ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
ಜಾಗತಿಕ ಇಂಧನ ಸಂವಾದವನ್ನು ಮರು ವ್ಯಾಖ್ಯಾನಿಸಲಿರುವ ಭಾರತ ಇಂಧನ ಸಪ್ತಾಹ 2025
ದಾಖಲೆಯ ಸಂಖ್ಯೆಯಲ್ಲಿ ಪ್ರದರ್ಶಕರು ಮತ್ತು ಕ್ಷೇತ್ರದ ಪಾಲುದಾರರರು ಮತ್ತು ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವಿಕೆಯ ನಿರೀಕ್ಷೆಯೊಂದಿಗೆ ಫೆಬ್ರವರಿ 11-14, 2025 ರವರೆಗೆ ನವದೆಹಲಿಯಲ್ಲಿ ನಡೆಯಲಿರುವ ಈ ಬಾರಿಯ ಭಾರತ ಇಂಧನ ಸಪ್ತಾಹ 2025 (ಐ.ಇ.ಡಬ್ಲ್ಯ. - 25) ಸಂಯೋಜನೆಯು ಈ ಹಿಂದಿನ ಎರಡು ಆವೃತ್ತಿಗಳನ್ನು ಮೀರಿಸುತ್ತದೆ
ಅಭೂತಪೂರ್ವ ಜಾಗತಿಕ ಭಾಗವಹಿಸುವಿಕೆ, ಸುಮಾರು 100 ಕಾರ್ಯತಂತ್ರದ ಅವಧಿಗಳು ಮತ್ತು ತಾಂತ್ರಿಕ ಸಮ್ಮೇಳನಗಳು ಮತ್ತು ವಿಸ್ತಾರವಾದ ಪ್ರದರ್ಶನದೊಂದಿಗೆ, ಭಾರತ ಇಂಧನ ಸಪ್ತಾಹ 2025 (ಐ.ಇ.ಡಬ್ಲ್ಯ. - 25) ಇಡೀ ಜಾಗತಿಕ ಇಂಧನ ಚೌಕಟ್ಟಿನ ಸಹಯೋಗಕ್ಕಾಗಿ ವೇಗವರ್ಧಕ ಸಂಬಂಧವಾಗಿ ಕಾರ್ಯನಿರ್ವಹಿಸಲಿದೆ
Posted On:
13 JAN 2025 4:58PM by PIB Bengaluru
ಹಿಂದಿನ ಎರಡು ಆವೃತ್ತಿಗಳ ಗಮನಾರ್ಹ ಯಶಸ್ಸನ್ನು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹಾಗೂ ಎತ್ತರಕ್ಕೆ ನಿರ್ಮಿಸುವ ಸಲುವಾಗಿ, ಭಾರತ ಸರ್ಕಾರದ ಪ್ರಮುಖ ಇಂಧನ ಕಾರ್ಯಕ್ರಮವಾದ ಭಾರತ ಇಂಧನ ಸಪ್ತಾಹ 2025 (ಇಂಡಿಯಾ ಎನರ್ಜಿ ವೀಕ್ - ಐ.ಇ.ಡಬ್ಲ್ಯ.’25) ಅನ್ನು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಆಶ್ರಯದಲ್ಲಿ, ಫೆಬ್ರವರಿ 11 ರಿಂದ 14, 2025 ರವರೆಗೆ ನವದೆಹಲಿಯ ಯಶೋಭೂಮಿ ಕನ್ವೆನ್ಷನ್ ಸೆಂಟರ್ನಲ್ಲಿ ಆಯೋಜಿಸಲಾಗಿದೆ.
ಇಂಧನ ವರ್ಷದ ಮೊದಲ ಪ್ರಮುಖ ಜಾಗತಿಕ ಕಾರ್ಯಕ್ರಮವಾದ ಭಾರತ ಇಂಧನ ಸಪ್ತಾಹ 2025 (ಐ.ಇ.ಡಬ್ಲ್ಯ. - 25), ವರ್ಷದ ಅತ್ಯಂತ ಸಮಗ್ರ ಮತ್ತು ಎಲ್ಲರನ್ನೂ ಒಳಗೊಂಡ ಜಾಗತಿಕ ಇಂಧನ ಸಭೆಯಾಗಲು ಸಂಪೂರ್ಣವಾಗಿ ಸಜ್ಜಾಗಿದೆ.
2023ರಲ್ಲಿ ಪ್ರಾರಂಭವಾದಾಗಿನಿಂದ, ಭಾರತ ಇಂಧನ ವಾರವು ಬಲದಿಂದ ಬಲಕ್ಕೆ ಎತ್ತರ ರೂಪದಲ್ಲಿ ಬೆಳೆದಿದೆ. ಭಾರತ ಇಂಧನ ಸಪ್ತಾಹ 2025 (ಐ.ಇ.ಡಬ್ಲ್ಯ. - 25) ಇತರ ಅಂತರರಾಷ್ಟ್ರೀಯ ಇಂಧನ ಕಾರ್ಯಕ್ರಮಗಳನ್ನು ಮೀರಿಸಿದೆ. ಈ ವರ್ಷದ ಆವೃತ್ತಿಯು ಅದರ ಈ ಹಿಂದಿನ ಪೂರ್ವವರ್ತಿಗಿಂತ ಗಮನಾರ್ಹ ಜಿಗಿತವನ್ನು ಸೂಚಿಸುತ್ತದೆ, ಇದು ಉನ್ನತ ನಾಯಕತ್ವ ಭಾಗವಹಿಸುವಿಕೆ ಮತ್ತು ಹೆಚ್ಚು ಕ್ರಿಯಾತ್ಮಕ ಚರ್ಚೆಗಳನ್ನು ಪ್ರದರ್ಶಿಸುತ್ತದೆ.
ವರ್ಷದಿಂದ ವರ್ಷಕ್ಕೆ ಇಂಧನ ಕುರಿತ ತಜ್ಞ ಭಾಷಣಕಾರರ ಹಿರಿತನದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದ್ದು, ಪ್ರಮುಖ ಅಂತರರಾಷ್ಟ್ರೀಯ ಮತ್ತು ಇಂದು, ದೇಶೀಯ ಇಂಧನ ಪ್ರಮುಖ ಸಂಸ್ಥೆಗಳ ಸುಮಾರು 70 ಸಿಇಒಗಳು ಈ ಕಾರ್ಯಕ್ರಮದ ಬೆಳೆಯುತ್ತಿರುವ ಜಾಗತಿಕ ಆಕರ್ಷಣೆಗೆ ಆಧಾರವಾಗಿದ್ದಾರೆ. ಮುಂದುವರಿದ ಆರ್ಥಿಕತೆಗಳು, ಅತಿದೊಡ್ಡ ಇಂಧನ ಉತ್ಪಾದಕರು ಮತ್ತು ಜಾಗತಿಕ ದಕ್ಷಿಣದ ಪ್ರಮುಖ ರಾಷ್ಟ್ರಗಳನ್ನು ಪ್ರತಿನಿಧಿಸುವ 20+ ವಿದೇಶಿ ಇಂಧನ ಮಂತ್ರಿಗಳು ಮತ್ತು ಉಪ ಮಂತ್ರಿಗಳು ಸೇರಿದಂತೆ ಅಪ್ರತಿಮ ಜಾಗತಿಕ ಭಾಗವಹಿಸುವಿಕೆಯೊಂದಿಗೆ ಐ.ಇ.ಡಬ್ಲ್ಯ.-25 ಕಾರ್ಯಕ್ರಮವು ಈ ಹಿಂದಿನದಕ್ಕಿಂತ, ಹಾಗೂ ಎಂದಿಗಿಂತಲೂ ದೊಡ್ಡದಾಗಿರುತ್ತದೆ. ಈ ಕಾರ್ಯಕ್ರಮವು ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳ ಮುಖ್ಯಸ್ಥರು ಮತ್ತು ಬಿಪಿ, ಟೋಟಲ್ ಎನರ್ಜೀಸ್, ಕಥರ್ ಎನರ್ಜಿ, ಎಡ್ ನೊಕ್, ಬೇಕರ್ ಹ್ಯೂಜಸ್ ಮತ್ತು ವಿಟೋಲ್ ಸೇರಿದಂತೆ ವಿಶ್ವದ ಅತಿದೊಡ್ಡ ಫಾರ್ಚೂನ್ 500 ಇಂಧನ ಕಂಪನಿಗಳ 90 ಸಿಇಒ ಗಳನ್ನು ಸಹ ಒಳಗೊಂಡಿರುತ್ತದೆ.
