ಉಕ್ಕು ಸಚಿವಾಲಯ
azadi ka amrit mahotsav

ಒಟ್ಟು ರೂ 11,440 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಇಸ್ಪತ್ ನಿಗಮ್ ಲಿಮಿಟೆಡ್ (ಆರ್‌.ಐ.ಎನ್‌.ಎಲ್.) ಪುನಶ್ಚೇತನ ಯೋಜನೆಯನ್ನು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ

Posted On: 17 JAN 2025 6:30PM by PIB Bengaluru

ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯು (ಸಿಸಿಇಎ), ಒಟ್ಟು 11,440 ಕೋಟಿ ರೂಪಾಯಿಗಳ ವೆಚ್ಚದಲ್ಲಿ ರಾಷ್ಟ್ರೀಯ ಉಕ್ಕು ನಿಗಮ ನಿಯಮಿತ (ರಾಷ್ಟ್ರೀಯ ಇಸ್ಪತ್ ನಿಗಮ್ ಲಿಮಿಟೆಡ್ - ಆರ್‌.ಐ.ಎನ್‌.ಎಲ್.) ಸಂಸ್ಥೆಯ ಪುನಶ್ಚೇತನ ಯೋಜನೆಯನ್ನು ಅನುಮೋದಿಸಿದೆ. ರಾಷ್ಟ್ರೀಯ ಉಕ್ಕು ನಿಗಮ ನಿಯಮಿತ (ರಾಷ್ಟ್ರೀಯ ಇಸ್ಪತ್ ನಿಗಮ್ ಲಿಮಿಟೆಡ್ - ಆರ್‌.ಐ.ಎನ್‌.ಎಲ್.) ಸಂಸ್ಥೆಗೆ ಇನ್ಫ್ಯೂಷನ್ ₹ 10,300 ಕೋಟಿಯನ್ನು ಈಕ್ವಿಟಿ ಬಂಡವಾಳವಾಗಿ ಹೂಡಲಾಗುವುದು ಮತ್ತು ₹1140 ಕೋಟಿ ವರ್ಕಿಂಗ್ ಕ್ಯಾಪಿಟಲ್ ಸಾಲವನ್ನು 7% ರಷ್ಟು ಸಂಚಿತವಲ್ಲದ ಪ್ರಾಶಸ್ತ್ಯದ ಷೇರು ಬಂಡವಾಳವಾಗಿ ಪರಿವರ್ತಿಸುವುದನ್ನು ಹಾಗೂ 10 ವರ್ಷಗಳ ನಂತರ ಅದನ್ನು ಪರಿವರ್ತನೆ (ರಿಡೀಮ್) ಮಾಡಬಹುದಾದ ವ್ಯವಸ್ಥೆ ರೂಪಿಸಲಾಗಿದೆ, ಹಾಗೂ ಆರ್‌.ಐ.ಎನ್‌.ಎಲ್. ಸಂಸ್ಥೆಯು ಉತ್ತಮ ರೀತಿಯಲ್ಲಿ ಮುಂದುವರಿಯುವ ಕಾಳಜಿಯಾಗಿ ಈ ಮೊತ್ತವನ್ನು ಮುಂಗಡವಾಗಿ ಇರಿಸಾಗಿದೆ ಹಾಗೂ ಅನುಮೋದಿಸಲಾಗಿದೆ.

ರಾಷ್ಟ್ರೀಯ ಉಕ್ಕು ನಿಗಮ ನಿಯಮಿತ (ರಾಷ್ಟ್ರೀಯ ಇಸ್ಪತ್ ನಿಗಮ್ ಲಿಮಿಟೆಡ್ - ಆರ್‌.ಐ.ಎನ್‌.ಎಲ್. ಒಂದು ಶೆಡ್ಯೂಲ್ ಎಂ ಮಾನ್ಯತೆ ಪಡೆದ ಕೇಂದ್ರ ಸರ್ಕಾರದ ಸಾರ್ವಜನಿಕ ಉದ್ದಿಮೆ ( ಶೆಡ್ಯೂಲ್- ಎ ಸಿ.ಪಿ.ಎಸ್.ಇ  ) ಆಗಿದ್ದು, ಭಾರತ ಸರ್ಕಾರದ 100% ಮಾಲೀಕತ್ವದೊಂದಿಗೆ ಕೇಂದ್ರ ಉಕ್ಕು ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಲ್ಲಿದೆ. ಆಂಧ್ರಪ್ರದೇಶ ರಾಜ್ಯದ ರಾಜ್ಯ ಸರ್ಕಾರಿ ವಲಯದ ಏಕೈಕ ಕಡಲಾಚೆಯ ಉಕ್ಕಿನ ಸ್ಥಾವರವಾಗಿರುವ ವಿಶಾಖಪಟ್ಟಣಂ ಸ್ಟೀಲ್ ಪ್ಲಾಂಟ್ (ವಿ.ಎಸ್‌.ಪಿ) ಅನ್ನು ಕೂಡ ಆರ್‌.ಐ.ಎನ್‌.ಎಲ್. ಸಂಸ್ಥೆ ನಿರ್ವಹಿಸುತ್ತದೆ. ಈ ಘಟಕವು ದ್ರವ ಉಕ್ಕಿನ 7.3 ಎಂಟಿಪಿಎ ಸ್ಥಾಪಿತ ಸಾಮರ್ಥ್ಯವನ್ನು ಹೊಂದಿದೆ.

_AKS5651.JPG

ಆರ್‌.ಐ.ಎನ್‌.ಎಲ್. ಸಂಸ್ಥೆಯ ಆರ್ಥಿಕ ಸ್ಥಿತಿಯು ನಿರ್ಣಾಯಕವಾಗಿದೆ. (31.03.2024 ರಂತೆ, ಆರ್‌.ಐ.ಎನ್‌.ಎಲ್. ಸಂಸ್ಥೆಯ ನಿವ್ವಳ ಮೌಲ್ಯ ₹(-)4538.00 ಕೋಟಿ, ಪ್ರಸ್ತುತ ಆಸ್ತಿಗಳು ₹7,686.24 ಮತ್ತು ಪ್ರಸ್ತುತ ಸಾಲ ಬಾಧ್ಯತೆಗಳು ₹26,114.92 ಕೋಟಿಗಳು).  ಆರ್‌.ಐ.ಎನ್‌.ಎಲ್ ಕಾರ್ಯನಿರತ ಬಂಡವಾಳಕ್ಕಾಗಿ ಬ್ಯಾಂಕ್‌ ಗಳಿಂದ ಮಂಜೂರಾದ ಸಾಲದ ಪಡೆಯುವ ಮಿತಿಯನ್ನು ಈಗಾಗಲೇ ಮೀರಿದೆ ಮತ್ತು ಬ್ಯಾಂಕ್‌ ಗಳಿಂದ ಹೆಚ್ಚಿನ ಸಾಲಗಳನ್ನು ಪಡೆಯುವ ಸ್ಥಿತಿಯಲ್ಲಿಲ್ಲ.  ಜೂನ್ 2024ರಲ್ಲಿ ಕ್ಯಾಪೆಕ್ಸ್ ಲೋನ್ ಮರುಪಾವತಿ ಮತ್ತು ಬಡ್ಡಿ ಪಾವತಿಗಳಲ್ಲಿ ಆರ್‌.ಐ.ಎನ್‌.ಎಲ್. ಡೀಫಾಲ್ಟ್ ಆಗಿದೆ.

