ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಯುವ ಪೀಳಿಗೆಯನ್ನು ಸಾಂಸ್ಕೃತಿಕ ಉಪಕ್ರಮಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ, ಆಕಾಶವಾಣಿಯ ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತದ ಶ್ರೀಮಂತ ಮತ್ತು ವೈವಿಧ್ಯಮಯ ಮೊಸಾಯಿಕ್ 'ಹರ್ ಕಾಂತ್ ಮೇ ಭಾರತ್' ಸರಣಿಯು ಯಶಸ್ವಿ ಮುಕ್ತಾಯ
ಕೇಳುಗರಿಂದ ಅಗಾಧ ಪ್ರತಿಕ್ರಿಯೆಯು ಶಾಸ್ತ್ರೀಯ ಸಂಗೀತದ ಸಾರ್ವಕಾಲಿಕ ಆಕರ್ಷಣೆ ಪುನರುಚ್ಛಾರ: ಭವಿಷ್ಯದಲ್ಲಿ ಇಂತಹ ಹೆಚ್ಚಿನ ಶ್ರೀಮಂತ ಕಂಟೆಂಟ್ ಭರವಸೆ ನೀಡಿದ ಆಕಾಶವಾಣಿ
Posted On:
18 FEB 2025 10:39PM by PIB Bengaluru
ಆಕಾಶವಾಣಿ, ಸಂಸ್ಕೃತಿ ಸಚಿವಾಲಯದ ಸಹಯೋಗದೊಂದಿಗೆ 15 ಕಂತುಗಳ ಶಾಸ್ತ್ರೀಯ ಸಂಗೀತ ಸರಣಿ "ಹರ್ ಕಾಂತ್ ಮೇ ಭಾರತ್" ಅನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿದೆ. ಈ ಸರಣಿಯು 2025ರ ಫೆಬ್ರವರಿ 2 ರಂದು ವಸಂತ ಪಂಚಮಿಯ ಶುಭ ಸಂದರ್ಭದಲ್ಲಿ ಆರಂಭವಾಯಿತು. ಅದನ್ನು ದೇಶಾದ್ಯಂತ 21 ಆಕಾಶವಾಣಿ ಕೇಂದ್ರಗಳಿಂದ ಪ್ರತಿದಿನ ಬೆಳಿಗ್ಗೆ 9:30 ಕ್ಕೆ ಪ್ರಸಾರ ಮಾಡಲಾಯಿತು ಮತ್ತು 2025ರ ಫೆಬ್ರವರಿ 16 ರಂದು ಯಶಸ್ವಿಯಾಗಿ ಮುಕ್ತಾಯಗೊಂಡಿತು.

'ಹರ್ ಕಾಂತ್ ಮೇ ಭಾರತ್' ಅನ್ನು ಭಾರತೀಯ ಶಾಸ್ತ್ರೀಯ ಸಂಗೀತದ ಶ್ರೀಮಂತ ಮತ್ತು ವೈವಿಧ್ಯಮಯ ಪರಂಪರೆಯನ್ನು ಪ್ರದರ್ಶಿಸಲು ಸೂಕ್ಷ್ಮ ರೀತಿಯಲ್ಲಿ ಪ್ರಸುತಪಡಿಸಲಾಯಿತು. ಇದು ದೇಶಾದ್ಯಂತದ ಗೌರವಾನ್ವಿತ ಕಲಾವಿದರಿಂದ ಗಾಯನ ಮತ್ತು ವಾದ್ಯ ಪ್ರದರ್ಶನಗಳನ್ನು ಒಳಗೊಂಡಿತ್ತು. ಈ ಸರಣಿಯು ದೇಶಾದ್ಯಂತದ ಕೇಳುಗರೊಂದಿಗೆ ಪ್ರತಿಧ್ವನಿಸಿತು, ಸಾಂಸ್ಕೃತಿಕವಾಗಿ ತಲ್ಲೀನಗೊಳಿಸುವ ಅನುಭವ ಒದಗಿಸಿತು ಮತ್ತು ಭಾರತದ ಆಳವಾದ ಬೇರೂರಿರುವ ಸಂಗೀತ ಪರಂಪರೆಗೆ ಜನರನ್ನು ಮತ್ತಷ್ಟು ಸನಿಹಕ್ಕೆ ತಂದಿತು.