ಭಾರತ ಇಂಧನ ಸಪ್ತಾಹ 2025 (ಐ.ಇ.ಡಬ್ಲ್ಯ. - 25) ಏಳು ಪ್ರಮುಖ ಕಾರ್ಯತಂತ್ರದ ವಿಷಯಗಳನ್ನು (ಸಹಯೋಗ, ಸ್ಥಿತಿಸ್ಥಾಪಕತ್ವ, ಪರಿವರ್ತನೆ, ಸಾಮರ್ಥ್ಯ, ಡಿಜಿಟಲ್ ಗಡಿಗಳು, ನಾವೀನ್ಯತೆ, ನಾಯಕತ್ವ) ಒಳಗೊಂಡಿದ್ದು, ಇಂಗಾಲ ಮುಕ್ತಗೊಳಿಸುವಿಕೆ, ಇಂಧನ ಸಮಾನತೆ ಮತ್ತು ಕಡಿಮೆ-ಇಂಗಾಲದ ಆರ್ಥಿಕತೆಗಳಿಗೆ ಪ್ರಾಯೋಗಿಕ ಪರಿಹಾರಗಳ ಮೇಲೆ ಹೆಚ್ಚಿನ ಒತ್ತು ನೀಡುತ್ತದೆ.
2024 ರಲ್ಲಿ ನಡೆದ 18 ವಿಷಯಾಧಾರಿತ ವಿಭಾಗಗಳಿಗೆ ಹೋಲಿಸಿದರೆ ಈ ವರ್ಷ ಹೊಂದಿರುವ 20 ವಿಷಯಾಧಾರಿತ ವಿಭಾಗಗಳ ಸೇರ್ಪಡೆಯು ಕೃತಕ ಬುದ್ದಿಮತ್ತೆ (ಎಐ), ಡಿಜಿಟಲೀಕರಣ ಮತ್ತು ಕಡಲ ಇಂಗಾಲ ಮುಕ್ತಗೊಳಿಸುವಿಕೆಯಂತಹ ಅತ್ಯಾಧುನಿಕ ವಿಷಯಗಳ ಮೇಲೆ ವಿಶಾಲವಾದ ಗಮನವನ್ನು ಎತ್ತಿ ತೋರಿಸುತ್ತದೆ. ಸಮ್ಮೇಳನದ ರಚನಾತ್ಮಕ ಹಂತಗಳು - ಸ್ಥಿತಿಸ್ಥಾಪಕತ್ವ ಮತ್ತು ಪರಿವರ್ತನೆ - ಭಾರತದ ಇಂಧನ ಸ್ವಾತಂತ್ರ್ಯ ಮತ್ತು ಇಂಗಾಲ ಮುಕ್ತಗೊಳಿಸುವಿಕೆಯ ದ್ವಂದ್ವ ಗುರಿಗಳೊಂದಿಗೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತದೆ. ಜಾಗತಿಕ ಮತ್ತು ರಾಷ್ಟ್ರೀಯ ಕಾರ್ಯಸೂಚಿಗಳಿಗೆ ಪ್ರಸ್ತುತತೆಯನ್ನು ಖಚಿತಪಡಿಸುತ್ತದೆ.
