ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಈ ದೇಶದಲ್ಲಿ ಪ್ರಾದೇಶಿಕತೆ ಮತ್ತು ರಾಷ್ಟ್ರೀಯತೆಯ ಚರ್ಚೆ ನಡೆಯುತ್ತಿರುವುದಾರೂ ಹೇಗೆ? - ಉಪರಾಷ್ಟ್ರಪತಿ


ಇತ್ತೀಚಿನ ವರ್ಷಗಳಲ್ಲಿ, ದೇಶ ವಿರೋಧಿ ಭಾವನೆಗಳನ್ನು ಉತ್ತೇಜಿಸಲು ಹಣವನ್ನು ಬಳಸಲಾಗುತ್ತಿದೆ ಮತ್ತು ನ್ಯಾಯಾಂಗದ ಪ್ರವೇಶವನ್ನು ಅಸ್ತ್ರವನ್ನಾಗಿಸಿಕೊಳ್ಳಲಾಗುತ್ತಿದೆ- ಉಪರಾಷ್ಟ್ರಪತಿ

ಇಂದು ನಾವು ನಮ್ಮ ಸಾಂಸ್ಕೃತಿಕ ತಾತ್ವಿಕತೆಯನ್ನು ಪಾಲಿಸಬೇಕಾಗಿದೆ; ನಾವು ಬೆಳೆಯುತ್ತಿರುವ ರೆಂಬೆಯನ್ನು ನಾವೇ ಕತ್ತರಿಸಲು ಪ್ರಯತ್ನಿಸುತ್ತಿದ್ದೇವೆ - ಉಪರಾಷ್ಟ್ರಪತಿ

ದೇಶದೊಳಗೆ ಚುನಾವಣಾ ಪ್ರಕ್ರಿಯೆಯನ್ನು ಹಾಳು ಮಾಡುವ ಪ್ರಯತ್ನಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಉಪರಾಷ್ಟ್ರಪತಿ

ಉಪರಾಷ್ಟ್ರಪತಿಯವರಿಂದ ಕರ್ನಾಟಕ ವೈಭವ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವದ 3ನೇ ಆವೃತ್ತಿ ಉದ್ಘಾಟನೆ

Posted On: 07 FEB 2025 4:38PM by PIB Bengaluru

ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು ಇಂದು ವಿಭಜಕ ಶಕ್ತಿಗಳ ವಿರುದ್ಧ ಎಚ್ಚರಿಕೆ ನೀಡಿದ್ದಾರೆ. “ನಾವು ಎದುರಿಸುತ್ತಿರುವ ಸವಾಲು ಹವಾಮಾನ ಬದಲಾವಣೆಗಿಂತ ಗಂಭೀರವಾಗಿದೆ ಎಂದು ಹೇಳಲು ನನಗೆ ಯಾವುದೇ ಹಿಂಜರಿಕೆಯಿಲ್ಲ… (ಕೆಲವು) ಜನರು ಅಳವಡಿಸಿಕೊಳ್ಳುತ್ತಿರುವ ಕೆಲಸದ ಶೈಲಿಯಲ್ಲಿ ಅಸಹ್ಯಕರ ರೀತಿಯಲ್ಲಿ ಒಡಕು ಸೃಷ್ಟಿಸುತ್ತಿದ್ದಾರೆ. ವಿಭಜನೆಗೆ ಜಾತಿ, ಪ್ರಾದೇಶಿಕತೆಯಂತಹ ಹಲವು ನೆಲೆಗಳಿವೆ. ಈ ದೇಶದಲ್ಲಿ ಪ್ರಾದೇಶಿಕತೆ ಮತ್ತು ರಾಷ್ಟ್ರೀಯತೆಯ ಬಗ್ಗೆ ಹೇಗೆ ಚರ್ಚೆ ನಡೆಯುತ್ತದೆ ಎಂದು ನನಗೆ ಅರ್ಥವಾಗುತ್ತಿಲ್ಲ? ಇದು ಎಷ್ಟು ಅಸಂಬದ್ಧ ಮತ್ತು ಆಧಾರರಹಿತವಾಗಿದೆ, ಆದರೆ ನೀವು ಅದರ ಬೇರುಗಳನ್ನು ನೋಡಿದಾಗ, ಅಲ್ಲಿ ದೇಶ ವಿರೋಧಿ ಶಕ್ತಿಗಳ ಕೈಗಳನ್ನು ಕಾಣಬಹುದು.” ಎಂದು ಅವರು ಹೇಳಿದ್ದಾರೆ.