ಪಂಡಿತ್ ಉಮಾಕಾಂತ್ ಗುಂಡೇಚಾ ಮತ್ತು ಅನಂತ್ ಗುಂಡೇಚಾ ಧ್ರುಪದ್ ಪ್ರದರ್ಶನ - ಆಕಾಶವಾಣಿ ಭೋಪಾಲ್
ಭವಿಷ್ಯಕ್ಕಾಗಿ ಪ್ರದರ್ಶನ ಕಲೆಗಳ ಸಬಲೀಕರಣಗೊಳಿಸುವ ಸಹಯೋಗ
ಆಕಾಶವಾಣಿ ಮತ್ತು ಸಂಸ್ಕೃತಿ ಸಚಿವಾಲಯದ ಈ ಸಹಯೋಗದ ಪ್ರಯತ್ನಕ್ಕೆ ದೇಶಾದ್ಯಂತ ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಸಾಂಸ್ಕೃತಿಕ ಪರಂಪರೆಯನ್ನು ಉತ್ತೇಜಿಸುವಲ್ಲಿ ಆಕಾಶವಾಣಿಯ ಐತಿಹಾಸಿಕ ಪಾತ್ರವು ಅಂತಹ ಸೃಜನಶೀಲ ಪಾಲುದಾರಿಕೆಗಳೊಂದಿಗೆ ನಿಜಕ್ಕೂ ಹೊಸ ಎತ್ತರವನ್ನು ಮುಟ್ಟಿದೆ ಮತ್ತು ಕಲಾತ್ಮಕ ಅಭಿವ್ಯಕ್ತಿಗೆ ಹೊಸ ಅವಕಾಶಗಳನ್ನು ತೆರೆಯಿತು. ಸಮಕಾಲೀನ ಯುಗದಲ್ಲಿ ಪ್ರದರ್ಶನ ಕಲೆಗಳನ್ನು ಸಂರಕ್ಷಿಸುವ ಮತ್ತು ಯುವ ಪೀಳಿಗೆಯನ್ನು ಸಾಂಸ್ಕೃತಿಕ ಉಪಕ್ರಮಗಳಲ್ಲಿ ತೊಡಗಿಸಿಕೊಳ್ಳುವ ಮಹತ್ವವನ್ನು ಸಹಯೋಗದ ಹಿಂದಿನ ದೂರದೃಷ್ಟಿಯು ಒತ್ತಿಹೇಳುತ್ತದೆ.
ಶಾಸ್ತ್ರೀಯ ಕಲೆಗಳಿಗೆ 15 ದಿನಗಳ ಗೌರವ
15 ದಿನಗಳ ವೇಳಾಪಟ್ಟಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ನಗರಗಳಾದ್ಯಂತ ಭಾರತೀಯ ಶಾಸ್ತ್ರೀಯ ಸಂಗೀತದ ಹಿಂದೂಸ್ತಾನಿ ಮತ್ತು ಕರ್ನಾಟಕ ಶೈಲಿಗಳೆರಡರಿಂದಲೂ ಪ್ರದರ್ಶನ ಕಲೆ ಮತ್ತು ಕಲಾವಿದರ ಶ್ರೀಮಂತ ಸಂಗೀತದ ಬಗ್ಗೆ ಆಳವಾದ ಒಳನೋಟಗಳು ಕಾಣಬಹುದಾಗಿದೆ. ಕೆಲವು ಉದಾಹರಣೆಗಳನ್ನು ಉಲ್ಲೇಖಿಸುವುದಾದರೆ, ಆಕಾಶವಾಣಿ ಜಲಂಧರ್ ಮೋಹನ್ ಶ್ಯಾಮ್ ಶರ್ಮಾ ಅವರ ಪಖವಾಜ್ ಗಾಯನದೊಂದಿಗೆ ಸರಣಿಯನ್ನು ಆರಂಭಿಸಿದರು, ಆಕಾಶವಾಣಿ ಪುಣೆ ಪ್ರಜಕ್ತ ಮರಾಠೆ ಅವರ ಗಾಯನದೊಂದಿಗೆ ಪಾದಾರ್ಪಣೆ ಮಾಡಿತು. ಆಕಾಶವಾಣಿ ಚೆನ್ನೈ ರುಕ್ಮಿಣಿ ಕಣ್ಣನ್ ಅವರ ವೀಣಾ ವಾದನದೊಂದಿಗೆ ಲಯವನ್ನು ಮುಂದುವರೆಸಿತು. ಪೂರ್ವಕ್ಕೆ ಸಾಗುವ ಆಕಾಶವಾಣಿ ಕಟಕ್, ಪಂಡಿತ್ ದೇಬಾ ಪ್ರಸಾದ್ ಚಕ್ರವರ್ತಿ ಅವರ ಸಿತಾರ್ ವಾದನನವನ್ನು ಪ್ರಸ್ತುತಪಡಿಸಿತು. ಆಕಾಶವಾಣಿ ತ್ರಿಶೂರ್ ಕೂಡ ಎಸ್. ಪದ್ಮಾ ಅವರ ಪಿಟೀಲು ವಾದನ ಮಾಧುರ್ಯಕ್ಕೆ ಜೀವ ತುಂಬಿತು.
