ಗೃಹ ವ್ಯವಹಾರಗಳ ಸಚಿವಾಲಯ
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಗುಜರಾತ್‌ನ ಸೂರತ್‌ನಲ್ಲಿ ಶ್ರೀ ಬಾಬುಲಾಲ್ ರೂಪ್ ಚಂದ್ ಷಾ ಮಹಾವೀರ್ ಕ್ಯಾನ್ಸರ್ ಆಸ್ಪತ್ರೆ ಮತ್ತು ಶ್ರೀ ಫೂಲ್‌ಚಂದ್ ಭಾಯ್ ಜೈಕಿಶನ್ ದಾಸ್ ವಖಾರಿಯಾ ಸ್ಯಾನಿಟೋರಿಯಂಅನ್ನು ಉದ್ಘಾಟಿಸಿದರು
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಮಗ್ರ ವಿಧಾನದೊಂದಿಗೆ ಭಾರತದ ಆರೋಗ್ಯ ಕ್ಷೇತ್ರವನ್ನು ಉನ್ನತೀಕರಿಸಲು ಕೆಲಸ ಮಾಡಿದ್ದಾರೆ
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಲವಾರು ಮಹತ್ವದ ಕಾರ್ಯಗಳನ್ನು ಕೈಗೊಂಡಿದ್ದಾರೆ, ಆದರೆ ಅವುಗಳಲ್ಲಿಅತ್ಯುತ್ತಮವಾದುದು ಆಯುಷ್ಮಾನ್ ಭಾರತ್ ಯೋಜನೆ
ಒಟ್ಟು 317 ಕೋಟಿ ರೂ. ವೆಚ್ಚದಲ್ಲಿ ದೇಶಾದ್ಯಂತ ಸುಮಾರು 1.75 ಲಕ್ಷ ಆಯುಷ್ಮಾನ್ ಆರೋಗ್ಯ ಮಂದಿರಗಳನ್ನು ಸ್ಥಾಪಿಸಲಾಗಿದೆ
ಸ್ವಚ್ಛ ಭಾರತ್ ಮಿಷನ್, ಫಿಟ್ ಇಂಡಿಯಾ, ಖೇಲೋ ಇಂಡಿಯಾ ಮತ್ತು ಜಲ ಜೀವನ್ ಮಿಷನ್‌ನಂತಹ ಉಪಕ್ರಮಗಳ ಮೂಲಕ, ನರೇಂದ್ರ ಮೋದಿ ಜೀ ಜನರು ಅನಾರೋಗ್ಯಕ್ಕೆ ಒಳಗಾಗದಂತೆ ನೋಡಿಕೊಳ್ಳುವತ್ತ ಗಮನ ಹರಿಸಿದ್ದಾರೆ
2013-14ರಲ್ಲಿ ಭಾರತದ ಆರೋಗ್ಯ ಬಜೆಟ್ 37,000 ಕೋಟಿ ರೂ.ಗಳಿಂದ ಈಗ 98,000 ಕೋಟಿ ರೂ.ಗೆ ಏರಿದೆ
ಸೂರತ್, ದೇಶಾದ್ಯಂತ ಆರೋಗ್ಯ ಕ್ಷೇತ್ರದಲ್ಲಿ ಕೇಂದ್ರವಾಗಿ ಯಶಸ್ವಿಯಾಗಿ ನೆಲೆಯೂರಿದೆ
Posted On:
23 JAN 2025 7:09PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಗುಜರಾತ್‌ನ ಸೂರತ್‌ನಲ್ಲಿ ಶ್ರೀ ಬಾಬುಲಾಲ್ ರೂಪ್ ಚಂದ್ ಷಾ ಮಹಾವೀರ್ ಕ್ಯಾನ್ಸರ್ ಆಸ್ಪತ್ರೆ ಮತ್ತು ಶ್ರೀ ಫೂಲ್ ಚಂದ್ ಭಾಯ್ ಜೈಕಿಶನ್ ದಾಸ್ ವಖಾರಿಯಾ ಸ್ಯಾನಿಟೋರಿಯಂಅನ್ನು ಉದ್ಘಾಟಿಸಿದರು. ಗುಜರಾತ್‌ನ ಗೃಹ ವ್ಯವಹಾರಗಳ ರಾಜ್ಯ ಸಚಿವರಾದ ಶ್ರೀ ಹರ್ಷ ಸಾಂಘವಿ ಸೇರಿದಂತೆ ಹಲವಾರು ಗಣ್ಯರು ಈ ಸಂದರ್ಭದಲ್ಲಿಉಪಸ್ಥಿತರಿದ್ದರು.