ಕರ್ನಾಟಕದ ರಾಣೆಬೆನ್ನೂರಿನಲ್ಲಿ ನಡೆದ ಕರ್ನಾಟಕ ವೈಭವ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವದ ಮೂರನೇ ಆವೃತ್ತಿಯನ್ನು ಉದ್ಘಾಟಿಸಿ ಮಾತನಾಡಿದ ಉಪರಾಷ್ಟ್ರಪತಿಯವರು, “ಈ ಶಕ್ತಿಗಳು (ವಿಭಜಕ ಶಕ್ತಿಗಳು) ವಿಭಿನ್ನ ರೀತಿಯಲ್ಲಿ ಕೆಲಸ ಮಾಡುತ್ತವೆ. ಈ ಶಕ್ತಿಗಳು ಹೊಸ ಮಾರ್ಗಗಳನ್ನು ಅಳವಡಿಸಿಕೊಂಡಿವೆ ಮತ್ತು ಅನೇಕ ವಿಷಯಗಳಲ್ಲಿ ಅವರು ನ್ಯಾಯಾಂಗದಲ್ಲಿ ಆಶ್ರಯ ಪಡೆಯುವುದನ್ನು ನೀವು ಕಾಣಬಹುದು. ನಾನು ಚಿಂತಿತನಾಗಿದ್ದೇನೆ, ಏಕೆಂದರೆ ನಮ್ಮ ದೇಶದ ಸಂವಿಧಾನವು ನ್ಯಾಯಾಂಗ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಹಕ್ಕುಗಳನ್ನು ನೀಡಿದೆ ಮತ್ತು ಆ ಹಕ್ಕು ಯಾವುದು? ಅವರು ನ್ಯಾಯಾಲಯದ ಆಶ್ರಯವನ್ನು ಪಡೆಯಬಹುದು, ಆದರೆ ಇತ್ತೀಚಿನ ವರ್ಷಗಳಲ್ಲಿ ದೇಶವಿರೋಧಿ ಭಾವನೆಗಳನ್ನು ಉತ್ತೇಜಿಸಲು ಹಣವನ್ನು ಬಳಸಲಾಗುತ್ತಿದೆ ಮತ್ತು ನ್ಯಾಯಾಂಗದ ಪ್ರವೇಶವನ್ನು ಬೇರೆ ಯಾವುದೇ ದೇಶದಲ್ಲಿ ನಡೆಯದ ರೀತಿಯಲ್ಲಿ ಅಸ್ತ್ರವನ್ನಾಗಿಸಿಕೊಳ್ಳಲಾಗುತ್ತಿದೆ” ಎಂದು ಹೇಳಿದರು.

"ರಾಷ್ಟ್ರಕ್ಕೆ ಸವಾಲು ಹಾಕುವ ಶಕ್ತಿಗಳು ರಾಷ್ಟ್ರೀಯತೆ ಮತ್ತು ಪ್ರಾದೇಶಿಕತೆಯ ನಡುವೆ ಘರ್ಷಣೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿವೆ. ಅವುಗಳಿಗೆ ಸೂಕ್ತ ಉತ್ತರವನ್ನು ನೀಡಬೇಕು. ಅವರು ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಅಲುಗಾಡಿಸಲು ಬಯಸುತ್ತಾರೆ" ಎಂದು ಉಪರಾಷ್ಟ್ರಪತಿಯವರು ಹೇಳಿದರು.

