ಬುಡಕಟ್ಟು ವ್ಯವಹಾರಗಳ ಸಚಿವಾಲಯ
azadi ka amrit mahotsav

ವರ್ಷಾಂತ್ಯದ ಪರಾಮರ್ಶೆ 2024: ಬುಡಕಟ್ಟು ವ್ಯವಹಾರಗಳ ಸಚಿವಾಲಯ


ಬುಡಕಟ್ಟು ವ್ಯವಹಾರಗಳ ಸಚಿವಾಲಯದ 2023-24ರ ಬಜೆಟ್ ನ ಪರಿಷ್ಕೃತ ಅಂದಾಜಿಗೆ ಹೋಲಿಸಿದರೆ ಬಜೆಟ್ ಗಾತ್ರ 45.80% ಹೆಚ್ಚಳವಾಗಿ ಸುಮಾರು 14,925.81 ಕೋಟಿ ರೂ.ಗೆ ಏರಿಕೆ ಕಂಡಿದೆ

2024 ಫೆಬ್ರವರಿ 10ರಂದು ದೆಹಲಿಯ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸನ್ಮಾನ್ಯ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಆದಿ ಮಹೋತ್ಸವ ಉದ್ಘಾಟಿಸಿದರು

2024 ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಸನ್ಮಾನ್ಯ ಪ್ರಧಾನಮಂತ್ರಿ ಮೋದಿ ಅವರು ಜಾರ್ಖಂಡ್‌ನ ಹಜಾರಿಬಾಗ್‌ನಿಂದ ಧರ್ತಿ ಆಬಾ ಜನಜಾತಿಯ ಗ್ರಾಮ ಉತ್ಕರ್ಷ್ ಅಭಿಯಾನ ಆರಂಭಿಸಿದರು

ನಿರ್ದಿಷ್ಟವಾಗಿ ದುರ್ಬಲವಾಗಿರುವ ಬುಡಕಟ್ಟು ಗುಂಪು(ಪಿವಿಜಿಟಿ)ಗಳಿರುವ ಪ್ರದೇಶಗಳಲ್ಲಿ ಪಿಎಂ-ಜನ್ಮನ್ ಯೋಜನೆಗಳ 100% ಪರಿಪೂರ್ಣತೆಗಾಗಿ, ಬುಡಕಟ್ಟು ವ್ಯವಹಾರಗಳ ಸಚಿವಾಲಯವು 2024  ಆಗಸ್ಟ್‌ 23ರಿಂದ ಸೆಪ್ಟೆಂಬರ್ 10ರ ವರೆಗೆ ಮಾಹಿತಿ, ಶಿಕ್ಷಣ ಮತ್ತು ಸಂವಹನ(ಸಂಪರ್ಕ)-ಐಇಸಿ ಅಭಿಯಾನ ಆಯೋಜಿಸಿತ್ತು

2024 ಅಕ್ಟೋಬರ್ 2ರಂದು ಗೌರವಾನ್ವಿತ ಪ್ರಧಾನಮಂತ್ರಿ ಅವರು 2,800 ಕೋಟಿ ರೂ. ಗಿಂತ ಅಧಿಕ ವೆಚ್ಚದ 40 ಏಕಲವ್ಯ ಮಾದರಿ ವಸತಿ ಶಾಲೆ(ಇಎಂಆರ್ ಎಸ್)ಗಳನ್ನು ಉದ್ಘಾಟಿಸಿದರು ಮತ್ತು ಹೆಚ್ಚುವರಿ 25 ಏಕಲವ್ಯ ಶಾಲೆಗಳ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು

ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜಯಂತಿ ವಾರ್ಷಿಕೋತ್ಸವದ ಸ್ಮರಣಾರ್ಥ 2024 ನವೆಂಬರ್ 15ರಿಂದ 2025 ನವೆಂಬರ

Posted On: 07 JAN 2025 4:09PM by PIB Bengaluru

 ಭಾರತದ ಪರಿಶಿಷ್ಟ ಪಂಗಡ(ಎಸ್ಟಿ) ಸಮುದಾಯವು 10.42 ದಶಲಕ್ಷ ಜನಸಂಖ್ಯೆ ಹೊಂದಿದೆ, ಇದು ಒಟ್ಟು ಜನಸಂಖ್ಯೆಯ 8.6% ಪ್ರಮಾಣವನ್ನು ಪ್ರತಿನಿಧಿಸುತ್ತದೆ. ಸಮುದಾಯವು 705 ವಿಶಿಷ್ಟ(ಅನನ್ಯ) ಗುಂಪುಗಳನ್ನು ಹೊಂದಿದ್ದು, ಪ್ರಧಾನವಾಗಿ ದೇಶದ ದೂರದ ನಿರ್ಜನ ಪ್ರದೇಶಗಳಲ್ಲಿ ವಾಸಿಸುತ್ತಿದೆ. ಸರ್ಕಾರವು ಸಮುದಾಯಗಳ ಸಾಮಾಜಿಕ, ಆರ್ಥಿಕ ಸಬಲೀಕರಣ, ಸುಸ್ಥಿರ ಅಭಿವೃದ್ಧಿ ಬೆಂಬಲಿಸಲು, ಅವರ ರೋಮಾಂಚಕ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ಹಲವಾರು ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದೆ. ಕಾರ್ಯಕ್ರಮಗಳು ಜೀವನ ಪರಿಸ್ಥಿತಿಗಳನ್ನು ಹೆಚ್ಚಿಸಲು, ಶಿಕ್ಷಣ ಉತ್ತೇಜಿಸಲು ಮತ್ತು ಬುಡಕಟ್ಟು ಜನರ ಎಲ್ಲರನ್ನೂ ಒಳಗೊಂಡ ಬೆಳವಣಿಗೆಯನ್ನು ಉತ್ತೇಜಿಸುವ ಗುರಿ ಹೊಂದಿವೆ.

ಬುಡಕಟ್ಟು ಸಮುದಾಯಗಳನ್ನು ಸಬಲೀಕರಣಗೊಳಿಸುವ ತನ್ನ ಬದ್ಧತೆಯ ಭಾಗವಾಗಿ, ಬುಡಕಟ್ಟು ವ್ಯವಹಾರಗಳ ಸಚಿವಾಲಯ(ಎಂಒಟಿಎ)ವು ಬುಡಕಟ್ಟು ವಲಯದ ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ಬುಡಕಟ್ಟು ಕಲ್ಯಾಣಕ್ಕಾಗಿ ತನ್ನ ಅಚಲ ಸಮರ್ಪಣೆಯನ್ನು ಪ್ರದರ್ಶಿಸಿದೆ. ಹೆಚ್ಚಿನ ಹಣಕಾಸು ಹಂಚಿಕೆ, ವಿವಿಧ ಕ್ಷೇತ್ರಗಳಲ್ಲಿ ನಾನಾ ರೀತಿಯ ಪ್ರಯತ್ನಗಳು, ಕಾರ್ಯಕ್ರಮಗಳು ಮತ್ತು ಉಪಕ್ರಮಗಳ ಪರಿಣಾಮಕಾರಿ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಯೋಜನೆ ಮತ್ತು ಅನುಷ್ಠಾನ ಕಾರ್ಯವಿಧಾನಗಳನ್ನು ಮರುರೂಪಿಸುವ ಮೂಲಕ ಇದನ್ನು ಸಾಧಿಸಲಾಗಿದೆ.

