ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
azadi ka amrit mahotsav

ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳ ಇಲಾಖೆಯು ಭಾರತದಾದ್ಯಂತ ಸಮಯವನ್ನು ಸಮನ್ವಯ (ಸಿಂಕ್ರೊನೈಸ್)  ಮಾಡಲು ಕಾನೂನು ಮಾಪನಶಾಸ್ತ್ರ (ಭಾರತೀಯ ಪ್ರಮಾಣಿತ ಸಮಯ) ನಿಯಮಗಳು, 2025ರ ಕರಡನ್ನು  ಅಧಿಸೂಚಿಸಿದೆ


ನಿಯಮಗಳು ದೇಶದಲ್ಲಿ "ಒಂದು ರಾಷ್ಟ್ರ, ಒಂದು ಸಮಯ" ಗುರಿಯನ್ನು ಹೊಂದಿವೆ

Posted On: 27 JAN 2025 12:21PM by PIB Bengaluru

'ಒಂದು ರಾಷ್ಟ್ರ, ಒಂದು ಸಮಯ' ಮತ್ತು ಭಾರತೀಯ ಪ್ರಮಾಣಿತ ಸಮಯ (ಐ ಎಸ್ ಟಿ) ಯಲ್ಲಿ ನಿಖರತೆಯನ್ನು ಸಾಧಿಸುವ ಗುರಿಯೊಂದಿಗೆ, ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳ ಇಲಾಖೆ ರಾಷ್ಟ್ರೀಯ ಭೌತಿಕ ಪ್ರಯೋಗಾಲಯ (ಎನ್ ಪಿ ಎಲ್) ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಹಯೋಗದೊಂದಿಗೆ ಐ ಎಸ್ ಟಿಯನ್ನು ಮಿಲಿಸೆಕೆಂಡ್ನಿಂದ ಮೈಕ್ರೋಸೆಕೆಂಡ್ ನಿಖರತೆಯೊಂದಿಗೆ ಪ್ರಸಾರ ಮಾಡುವ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಈ ಯೋಜನೆಯು ಭಾರತದಾದ್ಯಂತ ಐದು ಕಾನೂನು ಮಾಪನಶಾಸ್ತ್ರ ಪ್ರಯೋಗಾಲಯಗಳಿಂದ ಐಎಸ್ ಟಿಯನ್ನು ಪ್ರಸಾರ ಮಾಡಲು ತಂತ್ರಜ್ಞಾನ ಮತ್ತು ಮೂಲಸೌಕರ್ಯಗಳನ್ನು ನಿರ್ಮಿಸುವ  ಗುರಿಯನ್ನು ಹೊಂದಿದೆ.

ನ್ಯಾವಿಗೇಷನ್, ದೂರಸಂಪರ್ಕ, ಪವರ್ ಗ್ರಿಡ್ ಸಿಂಕ್ರೊನೈಸೇಶನ್, ಬ್ಯಾಂಕಿಂಗ್, ಡಿಜಿಟಲ್ ಆಡಳಿತ ಮತ್ತು ಆಳವಾದ ಬಾಹ್ಯಾಕಾಶ ಸಂಚರಣೆ ಮತ್ತು ಗುರುತ್ವಾಕರ್ಷಣೆ ತರಂಗ ಪತ್ತೆ ಸೇರಿದಂತೆ ಅತ್ಯಾಧುನಿಕ ವೈಜ್ಞಾನಿಕ ಸಂಶೋಧನೆಯಂತಹ ಕ್ಷೇತ್ರಗಳಿಗೆ ನಿಖರತೆ ಅತ್ಯಗತ್ಯ. ಆದಾಗ್ಯೂ ಈ  ಪ್ರಾಮುಖ್ಯತೆಯ ಹೊರತಾಗಿಯೂ, ಐಎಸ್ಟಿಯನ್ನು ಎಲ್ಲಾ ಟೆಲಿಕಾಂ ಸೇವಾ ಪೂರೈಕೆದಾರರು (ಟಿ ಎಸ್ ಪಿಗಳು) ಮತ್ತು ಇಂಟರ್ನೆಟ್ ಸೇವಾ ಪೂರೈಕೆದಾರರು (ಐ ಎಸ್ ಪಿಗಳು) ಕಡ್ಡಾಯವಾಗಿ ಅಳವಡಿಸಿಕೊಳ್ಳುವುದಿಲ್ಲ, ಅವರಲ್ಲಿ ಅನೇಕರು ಜಿಪಿಎಸ್ನಂತಹ ವಿದೇಶಿ ಸಮಯದ ಮೂಲಗಳನ್ನು ಅವಲಂಬಿಸಿದ್ದಾರೆ. ರಾಷ್ಟ್ರೀಯ ಭದ್ರತೆ, ನೈಜ-ಸಮಯದ ಅನ್ವಯಿಕೆಗಳು ಮತ್ತು ನಿರ್ಣಾಯಕ ಮೂಲಸೌಕರ್ಯಗಳ ಸುಗಮ ಕಾರ್ಯಾಚರಣೆಗೆ ಎಲ್ಲಾ ನೆಟ್ವರ್ಕ್ಗಳು ಮತ್ತು ವ್ಯವಸ್ಥೆಗಳನ್ನು ಐಎಸ್ಟಿಗೆ ಸಿಂಕ್ರೊನೈಸ್ ಮಾಡುವುದು ಅತ್ಯಗತ್ಯ.

