ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನಾಳೆ ಪ್ರಯಾಗರಾಜ್ ನಲ್ಲಿ ಆಕಾಶವಾಣಿಯ ವಿಶೇಷ 'ಕುಂಭವಾಣಿ' ಚಾನೆಲ್ ಮತ್ತು 'ಕುಂಭ ಮಂಗಲ್' ಧ್ವನಿ ಪ್ರಸಾರವನ್ನು ಉದ್ಘಾಟಿಸಲಿದ್ದಾರೆ
Posted On:
09 JAN 2025 7:17PM by PIB Bengaluru
ಕುಂಭದ ಮಹೋತ್ಸವ ಅವಧಿಯುದ್ದಕ್ಕೂ, ಆಲ್ ಇಂಡಿಯಾ ರೇಡಿಯೋದ ವಿಶೇಷ"ಕುಂಭವಾಣಿ" ಚಾನೆಲ್ ಪ್ರಯಾಗರಾಜ್ ನಿಂದ ದೇಶ ಮತ್ತು ಜಗತ್ತಿಗೆ ನೇರ ಪ್ರತಿಕ್ಷಣವೂ ನಿರಂತರವಾಗಿ ನವೀನ ಮಾಹಿತಿಗಳನ್ನು ಪ್ರಸಾರ ಮಾಡಲಿದೆ. ಹಾಗೂ ಈ ಮೂಲಕ ಮಹಾ ಕುಂಭ ಮಹೋತ್ಸವ ಸಂಪ್ರದಾಯವನ್ನು ನೇರವಾಗಿ ಪ್ರಚಾರ ಮಾಡಲಿದೆ, ಭಕ್ತರಿಗೆ ಪ್ರಮುಖ ಮಾಹಿತಿಯನ್ನು ಒದಗಿಸಲಿದೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಹಾಕುಂಭ 2025 ಕ್ಕೆ ಸಮರ್ಪಿತವಾದ ಆಲ್ ಇಂಡಿಯಾ ರೇಡಿಯೊದ ವಿಶೇಷ ಕುಂಭವಾಣಿ ಚಾನೆಲ್ (ಎಫ್ಎಂ 103.5 ಮೆಗಾಹರ್ಟ್ಸ್) ಅನ್ನು ನಾಳೆ ಪ್ರಯಾಗರಾಜ್ ನ ಸರ್ಕಾರಿ ಅತಿಥಿ ಗೃಹ (ಸರ್ಕ್ಯೂಟ್ ಹೌಸ್)ದಲ್ಲಿ ಉದ್ಘಾಟಿಸಲಿದ್ದಾರೆ. ಈ ಐತಿಹಾಸಿಕ ಸಂದರ್ಭದಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಡಾ.ಎಲ್.ಮುರುಗನ್ ಕೂಡ ಜಾಲತಾಣ (ಆನ್ ಲೈನ್) ವೇದಿಕೆಯ ಮೂಲಕ ಕಾರ್ಯಕ್ರಮಕ್ಕೆ ಸೇರ್ಪಡೆಯಾಗಿ ಭಾವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿಯವರು "ಕುಂಭ ಮಂಗಲ" ಧ್ವನಿಯನ್ನು ಕೂಡ ಬಿಡುಗಡೆ ಮಾಡಲಿದ್ದಾರೆ.
