ಪ್ರಧಾನ ಮಂತ್ರಿಯವರ ಕಛೇರಿ
ಮಕರ ಸಂಕ್ರಾಂತಿ, ಉತ್ತರಾಯಣ ಮತ್ತು ಮಾಘ ಬಿಹು ಪ್ರಯುಕ್ತ ಸರ್ವರಿಗೂ ಪ್ರಧಾನಮಂತ್ರಿ ಶುಭಾಶಯ
Posted On:
14 JAN 2025 8:40AM by PIB Bengaluru
ಮಕರ ಸಂಕ್ರಾಂತಿ, ಉತ್ತರಾಯಣ ಮತ್ತು ಮಾಘ ಬಿಹು ಹಬ್ಬದ ಪ್ರಯುಕ್ತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಎಲ್ಲರಿಗೂ ಶುಭಾಶಯ ಕೋರಿದ್ದಾರೆ.
ಎಕ್ಸ್ ನಲ್ಲಿ ಪ್ರತ್ಯೇಕ ಪೋಸ್ಟ್ ಗಳಲ್ಲಿ ಅವರು ಹೀಗೆ ಬರೆದಿದ್ದಾರೆ:
“ಮಕರ ಸಂಕ್ರಾಂತಿ ಅಂಗವಾಗಿ ದೇಶದ ಸಮಸ್ತ ನಾಗರಿಕರಿಗೆ ಶುಭಾಶಯಗಳು. ಸೂರ್ಯನಿಗೆ ಸಮರ್ಪಿತವಾದ ಈ ಪವಿತ್ರ ಉತ್ತರಾಯಣ ಕಾಲವು ನಿಮ್ಮೆಲ್ಲರ ಜೀವನದಲ್ಲಿ ಹೊಸ ಚೈತನ್ಯ ಮತ್ತು ಹೊಸ ಉತ್ಸಾಹವನ್ನು ತುಂಬಲಿ. ”
"ಈ ಪವಿತ್ರ ಮಕರ ಸಂಕ್ರಾಂತಿ ಮತ್ತು ಉತ್ತರಾಯಣ ಹಬ್ಬ ನಿಮ್ಮೆಲ್ಲರ ಜೀವನದಲ್ಲಿ ಹೊಸ ಉತ್ಸಾಹ, ಸಂತೋಷ ಮತ್ತು ಸಮೃದ್ಧಿ ನೀಡಲಿ….!!!"
“ಅಮೋಘ ಉತ್ತರಾಯಣ ನಿಮ್ಮದಾಗಲಿ! ಈ ಹಬ್ಬವು ಎಲ್ಲರ ಜೀವನದಲ್ಲೂ ಯಶಸ್ಸು ಮತ್ತು ಸಂತೋಷವನ್ನು ತರಲಿ."
“ಮಾಘ ಬಿಹು ಶುಭಾಶಯಗಳು! ನಾವು ಪ್ರಕೃತಿಯ ಸಮೃದ್ಧಿ, ಸುಗ್ಗಿಯ ಸಂತಸ ಮತ್ತು ಒಗ್ಗಟ್ಟಿನ ಉತ್ಸಾಹವನ್ನು ಸಂಭ್ರಮಿಸುತ್ತೇವೆ. ಈ ಹಬ್ಬವು ಸಂತೋಷ ಮತ್ತು ಒಗ್ಗಟ್ಟಿನ ಮನೋಭಾವವನ್ನು ಮತ್ತಷ್ಟು ಹೆಚ್ಚಿಸಲಿ.
“ಮಾಘ ಬಿಹು ಅಂಗವಾಗಿ ಶುಭ ಹಾರೈಕೆಗಳು! ಪ್ರಕೃತಿಯ ಸಮೃದ್ಧತೆ, ಸುಗ್ಗಿಯ ಸಂಭ್ರಮ ಮತ್ತು ಭ್ರಾತೃತ್ವದ ಮನೋಭಾವವನ್ನು ಆಚರಿಸುತ್ತೇವೆ. ಈ ಹಬ್ಬವು ಸಂತೋಷ ಮತ್ತು ಭ್ರಾತೃತ್ವದ ಮನೋಭಾವವನ್ನು ಇನ್ನಷ್ಟು ಉತ್ತೇಜಿಸಲಿ.”
*****
(Release ID: 2092917)
Visitor Counter : 15
Read this release in:
English
,
Urdu
,
Marathi
,
Hindi
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam