಂಭವಾದ ಚಲನಚಿತ್ರಗಳ ಅಡಿಯಲ್ಲಿ ಬರುತ್ತದೆ, ಇದು ಭಾರತೀಯ ಸಿನಿಮಾದ ಸಾರವನ್ನು ಆಚರಿಸುವ ಸುತ್ತ ಕೇಂದ್ರೀಕೃತವಾಗಿದೆ. ಇದು ಐಕಾನಿಕ್ ಚಲನಚಿತ್ರ ಪೋಸ್ಟರ್‌ ಗಳ ಹಿಂದಿನ ಶ್ರೀಮಂತ ಕಲಾತ್ಮಕತೆ ಮತ್ತು ಕರಕುಶಲತೆಯನ್ನು ಎತ್ತಿ ತೋರಿಸುತ್ತದೆ ಮತ್ತು ಸಮಕಾಲೀನ ಪ್ರೇಕ್ಷಕರಿಗಾಗಿ ಅವುಗಳನ್ನು ಮರುಕಲ್ಪಿಸುವತ್ತ ನಿರ್ದಿಷ್ಟ ಗಮನ ಹರಿಸುತ್ತದೆ.

ಸ್ಪರ್ಧೆಯ ವಿಭಾಗಗಳು

ಚಲನಚಿತ್ರ ಪೋಸ್ಟರ್ ರಚನೆ ಸ್ಪರ್ಧೆಯನ್ನು ಎರಡು ವಿಭಾಗಗಳಲ್ಲಿ ನಡೆಸಲಾಗುವುದು:

ಡಿಜಿಟಲ್ ಪೋಸ್ಟರ್ಗಳು

ನೋಂದಣಿ:

ಡಿಜಿಟಲ್ ಪೋಸ್ಟರ್ ವಿಭಾಗವು ಅಕ್ಟೋಬರ್ 1 ರಂದು ಪ್ರಾರಂಭವಾಯಿತು ಮತ್ತು ಮಾರ್ಚ್ 15, 2025 ರವರೆಗೆ ತೆರೆದಿರುತ್ತದೆ. ಭಾಗವಹಿಸುವಿಕೆಗೆ ಯಾವುದೇ ನೋಂದಣಿ ಶುಲ್ಕವಿಲ್ಲ. ನೋಂದಾಯಿಸಲು ಜಾಲತಾಣಕ್ಕೆ ಭೇಟಿ ನೀಡಿ ಮತ್ತು ಚಿತ್ರದಲ್ಲಿ ಪ್ರದರ್ಶಿಸಲಾದ 20 ಶೀರ್ಷಿಕೆಗಳಿಂದ ಒಂದು ಚಲನಚಿತ್ರವನ್ನು ಆಯ್ಕೆಮಾಡಿ:

ಪ್ರಮುಖ ಗಡುವುಗಳು:

ಎಲ್ಲಾ ಪೋಸ್ಟರ್ ಗಳನ್ನು ಟೈಮ್‌ಲೈನ್‌ ನಲ್ಲಿ ಉಲ್ಲೇಖಿಸಲಾದ ನಿರ್ದಿಷ್ಟ ಗಡುವಿನೊಳಗೆ ಸಲ್ಲಿಸಬೇಕು:

  • ಪೋಸ್ಟರ್ ವಿನ್ಯಾಸ ಸಲ್ಲಿಕೆಗಳಿಗೆ ಗಡುವು: ಅಕ್ಟೋಬರ್ 1 - ಮಾರ್ಚ್ 15, 2025
  • ಅಂತಿಮ ಪೋಸ್ಟರ್ ಸಲ್ಲಿಸಬೇಕಾದ ದಿನಾಂಕ: ಮಾರ್ಚ್ 15, 2025
  • ವಿಜೇತರ ಘೋಷಣೆ: ಏಪ್ರಿಲ್ 1, 2025
  • ಆಯ್ದ ಕಲಾವಿದರ ಪ್ರದರ್ಶನ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ: ಏಪ್ರಿಲ್, 2025