ಈ ಕಾರ್ಯಕ್ರಮವು 120 ದೇಶಗಳಿಂದ 70,000 ಕ್ಕೂ ಹೆಚ್ಚು ಪ್ರತಿನಿಧಿಗಳು, 700+ ಪ್ರದರ್ಶಕರು ಮತ್ತು ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್ ಡಮ್, ಜರ್ಮನಿ, ಇಟಲಿ, ಜಪಾನ್, ರಷ್ಯಾ ಇತ್ಯಾದಿ 10 ದೇಶಗಳ ಪ್ರದರ್ಶನ ಮಳಿಗೆ - ಮಂಟಪಗಳು ಮತ್ತು 8 ವಿಷಯಾಧಾರಿತ ವಲಯಗಳಿಂದ ಭಾಗವಹಿಸುವ ನಿರೀಕ್ಷೆಯಿದೆ. ಈ ಪ್ರಮುಖ ಕಾರ್ಯಕ್ರಮವು ಜಾಗತಿಕ ಇಂಧನ ಸಂವಾದವನ್ನು ಮುನ್ನಡೆಸಲು, ಪ್ರಗತಿಪರ ತಂತ್ರಜ್ಞಾನಗಳನ್ನು ಪ್ರದರ್ಶಿಸಲು ಮತ್ತು ಸುಸ್ಥಿರ ಇಂಧನ ಭವಿಷ್ಯಕ್ಕಾಗಿ ಅಂತರರಾಷ್ಟ್ರೀಯ ಸಹಯೋಗವನ್ನು ಬೆಳೆಸಲು ಪ್ರಮುಖ ವೇದಿಕೆಯನ್ನು ಒದಗಿಸುತ್ತದೆ.
ಐ.ಇ.ಡಬ್ಲ್ಯ.2025 ರಲ್ಲಿ ಅಮೂರ್ತ ಸ್ವೀಕೃತಿಯಲ್ಲಿ 29% ಹೆಚ್ಚಳ ಕಂಡಿದೆ ಮತ್ತು ಭಾಷಣಕಾರರ ಭಾಗವಹಿಸುವಿಕೆಯಲ್ಲಿ 24% ಹೆಚ್ಚಳವನ್ನು ಕಾಣಬಹುದಾಗಿದೆ. ಇದು ಉದ್ಯಮದ ನಾವೀನ್ಯತೆಗೆ ವೇದಿಕೆಯಾಗಿ ಐ.ಇ.ಡಬ್ಲ್ಯ.ನ ಬೆಳೆಯುತ್ತಿರುವ ಸ್ಥಾನಮಾನವನ್ನು ವಿವರಿಸಿ ಹೇಳುತ್ತದೆ. ಅಧಿವೇಶನಗಳು ಈಗ ಭವಿಷ್ಯದ ಶುದ್ಧ ವಿದ್ಯುತ್ ಮಾರ್ಗಗಳು, ಗ್ರಿಡ್-ಪ್ರಮಾಣದ ಇಂಧನ ಸಂಗ್ರಹಣೆ ಮತ್ತು ಮೀಥೇನ್ ತಗ್ಗಿಸುವಿಕೆ ತಂತ್ರಜ್ಞಾನಗಳಂತಹ ಪ್ರಮುಖ ವಿಷಯಗಳನ್ನು ಒಳಗೊಂಡಿವೆ, ಇದು ಉದ್ಯಮದ ಭವಿಷ್ಯದ ಆದ್ಯತೆಗಳನ್ನು ಪ್ರತಿಬಿಂಬಿಸುತ್ತದೆ.
