ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಫ್ರಾನ್ಸ್‌ ಮತ್ತು ಅಮೆರಿಕಾ ಪ್ರವಾಸಕ್ಕೂ ಮುನ್ನ ಪ್ರಧಾನಮಂತ್ರಿ ಅವರ ನಿರ್ಗಮನ ಹೇಳಿಕೆ

Posted On: 10 FEB 2025 12:00PM by PIB Bengaluru

ಅಧ್ಯಕ್ಷರಾದ ಮ್ಯಾಕ್ರನ್ ಅವರ ಆಹ್ವಾನದ ಮೇರೆಗೆ ನಾನು ಫೆಬ್ರವರಿ 10 ರಿಂದ 12 ರವರೆಗೆ ಫ್ರಾನ್ಸ್‌ಗೆ ಭೇಟಿ ನೀಡುತ್ತಿದ್ದೇನೆ. ಪ್ಯಾರಿಸ್‌ನಲ್ಲಿ ವಿಶ್ವ ನಾಯಕರು ಮತ್ತು ಜಾಗತಿಕ ತಂತ್ರಜ್ಞಾನ ಸಿಇಒಗಳ ಸಭೆಯಾದ ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟಲಿಜೆನ್ಸ್) ಕ್ರಿಯಾ ಶೃಂಗಸಭೆಯ ಸಹ-ಅಧ್ಯಕ್ಷತೆಯನ್ನು ವಹಿಸಲು ನಾನು ಎದುರು ನೋಡುತ್ತಿದ್ದೇನೆ. ಅಲ್ಲಿ ನಾವು ನಾವೀನ್ಯತೆ ಮತ್ತು ಸಾರ್ವಜನಿಕ ಒಳಿತಿಗಾಗಿ ದೊಡ್ಡ ಮಟ್ಟದಲ್ಲಿ ಎಐ ತಂತ್ರಜ್ಞಾನಕ್ಕೆ ಸಹಯೋಗದ ವಿಧಾನದ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲಿದ್ದೇವೆ.

ನನ್ನ ಭೇಟಿಯ ವೇಳೆ ದ್ವಿಪಕ್ಷೀಯ ವಲಯದಲ್ಲಿ ನನ್ನ ಸ್ನೇಹಿತ ಅಧ್ಯಕ್ಷರಾದ ಮ್ಯಾಕ್ರನ್ ಅವರೊಂದಿಗೆ ಭಾರತ-ಫ್ರಾನ್ಸ್ ಕಾರ್ಯತಂತ್ರದ ಪಾಲುದಾರಿಕೆಗಾಗಿ 2047ರ ಹೊರೈಜಾನ್ ನೀಲನಕ್ಷೆಯ ಪ್ರಗತಿ ಪರಿಶೀಲನೆ ಮಾಡುವ ಅವಕಾಶವನ್ನು ಒದಗಿಸುತ್ತದೆ. ಫ್ರಾನ್ಸ್‌ನಲ್ಲಿ ಮೊದಲ ಭಾರತೀಯ ರಾಯಭಾರ ಕಚೇರಿಯನ್ನು ಉದ್ಘಾಟಿಸಲು ನಾವು ಐತಿಹಾಸಿಕ ಫ್ರೆಂಚ್ ನಗರವಾದ ಮಾರ್ಸಿಲ್ಲೆಗೆ ಪ್ರಯಾಣಿಸುತ್ತೇವೆ ಮತ್ತು ಜಾಗತಿಕ ಒಳಿತಿಗಾಗಿ ಇಂಧನವನ್ನು ಬಳಸಿಕೊಳ್ಳಲು ಫ್ರಾನ್ಸ್ ಸೇರಿದಂತೆ ಪಾಲುದಾರ ರಾಷ್ಟ್ರಗಳ ಒಕ್ಕೂಟದ ಸದಸ್ಯರಾಗಿರುವ ಅಂತಾರಾಷ್ಟ್ರೀಯ ಅಣು ಇಂಧನ (ಥರ್ಮೋನ್ಯೂಕ್ಲಿಯರ್) ಪ್ರಾಯೋಗಿಕ ರಿಯಾಕ್ಟರ್ ಯೋಜನೆಗೂ ಸಹ ಭೇಟಿ ಮಾಡುತ್ತೇವೆ. ನಾನು ಮಜಾರ್ಗ್ಸ್ ಯುದ್ಧ ಸ್ಮಾರಕದಲ್ಲಿ ಮೊದಲ ಮತ್ತು ಎರಡನೇ ಮಹಾಯುದ್ಧಗಳ ಸಮಯದಲ್ಲಿ ಹುತಾತ್ಮರಾದ ಭಾರತೀಯ ಸೈನಿಕರಿಗೆ  ಗೌರವ ನಮನ ಸಲ್ಲಿಸಲಿದ್ದೇನೆ.