ಪೋಸ್ಟರ್ ಸಲ್ಲಿಕೆಯ ವಿವರಗಳು:

ನಿಮ್ಮ ಪೋಸ್ಟರ್ ಅನ್ನು CMYK ಯಲ್ಲಿ 300 DPI ನಲ್ಲಿ JPEG/PNG ಫೈಲ್ ಆಗಿ ಅಪ್‌ಲೋಡ್ ಮಾಡಬೇಕು. ಪೋಸ್ಟರ್ ವರ್ಟಿಕಲ್‌ ಓರಿಯೆಂಟೇಷನ್‌ ನಲ್ಲಿರಬೇಕು.

  • ಪ್ರಮಾಣಿತ ಗಾತ್ರ: 24 x 36 ಇಂಚುಗಳು (ಆಕಾರ ಅನುಪಾತ 2:3)
  • ಪರ್ಯಾಯ ಗಾತ್ರ: 18 x 24 ಇಂಚುಗಳು (ಆಕಾರ ಅನುಪಾತ 3:4)
  • ಗರಿಷ್ಠ ಫೈಲ್ ಗಾತ್ರ: 10 ಎಂಬಿ
  • ಈ ಕೆಳಗಿನ ಫೈಲ್ ಹೆಸರಿನ ಮಾದರಿಯೊಂದಿಗೆ ಪೋಸ್ಟರ್‌ ಅನ್ನು ಹೆಸರಿಸಿ: artistname_filmmame_year_waves2024.jpeg

ಪ್ರಶಸ್ತಿಗಳು ಮತ್ತು ಮನ್ನಣೆ:

ಅತ್ಯುತ್ತಮ ಡಿಜಿಟಲ್ ಪೋಸ್ಟರ್‌ ಗಳನ್ನು ಗುರುತಿಸಲಾಗುವುದು ಮತ್ತು ವೇವ್ಸ್ ಶೃಂಗಸಭೆಯಲ್ಲಿ ಪ್ರದರ್ಶಿಸಲಾಗುವ ಅಗ್ರ 20 ಆಯ್ದ ಪೋಸ್ಟರ್‌ ಗಳಲ್ಲಿ 3 ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆಯುತ್ತವೆ. ನಗದು ಬಹುಮಾನಗಳು ಮತ್ತು ಡಿಜಿಟಲ್ ಪ್ರಶಂಸಾ ಪ್ರಮಾಣಪತ್ರಗಳನ್ನು ನೀಡಲಾಗುವುದು. ವಿವರಗಳು ಇಲ್ಲಿವೆ:

ಕೈಯಿಂದ ಚಿತ್ರಿಸಿದ ಪೋಸ್ಟರ್ಗಳು

ನೋಂದಣಿ

ಆಯ್ದ ಕಲಾ ಸಂಸ್ಥೆಗಳ ಮೂಲಕ ಕೈಯಿಂದ ಚಿತ್ರಿಸಿದ ಚಲನಚಿತ್ರ ಪೋಸ್ಟರ್ ತಯಾರಿಕೆ ಸ್ಪರ್ಧೆಯಲ್ಲಿ ಅಭ್ಯರ್ಥಿಗಳು ಭಾಗವಹಿಸಬಹುದು. ಸ್ಪರ್ಧೆಯನ್ನು ಆಯೋಜಿಸಲು ಆಸಕ್ತಿ ಹೊಂದಿರುವ ಸಂಸ್ಥೆಗಳು imagenationstreeart[at]gmail[dot]com ಗೆ nfaifilmcircle@nfdcindia ನೊಂದಿಗೆ cc ಯಲ್ಲಿ ಇಮೇಲ್ ಮಾಡಬಹುದು.