ಈಗ ಅನುಮೋದನೆ ಆಗಿರುವ, ₹10,300 ಕೋಟಿಯ ಈಕ್ವಿಟಿ ಇನ್ಫ್ಯೂಷನ್ ಹಣವು ಆರ್‌.ಐ.ಎನ್‌.ಎಲ್‌.ಗೆ ಕಾರ್ಯನಿರತ ಬಂಡವಾಳವನ್ನು ಸಂಗ್ರಹಿಸುವುದಕ್ಕೆ ಸಂಬಂಧಿಸಿದ ಕಾರ್ಯಾಚರಣೆಯ ಸಮಸ್ಯೆಗಳನ್ನು ನಿವಾರಿಸಲು ಮತ್ತು ಬ್ಲಾಸ್ಟ್ ಫರ್ನೇಸ್ ಕಾರ್ಯಾಚರಣೆಗಳನ್ನು ಅತ್ಯಂತ ಉತ್ಪಾದಕ ರೀತಿಯಲ್ಲಿ ಪ್ರಾರಂಭಿಸಲು ಸಹಾಯ ಮಾಡುತ್ತದೆ. ಇದು ಕಂಪನಿಯು ತನ್ನ ಸಂಪೂರ್ಣ ಉತ್ಪಾದನಾ ಸಾಮರ್ಥ್ಯವನ್ನು ಕ್ರಮೇಣ ಹಂತ ಹಂತವಾಗಿ ತಲುಪಲು ಅನುವು ಮಾಡಿಕೊಡುತ್ತದೆ ಮತ್ತು ಇದು ಉಕ್ಕಿನ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಭಾರತೀಯ ಉಕ್ಕಿನ ಮಾರುಕಟ್ಟೆಯಲ್ಲಿ ಸ್ಥಿರತೆಯನ್ನು ಹೊಂದಲು ರಾಷ್ಟ್ರೀಯ ಹಿತಾಸಕ್ತಿಯಲ್ಲಿದೆ ಮತ್ತು ಉದ್ಯೋಗಿಗಳ (ನಿಯಮಿತ ಮತ್ತು ಒಪ್ಪಂದದ) ಮತ್ತು ಉಕ್ಕಿನ ಸ್ಥಾವರದ ಕಾರ್ಯಾಚರಣೆ ಉತ್ತಮಗೊಂಡು, ಅವಲಂಬಿಸಿರುವವರ ಜೀವನೋಪಾಯವನ್ನು ಸ್ಥಿರಗೊಳಿಸಿ ಉಳಿಸುತ್ತದೆ. ಪುನಶ್ಚೇತನ ಯೋಜನೆಯು ಜನವರಿ 2025ರಲ್ಲಿ ಎರಡು ಬ್ಲಾಸ್ಟ್ ಫರ್ನೇಸ್‌ಗಳೊಂದಿಗೆ ಮತ್ತು ಆಗಸ್ಟ್ 2025ರಲ್ಲಿ ಮೂರು ಬ್ಲಾಸ್ಟ್ ಫರ್ನೇಸ್‌ಗಳೊಂದಿಗೆ ಆರ್‌.ಐ.ಎನ್‌.ಎಲ್‌. ಸಂಸ್ಥೆಯು ಪೂರ್ಣ ಉತ್ಪಾದನೆಯನ್ನು ಪ್ರಾರಂಭಿಸುತ್ತದೆ ಎಂದು ಅಂದಾಜಿಸಲಾಗಿದೆ.

ಉಕ್ಕಿನ ಉತ್ಪಾದನೆಯು ಆರ್ಥಿಕತೆಯ ಪ್ರಮುಖ ಕ್ಷೇತ್ರವಾಗಿದೆ ಮತ್ತು ಯಾವುದೇ ದೇಶದ ಆರ್ಥಿಕ ಅಭಿವೃದ್ಧಿಯ ಸೂಚಕಗಳಲ್ಲಿ ಒಂದಾಗಿದೆ. ವಿಶಾಖಪಟ್ಟಣಂ ಸ್ಟೀಲ್ ಪ್ಲಾಂಟ್ (ವಿ.ಎಸ್‌.ಪಿ) ಪೂರ್ಣ ಸಾಮರ್ಥ್ಯದಲ್ಲಿ ಪುನಶ್ಚೇತನ ಮತ್ತು ಮುಂದುವರಿದ ಕಾರ್ಯಾಚರಣೆಯು ಸಾರ್ವಜನಿಕ ಸಂಪನ್ಮೂಲಗಳ ಸಮರ್ಥ ಬಳಕೆಯನ್ನು ಖಚಿತಪಡಿಸುತ್ತದೆ ಮತ್ತು ರಾಷ್ಟ್ರೀಯ ಉಕ್ಕು ನೀತಿ, 2017ರ ಉದ್ದೇಶಗಳನ್ನು ಸಾಧಿಸಲು ಇದು ಸಹಾಯ ಮಾಡುತ್ತದೆ.

ಈ ವ್ಯೂಹಾತ್ಮಕ ಕಾರ್ಯತಂತ್ರದ ನಿರ್ಧಾರವು ಆತ್ಮನಿರ್ಭರ ಭಾರತಕ್ಕಾಗಿ ಸ್ಥಳೀಯ ಕೈಗಾರಿಕೆಗಳನ್ನು ಬೆಂಬಲಿಸುವ ಸರ್ಕಾರದ ದೃಢವಾದ ಬದ್ಧತೆಯನ್ನು ಖಚಿತಪಡಿಸುತ್ತದೆ.

 

*****


(Release ID: 2093950) Visitor Counter : 22