ಪ್ರಯಾಗರಾಜ್ ನಲ್ಲಿ ನಡೆಯುವ ಕುಂಭಕ್ಕೆ ಹಾಜರಾಗಲು ಸಾಧ್ಯವಾಗದವರಿಗೆ "ಕುಂಭವಾಣಿ"ಯಿಂದ ನೇರ ಪ್ರಸಾರದ ವ್ಯವಸ್ಥೆಯು ಭಕ್ತಜನರಿಗೆ ವಿಶೇಷವಾಗಿ ಪ್ರಯೋಜನಕಾರಿಯಾಗುತ್ತದೆ. ಇದು ಈ ಐತಿಹಾಸಿಕ ಮಹಾಕುಂಭದ ವಾತಾವರಣವನ್ನು ರಾಷ್ಟ್ರ ಮತ್ತು ಪ್ರಪಂಚದಾದ್ಯಂತ ಜನರಿಗೆ ನೇರವಾಗಿ ತಕ್ಷಣ ಸಮಯದಲ್ಲಿ ತರಲು ಸಹಾಯ ಮಾಡುತ್ತದೆ. ದೇಶದ ಸಾರ್ವಜನಿಕ ಮಾಧ್ಯಮ ಸೇವಾ ಪ್ರಸಾರಕ "ಪ್ರಸಾರ ಭಾರತಿ", ಭಾರತದ ಐತಿಹಾಸಿಕ ಧಾರ್ಮಿಕ ಸಂಪ್ರದಾಯಗಳನ್ನು ಉತ್ತೇಜಿಸಲು ಮಾತ್ರವಲ್ಲದೆ ಭಕ್ತರಿಗೆ ಪ್ರಮುಖ ಮಾಹಿತಿಯನ್ನು ಒದಗಿಸಲು ಮತ್ತು ಅವರ ಮನೆಯ ಸೌಕರ್ಯದಿಂದ ಸಾಂಸ್ಕೃತಿಕ ಅನುಭವವನ್ನು ನೀಡಲು ಈ ಉಪಕ್ರಮವನ್ನು ತೆಗೆದುಕೊಳ್ಳುತ್ತಿದೆ.
"ಕುಂಭವಾಣಿ" ಕುರಿತು ಮಾಹಿತಿ:
ಕುಂಭವಾಣಿ ಚಾನೆಲ್: ಪರಿಚಯ ಮತ್ತು ಪ್ರಸಾರದ ಅವಧಿ
- ಪ್ರಸಾರದ ಅವಧಿ: ಜನವರಿ 10, 2025, ಫೆಬ್ರವರಿ 26, 2025
- ಪ್ರಸಾರ ಸಮಯ: ಬೆಳಗ್ಗೆ ೦5:55 ರಿಂದ ರಾತ್ರಿ 10:05 ಗಂಟೆ ವರೆಗೆ
- ಅಲೆಗಳ ಆವರ್ತನ: ಎಫ್ಎಂ 103.5 ಮೆಗಾಹರ್ಟ್ಸ್
ಕುಂಭವಾಣಿ ವಿಶೇಷ ಕಾರ್ಯಕ್ರಮಗಳು:
1. ನೇರ ಪ್ರಸಾರಗಳು:
- ಪ್ರಮುಖ ಸ್ನಾನದ ಹಬ್ಬಗಳ ನೈಜ-ಸಮಯದ ಪ್ರಸಾರ (ಜನವರಿ 14, ಜನವರಿ 29, ಫೆಬ್ರವರಿ 3).
- ಕುಂಭ ಪ್ರದೇಶದಿಂದ ದೈನಂದಿನ ನೇರ ವರದಿ.
2. ವಿಶೇಷ ಸಾಂಸ್ಕೃತಿಕ ಪರಂಪರೆಯ ವಿಶೇಷ ಪ್ರಸ್ತುತಿಗಳು:
- ಧಾರಾವಾಹಿ 'ಶಿವ ಮಹಿಮಾ'.
- ಭಾರತೀಯ ಸಾಂಸ್ಕೃತಿಕ ಪರಂಪರೆಯ ವಿಶೇಷ ಕಾರ್ಯಕ್ರಮಗಳು.
3. ಸಂವಾದ ಕಾರ್ಯಕ್ರಮ (ಟಾಕ್ ಶೋ)ಗಳು:
- 'ನಮಸ್ಕಾರ ಪ್ರಯಾಗ್ರಾಜ್' (ಬೆಳಗ್ಗೆ ಗಂಟೆ 9:00ರಿಂದ-10:00 ವರೆಗೆ).
- ‘ಸಂಗಮ್ ತತ್ ಸೆ’ (ಸಂಜೆ ಗಂಟೆ 4:00ರಿಂದ–5:30 ವರೆಗೆ).
4. ವಿಶೇಷ ಆರೋಗ್ಯ ಸಮಾಲೋಚನೆಗಳು:
- ‘ಹಲೋ ಡಾಕ್ಟರ್’: ಸ್ಟುಡಿಯೋದಲ್ಲಿ ವೈದ್ಯರಿಂದ ನೇರ ಆರೋಗ್ಯ ಸಮಾಲೋಚನೆ ಪ್ರಸಾರ.