ಬುಡಕಟ್ಟು ವ್ಯವಹಾರಗಳ ಸಚಿವಾಲಯದ 2024 ಯೋಜನೆಗಳು, ಸಾಧನೆಗಳು ಮತ್ತು ಉಪಕ್ರಮಗಳ ಪ್ರಮುಖ ಮುಖ್ಯಾಂಶಗಳು ಕೆಳಗಿನಂತಿವೆ:

ಬುಡಕಟ್ಟು ಸಬಲೀಕರಣ ಮತ್ತು ಪ್ರಗತಿಗಾಗಿ ಬಜೆಟ್

ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ಒಟ್ಟಾರೆ ನೀತಿ, ಯೋಜನೆ ಮತ್ತು ಕಾರ್ಯಕ್ರಮಗಳ ಸಮನ್ವಯಕ್ಕಾಗಿ ನೋಡಲ್ ಸಚಿವಾಲಯವಾಗಿ ಕಾರ್ಯ ನಿರ್ವಹಿಸುತ್ತದೆ. ಇದರ ಕಾರ್ಯಕ್ರಮಗಳು ಮತ್ತು ಯೋಜನೆಗಳು ಇತರೆ ಕೇಂದ್ರ ಸಚಿವಾಲಯಗಳು, ರಾಜ್ಯ ಸರ್ಕಾರಗಳು ಮತ್ತು ಸ್ವಯಂಸೇವಾ ಸಂಸ್ಥೆಗಳ ಪ್ರಯತ್ನಗಳನ್ನು ಬೆಂಬಲಿಸುತ್ತವೆ, ಪೂರಕವಾಗಿ ಹಣಕಾಸಿನ ನೆರವು ಒದಗಿಸುವ ಮೂಲಕ ಮತ್ತು ಪರಿಶಿಷ್ಟ ಪಂಗಡಗಳ ಅಗತ್ಯಗಳ ಆಧಾರದ ಮೇಲೆ ನಿರ್ಣಾಯಕ ಕೊರತೆಗಳನ್ನು ಪರಿಹರಿಸುತ್ತವೆ. ಉದ್ದೇಶಗಳನ್ನು ಪೂರೈಸಲು ಸಚಿವಾಲಯಕ್ಕೆ 2014-15ರಲ್ಲಿ ಮಾಡಲಾಗಿದ್ದ ಬಜೆಟ್ ಹಂಚಿಕೆಯು 4,497.96 ಕೋಟಿ ರೂ.ನಿಂದ 2024-25ರಲ್ಲಿ 13,000 ಕೋಟಿ ರೂ.ಗೆ ಗಣನೀಯ ಏರಿಕೆ ಕಂಡಿದೆ.

ಈಗ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಕ್ರಿಯಾಯೋಜನೆ(ಡಿಎಪಿಎಸ್ಟಿ) ಎಂದು ಕರೆಯಲ್ಪಡುವ ಬುಡಕಟ್ಟು ಉಪಯೋಜನೆ(ಟಿಎಸ್ಪಿ) ಅಡಿ 42 ಸಚಿವಾಲಯಗಳು, ಇಲಾಖೆಗಳು ತಮ್ಮ ಒಟ್ಟು ಯೋಜನಾ ಹಂಚಿಕೆಯ 4.3-17.5% ಹಣವನ್ನು ಪ್ರತಿ ವರ್ಷ ಬುಡಕಟ್ಟು ಅಭಿವೃದ್ಧಿ ಯೋಜನೆಗಳಿಗೆ ನಿಯೋಜಿಸುತ್ತಿವೆ. ಶಿಕ್ಷಣ, ಆರೋಗ್ಯ, ಕೃಷಿ, ನೀರಾವರಿ, ರಸ್ತೆಗಳು, ವಸತಿ, ವಿದ್ಯುದೀಕರಣ, ಉದ್ಯೋಗ ಸೃಷ್ಟಿ ಮತ್ತು ಕೌಶಲ್ಯ ಅಭಿವೃದ್ಧಿಗೆ ಅನುದಾನವನ್ನು ಬಳಸುತ್ತಿವೆ. 2013-14ರಿಂದ ಡಿಎಪಿಎಸ್ಟಿ ನಿಧಿ ಹಂಚಿಕೆಯಲ್ಲಿ ಸುಮಾರು 5.8 ಪಟ್ಟು ಹೆಚ್ಚಾಗಿದೆ, 2013-14ರಲ್ಲಿ ಇದ್ದ 21,525.36 ಕೋಟಿ ರೂ.(ವಾಸ್ತವ ವೆಚ್ಚ)ನಿಂದ 2024-25 ರಲ್ಲಿ 1,24,908 ಕೋಟಿ ರೂ.ಗೆ ಏರಿಕೆ ಕಂಡಿದೆ.

ಬುಡಕಟ್ಟು ಜನಾಂಗದ ಕಲ್ಯಾಣ ಯೋಜನೆಗಳು:

ಧರ್ತಿ ಆಬ ಜಂಜಾಟಿಯ ಗ್ರಾಮ ಉತ್ಕರ್ಷ್ ಅಭಿಯಾನದ ಪ್ರಾರಂಭ

2024 ಅಕ್ಟೋಬರ್ 2ರಂದು ಪ್ರಧಾನಿ ನರೇಂದ್ರ ಮೋದಿ ಅವರು ಜಾರ್ಖಂಡ್ ಹಜಾರಿಬಾಗ್ನಲ್ಲಿ ಧರ್ತಿ ಆಬಾ ಜನಜಾತಿಯಾ ಗ್ರಾಮ ಉತ್ಕರ್ಷ್ ಅಭಿಯಾನಕ್ಕೆ ಚಾಲನೆ ನೀಡಿದರು. ಸುಮಾರು 63,843 ಬುಡಕಟ್ಟು ಹಳ್ಳಿಗಳಲ್ಲಿ ಸಾಮಾಜಿಕ ಮೂಲಸೌಕರ್ಯ, ಆರೋಗ್ಯ, ಶಿಕ್ಷಣ ಮತ್ತು ಜೀವನೋಪಾಯದ ಅಭಿವೃದ್ಧಿಯಲ್ಲಿ ಇರುವ ನಿರ್ಣಾಯಕ ಕೊರತೆಗಳನ್ನು ಪರಿಹರಿಸಲು ಮಹತ್ವಾಕಾಂಕ್ಷೆಯ ಕಾರ್ಯಕ್ರಮವು 79,156 ಕೋಟಿ ರೂ.ಗಿಂತ ಹೆಚ್ಚಿನ ವೆಚ್ಚವನ್ನು ಹೊಂದಿದೆ.

 

ಪ್ರಧಾನಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾಅಭಿಯಾನ (ಪಿಎಂ-ಜನ್ಮನ್)

2023 ನವೆಂಬರ್ 15ರಂದು, ಜಾರ್ಖಂಡ್ ಕುಂತಿಯಲ್ಲಿ ಜಂಜಾತಿಯಾ ಗೌರವ್ ದಿವಸ್ ಸಂದರ್ಭದಲ್ಲಿ, ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪು(ಪಿವಿಟಿಜಿಗಳು) ಗಳನ್ನು ಸಬಲೀಕರಣಗೊಳಿಸಲು ಪ್ರಧಾನ ಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾಅಭಿಯಾನ(ಪಿಎಂ-ಜನ್ಮನ್)ವನ್ನು ಪ್ರಧಾನಿ ಆರಂಭಿಸಿದರು. ಸುರಕ್ಷಿತ ವಸತಿ, ಶುದ್ಧ ಕುಡಿಯುವ ನೀರು, ಶಿಕ್ಷಣ, ಆರೋಗ್ಯ, ರಸ್ತೆ, ದೂರಸಂಪರ್ಕ, ಸಂಪರ್ಕ, ವಿದ್ಯುದ್ದೀಕರಣ ಮತ್ತು ಸುಸ್ಥಿರ ಜೀವನೋಪಾಯಗಳಂತಹ ಕ್ಷೇತ್ರಗಳಲ್ಲಿ ಉದ್ದೇಶಿತ ಬೆಂಬಲದ ಮೂಲಕ ಪಿವಿಜಿಟಿ ಸಮುದಾಯಗಳಿಗೆ ಜೀವನ ಗುಣಮಟ್ಟ ಸುಧಾರಿಸುವ ಗುರಿಯನ್ನು ಪಿಎಂ-ಜನ್ಮನ್ ಹೊಂದಿದೆ.