ಸರಣಿಯ ಸಮಯದಲ್ಲಿ, ಇಂದೋರ್, ಧಾರವಾಡ, ಅಗರ್ತಲ, ಲಕ್ನೋ ಮತ್ತು ಗುವಾಹಟಿಯ ಆಕಾಶವಾಣಿಗಳು ಸಾರಂಗ್ ಫಾಗ್ರೆ ಅವರ ಗಾಯನ, ರಾಜ್‌ಕಮಲ್ ನಾಗರಾಜ್ ಅವರ ಕೊಳಲು ವಾದನ, ಗೀತಾ ರಮಾನಂದ ಅವರ ವೀಣಾ ವಾದನ, ಎಚ್.ಎಸ್. ಸುಧೀಂದ್ರ ಅವರ ಮೃದಂಗ ವಾದನ, ಟಿ.ಎಸ್. ಕೃಷ್ಣಮೂರ್ತಿ ಅವರ ಪಿಟೀಲು ವಾದನ, ಶಿಲ್ಪಾ ಶಶಿಧರ್ ಅವರ ಗಾಯನ ಮತ್ತು ಪ್ರಕಾಶ್ ಸೊಂಟಕ್ಕಿ ಅವರ ಹವಾಯಿಯನ್ ಗಿಟಾರ್ ವಾದನದ ಸ್ವರಗಳಿಗೆ ಪ್ರತಿಧ್ವನಿಸಿದವು. ಇವು ಕೆಲವೇ ಕೆಲವು ಉದಾಹರಣೆಗಳಷ್ಟೇ.

ಆಕಾಶವಾಣಿ ತಿರುವನಂತಪುರಂನಲ್ಲಿ ಕೆ.ಜಿ. ರಾಮಕೃಷ್ಣನ್ ಮೃದಂಗದ ಕುರಿತು ಲಯವಿನ್ಯಾಸ ಪ್ರಸ್ತುತಪಡಿಸಿದರು
ಕೇಳುಗರಿಗೆ ಸ್ಫೂರ್ತಿ ನೀಡಿದ 'ಹರ್ ಕಾಂತ್ ಮೇ ಭಾರತ್'
'ಹರ್ ಕಾಂತ್ ಮೇ ಭಾರತ್' ತನ್ನ ಪ್ರಸಾರದ ಉದ್ದಕ್ಕೂ ಕೇಳುಗರಿಂದ ಅಗಾಧ ಸ್ಪಂದನೆಯನ್ನು ಪಡೆಯಿತು, ಭಾರತೀಯ ಶಾಸ್ತ್ರೀಯ ಸಂಗೀತದ ಸಾರ್ವಕಾಲಿಕ ಆಕರ್ಷಣೆಯನ್ನು ಪುನರುಚ್ಚರಿಸಿತು. ಆಕಾಶವಾಣಿ ಮತ್ತು ಸಂಸ್ಕೃತಿ ಸಚಿವಾಲಯವು ಭಾರತದ ಶ್ರೀಮಂತ ಸಂಗೀತ ಸಂಪ್ರದಾಯಗಳನ್ನು ಉತ್ತೇಜಿಸಲು ಬದ್ಧವಾಗಿದೆ ಮತ್ತು ಭವಿಷ್ಯದಲ್ಲಿ ಪ್ರೇಕ್ಷಕರಿಗೆ ಇಂತಹ ಹೆಚ್ಚಿನ ಶ್ರೀಮಂತ ವಿಷಯಗಳನ್ನು (ಕೆಂಟೆಂಟ್) ನೀಡಲು ಎದುರು ನೋಡುತ್ತಿದೆ.
*****
(Release ID: 2104638)
Visitor Counter : 12