  • ಪೋಸ್ಟರ್‌ ಗಳು ಡಿಜಿಟಲ್ ಪೋಸ್ಟರ್ ತಯಾರಿಕೆ ಪಟ್ಟಿಯಲ್ಲಿರುವಂತೆಯೇ 20 ಚಲನಚಿತ್ರ ಶೀರ್ಷಿಕೆಗಳನ್ನು ಆಧರಿಸಿರಬೇಕು.
  • ಪ್ರತಿ ಸಂಸ್ಥೆಯು ಸೆಮಿಫೈನಲ್‌ ನಲ್ಲಿ ಪ್ರತಿನಿಧಿಸಲು ತಮ್ಮ ಆಂತರಿಕ ಸ್ಪರ್ಧೆಯಿಂದ ಮೂವರು ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತದೆ.
  • ಈ ಸ್ಪರ್ಧೆಯು ಸಂಸ್ಥೆಗಳಿಗೆ ಮಾತ್ರ ಸೀಮಿತವಾಗಿದೆ ಮತ್ತು ವೈಯಕ್ತಿಕ ಭಾಗವಹಿಸುವವರಿಗೆ ಇರುವುದಿಲ್ಲ.

ಪ್ರಮುಖ ಗಡುವುಗಳು:

  • ಆಂತರಿಕ ಕಾಲೇಜು ಸ್ಪರ್ಧೆ: ನವೆಂಬರ್ 1 - ಮಾರ್ಚ್ 15, 2025
  • ಶಾರ್ಟ್‌ ಲಿಸ್ಟ್ ಮಾಡಿದ ಅಭ್ಯರ್ಥಿಗಳ ಘೋಷಣೆ: ಏಪ್ರಿಲ್ 1, 2025

ಪ್ರಶಸ್ತಿಗಳು ಮತ್ತು ಮನ್ನಣೆ:

ಸಲ್ಲಿಸಲಾದ ಎಲ್ಲಾ ನಮೂದುಗಳಿಂದ ತೀರ್ಪುಗಾರರ ಮೂಲಕ ಆಯ್ಕೆ ಮಾಡಲಾದ ಒಟ್ಟು 25 ಆಯ್ದ ಕಲಾವಿದರು ನೇರ ಕಾರ್ಯಕ್ರಮದಲ್ಲಿ ಸ್ಪರ್ಧಿಸಲಿದ್ದಾರೆ. ಅವರು ವೇವ್ಸ್‌ ಶೃಂಗಸಭೆಯಲ್ಲಿ ನಿಗದಿತ ಸಮಯದೊಳಗೆ ಕೈಯಿಂದ ಚಿತ್ರಿಸಿದ ಪೋಸ್ಟರ್‌ ಗಳನ್ನು ರಚಿಸುತ್ತಾರೆ, ಇದರಲ್ಲಿ ಮೊದಲ ಮೂರು ಪೋಸ್ಟರ್‌ ಗಳು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆಯುತ್ತವೆ. ಪ್ರಶಸ್ತಿಗಳಲ್ಲಿ 50,000 ರೂ. ಪ್ರಥಮ ಬಹುಮಾನ, 30,000 ರೂ. ಎರಡನೇ ಬಹುಮಾನ ಮತ್ತು 10,000 ರೂ. ನ ಮೂರನೇ ಬಹುಮಾನ ಸೇರಿವೆ, ಜೊತೆಗೆ ಮೊದಲ ಮೂರು ವಿಜೇತರಿಗೆ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ. ಹೆಚ್ಚುವರಿಯಾಗಿ, ಉಳಿದ ಭಾಗವಹಿಸುವವರಿಗೆ ಡಿಜಿಟಲ್ ಪ್ರಶಂಸಾ ಪ್ರಮಾಣಪತ್ರವನ್ನು ಅವರ ನಗದು ಬಹುಮಾನಗಳೊಂದಿಗೆ ನೀಡಲಾಗುತ್ತದೆ.