5. ಕುಂಭ ಸುದ್ದಿ:
- ಪ್ರಮುಖ ಸುದ್ದಿ ಪ್ರಸಾರ ವಾಹಿನಿ (ಬುಲೆಟಿನ್)ಗಳು (ಬೆಳಗ್ಗೆ 8:40 , ಅಪರಾಹ್ನ 2:30, ಮತ್ತು ರಾತ್ರಿ 8:30).
6. ವಿಶೇಷ ವ್ಯಾಪ್ತಿ:
- ರಾಜ್ಯ ಸರ್ಕಾರ ಮತ್ತು ವಿವಿಧ ಇಲಾಖೆಗಳು ಆಯೋಜಿಸಿರುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರಸಾರ ಮಾಡಲಾಗುವುದು.
- ಯುವಕರು, ಮಹಿಳೆಯರು, ಭಕ್ತರು ಮತ್ತು ಅಂತರರಾಷ್ಟ್ರೀಯ ಸಂದರ್ಶಕರನ್ನು ಸೇರಿದಂತೆ ಸರ್ವ ಸಾರ್ವಜನಿಕರ ಭಾಗವಹಿಸುವಿಕೆಯ ವಿಶೇಷ ಕಾರ್ಯಕ್ರಮಗಳು.
7. ಪ್ರಮುಖ ಮಾಹಿತಿ:
- ಪ್ರಯಾಣ, ಆರೋಗ್ಯ, ಶುಚಿತ್ವ, ಕಳೆದುಹೋದ ಮತ್ತು ಪತ್ತೆಯಾದ ಹಾಗೂ ಮಾಡಬೇಕಾದ ಮತ್ತು ಮಾಡಬಾರದ ವಿಷಯಗಳ ಕುರಿತು ಸಂಪೂರ್ಣ ಮಾಹಿತಿ.
ಆಲ್ ಇಂಡಿಯಾ ರೇಡಿಯೋ ಯಾವಾಗಲೂ ಸಾರ್ವಜನಿಕ ಪ್ರಸಾರಕರಾಗಿ ಪ್ರಮುಖ ಪಾತ್ರವನ್ನು ವಹಿಸಿದೆ. ಭಾರತೀಯ ಸಾಂಸ್ಕೃತಿಕ ಪರಂಪರೆ ಮತ್ತು ಸಂಪ್ರದಾಯಗಳನ್ನು ಉತ್ತೇಜಿಸುತ್ತದೆ. "ಕುಂಭವಾಣಿ" ಚಾನೆಲ್ 2013ರಲ್ಲಿ ನಡೆದ ಕುಂಭ ಮಹೋತ್ಸವ ಮತ್ತು 2019ರಲ್ಲಿ ಜರುಗಿದ ಅರ್ಧ ಕುಂಭದ ಸಮಯದಲ್ಲಿ ಕೇಳುಗರಲ್ಲಿ ಬಹಳಷ್ಟು ಜನಪ್ರಿಯತೆಯನ್ನು ಗಳಿಸಿತ್ತು. ಈ ಸಂಪ್ರದಾಯವನ್ನು ಮುಂದುವರೆಸುತ್ತಾ, ಈಗ ಈ ವಿಶೇಷ ಚಾನಲ್ ಅನ್ನು ಮಹಾ ಕುಂಭ 2025 ಕ್ಕೆ ಅತ್ಯುತ್ತಮ ರೀತಿಯಲ್ಲಿ ಅತ್ಯಾಧುನಿಕ ವ್ಯವಸ್ಥೆ ಮೂಲಕ ಮರುಸ್ಥಾಪಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಪ್ರಸಾರ ಭಾರತಿ ಅಧ್ಯಕ್ಷ ಡಾ. ನವನೀತ್ ಕುಮಾರ್ ಸೆಹಗಲ್, ಸಿಇಒ ಶ್ರೀ ಗೌರವ್ ದ್ವಿವೇದಿ, ಆಕಾಶವಾಣಿಯ ಮಹಾನಿರ್ದೇಶಕಿ ಡಾ. ಪ್ರಜ್ಞಾ ಪಲಿವಾಲ್ ಗೌರ್, ದೂರದರ್ಶನದ ಮಹಾನಿರ್ದೇಶಕಿ ಶ್ರೀಮತಿ ಕಾಂಚನ್ ಪ್ರಸಾದ್ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.
*****
(Release ID: 2091640)
Visitor Counter : 10