ಅಭಿಯಾನವು(ಮಿಷನ್) 18 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶದಲ್ಲಿ ನೆಲೆಸಿರುವ 75 ನಿರ್ದಿಷ್ಟ ದುರ್ಬಲ ಬುಡಕಟ್ಟು ಗುಂಪು(ಪಿವಿಜಿಟಿ)ಗಳ ಗುರಿ ಹೊಂದಿದೆ. ಸಮುದಾಯಕ್ಕೆ ಸಚಿವಾಲಯಗಳು ಮತ್ತು ಇಲಾಖೆಗಳ ಯಾವುದೇ ಯೋಜನೆಗಳು  ತಲುಪಿಲ್ಲ. ಆದ್ದರಿಂದ ಮಿಷನ್ ಮೂಲಕ 3 ವರ್ಷಗಳಲ್ಲಿ 9 ಸಚಿವಾಲಯಗಳ ಮಧ್ಯಸ್ಥಿಕೆಗಳಿಂದ 24,000 ಕೋಟಿ ರೂ. ಬಜೆಟ್ ನಲ್ಲಿ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ. ಜನವರಿ 15ರಂದು ಪ್ರಧಾನಿ ಅವರು 4,450 ಕೋಟಿ ರೂಪಾಯಿ ಮೊತ್ತದ ಯೋಜನೆಗಳ ಮಂಜೂರಾತಿಗೆ ಅನುಮೋದನೆ ನೀಡಿದರು. ಡಿಎಪಿಎಸ್ಟಿ ಅಡಿ, ಎಸ್ಟಿಸಿ ಬಜೆಟ್ ಹೆಡ್ನಲ್ಲಿ ಲಭ್ಯವಿರುವ ಹಣ ಬಳಸಿಕೊಂಡು ಪಿವಿಟಿಜಿಗಳಿಗೆ ತಮ್ಮ ಅಸ್ತಿತ್ವದಲ್ಲಿರುವ ಯೋಜನೆಗಳ ಮಧ್ಯಸ್ಥಿಕೆಗಳ ಪ್ರಯೋಜನ ವಿಸ್ತರಿಸಲು 9 ಸಚಿವಾಲಯಗಳನ್ನು ಕಡ್ಡಾಯಗೊಳಿಸಲಾಗಿದೆ. ಸದ್ಯಕ್ಕೆ ಸಚಿವಾಲಯಗಳು 7,356 ಕೋಟಿ. ರೂ. ಮೌಲ್ಯದ ಯೋಜನೆಗಳಿಗೆ ಮಂಜೂರಾತಿ ನೀಡಿವೆ.

ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಪ್ರಧಾನ ಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾಅಭಿಯಾನ(ಪಿಎಂ-ಜನ್ಮನ್) ಮಿಷನ್ ವ್ಯಾಪ್ತಿ ಮತ್ತು ಪರಿಣಾಮಕಾರಿತ್ವ ಹೆಚ್ಚಿಸಲು ರಾಷ್ಟ್ರವ್ಯಾಪಿ ಮಾಹಿತಿ, ಶಿಕ್ಷಣ ಮತ್ತು ಸಂವಹನ(ಐಇಸಿ)  ಅಭಿಯಾನ ಪ್ರಾರಂಭಿಸಿದೆ. 2024 ಆಗಸ್ಟ್ 23ರಿಂದ ಸೆಪ್ಟೆಂಬರ್ 10 ವರೆಗೆ ನಡೆಯುವ ಅಭಿಯಾನವು ನಿರ್ದಿಷ್ಟವಾಗಿ ದುರ್ಬಲ ಬುಡಕಟ್ಟು ಗುಂಪು(ಪಿವಿಟಿಜಿ)ಗಳ ಬಹುಪಾಲು ಪ್ರದೇಶಗಳಲ್ಲಿ ಸರ್ಕಾರಿ ಯೋಜನೆಗಳ 100% ಪರಿಪೂರ್ಣತೆ ಖಚಿತಪಡಿಸಿಕೊಳ್ಳುವ ಗುರಿ ಹೊಂದಿದೆ. ಉಪಕ್ರಮವು ಪಿವಿಟಿಜಿ ಸಮುದಾಯಗಳಿಗೆ ಪ್ರಮುಖ ಮಾಹಿತಿ ಮತ್ತು ಸರ್ಕಾರದ ಪ್ರಯೋಜನಗಳಿಗೆ ಪ್ರವೇಶ ಒದಗಿಸಲು ಪ್ರಯತ್ನಿಸುತ್ತದೆ.

ಅಭಿಯಾನದ ಉದ್ದೇಶಗಳು

  • ಸರ್ಕಾರದ ಯೋಜನೆಗಳ ಅರಿವು ಹೆಚ್ಚಿಸುವ ಮೂಲಕ, ಭಾರತದ 206 ಜಿಲ್ಲೆಗಳಾದ್ಯಂತ ನೆಲೆಸಿರುವ 28,700 ವಸತಿ ತಾಣಗಳಲ್ಲಿ ಅವುಗಳ ಅನುಷ್ಠಾನ ಖಚಿತಪಡಿಸುವುದು.
  • ಪಿವಿಟಿಜಿ ಪ್ರದೇಶಗಳಲ್ಲಿ ಸುಮಾರು 44.6 ಲಕ್ಷ ವ್ಯಕ್ತಿಗಳನ್ನು(10.7 ಲಕ್ಷ ಮನೆಗಳನ್ನು) ತಲುಪುವುದು.
  • ಪಿವಿಟಿಜಿ ಕುಟುಂಬಗಳ ಮನೆ ಬಾಗಿಲಿಗೆ ಅಗತ್ಯ ದಾಖಲೆಗಳು ಮತ್ತು ಸೇವೆಗಳನ್ನು ಒದಗಿಸಿ, ದೂರ, ರಸ್ತೆ ಮತ್ತು ಡಿಜಿಟಲ್ ಸಂಪರ್ಕದಂತಹ ಸವಾಲುಗಳನ್ನು ಪರಿಹರಿಸುವುದು.

ಪ್ರಧಾನಮಂತ್ರಿ ಆದಿ ಆದರ್ಶ ಗ್ರಾಮ ಯೋಜನೆ(ಪಿಎಎಎಜಿವೈ)

ಬುಡಕಟ್ಟು ಉಪಯೋಜನೆಗೆ ವಿಶೇಷ ಕೇಂದ್ರ ನೆರವು(ಎಸ್ ಸಿಎಯಿಂದ ಟಿಎಸ್ಎಸ್) 1977-78ರಲ್ಲಿ ಪ್ರಾರಂಭವಾಯಿತು, ಇದು ಬುಡಕಟ್ಟು ಕಲ್ಯಾಣಕ್ಕಾಗಿ ಅಭಿವೃದ್ಧಿ ಕೊರತೆ ಕಡಿಮೆ ಮಾಡುವ ಗುರಿ ಹೊಂದಿದೆ. 2021-22ರಲ್ಲಿ ಯೋಜನೆಯನ್ನು ಪ್ರಧಾನ ಮಂತ್ರಿ ಆದಿ ಆದರ್ಶ ಗ್ರಾಮ ಯೋಜನೆ(ಪಿಎಂಎಎಜಿವೈ) ಎಂದು ಪರಿಷ್ಕರಿಸಲಾಯಿತು, ಇದು ಗಮನಾರ್ಹವಾದ ಬುಡಕಟ್ಟು ಜನಸಂಖ್ಯೆ ಹೊಂದಿರುವ ಹಳ್ಳಿಗಳಲ್ಲಿ ಮೂಲಸೌಕರ್ಯಗಳನ್ನು ಒದಗಿಸುವುದರ ಮೇಲೆ ಗಮನ ಕೇಂದ್ರೀಕರಿಸಿದೆ. ಪಿಎಂಎಎಜಿವೈ ಅಡಿ, ಕನಿಷ್ಠ 50% ಬುಡಕಟ್ಟು ಜನಸಂಖ್ಯೆ ಹೊಂದಿರುವ 36,428 ಹಳ್ಳಿಗಳನ್ನು ಅಭಿವೃದ್ಧಿಗಾಗಿ ಗುರುತಿಸಲಾಗಿದೆ, ಇದರಲ್ಲಿ ಮಹತ್ವಾಕಾಂಕ್ಷೆಯ ಜಿಲ್ಲೆಗಳ 1.02 ಕೋಟಿ ಕುಟುಂಬಗಳು ಮತ್ತು ಎಸ್ಟಿ ಜನಸಂಖ್ಯೆ 4.22 ಕೋಟಿ ಸಹ ಸೇರಿವೆ. ವಿವಿಧ ಕುಂದುಕೊರತೆಗಳನ್ನು ನಿವಾರಿಸಲು ಪರಿಶಿಷ್ಟ ಪಂಗಡದ ಘಟಕ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಕೇಂದ್ರ ಸರ್ಕಾರದ 58 ಯೋಜನೆಗಳೊಂದಿಗೆ ಸೇರಿಸಲಾಗಿದ್ದು, 5 ವರ್ಷಗಳ ಕಾರ್ಯಕ್ರಮದಡಿ 7,276 ಕೋಟಿ ರೂ. ಮೀಸಲಿಡಲಾಗಿದೆ. ಯೋಜನೆ ಆರಂಭದಿಂದ 2357.50 ಕೋಟಿ ರೂ. ಹಣ ಬಿಡುಗಡೆಯೊಂದಿಗೆ 17,616 ಗ್ರಾಮಾಭಿವೃದ್ಧಿ ಯೋಜನೆಗಳನ್ನು ಅನುಮೋದಿಸಲಾಗಿದೆ.

ಪ್ರಧಾನ ಮಂತ್ರಿ ಜನಜಾತಿಯಾ ವಿಕಾಸ್ ಮಿಷನ್(ಪಿಎಂಜೆವಿವೈ)

ಪಿಎಂಜೆವಿವೈ ಬುಡಕಟ್ಟು ವಾಣಿಜ್ಯೋದ್ಯಮ ಉತ್ತೇಜಿಸುವ ಗುರಿ ಹೊಂದಿದೆ ಮತ್ತು "ಬುಡಕಟ್ಟು ಜನಾಂಗದ ಸ್ಥಳೀಯರಿಗೆ ಧ್ವನಿ" ಉಪಕ್ರಮವನ್ನು ಮುನ್ನಡೆಸುತ್ತದೆ. ಸ್ಥಳೀಯವಾಗಿ ಉತ್ಪಾದಿಸಿದ ಸರಕುಗಳ ಸುತ್ತ ಕೇಂದ್ರೀಕೃತವಾಗಿರುವ ವ್ಯವಹಾರಗಳನ್ನು ಬೆಂಬಲಿಸುವ ಮೂಲಕ ಕಿರು ಅರಣ್ಯ ಉತ್ಪನ್ನಗಳು(ಎಂಎಫ್ ಪಿಗಳು)  ಮತ್ತು ಎಂಎಫ್ ಪಿ ಅಲ್ಲದ ಉತ್ಪನ್ನಗಳು ಒಳಗೊಂಡಂತೆ ನೈಸರ್ಗಿಕ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಬುಡಕಟ್ಟು ಸಮುದಾಯಗಳಿಗೆ ಅಧಿಕಾರ ನೀಡುವುದನ್ನು ಇದು ಖಚಿತಪಡಿಸುತ್ತದೆ. ವನ್ ಧನ್ ವಿಕಾಸ ಕೇಂದ್ರಗಳು, ವನ್ ಧನ್ ಉತ್ಪಾದಕ ಉದ್ಯಮಗಳನ್ನು ಸ್ಥಾಪಿಸುವ ಮೂಲಕ ದೇಶಾದ್ಯಂತ ಜೀವನೋಪಾಯ-ಚಾಲಿತ ಬುಡಕಟ್ಟು ಅಭಿವೃದ್ಧಿಯನ್ನು ಸಾಧಿಸಲು ಪ್ರಯತ್ನಿಸುತ್ತದೆ. ಜತೆಗೆ, ಕನಿಷ್ಠ ಬೆಂಬಲ ಬೆಲೆಯಲ್ಲಿ ಕಿರು ಅರಣ್ಯ ಉತ್ಪನ್ನ ಸಂಗ್ರಹಿಸಲು ರಾಜ್ಯಗಳಿಗೆ ಸಹಾಯ ಮಾಡುತ್ತದೆ. ಯೋಜನೆಯಡಿ, 1,612 ಕೋಟಿ ರೂ. ವೆಚ್ಚದಲ್ಲಿ 3,000 ಹಾಟ್ ಬಜಾರ್ಗಳು ಮತ್ತು 600 ಗೋದಾಮುಗಳನ್ನು ಸ್ಥಾಪಿಸಲು ಸಹ ಅವಕಾಶವಿದೆ. 5 ವರ್ಷಗಳವರೆಗೆ ಪಿಎಂಜೆವಿಎಂ  ಯೋಜನೆಯಡಿ ಅನುಮೋದಿಸಲಾಗಿದೆ. ಟ್ರೈಫೆಡ್, ಪ್ರಧಾನ ಮಂತ್ರಿ ಜನಜಾತಿಯ ವಿಕಾಸ್ ಮಿಷನ್ ಅನುಷ್ಠಾನ ಸಂಸ್ಥೆಯಾಗಿದೆ. 28 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಮಾರು 12 ಲಕ್ಷ ಜನರನ್ನು ಒಳಗೊಂಡ 3,959 ವನ್ ಧನ್ ವಿಕಾಸ ಕೇಂದ್ರಗಳನ್ನು(ವಿಡಿವಿಕೆಎಸ್ ಗಳು) 587.52 ಕೋಟಿ ರೂ.ಗಳ ನಿಧಿಯೊಂದಿಗೆ ಮಂಜೂರು ಮಾಡಲಾಗಿದೆ.

ಇತರೆ ಉಪಕ್ರಮಗಳು:

  • ಕಿರು ಅರಣ್ಯ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆ ಯೋಜನೆಗೆ 87 ಕಿರು ಅರಣ್ಯ ಉತ್ಪನ್ನಗಳನ್ನು ಸೇರಿಸಲು ಅಧಿಸೂಚಿತ ಉತ್ಪನ್ನಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.
  • ಕಿರು ಅರಣ್ಯ ಉತ್ಪನ್ನಗಳ ಖರೀದಿಗಾಗಿ ರಾಜ್ಯ ಸರ್ಕಾರಗಳಿಗೆ 319.65 ಕೋಟಿ ರೂ.ಗಳನ್ನು ಆವರ್ತ ನಿಧಿಯಾಗಿ ಬಿಡುಗಡೆ ಮಾಡಲಾಗಿದೆ. ಈವರೆಗಿನ ಒಟ್ಟು ಸಂಗ್ರಹಣೆ 665.34 ಕೋಟಿ ರೂ. ಆಗಿದೆ.
  • 1316 ಹಾಟ್ ಬಜಾರ್ಗಳು, 603 ಸಣ್ಣ ಶೇಖರಣಾ ಘಟಕಗಳು ಮತ್ತು 22 ಸಂಸ್ಕರಣಾ ಘಟಕಗಳನ್ನು ಮಂಜೂರು ಮಾಡಿ, ಅವುಗಳಿಗೆ ಮೂಲಸೌಕರ್ಯ ಸೃಷ್ಟಿಸಲು ರಾಜ್ಯ ಸರ್ಕಾರಗಳಿಗೆ 89.14 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

ಏಕಲವ್ಯ ಮಾದರಿ ವಸತಿ ಶಾಲೆಗಳು

2018-19ರಲ್ಲಿ ಆರಂಭವಾದ ಏಕಲವ್ಯ ಮಾದರಿ ವಸತಿ ಶಾಲೆ(ಇಎಂಆರ್) ಯೋಜನೆಯು ಬುಡಕಟ್ಟು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ಗುರಿ ಹೊಂದಿದೆ, ಅವರ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಕೌಶಲ್ಯ ಅಭಿವೃದ್ಧಿಗೆ ಇವು ಗಮನ ಕೇಂದ್ರೀಕರಿಸುತ್ತದೆ. 2024 ಅಕ್ಟೋಬರ್ 2ರಂದು ಪ್ರಧಾನ ಮಂತ್ರಿ ಅವರು 2,800 ಕೋಟಿ ರೂ. ವೆಚ್ಚದ 40 ಏಕಲವ್ಯ ಮಾದರಿ ವಸತಿ ಶಾಲೆ(ಇಎಂಆರ್)ಗಳನ್ನು ಉದ್ಘಾಟಿಸಿದರು, ಹೆಚ್ಚುವರಿಯಾಗಿ  25 ಶಾಲೆಗಳ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಇಲ್ಲಿಯವರೆಗೆ, 728 ಏಕಲವ್ಯ ಮಾದರಿ ವಸತಿ ಶಾಲೆಗಳಿಗೆ ಅನುಮೋದನೆ ನೀಡಲಾಗಿದೆ.