ಫ್ರಾನ್ಸ್‌ನಿಂದ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಅವರ ಆಹ್ವಾನದ ಮೇರೆಗೆ ನಾನು ಎರಡು ದಿನಗಳ ಕಾಲ ಅಮೆರಿಕಾ ಭೇಟಿಗೆ ತೆರಳುತ್ತಿದ್ದೇನೆ. ನನ್ನ ಸ್ನೇಹಿತ ಅಧ್ಯಕ್ಷ ಟ್ರಂಪ್ ಅವರನ್ನು ಭೇಟಿ ಮಾಡಲು ನಾನು ಎದುರು ನೋಡುತ್ತಿದ್ದೇನೆ. ಜನವರಿಯಲ್ಲಿ ಅವರ ಐತಿಹಾಸಿಕ ಚುನಾವಣಾ ಗೆಲುವು ಮತ್ತು ಅಧಿಕಾರ ಸ್ವೀಕಾರದ ನಂತರ ಇದೇ ಮೊದಲ ಬಾರಿಗೆ ನಮ್ಮ ಭೇಟಿಯಾಗಿದ್ದರೂ ಸಹ ಭಾರತ ಮತ್ತು ಯುಎಸ್ ನಡುವೆ ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ನಿರ್ಮಿಸುವಲ್ಲಿ ಅವರ ಮೊದಲ ಅವಧಿಯಲ್ಲಿ ಒಗ್ಗೂಡಿ ಕೆಲಸ ಮಾಡಿದ ನೆನಪುಗಳು ನನಗೆ ಮರುಕಳಿಸುತ್ತಿವೆ.

ಈ ಭೇಟಿಯು ಅವರ ಮೊದಲ ಅವಧಿಯಲ್ಲಿ ನಮ್ಮ ಸಹಯೋಗದ ಯಶಸ್ಸಿನ ಮೇಲೆ ಮತ್ತಷ್ಟು ಸಾಧಿಸಲು ಮತ್ತು ತಂತ್ರಜ್ಞಾನ, ವ್ಯಾಪಾರ, ರಕ್ಷಣೆ, ಇಂಧನ ಮತ್ತು ಪೂರೈಕೆ ಸರಣಿ, ಸ್ಥಿತಿಸ್ಥಾಪಕತ್ವ ವಲಯಗಳನ್ನು ಒಳಗೊಂಡಂತೆ ನಮ್ಮ ಪಾಲುದಾರಿಕೆಯನ್ನು ಮತ್ತಷ್ಟು ಉನ್ನತೀಕರಿಸಲು ಮತ್ತು ಗಾಢವಾಗಿಸಲು ನೀಲನಕ್ಷೆಯನ್ನು ಅಭಿವೃದ್ಧಿಪಡಿಸಲು ಒಂದು ಅವಕಾಶವಾಗಿದೆ. ನಮ್ಮ ಎರಡೂ ದೇಶಗಳ ಜನರ ಪರಸ್ಪರ ಪ್ರಯೋಜನಕ್ಕಾಗಿ ನಾವು ಒಗ್ಗೂಡಿ ಕಾರ್ಯನಿರ್ವಹಿಸುತ್ತೇವೆ ಮತ್ತು ಇಡೀ ವಿಶ್ವಕ್ಕೆ ಉತ್ತಮ ಭವಿಷ್ಯವನ್ನು ರೂಪಿಸುತ್ತೇವೆ.

 

*****

                                                                 


(Release ID: 2101261) Visitor Counter : 42