ಸವಾಲುಗಳನ್ನು ನಿಭಾಯಿಸಲು, ಕಾನೂನು ಮಾಪನಶಾಸ್ತ್ರ ಕಾಯ್ದೆ, 2009 ರ ಅಡಿಯಲ್ಲಿ ಐಎಸ್ಟಿ ಅಳವಡಿಸಿಕೊಳ್ಳಲು ನೀತಿ ಚೌಕಟ್ಟು, ನಿಯಂತ್ರಣ ಮತ್ತು ಶಾಸನವನ್ನು ಅಭಿವೃದ್ಧಿಪಡಿಸಲು ಉನ್ನತ ಅಧಿಕಾರದ ಅಂತರ ಸಚಿವಾಲಯ ಸಮಿತಿಯನ್ನು ರಚಿಸಲಾಗಿತ್ತು. ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ಅಧ್ಯಕ್ಷತೆಯ ಸಮಿತಿಯು ಎನ್ಪಿಎಲ್, ಇಸ್ರೋ, ಐಐಟಿ ಕಾನ್ಪುರ, ಎನ್ಐಸಿ, ಸಿಇಆರ್ಟಿ-ಇನ್, ಸೆಬಿ ಮತ್ತು ರೈಲ್ವೆ, ಟೆಲಿಕಾಂ ಮತ್ತು ಹಣಕಾಸು ಸೇವೆಗಳಂತಹ ಪ್ರಮುಖ ಸರ್ಕಾರಿ ಇಲಾಖೆಗಳ ಪ್ರತಿನಿಧಿಗಳನ್ನು ಒಳಗೊಂಡಿದೆ. ಐಎಸ್ಟಿ ಅಳವಡಿಕೆಯನ್ನು ಕಡ್ಡಾಯಗೊಳಿಸಲು ನಿಯಮಗಳನ್ನು ರೂಪಿಸಲು, ನೆಟ್ವರ್ಕ್ ಗಳಿಗೆ ಸಿಂಕ್ರೊನೈಸೇಶನ್ ಮಾರ್ಗಸೂಚಿಗಳನ್ನು ರೂಪಿಸಲು, ಸಮಯ-ಸ್ಟಾಂಪಿಂಗ್ ಮತ್ತು ಸೈಬರ್ ಭದ್ರತೆಗಾಗಿ ನಿಯಂತ್ರಕ ಚೌಕಟ್ಟುಗಳನ್ನು ಸಿದ್ಧಪಡಿಸಲು ಮತ್ತು ಸುಧಾರಿತ ತಂತ್ರಜ್ಞಾನಗಳು ಮತ್ತು ಮೂಲಸೌಕರ್ಯಗಳ ಮೂಲಕ ಐಎಸ್ಟಿ ಪ್ರಸರಣ ಯೋಜನೆಯ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲು ಸಮಿತಿಯ ವಿವಿಧ ಸಭೆಗಳನ್ನು ನಡೆಸಲಾಯಿತು.