ಇಂದು ಸೂರತ್‌ನಲ್ಲಿ ಶ್ರೀ ಬಾಬುಲಾಲ್ ರೂಪ್ ಚಂದ್ ಷಾ ಮಹಾವೀರ್ ಕ್ಯಾನ್ಸರ್ ಆಸ್ಪತ್ರೆ ಮತ್ತು ಶ್ರೀ ಫೂಲ್ ಚಂದ್ ಭಾಯಿ ಜೈಕಿಶನ್ ದಾಸ್ ವಖಾರಿಯಾ ಸ್ಯಾನಿಟೋರಿಯಂ ರೂಪದಲ್ಲಿಅತ್ಯುತ್ತಮ ಸೌಲಭ್ಯಗಳೊಂದಿಗೆ ವೈದ್ಯಕೀಯ ಸಂಸ್ಥೆಗಳು ದೊರೆತಿವೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಈ ಸಂಸ್ಥೆಗಳು ಕ್ಯಾನ್ಸರ್ ಚಿಕಿತ್ಸೆಗಾಗಿ ಒಂದೇ ಸೂರಿನಡಿ ಜನರಿಗೆ ಲಭ್ಯವಿರುವ ಎಲ್ಲಾ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳನ್ನು ಹೊಂದಿರುತ್ತವೆ ಎಂದು ಅವರು ಹೇಳಿದರು.
ಸೂರತ್, ಒಂದು ಪ್ರಮುಖ ನಗರವಾಗಿದೆ ಮತ್ತು ಕಳೆದ ಕೆಲವು ವರ್ಷಗಳಲ್ಲಿನಗರದಲ್ಲಿಅನೇಕ ಕೈಗಾರಿಕೆಗಳು ಬಂದಿವೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಸೂರತ್ ಕೇವಲ ಗುಜರಾತ್‌ನಷ್ಟೇ ಅಲ್ಲ, ಇಡೀ ಪಶ್ಚಿಮ ಭಾರತದ ಆರ್ಥಿಕ ಚಟುವಟಿಕೆಯ ಕೇಂದ್ರವಾಗಿದೆ ಎಂದರು. ಆರ್ಥಿಕ ಚಟುವಟಿಕೆಯ ಕೇಂದ್ರವಾಗಿ ಮಾರ್ಪಟ್ಟಿರುವ ನಗರದಲ್ಲಿ, ಅದರ ಜನಸಂಖ್ಯೆ ಹೆಚ್ಚಾಗುವುದು ಸ್ವಾಭಾವಿಕ, ಆದರೆ ಜನಸಂಖ್ಯೆಯ ಹೆಚ್ಚಳದ ಹೊರತಾಗಿಯೂ, ಸೂರತ್ ಸ್ವಚ್ಛತೆಯ ದಾಖಲೆಯನ್ನು ಉಳಿಸಿಕೊಂಡಿದೆ. ಅನೇಕ ಹೊಸ ಆಸ್ಪತ್ರೆಗಳ, ವಿಶೇಷವಾಗಿ ಸರ್ಕಾರಿ ಆಸ್ಪತ್ರೆಗಳ ನಿರ್ಮಾಣದಿಂದಾಗಿ ಸೂರತ್‌ನಲ್ಲಿ ವೈದ್ಯಕೀಯ ಸೌಲಭ್ಯಗಳು ಹೆಚ್ಚಿವೆ ಮತ್ತು ಸೂರತ್ ದೇಶಾದ್ಯಂತ ಕೇಂದ್ರವಾಗಿ ಆರೋಗ್ಯ ಕ್ಷೇತ್ರದಲ್ಲಿ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಸುಮಾರು 250 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ ಮತ್ತು 110 ಹಾಸಿಗೆಗಳ ಸೌಲಭ್ಯದೊಂದಿಗೆ ನಿರ್ಮಿಸಲಾದ ಆಸ್ಪತ್ರೆ ಪ್ರಮುಖ ಕ್ಯಾನ್ಸರ್ ಚಿಕಿತ್ಸಾ ಕೇಂದ್ರವಾಗಲಿದೆ ಮತ್ತು ಕಡಿಮೆ ಆದಾಯದ ಗುಂಪಿನ ರೋಗಿಗಳಿಗೆ ಸೇವೆ ಸಲ್ಲಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಆಸ್ಪತ್ರೆಯ ಜೊತೆಗೆ, ಪ್ರತ್ಯೇಕ ಕೀಮೋಥೆರಪಿ ಘಟಕ, ಪ್ರತ್ಯೇಕ ಹಾಸಿಗೆಗಳು, ಹೈಟೆಕ್ ಆಪರೇಷನ್ ಥಿಯೇಟರ್, ವಿಕಿರಣ ಚಿಕಿತ್ಸೆ, ಕ್ಯಾನ್ಸರ್ ಸಂಬಂಧಿತ ಶಸ್ತ್ರಚಿಕಿತ್ಸೆಗಳು, ಮೂಳೆ-ಮಜ್ಜೆ ಕಸಿ, ಪರಮಾಣು ಔಷಧ, ಪುನರ್ವಸತಿ ಸೇರಿದಂತೆ ಅನೇಕ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳನ್ನು ಈ ಹೊಸ ಆಸ್ಪತ್ರೆಯಲ್ಲಿಒದಗಿಸಲಾಗಿದೆ, ಇದು ಸೂರತ್ ನಗರವನ್ನು ಕ್ಯಾನ್ಸರ್ ಚಿಕಿತ್ಸೆಯ ಕ್ಷೇತ್ರದಲ್ಲಿ ಸ್ವಾವಲಂಬಿಯನ್ನಾಗಿ ಮಾಡಿದೆ ಎಂದು ಗೃಹ ಸಚಿವರು ಹೇಳಿದರು.
ಶ್ರೀ ಫೂಲ್ ಚಂದ್ ಭಾಯ್ ಜೈಕಿಶನ್ ದಾಸ್ ವಖಾರಿಯಾ ಸ್ಯಾನಿಟೋರಿಯಂನಲ್ಲಿ ಸಾರ್ವಜನಿಕರಿಗೆ ವೈದ್ಯಕೀಯ ಸೌಲಭ್ಯಗಳೊಂದಿಗೆ 36 ಕೊಠಡಿಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರು ಹೇಳಿದರು. ಈ ಹಿಂದೆ ಕ್ಯಾನ್ಸರ್ ಚಿಕಿತ್ಸೆಗಾಗಿ ಮುಂಬೈ ಮತ್ತು ಅಹಮದಾಬಾದ್‌ಗೆ ಹೋಗಬೇಕಾಗಿದ್ದವರು ಈಗ ತಮ್ಮ ಸ್ವಂತ ನಗರದ ಸುಸಜ್ಜಿತ ಆಸ್ಪತ್ರೆಯಲ್ಲಿ ಪರಿಣಾಮಕಾರಿ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಮಹಾವೀರ್ ಆರೋಗ್ಯ ಮತ್ತು ವೈದ್ಯಕೀಯ ಪರಿಹಾರ ಸೊಸೈಟಿಯು 1978ರಿಂದ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಹಲವಾರು ಸಂಸ್ಥೆಗಳನ್ನು ಮಹಾವೀರ್ ಜನರಲ್ ಆಸ್ಪತ್ರೆ, ಬಿ.ಡಿ.ಮೆಹ್ತಾ ಆರ್ಟ್ ಇನ್‌ಸ್ಟಿಟ್ಯೂಟ್, ಆರ್.ಬಿ.ಷಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಲಕ್ಷ್ಮೀಪತಿ ಮಹಾವೀರ್ ನರ್ಸಿಂಗ್ ಶಾಲೆ ಮತ್ತು ಈಗ ಬಿ.ಆರ್.