2013-14ರಲ್ಲಿ 167 ಶಾಲೆಗಳಿಗೆ ಮಂಜೂರಾತಿ ನೀಡಲಾಗಿದ್ದು, 2024 ನವೆಂಬರ್ ವೇಳೆಗೆ ಅವುಗಳ ಸಂಖ್ಯೆ 715ಕ್ಕೆ ಏರಿಕೆಯಾಗಿದೆ. ಪ್ರಸ್ತುತ,  ಏಕಲವ್ಯ ಮಾದರಿ ವಸತಿ ಶಾಲೆಗಳ ಮರುಕಳಿಸುವ ವೆಚ್ಚ 2023-24ರಲ್ಲಿ 1,09,000 ರೂ.(ಪ್ರತಿ ವರ್ಷಕ್ಕೆ ಪ್ರತಿ ವಿದ್ಯಾರ್ಥಿಗೆ) ಬರುತ್ತಿದೆ. ಅದು 2013-14ರಲ್ಲಿ 24,200 ರೂ. ಇತ್ತು. ಒಟ್ಟು ನೋಂದಾಯಿತ ವಿದ್ಯಾರ್ಥಿಗಳ ಸಂಖ್ಯೆ 2013-14ರಲ್ಲಿ ಇದ್ದ 34,365ಕ್ಕೆ ಹೋಲಿಸಿದರೆ 2023-2024ರಲ್ಲಿ 1.33 ಲಕ್ಷಕ್ಕೆ ಏರಿಕೆಯಾಗಿದೆ.

ಮುಂದಿನ 3 ವರ್ಷಗಳಲ್ಲಿ ಕೇಂದ್ರವು 3.5 ಲಕ್ಷ ಬುಡಕಟ್ಟು ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ 728 ಏಕಲವ್ಯ ಮಾದರಿ ವಸತಿ ಶಾಲೆಗಳಿಗೆ 38,800 ಶಿಕ್ಷಕರು ಮತ್ತು ಸಹಾಯಕ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಿದೆ. ಆಯ್ಕೆಯಾದ 9,023 ಅರ್ಹ ಅಭ್ಯರ್ಥಿಗಳಿಗೆ (ಬೋಧಕ ಮತ್ತು ಬೋಧಕೇತರ ಸಿಬ್ಬಂದಿ) ನೇಮಕಾತಿ ಪತ್ರಗಳನ್ನು ನೀಡಲಾಗಿದೆ.

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಒಡಿಶಾದ ಮಯೂರ್ಭಂಜ್ ಬರ್ಸಾಹಿಯಲ್ಲಿ ಏಕಲವ್ಯ ಮಾದರಿ ವಸತಿ ಶಾಲೆ ಉದ್ಘಾಟಿಸಿದರು

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಒಡಿಶಾದ ಮಯೂರ್ಭಂಜ್ ಬಡಸಾಹಿಯಲ್ಲಿ ಹೊಸದಾಗಿ ನಿರ್ಮಿಸಲಾದ ಏಕಲವ್ಯ ಮಾದರಿ ವಸತಿ ಶಾಲೆ(ಇಎಂಆರ್ಎಸ್)ಯನ್ನು ಉದ್ಘಾಟಿಸಿದರು. ಬಡಸಾಹಿ ಇಎಂಆರ್ಎಸ್ ಕ್ಯಾಂಪಸ್ ಅನ್ನು ಸುಮಾರು 8 ಎಕರೆ ವಿಶಾಲ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಒಂದು ವಿಶಿಷ್ಟವಾದ ಇಎಂಆರ್ಎಸ್ ಕ್ಯಾಂಪಸ್, 240 ಹೆಣ್ಣು ಮಕ್ಕಳು ಮತ್ತು 240 ಗಂಡು ಮಕ್ಕಳನ್ನು ಒಳಗೊಂಡಿರುವ ಒಟ್ಟು 480 ವಿದ್ಯಾರ್ಥಿಗಳಿಗೆ 16 ತರಗತಿ ಕೊಠಡಿಗಳನ್ನು ಹೊಂದಿರುತ್ತದೆ. ಪ್ರತ್ಯೇಕ ಬಾಲಕರ ಮತ್ತು ಬಾಲಕಿಯರ ಹಾಸ್ಟೆಲ್ಗಳು, ಮೆಸ್, ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ವಸತಿ ಸೌಕರ್ಯಗಳು, ಆಡಳಿತಾತ್ಮಕ ಬ್ಲಾಕ್, ಆಟದ ಮೈದಾನ, ಕಂಪ್ಯೂಟರ್ ಮತ್ತು ವಿಜ್ಞಾನ ಪ್ರಯೋಗಾಲಯಗಳಿವೆ. ಶಾಲೆಗಳು ಪ್ರದೇಶದ ಬುಡಕಟ್ಟು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಮೈಲಿಗಲ್ಲು ಎಂದು ಸಾಬೀತುಪಡಿಸುತ್ತದೆ.

ರಾಷ್ಟ್ರಪತಿ ಭವನದಲ್ಲಿ ಆಯೋಜಿತವಾಗಿರುವ ಉದ್ಯಾನ ಉತ್ಸವ ಮತ್ತು ವಿವಿಧತಾ ಕಾ ಅಮೃತ್ ಮಹೋತ್ಸವ-2024ರಲ್ಲಿ 3 ಈಶಾನ್ಯ ರಾಜ್ಯಗಳ ಇಎಂಆರ್ಎಸ್ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ

ಬುಡಕಟ್ಟು ವಿದ್ಯಾರ್ಥಿಗಳ ರಾಷ್ಟ್ರೀಯ ಶಿಕ್ಷಣ ಸೊಸೈಟಿ (ಎನ್ಇಎಸ್ ಟಿಎಸ್)ಯು, 2024 ಫೆಬ್ರವರಿ 8ರಿಂದ 12 ವರೆಗೆ ದೆಹಲಿಯಲ್ಲಿ 3 ಈಶಾನ್ಯ ರಾಜ್ಯಗಳಾದ ಮಣಿಪುರ, ಸಿಕ್ಕಿಂ ಮತ್ತು ತ್ರಿಪುರಾದ ಏಕಲವ್ಯ ಮಾದರಿ ವಸತಿ ಶಾಲೆಗಳ 255 ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಶೈಕ್ಷಣಿಕ ವಿಹಾರ ಆಯೋಜಿಸಿದೆ. ಇದಲ್ಲದೆ, ರಾಷ್ಟ್ರಪತಿ ಭವನವು ಎನ್ಇಎಸ್ ಟಿಎಸ್ ಸಮನ್ವಯದೊಂದಿಗೆ ವಿದ್ಯಾರ್ಥಿಗಳಿಗೆ ರಾಷ್ಟ್ರಪತಿ ಮ್ಯೂಸಿಯಂ ಮತ್ತು ಅಮೃತ್ ಉದ್ಯಾನ್ಗೆ ಫೆಬ್ರವರಿ 8ರಂದು ಭೇಟಿ ನೀಡಲು ಅವಕಾಶ ನೀಡಿದೆ. ಭೇಟಿಯು ಬುಡಕಟ್ಟು ವಿದ್ಯಾರ್ಥಿಗಳಿಗೆ ಮಹತ್ವದ ಮೈಲಿಗಲ್ಲನ್ನು ಗುರುತಿಸಲಿದೆ. ಏಕೆಂದರೆ ಇದು ರಾಜಧಾನಿ ಅನ್ವೇಷಿಸಲು, ಅಮೃತ್ ಉದ್ಯಾನ್ ಮತ್ತು ರಾಷ್ಟ್ರಪತಿ ಭವನದ ಸೌಂದರ್ಯ ಸವಿಯಲು ಅವರಿಗೆ ಮೊದಲ ಬಾರಿಗೆ ಅವಕಾಶ ಕಲ್ಪಿಸಿದೆ. ದೆಹಲಿಯ ಭವ್ಯತೆಗೆ ಸಾಕ್ಷಿಯಾದ ಅಮೃತ್ ಉದ್ಯಾನ್, ರಾಷ್ಟ್ರಪತಿ ಭವನ ಮತ್ತು ವಸ್ತುಸಂಗ್ರಹಾಲಯದ ಐತಿಹಾಸಿಕ ಮಹತ್ವವು ವಿದ್ಯಾರ್ಥಿಗಳ ಮೇಲೆ ಅಳಿಸಲಾಗದ ಪ್ರಭಾವ ಬೀರಲಿದೆ. ಭಾರತದ ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯ ಬಗ್ಗೆ ಅವರ ತಿಳುವಳಿಕೆಯನ್ನು ಪುಷ್ಟೀಕರಿಸಲಿದೆ. ಇದಲ್ಲದೆ, ವಿದ್ಯಾರ್ಥಿಗಳು ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರೊಂದಿಗೆ ಸ್ಮರಣೀಯ ಸಂವಾದ ನಡೆಸುವ ಗೌರವ ಪಡೆಯಲಿದ್ದಾರೆ.