ಕರಡು ಕಾನೂನು ಮಾಪನಶಾಸ್ತ್ರ (ಭಾರತೀಯ ಸ್ಟ್ಯಾಂಡರ್ಡ್ ಟೈಮ್) ನಿಯಮಗಳು, 2025 ನ್ನು ಗ್ರಾಹಕ ವ್ಯವಹಾರಗಳ ಇಲಾಖೆಯ ಕಾನೂನು ಮಾಪನಶಾಸ್ತ್ರ ವಿಭಾಗವು ಭಾರತದಾದ್ಯಂತ ಭಾರತೀಯ ಸ್ಟ್ಯಾಂಡರ್ಡ್ ಟೈಮ್ (ಐ ಎಸ್ ಟಿ) ಬಳಕೆಯನ್ನು ಪ್ರಮಾಣೀಕರಿಸುವ ಮತ್ತು ಕಡ್ಡಾಯಗೊಳಿಸುವ ಸಮಗ್ರ ನಿಯಮವಾಗಿ ಪ್ರಕಟಿಸಿದೆ. ಕರಡು ಕಾನೂನು ಮಾಪನಶಾಸ್ತ್ರ (ಭಾರತೀಯ ಪ್ರಮಾಣಿತ ಸಮಯ) ನಿಯಮಗಳನ್ನು 15.01.2025 ರಂದು ಸಾರ್ವಜನಿಕ ಸಮಾಲೋಚನೆಗಾಗಿ ಇಲಾಖೆಯ ಜಾಲತಾಣದಲ್ಲಿ (ವೆಬ್‌ಸೈಟ್ ನಲ್ಲಿ) ಪ್ರಕಟಿಸಲಾಗಿದೆ.  ಅಭಿಪ್ರಾಯಗಳನ್ನು 14.02.2025 ರೊಳಗೆ ಸಲ್ಲಿಸಬಹುದು. ಕರಡು ನಿಯಮಗಳ ವೆಬ್‌ಸೈಟ್ ಲಿಂಕ್ ಕೆಳಗಿನಂತಿದೆ:

https://consumeraffairs.nic.in/sites/default/files/file-uploads/latestnews/Draft%20Rules%20Time%20Dissemination.pdf

ಹೆಗ್ಗುರುತು ನಿಯಮಗಳು ಭಾರತದ ಎಲ್ಲಾ ಕ್ಷೇತ್ರಗಳಲ್ಲಿ ಭಾರತೀಯ ಸ್ಟ್ಯಾಂಡರ್ಡ್ ಟೈಮ್ (ಐ ಎಸ್ ಟಿ) ಬಳಕೆಯನ್ನು ಪ್ರಮಾಣೀಕರಿಸುವ ಮತ್ತು ಕಡ್ಡಾಯಗೊಳಿಸುವ ಗುರಿಯನ್ನು ಹೊಂದಿವೆ, ಕಾರ್ಯತಂತ್ರದ, ಕಾರ್ಯತಂತ್ರೇತರ, ಕೈಗಾರಿಕಾ ಮತ್ತು ಸಾಮಾಜಿಕ ಅನ್ವಯಿಕೆಗಳಿಗೆ ಏಕೀಕೃತ ಮತ್ತು ನಿಖರವಾದ ಸಮಯಪಾಲನಾ ಚೌಕಟ್ಟನ್ನು ಒದಗಿಸುತ್ತವೆ.  ಕಾನೂನು ಮಾಪನಶಾಸ್ತ್ರ (ಭಾರತೀಯ ಪ್ರಮಾಣಿತ ಸಮಯ) ನಿಯಮಗಳು ದೇಶಾದ್ಯಂತ ನಿಖರ ಮತ್ತು ಏಕರೂಪದ ಸಮಯಪಾಲನೆಗಾಗಿ ಸಮಗ್ರ ಚೌಕಟ್ಟನ್ನು ರಚಿಸುವ ಮೂಲಕ ಗ್ರಾಹಕರಿಗೆ ಗಣನೀಯ ಪ್ರಯೋಜನಗಳನ್ನು ಒದಗಿಸುತ್ತವೆ. ಈ ನಿಯಮಗಳು ಸಂವಹನ ಜಾಲಗಳು, ತಾಂತ್ರಿಕ ಮೂಲಸೌಕರ್ಯ ಮತ್ತು ಸಾರ್ವಜನಿಕ ಸೇವೆಗಳನ್ನು ಸಿಂಕ್ರೊನೈಸ್ ಮಾಡುತ್ತವೆ, ತಡೆರಹಿತ ಸಂವಹನಗಳನ್ನು ಸಕ್ರಿಯಗೊಳಿಸುತ್ತವೆ ಮತ್ತು ಆರ್ಥಿಕ ದಕ್ಷತೆಯನ್ನು ಹೆಚ್ಚಿಸುತ್ತವೆ.

