ಗೃಹ ವ್ಯವಹಾರಗಳ ಸಚಿವಾಲಯ
ಗುಜರಾತ್ ನ ಗಾಂಧಿನಗರದ ಕಲೋಲ್ ನಲ್ಲಿ 194 ಕೋಟಿ ರೂಪಾಯಿ ಮೊತ್ತದ 19 ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು 8 ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ
ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದ ಅಭಿವೃದ್ಧಿ ಕೆಲಸಗಳಿಗೂ, ಈಗಿನ ಅವಧಿಯ ಕೆಲಸಗಳಿಗೂ ಭಾರೀ ವ್ಯತ್ಯಾಸವಿದ್ದು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಸುಗಮವಾಗಿ ಅಭಿವೃದ್ಧಿ ಕಾಮಗಾರಿ ಸಾಗುತ್ತಿದೆ
ಇಂದು ಒಂದೇ ದಿನದಲ್ಲಿ 194 ಕೋಟಿ ರೂಪಾಯಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳು ಒಂದೇ ಪ್ರದೇಶದಲ್ಲಿ ನಡೆಯುತ್ತಿದ್ದು, ಇದಕ್ಕೆ ಕಾರಣ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬೆಳೆಸಿದ ಅಭಿವೃದ್ಧಿಯ ಹೊಸ ಸಂಸ್ಕೃತಿ ಕಾರಣ
ಅಭಿವೃದ್ಧಿ ಚಟುವಟಿಕೆಯ ಪರಂಪರೆಯನ್ನು ಶ್ರೀ ನರೇಂದ್ರ ಮೋದಿ ಅವರು ಆರಂಭಿಸಿದ್ದು, ರಾಜ್ಯದಲ್ಲಿ ಶ್ರೀ ಭೂಪೇಂದ್ರ ಪಟೇಲ್ ಅವರ ಅವಧಿಯಲ್ಲಿ ಇದು ತ್ವರಿತವಾಗಿ ಮುಂದುವರೆಯುತ್ತಿದೆ
ದೇಶದ ಜನರಿಗಾಗಿ ಮೋದಿ ಅವರು ಏನನ್ನು ಹೇಳಿದ್ದಾರೋ ಅದನ್ನು ಮಾಡಿ ತೋರಿಸಿದ್ದಾರೆ
ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣ, ಸಂವಿಧಾನದ 370ನೇ ವಿಧಿ ರದ್ದುಪಡಿಸುವ, ಭಯೋತ್ಪಾದನೆ ಅಥವಾ ನಕ್ಸಲೀಯ ಚಟುವಟಿಕೆ ತೊಡೆದುಹಾಕುವುದನ್ನು ಮೋದಿ ಜೀ ಅವರು ತಮ್ಮ ಸೂಕ್ಷ್ಮ ನಾಯಕತ್ವದ ಕಠಿಣ ಪರಿಶ್ರಮ, ನಿರಂತರ ಜಾಗರೂಕತೆಯ ಮೂಲಕ ಇದನ್ನು ಸಾಧಿಸಿದ್ದಾರೆ
Posted On:
15 JAN 2025 8:18PM by PIB Bengaluru
ಗುಜರಾತ್ ನ ಗಾಂಧಿನಗರದ ಕಲೋಲ್ ನಲ್ಲಿ 194 ಕೋಟಿ ರೂಪಾಯಿ ಮೊತ್ತದ 19 ಅಭಿವೃದ್ಧಿ ಕಾಮಗಾರಿಗಳನ್ನು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಉದ್ಘಾಟಿಸಿದರು ಮತ್ತು 8 ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿದರು.
ನಂತರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಹಿಂದಿನ ಸರ್ಕಾರದ ಅವಧಿಯಲ್ಲಿ ಸಣ್ಣ ಕೆಲಸಗಳನ್ನು ಪೂರ್ಣಗೊಳಿಸಲು ನಿರ್ಣಾಯಕ ಪ್ರಯತ್ನ ಅಗತ್ಯವಾಗಿತ್ತು. ಆದಾಗ್ಯೂ ಇದೀಗ ಇಂದು ಒಂದೇ ದಿನದಲ್ಲಿ 194 ಕೋಟಿ ರೂಪಾಯಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳು ಒಂದೇ ಪ್ರದೇಶದಲ್ಲಿ ನಡೆಯುತ್ತಿದ್ದು, ಇದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬೆಳೆಸಿದ ಅಭಿವೃದ್ಧಿಯ ಹೊಸ ಸಂಸ್ಕೃತಿ ಕಾರಣವಾಗಿದೆ. ಗಾಂಧಿನಗರ ಲೋಕಸಭಾ ಕ್ಷೇತ್ರದ ಹಲವು ಸ್ಥಳಗಳಲ್ಲಿ ಒಳ ಸೇತುವೆಗಳನ್ನು ನಿರ್ಮಿಸುವ ಮೂಲಕ ಪ್ರಯಾಣದ ದೂರವನ್ನು ಕಡಿಮೆ ಮಾಡುವ ಕೆಲಸ ಮಾಡಲಾಗಿದೆ ಎಂದು ಅವರು ಪ್ರಸ್ತಾಪಿಸಿದರು. ಹೊಸ ಶಾಲೆಗಳಿಗೆ ಕೊಠಡಿಗಳನ್ನು ನಿರ್ಮಿಸಲು ಪ್ರತಿ ಹಳ್ಳಿಯಲ್ಲಿನ ಶಿಥಿಲಗೊಂಡ ಶಾಲಾ ಕಟ್ಟಡಗಳನ್ನು ಕೆಡವಲಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಹೆಚ್ಚುವರಿಯಾಗಿ, ಇಂದು, ಕಲೋಲ್ ಮತ್ತು ಸನಂದ್ ಸಂಪರ್ಕಿಸುವ ಆರು ಪಥಗಳ ಪ್ರಮುಖ ರಸ್ತೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು ಎಂದರು.
ಗಾಂಧಿನಗರ ತಾಲ್ಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಂಡಿದ್ದು, ಅದರಲ್ಲಿ ಪ್ರತಿಯೊಂದು ಹಳ್ಳಿಯಲ್ಲಿ ಗರ್ಭೀಣಿಯರಿಗೆ ಪೌಷ್ಠಿಕಾಂಶವುಳ್ಳ ಲಾಡು ವಿತರಣೆಯೂ ಸಹ ಸೇರಿದೆ. ಅಂಗನವಾಡಿ ಬಾಲಕಿಯರಿಗೆ ಹೊಸ ವಸ್ತ್ರ ಮತ್ತು ಭಜನಾ ಮಂದಿರಗಳಿಗೆ ಸಂಗೀತ ಪರಿಕಗಳನ್ನು ವಿತರಿಸಲಾಗಿದೆ. ಈ ಎಲ್ಲಾ ಅಭಿವೃದ್ಧಿ ಚಟುವಟಿಕೆಗಳು ಸಾಧ್ಯವಾಗಿದ್ದು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಿಂದ. ಇಲ್ಲಿನ ಸರ್ಕಾರ ದೀರ್ಘಕಾಲದಿಂದ ಕಾರ್ಯನಿರ್ವಹಿಸುತ್ತಿದೆ. ಶ್ರೀ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಅಭಿವೃದ್ಧಿಯ ಹೊಸ ಸಂಸ್ಕೃತಿಯನ್ನು ಪ್ರಾರಂಭಿಸಿದರು.