ಎನ್ಇಎಸ್ ಟಿಎಸ್ ನಾಳೆಯಿಂದ ಭುವನೇಶ್ವರದಲ್ಲಿ 5ನೇ ರಾಷ್ಟ್ರೀಯ ಇಎಂಆರ್ಎಸ್ ಸಾಂಸ್ಕೃತಿಕ ಮತ್ತು ಸಾಹಿತ್ಯ ಉತ್ಸವ ಮತ್ತು ಕಲಾ ಉತ್ಸವ ಆಯೋಜಿಸಿದೆ

ಬುಡಕಟ್ಟು ವಿದ್ಯಾರ್ಥಿಗಳ ರಾಷ್ಟ್ರೀಯ ಶಿಕ್ಷಣ ಸೊಸೈಟಿ(ಎನ್ಇಎಸ್ ಟಿಎಸ್) 5ನೇ ರಾಷ್ಟ್ರೀಯ ಇಎಂಆರ್ಎಸ್ ಸಾಂಸ್ಕೃತಿಕ ಮತ್ತು ಸಾಹಿತ್ಯ ಉತ್ಸವ ಮತ್ತು ಕಲಾ ಉತ್ಸವ - 2024 ಆಯೋಜಿಸಿತ್ತು. ಭವ್ಯ ಕಾರ್ಯಕ್ರಮವು 2024 ನವೆಂಬರ್ 12ರಿಂದ 15 ವರೆಗೆ ಶಿಕ್ಷಾ '' ಅನುಸಂಧಾನ, ಖಂಡಗಿರಿ, ಭುವನೇಶ್ವರ್, ಒಡಿಶಾದಲ್ಲಿ ನಡೆಯಿತು. ಒಡಿಶಾ ಮಾಡೆಲ್ ಟ್ರೈಬಲ್ ಎಜುಕೇಷನಲ್ ಸೊಸೈಟಿ ಕಾರ್ಯಕ್ರಮ ಆಯೋಜಿಸಿತ್ತು.

ಏಕಲವ್ಯ ಮಾದರಿ ವಸತಿ ಶಾಲೆಗಳಿಗಾಗಿ ಎನ್ಇಎಸ್ ಟಿಎಸ್ ನಿಂದ 'ಅಮೆಜಾನ್ ಫ್ಯೂಚರ್ ಎಂಜಿನಿಯರ್ ಕಾರ್ಯಕ್ರಮ'

ನ್ಯಾಷನಲ್ ಎಜುಕೇಶನ್ ಸೊಸೈಟಿ ಫಾರ್ ಟ್ರೈಬಲ್ ಸ್ಟೂಡೆಂಟ್ಸ್(ಎನ್ಇಸ್ ಟಿಎಸ್) ಆಂಧ್ರ ಪ್ರದೇಶ, ಗುಜರಾತ್, ಕರ್ನಾಟಕ, ಮಧ್ಯಪ್ರದೇಶ, ಒಡಿಶಾ, ತೆಲಂಗಾಣ ಮತ್ತು ತ್ರಿಪುರಾದಲ್ಲಿ ಹರಡಿರುವ 50 ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ ಅಮೆಜಾನ್ ಫ್ಯೂಚರ್ ಎಂಜಿನಿಯರ್ ಕಾರ್ಯಕ್ರಮದ 3ನೇ ಹಂತವನ್ನು ಪ್ರಾರಂಭಿಸಿತು. 3ನೇ ಹಂತವು ಬ್ಲಾಕ್ಚೈನ್, ಕೃತಕ ಬುದ್ಧಿಮತ್ತೆ, ಕೋಡಿಂಗ್, ಬ್ಲಾಕ್ ಪ್ರೋಗ್ರಾಮಿಂಗ್ ಮತ್ತು ಎಐ ಅವಧಿಗಳ ಮೇಲಿನ ದೃಷ್ಟಿಕೋನವನ್ನು ಒಳಗೊಂಡಿದೆ.

ಬುಡಕಟ್ಟು ವಿದ್ಯಾರ್ಥಿಗಳಿಗೆ ಸೆಮಿಕಂಡಕ್ಟರ್ ತಂತ್ರಜ್ಞಾನದಲ್ಲಿ ತರಬೇತಿ

 

ಭಾರತ ಸರ್ಕಾರದ ಬುಡಕಟ್ಟು ವ್ಯವಹಾರಗಳ ಸಚಿವಾಲಯವು  2023-24 ಆರ್ಥಿಕ ವರ್ಷದಲ್ಲಿ ಕೇಂದ್ರ ವಲಯದ ಯೋಜನೆ ಬುಡಕಟ್ಟು ಸಂಶೋಧನಾ ಮಾಹಿತಿ, ಶಿಕ್ಷಣ, ಸಂವಹನ ಮತ್ತು ಘಟನೆಗಳು(TRI-ECE)” ಅಡಿ, ಬುಡಕಟ್ಟು ಸಮುದಾಯದ ವಿದ್ಯಾರ್ಥಿಗಳಿಗೆ ಸೆಮಿಕಂಡಕ್ಟರ್ ಫ್ಯಾಬ್ರಿಕೇಶನ್ ಮತ್ತು ಕ್ಯಾರೆಕ್ಟರೈಸೇಶನ್ ಟ್ರೈನಿಂಗ್ ಯೋಜನೆ ಆರಂಭಿಸಿದೆ. ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್(ಐಐಎಸ್ಸಿ)ಸೆಂಟರ್ ಫಾರ್ ನ್ಯಾನೋ ಸೈನ್ಸ್ ಮತ್ತು ಎಂಜಿನಿಯರಿಂಗ್ಗೆ ಯೋಜನೆಯ ನಿರ್ವಹಣೆ ಜವಾಬ್ದಾರಿ ವಹಿಸಿದೆ. 3 ವರ್ಷಗಳಲ್ಲಿ ಬುಡಕಟ್ಟು ವಿದ್ಯಾರ್ಥಿಗಳಿಗೆ ಸೆಮಿಕಂಡಕ್ಟರ್ ತಂತ್ರಜ್ಞಾನದಲ್ಲಿ 2100 ಎನ್ಎಸ್ ಕ್ಯುಎಫ್-ಪ್ರಮಾಣೀಕೃತ ಮಟ್ಟದ 6.0 ಮತ್ತು 6.5 ತರಬೇತಿ ನೀಡಲು ಯೋಜನೆಯು ಗುರಿ ಹೊಂದಿದೆ.