ಪ್ರಸ್ತಾವಿತ ಕಾನೂನು ಮಾಪನಶಾಸ್ತ್ರ (ಇಂಡಿಯನ್ ಸ್ಟ್ಯಾಂಡರ್ಡ್ ಟೈಮ್) ನಿಯಮಗಳು, 2024, ಏಕರೂಪತೆ ಮತ್ತು ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಕ್ಷೇತ್ರಗಳಲ್ಲಿ ಭಾರತೀಯ ಪ್ರಮಾಣಿತ ಸಮಯವನ್ನು (ಐ ಎಸ್ ಟಿ) ಕಡ್ಡಾಯ ಸಮಯ ಉಲ್ಲೇಖವಾಗಿ ಸ್ಥಾಪಿಸುವ ಗುರಿಯನ್ನು ಹೊಂದಿದೆ. +5:30 ಗಂಟೆಗಳ ಆಫ್ಸೆಟ್ನೊಂದಿಗೆ ಯುಟಿಸಿ ಆಧಾರಿತ ಐಎಸ್ಟಿಯನ್ನು ಸಿಎಸ್ಐಆರ್-ನ್ಯಾಷನಲ್ ಫಿಸಿಕಲ್ ಲ್ಯಾಬೊರೇಟರಿ (ಸಿಎಸ್ಐಆರ್-ಎನ್ ಪಿ ಎಲ್) ನಿರ್ವಹಿಸುತ್ತದೆ. ಈ ನಿಯಮಗಳು ಕಾನೂನು, ಆಡಳಿತಾತ್ಮಕ ಮತ್ತು ವಾಣಿಜ್ಯ ಚಟುವಟಿಕೆಗಳನ್ನು ಐಎಸ್ಟಿಯೊಂದಿಗೆ ಸಿಂಕ್ರೊನೈಸೇಶನ್ ಮಾಡುವುದನ್ನು ಕಡ್ಡಾಯಗೊಳಿಸುತ್ತವೆ, ಸ್ಪಷ್ಟವಾಗಿ ಅನುಮತಿಸದ ಹೊರತು ಪರ್ಯಾಯ ಸಮಯ ಉಲ್ಲೇಖಗಳ ಬಳಕೆಯನ್ನು ನಿಷೇಧಿಸುತ್ತವೆ. ಸರ್ಕಾರಿ ಕಚೇರಿಗಳು ಮತ್ತು ಸಾರ್ವಜನಿಕ ಸಂಸ್ಥೆಗಳು ನೆಟ್ವರ್ಕ್ ಟೈಮ್ ಪ್ರೋಟೋಕಾಲ್ (ಎನ್ ಟಿ ಪಿ) ಮತ್ತು ನಿಖರ ಸಮಯ ಪ್ರೋಟೋಕಾಲ್ (ಪಿಟಿಪಿ) ನಂತಹ ವಿಶ್ವಾಸಾರ್ಹ ಸಿಂಕ್ರೊನೈಸೇಶನ್ ಪ್ರೋಟೋಕಾಲ್ಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ. ಸ್ಥಿತಿಸ್ಥಾಪಕತ್ವವನ್ನು ಖಚಿತಪಡಿಸಿಕೊಳ್ಳಲು, ಸೈಬರ್ ಭದ್ರತಾ ಕ್ರಮಗಳು ಮತ್ತು ಪರ್ಯಾಯ ಉಲ್ಲೇಖ ಕಾರ್ಯವಿಧಾನಗಳನ್ನು ಸೂಚಿಸಲಾಗುತ್ತದೆ, ಇವು ಸೈಬರ್ ದಾಳಿಗಳು ಅಥವಾ ಅಡೆತಡೆಗಳ ಸಮಯದಲ್ಲಿ ವಿಶ್ವಾಸಾರ್ಹತೆಯನ್ನು ಹೆಚ್ಚಿಸುತ್ತದೆ.

ಸರ್ಕಾರದ ಪೂರ್ವಾನುಮತಿಯ ಅಡಿಯಲ್ಲಿ ವೈಜ್ಞಾನಿಕ, ಖಗೋಳ ಮತ್ತು ನೌಕಾಯಾನ ಉದ್ದೇಶಗಳಿಗಾಗಿ ವಿನಾಯಿತಿಗಳನ್ನು ನೀಡಲಾಗುತ್ತದೆ. ಅನುಸರಣೆಯನ್ನು ನಿಯತಕಾಲಿಕವಾಗಿ ಲೆಕ್ಕಪರಿಶೋಧನೆಯ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತದೆ, ಉಲ್ಲಂಘನೆಗಳಿಗೆ ದಂಡ ವಿಧಿಸಲಾಗುತ್ತದೆ. ನಿಯಮಗಳು ಸಿಂಕ್ರೊನೈಸೇಶನ್ ಕಾರ್ಯವಿಧಾನ, ಅನುಷ್ಠಾನಕ್ಕಾಗಿ ಮಾರ್ಗಸೂಚಿಗಳು ಮತ್ತು ನಿಖರತೆಗಾಗಿ ಮಾನದಂಡಗಳು, ಐಎಸ್ಟಿಯೊಂದಿಗೆ ರಾಷ್ಟ್ರವ್ಯಾಪಿ ಹೊಂದಾಣಿಕೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ಸುಧಾರಿತ ಆಡಳಿತ, ಸೈಬರ್ ಭದ್ರತೆ ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಸುಗಮಗೊಳಿಸುವುದನ್ನು ಸಹ ಸೂಚಿಸುತ್ತವೆ.

ನಿಯಮಗಳು ನಿಖರವಾದ ಹಣಕಾಸು ವಹಿವಾಟುಗಳನ್ನು ಸುಗಮಗೊಳಿಸುತ್ತವೆ, ತುರ್ತು ಪ್ರತಿಕ್ರಿಯೆ ಸಮನ್ವಯವನ್ನು ಬೆಂಬಲಿಸುತ್ತವೆ ಮತ್ತು ಸಾರ್ವಜನಿಕ ಸಾರಿಗೆಯ ಸ್ಥಿರ ವೇಳಾಪಟ್ಟಿಯನ್ನು ಖಚಿತಪಡಿಸುತ್ತವೆ. ಇದಲ್ಲದೆ, ಅವು ದಸ್ತಾವೇಜು ಮತ್ತು ದಾಖಲೆ ನಿರ್ವಹಣೆಗೆ ಏಕರೂಪದ ಸಮಯ ಮಾನದಂಡಗಳನ್ನು ರೂಪಿಸುವ  ಮೂಲಕ ಕಾನೂನು ಮತ್ತು ನಿಯಂತ್ರಕ ಅನುಸರಣೆಯನ್ನು ಒದಗಿಸುತ್ತವೆ. ಈ ನಿಯಮಗಳು ಸಿಂಕ್ರೊನೈಸ್ಡ್ ಉತ್ಪಾದನಾ ಪ್ರಕ್ರಿಯೆಗಳನ್ನು ಸಕ್ರಿಯಗೊಳಿಸುವ ಮೂಲಕ, ತಾಂತ್ರಿಕ ಏಕೀಕರಣವನ್ನು ಹೆಚ್ಚಿಸುವ ಮೂಲಕ ಮತ್ತು ಜಾಗತಿಕ ಸ್ಪರ್ಧಾತ್ಮಕತೆಯನ್ನು ಸುಧಾರಿಸುವ ಮೂಲಕ ಕೈಗಾರಿಕಾ ಕಾರ್ಯಾಚರಣೆಗಳನ್ನು ಉತ್ತಮಗೊಳಿಸುತ್ತವೆ.