ಶಾ ಮಹಾವೀರ್ ಕ್ಯಾನ್ಸರ್ ಆಸ್ಪತ್ರೆ ರೂಪದಲ್ಲಿ ರಚಿಸಿದೆ ಎಂದು ಶ್ರೀೕ ಅಮಿತ್ ಶಾ ಹೇಳಿದರು. ಹೊಸ ಆಸ್ಪತ್ರೆಯು ಮಾ ಕಾರ್ಡ್ ಮತ್ತು ಆಯುಷ್ಮಾನ್ ಕಾರ್ಡ್ ಮೂಲಕ ಬಡವರಿಗೆ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸುತ್ತದೆ ಎಂದು ಅವರು ಹೇಳಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಜೀವನದಲ್ಲಿ ಹಲವು ಮಹತ್ವದ ಕಾರ್ಯಗಳನ್ನು ಮಾಡಿದ್ದಾರೆ, ಆದರೆ ಅವುಗಳಲ್ಲಿಅತ್ಯುತ್ತಮವಾದುದು ಆಯುಷ್ಮಾನ್ ಭಾರತ್ ಯೋಜನೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ದೇಶದ ಕೋಟ್ಯಂತರ ಬಡ ಜನರು ಸರಿಯಾದ ಚಿಕಿತ್ಸೆ ಪಡೆಯದೆ ಮನೆಗೆ ಮರಳಲು ಒತ್ತಾಯಿಸಲ್ಪಟ್ಟಾಗ ಮತ್ತು ದೊಡ್ಡ ಆಸ್ಪತ್ರೆ ಬಿಲ್‌ಗಳನ್ನು ನೋಡಿ ಗೋಳಾಡುತ್ತಿರುವಾಗ, ನಿಮ್ಮ ಪ್ರೀತಿಪಾತ್ರರು ನಿಮ್ಮ ಕಣ್ಣ ಮುಂದೆ ಅಸಹಾಯಕರಾಗಿ ಸಾಯುವುದನ್ನು ನೋಡುವುದಕ್ಕಿಂತ ದೊಡ್ಡ ದುಃಖ ಬೇರೊಂದಿಲ್ಲ ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಐದು ಲಕ್ಷ ರೂಪಾಯಿಗಳವರೆಗೆ ಉಚಿತ ಚಿಕಿತ್ಸೆ ನೀಡುವ ಮೂಲಕ ಸುಮಾರು 12 ಕೋಟಿ ಕುಟುಂಬಗಳನ್ನು, ಅಂದರೆ ಸುಮಾರು 60 ಕೋಟಿ ಜನರನ್ನು ಈ ದುರದೃಷ್ಟದಿಂದ ಮುಕ್ತಗೊಳಿಸಿದ್ದಾರೆ ಎಂದು ಅವರು ಹೇಳಿದರು. ಮುಖ್ಯಮಂತ್ರಿ ಅವರ ಪರಿಹಾರ ನಿಧಿ ಮತ್ತು ಪ್ರಧಾನಮಂತ್ರಿ ಪರಿಹಾರ ನಿಧಿಯ ಸೌಲಭ್ಯಗಳನ್ನು ಒಟ್ಟುಗೂಡಿಸಿದರೆ, ಚಿಕಿತ್ಸೆಯ ಅನುಪಸ್ಥಿತಿಯಲ್ಲಿಯಾವುದೇ ವ್ಯಕ್ತಿ ಸಾಯಬಾರದು ಎಂಬಂತಹ ವ್ಯವಸ್ಥೆಗಳನ್ನು ಪ್ರಧಾನಮಂತ್ರಿ ಅವರು ಮಾಡಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಆಯುಷ್ಮಾನ್ ಆರೋಗ್ಯ ಕೇಂದ್ರಗಳ ಅಂಕಿಅಂಶಗಳ ಪ್ರಕಾರ, ದೇಶಾದ್ಯಂತ ಸುಮಾರು 1.75 ಲಕ್ಷ ಆಯುಷ್ಮಾನ್ ಆರೋಗ್ಯ ಮಂದಿರಗಳನ್ನು ಸ್ಥಾಪಿಸಲಾಗಿದ್ದು, ಒಟ್ಟು 317 ಕೋಟಿ ಜನರು ಭೇಟಿ ನೀಡುತ್ತಾರೆ ಎಂದು ಅವರು ಹೇಳಿದರು. 10 ಲಕ್ಷ ರೂ.ಗಳವರೆಗೆ ಉಚಿತ ಚಿಕಿತ್ಸೆ ಪಡೆದ ಜನರ ಸಂಖ್ಯೆ ಇಡೀ ಯುರೋಪ್‌ನಲ್ಲಿ ವಾಸಿಸುವ ಜನರ ಸಂಖ್ಯೆಗಿಂತ ಹೆಚ್ಚಾಗಿದೆ ಎಂದು ಅವರು ಹೇಳಿದರು.