ಈ ಕಾರ್ಯಕ್ರಮವು ವಿದ್ಯುತ್ ಸಚಿವಾಲಯ, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ (ಎಂ.ಎನ್.ಆರ್.ಇ), ನೀತಿ ಆಯೋಗ ಮತ್ತು ಗಣಿ ಮತ್ತು ಖನಿಜಗಳ ಸಚಿವಾಲಯ ಸೇರಿದಂತೆ ಪ್ರಮುಖ ಭಾರತೀಯ ಇಂಧನ ಸಚಿವಾಲಯಗಳಿಂದ ಬಲವಾದ ಭಾಗವಹಿಸುವಿಕೆಗೆ ಸಾಕ್ಷಿಯಾಗಲಿದೆ. ಇದು ಸಂಪೂರ್ಣ ಸರ್ಕಾರದ ವಿಧಾನವನ್ನು ಪ್ರತಿಬಿಂಬಿಸುತ್ತದೆ, ಇಡೀ ಇಂಧನ ವಲಯದಾದ್ಯಂತ ತಡೆರಹಿತ ಸಹಯೋಗ ಮತ್ತು ಸಮಗ್ರ ನಿಶ್ಚಿತಾರ್ಥವನ್ನು ಖಚಿತಪಡಿಸುತ್ತದೆ, ಸಮಗ್ರ ಮತ್ತು ಅಂತರ್ಗತ ಇಂಧನ ಪರಿಹಾರಗಳಿಗೆ ಭಾರತದ ಬದ್ಧತೆಯನ್ನು ಒತ್ತಿಹೇಳುತ್ತದೆ.
ಇಂಧನ ಭದ್ರತೆಯನ್ನು ಬಲಪಡಿಸುವುದು ಮತ್ತು ಇಂಧನ ನ್ಯಾಯವನ್ನು ಉತ್ತೇಜಿಸುವುದು, ಜಾಗತಿಕ ದಕ್ಷಿಣದ ಧ್ವನಿಯನ್ನು ವರ್ಧಿಸುವುದು ಮತ್ತು ಭಾರತದ ಹೈಡ್ರೋಕಾರ್ಬನ್ ವಲಯದೊಳಗಿನ ಅಪಾರ ಹೂಡಿಕೆ ಅವಕಾಶಗಳನ್ನು ಅನಾವರಣಗೊಳಿಸುವುದು ಸೇರಿದಂತೆ ಇಡೀ ಇಂಧನ ಭೂದೃಶ್ಯದಾದ್ಯಂತ ಭಾರತದ ಪರಿವರ್ತನಾಶೀಲ ಪ್ರಯತ್ನಗಳನ್ನು ಪ್ರದರ್ಶಿಸಲು ಈ ಕಾರ್ಯಕ್ರಮವು ವಿಶೇಷ ಒತ್ತು ನೀಡುತ್ತದೆ. ಇದು ನವೀಕರಿಸಬಹುದಾದ ಇಂಧನ ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳಾದ ಬ್ಯಾಟರಿ ಸಂಗ್ರಹಣೆ, 2ಜಿ ಮತ್ತು 3ಜಿ ಜೈವಿಕ ಇಂಧನಗಳು, ಹಸಿರು ಅಮೋನಿಯಾ ಮತ್ತು ಹೈಡ್ರೋಜನ್ ಉತ್ಪಾದನೆಯಲ್ಲಿ ಭಾರತದ ಪ್ರಗತಿಯನ್ನು ಎತ್ತಿ ತೋರಿಸುತ್ತದೆ, ಇದು ಸುಸ್ಥಿರ ಮತ್ತು ನವೀನ ಇಂಧನ ಪರಿಹಾರಗಳಲ್ಲಿ ಜಾಗತಿಕ ನಾಯಕನಾಗಿ ರಾಷ್ಟ್ರವನ್ನು ಸ್ಥಾನೀಕರಿಸುತ್ತದೆ, ಕೇಂದ್ರವಾಗಿ ಗುರುತಿಸುತ್ತದೆ.