ನೋಂದಣಿ

ಸ್ಪರ್ಧೆಯ ನೋಂದಣಿ ಫೆಬ್ರವರಿ 5, 2025 ರಂದು ಪ್ರಾರಂಭವಾಯಿತು ಮತ್ತು ಮಾರ್ಚ್ 5, 2025 ರಂದು ಮುಕ್ತಾಯಗೊಳ್ಳುತ್ತದೆ. ಭಾಗವಹಿಸುವಿಕೆಗೆ ಯಾವುದೇ ಶುಲ್ಕವಿಲ್ಲ, ಮತ್ತು ಜಾಲತಾಣದಲ್ಲಿ ಒದಗಿಸಲಾದ ಲಿಂಕ್ ಮೂಲಕ ನೋಂದಾಯಿಸಿಕೊಳ್ಳಬಹುದು ಮತ್ತು ನಿಮ್ಮ ಪೋಸ್ಟರ್‌ ಅನ್ನು ಸಲ್ಲಿಸಬಹುದು. ನಿಮ್ಮ ಪೋಸ್ಟರ್ ರಚಿಸಲು ಲಭ್ಯವಿರುವ 10 ಶೀರ್ಷಿಕೆಗಳಿಂದ ಒಂದು ಚಲನಚಿತ್ರವನ್ನು ಆರಿಸಿಕೊಳ್ಳಬೇಕು.

ಪ್ರಮುಖ ಗಡುವುಗಳು:

ಎಲ್ಲಾ ಪೋಸ್ಟರ್ ಗಳನ್ನು ಟೈಮ್‌ಲೈನ್‌ ನಲ್ಲಿ ಉಲ್ಲೇಖಿಸಲಾದ ನಿರ್ದಿಷ್ಟ ಗಡುವಿನೊಳಗೆ ಸಲ್ಲಿಸಬೇಕು:

  • ನೋಂದಣಿ ಮತ್ತು ಸಲ್ಲಿಕೆ ಅವಧಿ: ಫೆಬ್ರವರಿ 5, 2025 - ಮಾರ್ಚ್ 5, 2025
  • ವಿಜೇತರ ಘೋಷಣೆ: ಏಪ್ರಿಲ್ 1, 2025
  • ಪ್ರದರ್ಶನ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ: ಏಪ್ರಿಲ್ 2025

ಅರ್ಹತಾ ಮಾನದಂಡಗಳು:

  • ಭಾರತದ ಹೊರಗಿನ ಯಾವುದೇ ರಾಷ್ಟ್ರೀಯತೆಯ ವ್ಯಕ್ತಿಗಳಿಗೆ ಮುಕ್ತವಾಗಿದೆ.
  • ಭಾಗವಹಿಸುವವರು 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿರಬೇಕು.

ಪೋಸ್ಟರ್ಸಲ್ಲಿಕೆಗೆ ವಿವರಗಳು:

ನಿಮ್ಮ ಪೋಸ್ಟರ್ ಅನ್ನು CMYK ಯಲ್ಲಿ 300 DPI ನಲ್ಲಿ JPEG/PNG ಫೈಲ್ ಆಗಿ ಅಪ್‌ಲೋಡ್ ಮಾಡಬೇಕು. ಪೋಸ್ಟರ್ ವರ್ಟಿಕಲ್‌ ಓರಿಯೆಂಟೇಷನ್‌ ನಲ್ಲಿರಬೇಕು.

  • ಪ್ರಮಾಣಿತ ಗಾತ್ರ: 24 x 36 ಇಂಚುಗಳು (ಆಕಾರ ಅನುಪಾತ 2:3)
  • ಪರ್ಯಾಯ ಗಾತ್ರ: 18 x 24 ಇಂಚುಗಳು (ಆಕಾರ ಅನುಪಾತ 3:4)
  • ಗರಿಷ್ಠ ಫೈಲ್ ಗಾತ್ರ: 10 ಎಂಬಿ

ಪ್ರಶಸ್ತಿಗಳು ಮತ್ತು ಮನ್ನಣೆ:

ಅಂತರರಾಷ್ಟ್ರೀಯ ಡಿಜಿಟಲ್ ಪೋಸ್ಟರ್ ತಯಾರಿಕೆ ಸ್ಪರ್ಧೆಯು ಅತ್ಯುತ್ತಮ ಸೃಜನಶೀಲತೆಯನ್ನು ಗುರುತಿಸಿ ಪ್ರಶಸ್ತಿಗಳು ಮತ್ತು ಅಸಾಧಾರಣ ಪೋಸ್ಟರ್‌ ಗಳಿಗೆ ಮನ್ನಣೆ ನೀಡುವ ಮೂಲಕ ಆಚರಿಸುತ್ತದೆ. ಪ್ರಮುಖ ಮುಖ್ಯಾಂಶಗಳು ಇಲ್ಲಿವೆ:

  • ಆಯ್ಕೆಯಾದ ಅಗ್ರ 20 ಡಿಜಿಟಲ್ ಪೋಸ್ಟರ್‌ ಗಳನ್ನು ವೇವ್ಸ್ ಶೃಂಗಸಭೆಯಲ್ಲಿ ಪ್ರದರ್ಶಿಸಲಾಗುತ್ತದೆ.
  • ಪ್ರದರ್ಶನದ ಅಗ್ರ 3 ಪೋಸ್ಟರ್‌ ಗಳನ್ನು ಪ್ರತಿಷ್ಠಿತ ಪ್ರಶಸ್ತಿಗಳೊಂದಿಗೆ ಗೌರವಿಸಲಾಗುತ್ತದೆ.
  • ಪ್ರಶಸ್ತಿಗಳ ಕುರಿತು ಹೆಚ್ಚುವರಿ ವಿವರಗಳನ್ನು ಶೀಘ್ರದಲ್ಲೇ ಘೋಷಿಸಲಾಗುವುದು.

ಮುಕ್ತಾಯ

ವೇವ್ಸ್‌ ನಲ್ಲಿ ನಡೆಯುವ ಚಲನಚಿತ್ರ ಪೋಸ್ಟರ್ ತಯಾರಿಕೆ ಸ್ಪರ್ಧೆಯು ಡಿಜಿಟಲ್ ಮತ್ತು ಕೈಯಿಂದ  ಚಿತ್ರಿಸಿದ ಕಲಾ ಪ್ರಕಾರಗಳಲ್ಲಿ ಸೃಜನಶೀಲತೆಯನ್ನು ಆಚರಿಸಲು ಮತ್ತು ಪ್ರದರ್ಶಿಸಲು ಒಂದು ಅನನ್ಯ ಅವಕಾಶವನ್ನು ನೀಡುತ್ತದೆ. ಈ ವೇದಿಕೆಯ ಮೂಲಕ ಪ್ರಪಂಚದಾದ್ಯಂತದ ಕಲಾವಿದರು  ಪರಸ್ಪರ ಸಂಪರ್ಕ ಸಾಧಿಸಬಹುದು, ರಚಿಸಬಹುದು ಮತ್ತು ಮನರಂಜನಾ ಉದ್ಯಮದ ರೋಮಾಂಚಕ ಭವಿಷ್ಯದ ಭಾಗವಾಗಬಹುದು, ಇದು ಮೇ 2025 ರಲ್ಲಿ ನಡೆಯುವ ವೇವ್ಸ್‌ ಶೃಂಗಸಭೆಯಲ್ಲಿ ಪ್ರತಿಷ್ಠಿತ ಪ್ರದರ್ಶನ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೊನೆಗೊಳ್ಳುತ್ತದೆ.

 

ಉಲ್ಲೇಖಗಳು:

 

Click here to download PDF

 

*****

 


(Release ID: 2106066) Visitor Counter : 18