ದೇಶದ ಜನರಿಗಾಗಿ ಮೋದಿ ಅವರು ಯಾವ ಭರವಸೆ ನೀಡಿದ್ದರೋ ಅದನ್ನು ಸಾಧ್ಯವಾಗಿಸಿದ್ದಾರೆ. ಅಯೋಧ್ಯೆಯಲ್ಲಿ ಭವ್ಯವಾದ ಶ್ರೀರಾಮಂದಿರ ನಿರ್ಮಾಣ ಮಾಡುವುದನ್ನು ಮೋದಿ ಅವರು ಸಾಕಾರಗೊಳಿಸಿದ್ದಾರೆ ಎಂದು ಅವರು ಬೆಳಕು ಚೆಲ್ಲಿದರು. ದೇಶದಲ್ಲಿ ಭಯೋತ್ಪಾದನೆ ಮತ್ತು ನಕ್ಸಲೀಯ ಚಟುವಟಿಕೆಯನ್ನು ಶ್ರೀ ನರೇಂದ್ರ ಮೋದಿ ಅವರು ಬೇರು ಸಮೇತ ಕಿತ್ತೆಸೆದಿದ್ದಾರೆ. 2019ರ ಆಗಸ್ಟ್ 5 ರಂದು ಗುಜರಾತ್ ನ ಮಗ, ಶ್ರೀ ನರೇಂದ್ರ ಮೋದಿ ಅವರು ಜಮ್ಮು – ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿಯ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದರು. ಈ ನಿರ್ಧಾರವು ಭಾರತದ ಜನರಿಗೆ ಭಾರತಮಾತೆಯ ಗೌರವವು ಅತ್ಯುನ್ನತವಾಗಿದೆ ಎಂಬ ಸಂದೇಶವನ್ನು ವಿಶ್ವಾದ್ಯಂತ ರವಾನಿಸಿದೆ ಎಂದು ಶ್ರೀ ಶಾ ಒತ್ತಿ ಹೇಳಿದರು. ಕಾಶ್ಮೀರದ ಲಾಲ್ ಚೌಕ್‌ನಲ್ಲಿ ರಾಷ್ಟ್ರಧ್ವಜಾರೋಹಣ ಮಾಡಲು ಈ ಹಿಂದೆ ಸೇನಾ ಭದ್ರತೆ ಅಗತ್ಯವಿತ್ತು. ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಮೆರವಣಿಗೆಯೂ ಸಹ ಶಾಂತಿಯುತವಾಗಿ ನಡೆಯುತ್ತಿದೆ ಎಂದು ತಿಳಿಸಿದರು. ಜಮ್ಮು – ಕಾಶ್ಮೀರಕ್ಕೆ ಭೇಟಿ ನೀಡಿ ನೈಸರ್ಗಿಕ ಸೌಂದರ್ಯವನ್ನು 2.8 ಕೋಟಿ ಪ್ರವಾಸಿಗರು ಸವಿದಿದ್ದಾರೆ. ಪ್ರಧಾನಿ ಮೋದಿಯವರ ಶ್ರದ್ಧೆ, ನಿರಂತರ, ಜಾಗರೂಕತೆ ಮತ್ತು ಸಂವೇದನಾಶೀಲ ನಾಯಕತ್ವದಿಂದಾಗಿ ದೇಶದಾದ್ಯಂತ ಇಂತಹ ಪರಿವರ್ತನೆ ಸಾಧ್ಯವಾಗಿದೆ ಎಂದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಡಿ ಭಾರತ ಜಗತ್ತಿನ 5ನೇ ಅತಿ ದೊಡ್ಡ ಆರ್ಥಿಕತೆಯಾಗಿದೆ ಮತ್ತು ಬರುವ 2047ರ ವೇಳೆಗೆ ಮೂರನೇ ಸ್ಥಾನಕ್ಕೆ ತಲುಪಲಿದೆ. 2047ರ ವೇಳೆಗೆ ಭಾರತದ ಸ್ವಾತಂತ್ರ್ಯದ ಶತಮಾನೋತ್ಸವದ ಸಮಯಕ್ಕೆ ಭಾರತ ಎಲ್ಲಾ ಹಂತಗಳಲ್ಲೂ ಅಭಿವೃದ್ಧಿ ಸಾಧಿಸಲಿದೆ ಮತ್ತು ಪ್ರತಿಯೊಂದು ವಲಯದಲ್ಲಿ ಜಾಗತಿಕ ನಾಯಕನಾಗಿ ಹೊರ ಹೊಮ್ಮಲಿದೆ. ಇಂದು ಗುಜರಾತ್ ಒಳಗೊಂಡಂತೆ ದೇಶಾದ್ಯಂತ ಬದಲಾವಣೆಯ ಪರಿವರ್ತನೆ ಪ್ರಾರಂಭವಾಗಿದೆ. ಅಭಿವೃದ್ಧಿ ಚಟುವಟಿಕೆಯ ಸಂಪ್ರದಾಯವನ್ನು ಶ್ರೀ ನರೇಂದ್ರ ಮೋದಿ ಜೀ ಆರಂಭಿಸಿದ್ದು, ರಾಜ್ಯದಲ್ಲಿ ಶ್ರೀ ಭೂಪೇಂದ್ರ ಪಟೇಲ್ ಅವರ ಅವಧಿಯಲ್ಲಿ ಅಷ್ಟೇ ತ್ವರಿತವಾಗಿ ಇದು ಮುಂದುವರೆಯುತ್ತಿದೆ ಎಂದು ಹೇಳಿದರು.
*****
(Release ID: 2093249)
Visitor Counter : 9