ಈ ಪ್ರತಿಷ್ಠಿತ ಕಾರ್ಯಕ್ರಮದ ಮಹತ್ವವನ್ನು ವಿವರಿಸುತ್ತಾ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಕಾರ್ಯದರ್ಶಿ ಶ್ರೀ ಪಂಕಜ್ ಜೈನ್ ಅವರು, "ಭಾರತ ಇಂಧನ ಸಪ್ತಾಹ 2025 (ಐ.ಇ.ಡಬ್ಲ್ಯ. - 25) ಜಾಗತಿಕ ಪಾಲುದಾರರು ಮುಕ್ತವಾಗಿ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲು, ಅವಕಾಶಗಳನ್ನು ಅನ್ವೇಷಿಸಲು ಮತ್ತು ಸಂಕೀರ್ಣ ಇಂಧನ ಪರಿವರ್ತನೆಗಳಲ್ಲಿ ಭಾರತದ ನಾಯಕತ್ವವನ್ನು ವೀಕ್ಷಿಸಲು ಒಂದು ವೇದಿಕೆಯನ್ನು ನೀಡುತ್ತದೆ. ಹಸಿರು ಹೈಡ್ರೋಜನ್ ತಂತ್ರಜ್ಞಾನಗಳು, ಸೌರ ನಾವೀನ್ಯತೆಗಳು ಅಥವಾ ಮುಂದುವರಿದ ಪರಿಶೋಧನಾ ತಂತ್ರಗಳು ಸೇರಿದಂತೆ ಪ್ರಮುಖ ಇಂಧನ ಯೋಜನೆಗಳ ಸಹಯೋಗಕ್ಕಾಗಿ ಒಂದು ಸ್ಪ್ರಿಂಗ್ಬೋರ್ಡ್ ಆಗಿ, ಈ ಕಾರ್ಯಕ್ರಮವು ಜಾಗತಿಕ ಇಂಧನ ನಾವೀನ್ಯತೆಯ ನಿರ್ಣಾಯಕ ಅಂಶವನ್ನು ಪ್ರತಿನಿಧಿಸುತ್ತದೆ."ಎಂದು ಹೇಳಿದರು.
ಭಾರತ ಇಂಧನ ಸಪ್ತಾಹ 2025 (ಐ.ಇ.ಡಬ್ಲ್ಯ. - 25) ಇಂಧನ ವಲಯದಲ್ಲಿ ಜಾಗತಿಕ ಸಹಯೋಗ ಮತ್ತು ನಾವೀನ್ಯತೆಯನ್ನು ಬೆಳೆಸಲು ಪರಿಣಾಮಕಾರಿಯಾದ ಸಹ ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ. ಅವುಗಳಲ್ಲಿ ಪ್ರಮುಖವಾದದ್ದು ಕ್ಲೀನ್ ಕುಕಿಂಗ್ ಮಿನಿಸ್ಟೀರಿಯಲ್ ಒಂದಾಗಿದೆ, ಇದು ಶುದ್ಧ ಇಂಧನ ಮೂಲಕ ಅಡುಗೆ ಪರಿಹಾರಗಳ ಜಾಗತಿಕ ಅಳವಡಿಕೆಯನ್ನು ವೇಗಗೊಳಿಸುವತ್ತ ಗಮನಹರಿಸುತ್ತದೆ. ಈ ಕಾರ್ಯಕ್ರಮವು ಭಾರತವು ತನ್ನ ಯಶಸ್ಸಿನ ಕಥೆಗಳನ್ನು ಪ್ರದರ್ಶಿಸಲು ಅವಕಾಶವನ್ನು ನೀಡುತ್ತದೆ, ಉದಾಹರಣೆಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ), ಕ್ಲೀನ್ ಅಡುಗೆ ಇಂಧನಕ್ಕೆ ಪ್ರವೇಶವನ್ನು ನೀಡುವ ಉತ್ತಮ ಮಾದರಿಗಳಾಗಿವೆ.