ನಿಯಮಗಳು ನಿಖರವಾದ ದಾಖಲೆ ನಿರ್ವಹಣೆಯನ್ನು ಸುಗಮಗೊಳಿಸುತ್ತವೆ ಮತ್ತು ರಾಷ್ಟ್ರೀಯ ಮೂಲಸೌಕರ್ಯ ಹಾಗು ಸಂವಹನ ಜಾಲಗಳನ್ನು ಸಂಯೋಜನೆ ಮಾಡಲು ನಿರ್ಣಾಯಕ ಕಾರ್ಯವಿಧಾನವನ್ನು ಒದಗಿಸುತ್ತವೆ. ಸಮಯ ನಿರ್ವಹಣೆಯ ಸಮಗ್ರ ವಿಧಾನವು ದಕ್ಷ, ನಿಖರ ಮತ್ತು ಸಂಘಟಿತ ಜಾರಿ ಚಟುವಟಿಕೆಗಳು ಮತ್ತು ಆಡಳಿತಾತ್ಮಕ ಪರಿಣಾಮಕಾರಿತ್ವದ ನಿಟ್ಟಿನಲ್ಲಿ  ಸರ್ಕಾರದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಈ ನಿಯಮಗಳು ನ್ಯಾವಿಗೇಷನ್, ದೂರಸಂಪರ್ಕ, ಇಂಟರ್ನೆಟ್, ಬ್ಯಾಂಕಿಂಗ್, ಪವರ್ ಗ್ರಿಡ್ ಸಿಂಕ್ರೊನೈಸೇಶನ್, 5 ಜಿ ತಂತ್ರಜ್ಞಾನಗಳು, ಕೃತಕ ಬುದ್ಧಿಮತ್ತೆ ಮತ್ತು ಐಒಟಿಯಂತಹ ನಿರ್ಣಾಯಕ ಕ್ಷೇತ್ರಗಳಲ್ಲಿ ನಿಖರತೆಯನ್ನು ಹೆಚ್ಚಿಸುತ್ತವೆ.  ಈ ನಿಯಮಗಳು ಗ್ರಾಹಕರಿಗೆ ಡಿಜಿಟಲ್ ಸಾಧನಗಳು, ನ್ಯಾವಿಗೇಷನ್ ವ್ಯವಸ್ಥೆಗಳು ಮತ್ತು ಸಾರ್ವಜನಿಕ ಸೇವೆಗಳ ವಿಶ್ವಾಸಾರ್ಹ ಸಿಂಕ್ರೊನೈಸೇಶನ್ ಅನ್ನು ಒದಗಿಸುತ್ತವೆ. ನಿಯಮಗಳು ಕೈಗಾರಿಕೆಗಳಿಗೆ ನಿಖರವಾದ ಹಣಕಾಸು ವಹಿವಾಟುಗಳು, ಪರಿಣಾಮಕಾರಿ ಉತ್ಪಾದನೆ ಮತ್ತು ಜಾಗತಿಕ ವ್ಯಾಪಾರ ಸಂವಹನಗಳಿಗೆ ಅನುಕೂಲ ಕಲ್ಪಿಸುತ್ತವೆ.

ನಿಯಮಗಳನ್ನು ಜಾರಿಗೆ ತರುವ ಮೂಲಕ, ಭಾರತ ಸರ್ಕಾರವು ದೇಶಾದ್ಯಂತ ನಿಖರ ಮತ್ತು ಏಕರೂಪದ ಸಮಯಪಾಲನೆಯನ್ನು ಖಚಿತಪಡಿಸಿಕೊಳ್ಳುವತ್ತ ನಿರ್ಣಾಯಕ ಹೆಜ್ಜೆ ಇಡುತ್ತಿದೆ, ಇದು ತಾಂತ್ರಿಕ ಪ್ರಗತಿ, ಆರ್ಥಿಕ ದಕ್ಷತೆ ಮತ್ತು ಕಾರ್ಯತಂತ್ರದ ಭದ್ರತೆಗೆ ದಾರಿ ಮಾಡಿಕೊಡುತ್ತದೆ.

 

*****


(Release ID: 2096677) Visitor Counter : 30