ರಾಷ್ಟ್ರದ ಸಾಂಸ್ಕೃತಿಕ ತತ್ವವನ್ನು ಗೌರವಿಸುವ ಅಗತ್ಯವನ್ನು ಒತ್ತಿ ಹೇಳಿದ ಉಪರಾಷ್ಟ್ರಪತಿಯವರು, “ಇಂದು, ನಾನು ಒಂದು ಕಡೆಯಿಂದ ನೋಡಿದಾಗ, ಭಾರತದ ಪ್ರಗತಿಯನ್ನು ಪ್ರಪಂಚದ ಕಣ್ಣುಗಳಿಂದ ನೋಡಬೇಕು, ರಾಷ್ಟ್ರದೊಳಗೆ ವಾಸಿಸುವ ಜನರ ಕಣ್ಣಿನಿಂದ ನೋಡಬೇಕು, ಅವು ಮಳೆಯಲ್ಲಿ ನರ್ತಿಸುವ ನವಿಲಿನ ಗರಿಗಳಂತಿವೆ… ಆದರೆ ನವಿಲಿನ ಪಾದದ ಕಡೆಗೆ ನೋಡಿದಾಗ ನನಗೆ ಚಿಂತೆಯಾಗುತ್ತದೆ ಮತ್ತು ನಂತರ ನಮ್ಮ ಸಾಂಸ್ಕೃತಿಕ ತತ್ವಶಾಸ್ತ್ರದ ಅಗತ್ಯವನ್ನು ನಾನು ಭಾವಿಸುತ್ತೇನೆ. ನಾವು ಬೆಳೆಯುತ್ತಿರುವ, ನಾವು ಕುಳಿತಿರುವ ಕೊಂಬೆಯನ್ನು ನಾವೇ ಕತ್ತರಿಸಲು ಪ್ರಯತ್ನಿಸುತ್ತಿದ್ದೇವೆ” ಎಂದು ಅವರು ಹೇಳಿದರು.

ದೇಶದಲ್ಲಿ ಚುನಾವಣಾ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರುವ ಪ್ರಯತ್ನಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಉಪರಾಷ್ಟ್ರಪತಿ, “ದೇಶವು ಅತ್ಯಂತ ಹಳೆಯ ಪ್ರಜಾಪ್ರಭುತ್ವ, ಬಲಿಷ್ಠ ಪ್ರಜಾಪ್ರಭುತ್ವ, ಅತ್ಯಂತ ಪ್ರಗತಿಪರ ಪ್ರಜಾಪ್ರಭುತ್ವ, ಅತ್ಯಂತ ರೋಮಾಂಚಕ ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ದೃಷ್ಟಿಕೋನದಿಂದ, ಪ್ರತಿ ಹಂತದಲ್ಲೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವ ವಿಶ್ವದ ಏಕೈಕ ದೇಶವಾಗಿದೆ. ಅದು ಗ್ರಾಮ, ನಗರ, ಪ್ರಾಂತ್ಯ ಅಥವಾ ರಾಷ್ಟ್ರವಾಗಿರಲಿ; ಅದೊಂದು ಸಾಂವಿಧಾನಿಕ ವ್ಯವಸ್ಥೆಯಾಗಿದೆ. ಇಂತಹ ದೇಶದಲ್ಲಿ ನಮ್ಮ ಚುನಾವಣಾ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರುವ ಪ್ರಯತ್ನಗಳು ನಡೆಯಬಾರದು. ಅದರ ಭಾಗವಾಗಲೂ ಬಾರದವರು ಸಹ ಇದರಲ್ಲಿ ಭಾಗಿಯಾಗಿದ್ದಾರೆ. ನಾವು ಒಟ್ಟಾಗಿ, ಬಲವಾದ ಸಂಕಲ್ಪದೊಂದಿಗೆ, ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು” ಎಂದು ಅವರು ಹೇಳಿದರು.

ಭಾರತದ ಆರ್ಥಿಕ ಪ್ರಗತಿಯನ್ನು ಉಲ್ಲೇಖಿಸಿದ ಅವರು, "ಐಎಂಎಫ್, ವಿಶ್ವಬ್ಯಾಂಕ್ ಮತ್ತು ಇತರ ಪ್ರಮುಖ ಸಂಸ್ಥೆಗಳು ಹೂಡಿಕೆ ಮಾಡಬಹುದಾದ, ಅವಕಾಶಗಳು ಲಭ್ಯವಿರುವ, ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉಜ್ವಲ ಅವಕಾಶವಿರುವ ತಾಣ ಇದ್ದರೆ ಅದು ಭಾರತವಾಗಿದೆ ಎಂದು ಹೇಳುತ್ತಿವೆ. ಭಾರತವನ್ನು ಹೂಡಿಕೆ ಮತ್ತು ಅವಕಾಶಗಳಿಗೆ ಜಾಗತಿಕ ನೆಚ್ಚಿನ ತಾಣವೆಂದು ಪರಿಗಣಿಸಲಾಗಿದೆ" ಎಂದು ಹೇಳಿದರು.

 

*****

 


(Release ID: 2100910) Visitor Counter : 23