ಹೆಚ್ಚುವರಿಯಾಗಿ, ಭಾರತ ಇಂಧನ ಸಪ್ತಾಹ 2025 (ಐ.ಇ.ಡಬ್ಲ್ಯ. - 25) ಭಾರತದ ಇಂಧನ ಪರಿವರ್ತನೆಯನ್ನು ಮುನ್ನಡೆಸಲು ಮತ್ತು ಪರಿಸರ ವ್ಯವಸ್ಥೆಯ ದಕ್ಷತೆಯನ್ನು ಸುಧಾರಿಸಲು ಪಿ.ಎನ್.ಜಿ.ಆರ್.ಬಿ. ಯಿಂದ ಅಂತರರಾಷ್ಟ್ರೀಯ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿಗಳ ಸಮ್ಮೇಳನ - 2025, ಬ್ಲೂಮ್ಬರ್ಗ್ ಮಾಡರೇಟ್ ಮಾಡಿದ ಭಾರತದ ಸಾರಿಗೆಯ ಡಿಕಾರ್ಬೊನೈಸೇಶನ್ ಕುರಿತು ಅಧಿವೇಶನ ಮತ್ತು ಜಾಗತಿಕ ಇಂಧನ ಭೂದೃಶ್ಯದಲ್ಲಿ ಕಾರ್ಯಸಾಧ್ಯವಾದ ಒಳನೋಟಗಳು, ಪರಿವರ್ತಕ ನಾವೀನ್ಯತೆ ಮತ್ತು ಕಾರ್ಯತಂತ್ರದ ಪಾಲುದಾರಿಕೆಗಳ ಕೇಂದ್ರವಾಗಿ ಐ.ಇ.ಡಬ್ಲ್ಯ.’2025 ಅನ್ನು ಗಟ್ಟಿಗೊಳಿಸುವ ಎಸ್&ಪಿ ಗ್ಲೋಬಲ್ ಕಮಾಡಿಟೀಸ್ ಮಾಡರೇಟ್ ಮಾಡಿದ ಇಂಧನಕ್ಕಾಗಿ ಕೃತಕಬುದ್ದಿಮತ್ತೆ(ಎ.ಐ.) ಕುರಿತು ದುಂಡುಮೇಜಿನ ಸಭೆ ಕೂಡಾ ನಡೆಯಲಿದೆ.
ಅಭಿವೃದ್ಧಿ ಹೊಂದುತ್ತಿರುವ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಪೋಷಿಸುವ ಮತ್ತು ನಾವೀನ್ಯತೆಯನ್ನು ಉತ್ತೇಜಿಸುವ ಭಾರತದ ಬದ್ಧತೆಗೆ ಅನುಗುಣವಾಗಿ, ಭಾರತ ಇಂಧನ ಸಪ್ತಾಹ 2025 (ಐ.ಇ.ಡಬ್ಲ್ಯ. - 25) ನೂತನ ಅವಿನ್ಯಾ ಎನರ್ಜಿ ಸ್ಟಾರ್ಟ್ಅಪ್ ಚಾಲೆಂಜ್ 2.0 ಅನ್ನು ಕೂಡ ಆಯೋಜಿಸುತ್ತದೆ. ಈ ಸವಾಲಿನ ಅಗ್ರ ಐದು ನವೋದ್ಯಮಗಳು ಈ ಕಾರ್ಯಕ್ರಮದಲ್ಲಿ ತಮ್ಮ ಅತ್ಯಾಧುನಿಕ ಅವಕಾಶ , ಆವಿಷ್ಕಾರ, ಪರಿಹಾರಗಳನ್ನು ಪ್ರದರ್ಶಿಸಲು ವಿಶೇಷ ಪ್ರವೇಶವನ್ನು ಪಡೆಯುತ್ತವೆ. ಇದು ಅವರ ಜಾಗತಿಕ ಗುರುತಿಸುವಿಕೆ, ಗೋಚರತೆ ಮತ್ತು ಪ್ರಭಾವವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ.
ಸುಮಾರು 3,000 ಪ್ರಬಂಧ ಸಲ್ಲಿಕೆಗಳಿಂದ ಆಯ್ಕೆಯಾದ ತಾಂತ್ರಿಕ ಪ್ರಬಂಧಗಳ ಪ್ರಸ್ತುತಿಯ ವಿಜೇತರು ತಮ್ಮ ನವೀನ ಪರಿಹಾರಗಳನ್ನು ಪ್ರಸ್ತುತಪಡಿಸಲು ಅವಕಾಶವನ್ನು ಹೊಂದಿರುತ್ತಾರೆ.