ಈವರೆಗೆ 71 ಕೋಟಿ ಅಭಾ ಕಾರ್ಡ್‌ಗಳನ್ನು ಮಾಡಲಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಮಿಷನ್ ಅಡಿಯಲ್ಲಿ, ಮೂಲಸೌಕರ್ಯಗಳನ್ನು ರಚಿಸಲು ಸುಮಾರು 64 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ಔಷಧಿಗಳಿಗಾಗಿ, ಪ್ರಧಾನ ಮಂತ್ರಿ ಜನೌಷಧಿ ಪರಿಯೋಜನೆ ಇದೆ, ದೇಶಾದ್ಯಂತ ಹತ್ತು ಸಾವಿರ ಅಂಗಡಿಗಳು ಕಾರ್ಯನಿರ್ವಹಿಸುತ್ತಿವೆ. ಎಲ್ಲಾ ಪ್ರಮುಖ ಔಷಧಿಗಳನ್ನು ಜನೌಷಧಿ ಕೇಂದ್ರಗಳಲ್ಲಿ ಸುಮಾರು ಶೇ. 20 ರಿಂದ 50 ರಷ್ಟು ವೆಚ್ಚದಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತಿದೆ. ಬಡವರಿಗೆ ಕೈಗೆಟಕುವ ದರದಲ್ಲಿಔಷಧಿಗಳನ್ನು ಒದಗಿಸುವ ಮೂಲಕ ಸುಮಾರು 25 ಸಾವಿರ ಕೋಟಿ ರೂಪಾಯಿಗಳ ಲಾಭವಾಗಿದೆ ಎಂದು ಅವರು ಹೇಳಿದರು. ದೇಶದಲ್ಲಿ ವೈದ್ಯಕೀಯ ಕಾಲೇಜುಗಳ ಸಂಖ್ಯೆಯೂ ಹೆಚ್ಚಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಸ್ವಾತಂತ್ರ್ಯದ ನಂತರ, 2014ರ ಹೊತ್ತಿಗೆ ದೇಶದಲ್ಲಿ387 ವೈದ್ಯಕೀಯ ಕಾಲೇಜುಗಳಿದ್ದವು; ಆದರೆ ಕಳೆದ 10 ವರ್ಷಗಳಲ್ಲಿಈ ಸಂಖ್ಯೆ 766ಕ್ಕೆ ಏರಿದೆ. ಈ ಹಿಂದೆ ಪ್ರತಿ ವರ್ಷ 51 ಸಾವಿರ ವೈದ್ಯರು ಉತ್ತೀರ್ಣರಾಗುತ್ತಿದ್ದರು, ಆದರೆ ಈಗ ಪ್ರತಿ ವರ್ಷ 1 ಲಕ್ಷ 15 ಸಾವಿರ ಯುವಕರಿಗೆ ಎಂಬಿಬಿಎಸ್ ಪದವಿ ಮತ್ತು 73 ಸಾವಿರ ಯುವಕರಿಗೆ ಎಂಡಿ ಅಥವಾ ಎಂಎಸ್ ಪದವಿ ನೀಡಲಾಗುತ್ತಿದೆ ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಮಗ್ರ ದೃಷ್ಟಿಕೋನದೊಂದಿಗೆ ಭಾರತದ ಆರೋಗ್ಯ ಕ್ಷೇತ್ರವನ್ನು ಉನ್ನತೀಕರಿಸಲು ಕೆಲಸ ಮಾಡಿದ್ದಾರೆ ಎಂದು ಅವರು ಹೇಳಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎಲ್ಲರ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿದ್ದಾರೆ ಮತ್ತು ಜನರು ಮೊದಲಿಗೆ ಅನಾರೋಗ್ಯಕ್ಕೆ ಒಳಗಾಗದಂತೆ ನೋಡಿಕೊಳ್ಳುವತ್ತ ಗಮನ ಹರಿಸಿದ್ದಾರೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಆರೋಗ್ಯ ಕ್ಷೇತ್ರದ ದೃಷ್ಟಿಕೋನದಲ್ಲಿ ಪ್ರಮುಖ ಬದಲಾವಣೆಗಳನ್ನು ತಂದ ನರೇಂದ್ರ ಮೋದಿ ಜೀ, ಸ್ವಚ್ಛ ಭಾರತ್ ಮಿಷನ್, ಫಿಟ್ನೆಸ್‌ಗೆ ಪ್ರಾಮುಖ್ಯತೆ ನೀಡುವಂತೆ ಯುವಕರನ್ನು ಪ್ರೇರೇಪಿಸಲು ಫಿಟ್ ಇಂಡಿಯಾ ಮಿಷನ್, ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ಒದಗಿಸಲು ಪೋಷಣ್ ಮಿಷನ್, ಎಲ್ಲಾ ರೀತಿಯ ರೋಗಗಳು ಮತ್ತು ಸೋಂಕುಗಳಿಂದ ಮಕ್ಕಳಿಗೆ ಲಸಿಕೆ ಹಾಕಲು ಮಿಷನ್ ಇಂದ್ರಧನುಷ್, ಶುದ್ಧ ಕುಡಿಯುವ ನೀರನ್ನು ಒದಗಿಸಲು ಜಲ ಜೀವನ್ ಮಿಷನ್ ಮತ್ತು ಆಯುರ್ವೇದವನ್ನು ಉತ್ತೇಜಿಸಲು ಪ್ರತಿ ಮನೆಗೂ ಶೌಚಾಲಯಗಳನ್ನು ನೀಡಿದರು. ಇಂದಿಗೂ ವಿಶ್ವದಲ್ಲಿರೋಗಗಳನ್ನು ನಿರ್ಮೂಲನೆ ಮಾಡಲು ಆಯುರ್ವೇದಕ್ಕಿಂತ ಉತ್ತಮ ಚಿಕಿತ್ಸೆ ಇಲ್ಲಎಂದು ಶ್ರೀ ಅಮಿತ್ ಶಾ ಹೇಳಿದರು. ನಿಯಮಿತ ಯೋಗ ಮತ್ತು ಖೇಲೋ ಇಂಡಿಯಾ ಮೂಲಕ ಬಲವಾದ ಮತ್ತು ಆರೋಗ್ಯಕರ ದೇಹವನ್ನು ನಿರ್ಮಿಸಲು ನರೇಂದ್ರ ಮೋದಿ ಜೀ ಜನರಿಗೆ ಸ್ಫೂರ್ತಿ ನೀಡಿದ್ದಾರೆ.
2013-14ರಲ್ಲಿ ಭಾರತದ ಆರೋಗ್ಯ ಬಜೆಟ್ 37 ಸಾವಿರ ಕೋಟಿ ರೂಪಾಯಿಗಳಾಗಿತ್ತು. ಆದರೆ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದೇಶದ ಆರೋಗ್ಯ ಬಜೆಟ್ 98 ಸಾವಿರ ಕೋಟಿ ರೂಪಾಯಿಗಳಾಗಿದೆ ಎಂದು ಶ್ರೀ ಅಮಿತ್ ಶಾ ಅವರು ಹೇಳಿದರು. ದೇಶದ ಆರೋಗ್ಯ ಬಜೆಟ್‌ಅನ್ನು ಸುಮಾರು ಮೂರು ಪಟ್ಟು ಹೆಚ್ಚಿಸಲಾಗಿದೆ ಎಂದು ಅವರು ಹೇಳಿದರು. ದೇಶದಲ್ಲಿ130 ಕೋಟಿ ಜನರು ಮಧ್ಯಮ ವರ್ಗದವರು ಮತ್ತು ಬಡತನ ರೇಖೆಗಿಂತ ಕೆಳಗಿದ್ದಾರೆ ಮತ್ತು ನರೇಂದ್ರ ಮೋದಿ ಜೀ ಯಾವಾಗಲೂ ಈ ಎಲ್ಲ ಜನರ ಬಗ್ಗೆ ಕಾಳಜಿ ವಹಿಸಿದ್ದಾರೆ ಎಂದು ಅವರು ಹೇಳಿದರು.
*****
(Release ID: 2095654)
Visitor Counter : 11