ದೇಶದಲ್ಲಿ ಲಭ್ಯವಿರುವ ಕೌಶಲ್ಯಪೂರ್ಣ ಮಾನವ ಬಂಡವಾಳವನ್ನು ಎತ್ತಿ ತೋರಿಸುತ್ತಾ, ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ತೊಡಗಿಸಿಕೊಳ್ಳುವುದರ ಮೇಲೆ ವಿಶೇಷ ಒತ್ತು ನೀಡಲಾಗುತ್ತಿದೆ. ಭಾರತದಲ್ಲಿ ವಿದ್ಯಾರ್ಥಿಗಳು/ ಉದ್ಯಮಿಗಳು/ ನಾವೀನ್ಯಕಾರರಿಗಾಗಿ ಅಂತರರಾಷ್ಟ್ರೀಯ ತಜ್ಞರುಗಳು ವಿಶೇಷ ಕಾರ್ಯಾಗಾರಗಳು/ ಮಾಸ್ಟರ್ ಕ್ಲಾಸ್ ಗಳನ್ನು ಆಯೋಜಿಸುತ್ತಿದ್ದಾರೆ. ಈ ಮಾಸ್ಟರ್ ಕ್ಲಾಸ್ ಗೋಳನ್ನು ಉಚಿತವಾಗಿ ಸಾರ್ವಜನಿಕರಿಗೆ ನೀಡಲಾಗುತ್ತಿದೆ.
ಸಾರ್ವಜನಿಕರಿಗೆ/ ಸಂದರ್ಶಕರಿಗೆ ಎಲ್ಲಾ ದಿನಗಳಲ್ಲಿ ಪ್ರದರ್ಶನ ಪ್ರವೇಶ ಉಚಿತವಾಗಿದೆ.
ಕೇವಲ ಒಂದು ಸಮ್ಮೇಳನಕ್ಕಿಂತ ಹೆಚ್ಚಾಗಿ, ಜಾಗತಿಕವಾಗಿ ಪ್ರಮುಖ ಇಂಧನ-ಬಳಕೆಯ ದೇಶವು ಆಯೋಜಿಸುವ ಅತ್ಯಂತ ಸಮಗ್ರ ಮತ್ತು ಅತ್ಯಂತ ಮಹತ್ವದ ಜಾಗತಿಕ ಮಟ್ಟದ ಇಂಧನ ಕಾರ್ಯಕ್ರಮಗಳಲ್ಲಿ ಒಂದಾಗಿ ಐ.ಇ.ಡಬ್ಲ್ಯ.-25 ಯನ್ನು ಗುರುತಿಸಲಾಗಿದೆ. ಮತ್ತು, ಈಗ ಇದು ಜಾಗತಿಕವಾಗಿ ವೇಗವಾಗಿ ಬೆಳೆಯುತ್ತಿರುವ ಅತ್ಯಂತ ಮಹತ್ವಪೂರ್ಣ ಇಂಧನ ಕಾರ್ಯಕ್ರಮ ಕೂಡ ಆಗಿದೆ. ಐ.ಇ.ಡಬ್ಲ್ಯ.,25 ಯನ್ನು ಕ್ಷೂ ತೀವ್ರಗತಿಯ ಸಾಕಾರವಾಗಿ, ಅಭಿವೃದ್ದಿಯ ಸಂಕೇತವಾಗಿ, ಜಾಗತಿಕ ಇಂಧನ ಸಂವಾದಗಳಲ್ಲಿ ಒಂದು ಪ್ರಧಾನ ಹಾಗೂ ಮಹತ್ವಪೂರ್ಣ ಕ್ಷಣವನ್ನಾಗಿ ಗುರುತಿಸಿ ಆಯೋಜಿಸಲಾಗಿದೆ.
*****
(Release ID: 2092608)
Visitor Counter : 27