ಬುಡಕಟ್ಟು ವ್ಯವಹಾರಗಳ ಸಚಿವಾಲಯ ಮತ್ತು ಆಯುಷ್ ಜಂಟಿಯಾಗಿ ಆಯುರ್ವೇದ ಮಧ್ಯಸ್ಥಿಕೆಗಳ ಮೂಲಕ ಬುಡಕಟ್ಟು ವಿದ್ಯಾರ್ಥಿಗಳ ತಪಾಸಣೆ ಮತ್ತು ಆರೋಗ್ಯ ನಿರ್ವಹಣೆಗಾಗಿ ರಾಷ್ಟ್ರೀಯ ಮಟ್ಟದ ಯೋಜನೆ ಆರಂಭಿಸಿದೆ

ಆಯುಷ್ ಸಚಿವಾಲಯವು ತನ್ನ ಸೆಂಟ್ರಲ್ ಕೌನ್ಸಿಲ್ ಫಾರ್ ರಿಸರ್ಚ್ ಇನ್ ಆಯುರ್ವೇದಿಕ್ ಸೈನ್ಸಸ್ ಸಹಯೋಗದೊಂದಿಗೆ ಬುಡಕಟ್ಟು ವಿದ್ಯಾರ್ಥಿಗಳಿಗೆ ಆರೋಗ್ಯ ಉಪಕ್ರಮವನ್ನು ಬುಡಕಟ್ಟು ವ್ಯವಹಾರಗಳ ಸಚಿವಾಲಯ ಮತ್ತು ಜಬಲ್ಪುರದ ಐಸಿಎಂಆರ್-ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ರಿಸರ್ಚ್ ಇನ್ ಟ್ರೈಬಲ್ ಹೆಲ್ತ್ ಸಹಭಾಗಿತ್ವದಲ್ಲಿ ಕೈಗೊಂಡಿದೆಇದು ದೇಶದ ಬುಡಕಟ್ಟು ಪ್ರದೇಶಗಳಲ್ಲಿ ಏಕಲವ್ಯ ಶಾಲೆಗಳ ವಿದ್ಯಾರ್ಥಿಗಳ ಆರೋಗ್ಯ ಅಗತ್ಯತೆಗಳನ್ನು ಪೂರೈಸುವ ಗುರಿ ಹೊಂದಿದೆ. ಯೋಜನೆಯು 20,000ಕ್ಕಿಂತ ಹೆಚ್ಚಿನ ಬುಡಕಟ್ಟು ವಿದ್ಯಾರ್ಥಿಗಳಿಗೆ ಪ್ರಯೋಜನ ನೀಡುತ್ತದೆ.

ಬುಡಕಟ್ಟು ಸಬಲೀಕರಣಕ್ಕಾಗಿ ವಿದ್ಯಾರ್ಥಿವೇತನ

ಭಾರತ ಸರ್ಕಾರವು ಬುಡಕಟ್ಟು ವಿದ್ಯಾರ್ಥಿಗಳಿಗೆ 5 ವಿದ್ಯಾರ್ಥಿವೇತನ ಯೋಜನೆಗಳನ್ನು ಜಾರಿಗೊಳಿಸಿದೆ. ಇದರ ಅಡಿಪ್ರತಿ ವರ್ಷ 30 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತದೆ. ಇದಕ್ಕಾಗಿ ವಾರ್ಷಿಕ ಬಜೆಟ್ 2,500 ಕೋಟಿ ರೂ. ಮೀಸಲಿಡಲಾಗಿದೆ. ಬುಡಕಟ್ಟು ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ವಿದ್ಯಾರ್ಥಿವೇತನಗಳು ಸಹ ಲಭ್ಯವಿದೆ. ಶಾಲೆ ತೊರೆಯುವ ಮಕ್ಕಳ ಪ್ರಮಾಣ ಕಡಿಮೆ ಮಾಡುವ ಮತ್ತು ಅವರ ಶೈಕ್ಷಣಿಕ ಪ್ರಗತಿ ಉತ್ತೇಜಿಸುವ ಗುರಿಯನ್ನು ಇದು ಹೊಂದಿದೆ. ಎಲ್ಲಾ ಹಣಕಾಸಿನ ನೆರವುಗಳು ಬುಡಕಟ್ಟು ಸಮುದಾಯಗಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಪ್ರವೇಶ ಮತ್ತು ಉತ್ತಮ ಭವಿಷ್ಯ ನಿರ್ಮಿಸುವ ಅವಕಾಶವನ್ನು ಖಚಿತಪಡಿಸುತ್ತದೆ.

1. ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಯೋಜನೆಗಳು

ಮೆಟ್ರಿಕ್ ಪೂರ್ವ ಸ್ಕಾಲರ್ಶಿಪ್: 9 ಮತ್ತು 10ನೇ ತರಗತಿಗಳಲ್ಲಿ ಕಲಿಯುವ ಎಸ್ಟಿ  ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ಮಾಧ್ಯಮಿಕ ಶಿಕ್ಷಣಕ್ಕೆ ಪರಿವರ್ತನೆ ಆಗಲು  ಉತ್ತೇಜನ.

ಪೋಸ್ಟ್-ಮೆಟ್ರಿಕ್ ಸ್ಕಾಲರ್ಶಿಪ್: ಎಸ್ಟಿ ವಿದ್ಯಾರ್ಥಿಗಳಿಗೆ 11ನೇ ತರಗತಿಯಿಂದ ಸ್ನಾತಕೋತ್ತರ ಕೋರ್ಸ್ಗಳ ತನಕ ಆರ್ಥಿಕ ನೆರವು, ಉನ್ನತ ಶಿಕ್ಷಣ ಬೆಂಬಲಿಸುತ್ತದೆ.

2. ಎಸ್ಟಿ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಸಾಗರೋತ್ತರ ವಿದ್ಯಾರ್ಥಿವೇತನ: ಯೋಜನೆಯು ಪ್ರತಿಭಾವಂತ ಎಸ್ಟಿ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ, ಡಾಕ್ಟರೇಟ್ ಮತ್ತು ಪೋಸ್ಟ್-ಡಾಕ್ಟರೇಟ್ ಅಧ್ಯಯನ ಮುಂದುವರಿಸಲು ಅವಕಾಶ ನೀಡುತ್ತದೆ.

3. ಎಸ್ಟಿ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಫೆಲೋಶಿಪ್: ಫೆಲೋಶಿಪ್ ಯೋಜನೆಯು ಸಂಪೂರ್ಣ ಡಿಜಿಟಲ್ ಪ್ರಕ್ರಿಯೆ ಮೂಲಕ ಉನ್ನತ ಶಿಕ್ಷಣ ಸೇರುವ ಬುಡಕಟ್ಟು ವಿದ್ಯಾರ್ಥಿಗಳಿಗೆ ಬೆಂಬಲ ನೀಡುತ್ತದೆ, ಡಿಜಿಲಾಕರ್ ಏಕೀಕರಣದ ಮೂಲಕ ಸಕಾಲಿಕ ಹಣಕಾಸು ನೆರವು ಮತ್ತು ಕುಂದುಕೊರತೆ ಪರಿಹಾರವನ್ನು ಖಚಿತಪಡಿಸುತ್ತದೆ.

ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಪಡೆಯುತ್ತಿದ್ದ 589 ಬುಡಕಟ್ಟು ವಿದ್ಯಾರ್ಥಿಗಳಿಗೆ  ನವದೆಹಲಿಯ ಗಣರಾಜ್ಯೋತ್ಸವ ಆಚರಣೆಗೆ ವಿಶೇಷ ಅತಿಥಿಗಳಾಗಿ ಆಹ್ವಾನ ನೀಡಲಾಗಿತ್ತು

2024 ಜನವರಿ 26ರಂದು ಭಾರತೀಯ ಗಣರಾಜ್ಯದ ವಜ್ರ ಮಹೋತ್ಸವದ ಆಚರಣೆ ಸಂದರ್ಭದಲ್ಲಿ, ಹೊಸ ದೆಹಲಿಯಲ್ಲಿ ಆಯೋಜಿತವಾಗಿದ್ದ ಗಣರಾಜ್ಯೋತ್ಸವ-2024 ಆಚರಣೆಯಲ್ಲಿ ಭಾಗವಹಿಸುವಂತೆ ಕೇಂದ್ರ ಸರ್ಕಾರವು 663 ಬುಡಕಟ್ಟು ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ವಿಶೇಷ ಅತಿಥಿಗಳಾಗಿ ಆಹ್ವಾನಿಸಿತ್ತು. 31 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಂದ 589 ವಿದ್ಯಾರ್ಥಿಗಳು(258 ಹುಡುಗಿಯರು, 331 ಹುಡುಗರು) ಮತ್ತು 74 ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಕ್ಕಳು ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಜಾರಿಗೊಳಿಸಿದ ಯೋಜನೆಯಡಿ ನೀಡಲಾಗುವ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನದ ಫಲಾನುಭವಿಗಳೂ ಆಗಿದ್ದಾರೆ.

• 2024  ಫೆಬ್ರವರಿ 10ರಂದು ಭಾರತದ ರಾಷ್ಟ್ರಪತಿ ದೆಹಲಿಯ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆದಿ ಮಹೋತ್ಸವ ಉದ್ಘಾಟಿಸಿದರು

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು 2024 ಫೆಬ್ರವರಿ 10ರಂದು ದೆಹಲಿಯ ಮೇಜರ್ ಧ್ಯಾನ್ ಚಂದ್ ನ್ಯಾಷನಲ್ ಸ್ಟೇಡಿಯಂನಲ್ಲಿ ಮೆಗಾ ರಾಷ್ಟ್ರೀಯ ಬುಡಕಟ್ಟು ಉತ್ಸವವಾದ ಆದಿ ಮಹೋತ್ಸವ ಉದ್ಘಾಟಿಸಿದರು. ಆದಿ ಮಹೋತ್ಸವವು ಬುಡಕಟ್ಟು ಸಂಸ್ಕೃತಿಯನ್ನು ರಾಷ್ಟ್ರೀಯ ವೇದಿಕೆಯಲ್ಲಿ ಪ್ರದರ್ಶಿಸುವ ಪ್ರಯತ್ನವಾಗಿದೆ, ಇದು ಬುಡಕಟ್ಟು ಸಂಸ್ಕೃತಿ, ಪಾಕ ಪದ್ಧತಿ, ವಾಣಿಜ್ಯ ಮತ್ತು ಸಾಂಪ್ರದಾಯಿಕ ಕಲೆಯ ಚೈತನ್ಯವನ್ನು ಆಚರಿಸುತ್ತದೆ. ಇದು ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಅಡಿ, ಟ್ರೈಬಲ್ ಕೋಆಪರೇಟಿವ್ ಮಾರ್ಕೆಟಿಂಗ್ ಡೆವಲಪ್ಮೆಂಟ್ ಫೆಡರೇಶನ್ ಲಿಮಿಟೆಡ್ (TRIFED) ವಾರ್ಷಿಕ ಉಪಕ್ರಮವಾಗಿದೆ.

ಸಂದರ್ಭದಲ್ಲಿ, ಅಂದಿನ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಶ್ರೀ ಅರ್ಜುನ್ ಮುಂಡಾ ಅವರು ಶ್ರೀಮತಿ ದ್ರೌಪದಿ ಮುರ್ಮು ಅವರ ಉಪಸ್ಥಿತಿಯಲ್ಲಿ ಪರಿಶಿಷ್ಟ ಪಂಗಡಗಳಿಗೆ ವೆಂಚರ್ ಕ್ಯಾಪಿಟಲ್ ಫಂಡ್(ವಿಸಿಎಫ್- ಎಸ್ಟಿ) ಪ್ರಾರಂಭಿಸಿದರು. ಸೆಬಿ  ನೋಂದಾಯಿತ ಸಾಂಸ್ಥಿಕ ಬಂಡವಾಳ ನಿಧಿಯನ್ನು ಐಎಫ್ ಸಿಐ ವೆಂಚರ್ಸಂಸ್ಥೆ ನಿರ್ವಹಿಸುತ್ತದೆ. ಐಎಫ್ ಸಿಐ ಲಿಮಿಟೆಡ್ ಭಾರತ ಸರ್ಕಾರದ ಅಧೀನ ಅಂಗಸಂಸ್ಥೆಯಾಗಿದೆ. ವಿಸಿಎಫ್- ಎಸ್ಟಿ ಯೋಜನೆಯಲ್ಲಿ ಬುಡಕಟ್ಟು ವ್ಯವಹಾರಗಳ ಸಚಿವಾಲಯ ಮತ್ತು ಟ್ರೈಬಲ್ ಕೋಆಪರೇಟಿವ್ ಮಾರ್ಕೆಟಿಂಗ್ ಡೆವಲಪ್ಮೆಂಟ್ ಫೆಡರೇಶನ್ ಆಫ್ ಇಂಡಿಯಾ(TRIFED) ಇಬ್ಬರು ಹೂಡಿಕೆದಾರರಾಗಿದ್ದಾರೆ. ಯೋಜನೆಯು ಉತ್ಪಾದನೆ, ಸೇವೆಗಳು ಮತ್ತು ತಂತ್ರಜ್ಞಾನದಲ್ಲಿ ಕಾವು ಪಡೆದಿರುವ ಘಟಕಗಳು ಸೇರಿದಂತೆ, ಉತ್ಪಾದನೆ, ಸೇವೆಗಳು ಮತ್ತು ಸಂಬಂಧಿತ ವಲಯದಲ್ಲಿ ಕೆಲಸ ಮಾಡುವ ಪರಿಶಿಷ್ಟ ಪಂಗಡಗಳ ಪ್ರವರ್ತಿತ ಕಂಪನಿಗಳಿಗೆ 10 ಲಕ್ಷ ರೂ.ನಿಂದ 5 ಕೋಟಿ ರೂ.ವರೆಗೆ ಆರ್ಥಿಕ ನೆರವು ನೀಡುವ ಮೂಲಕ ಪರಿಶಿಷ್ಟ ಪಂಗಡಗಳ (ಎಸ್ಟಿ) ನಡುವೆ ಉದ್ಯಮಶೀಲತೆ ಉತ್ತೇಜಿಸುತ್ತದೆ. ವ್ಯಾಪಾರ ಪೋಷಣಾ ಕೇಂದ್ರಗಳು, ಘಟಕ, ಯೋಜನೆಯಲ್ಲಿ ನಿಯೋಜನೆಗೊಂಡ ನಿಧಿಯಿಂದ ಸ್ವತ್ತಿನ ರಚನೆ ಖಾತ್ರಿಪಡಿಸುತ್ತವೆ. ಅಲ್ಲದೆ ವಾರ್ಷಿಕ 4% ರಿಯಾಯಿತಿ ದರ(ಎಸ್ಟಿ ಮಹಿಳೆಯರಿಗೆ, ಎಸ್ಟಿ ಅಂಗವಿಕಲ ಉದ್ಯಮಿಗಳಿಗೆ ವಾರ್ಷಿಕ 3.75% ಬಡ್ಡಿ  ದರ)ದಲ್ಲಿ ಸಾಲ ನೀಡುತ್ತದೆ. ಇದು ಇಡೀ ದೇಶಕ್ಕೆ ಅನ್ವಯಿಸುತ್ತದೆ. ನಿಧಿಯು ಪರಿಶಿಷ್ಟ ಪಂಗಡದ ಉದ್ಯಮಿಗಳಲ್ಲಿ ಉದ್ಯಮಶೀಲತೆ ಉತ್ತೇಜಿಸುವ ನಿರೀಕ್ಷೆಯಿದೆ.

ಬುಡಕಟ್ಟು ಸಂಶೋಧನಾ ಸಂಸ್ಥೆಗಳ ಯೋಜನೆಗೆ ಬೆಂಬಲ:

ಬುಡಕಟ್ಟು ವ್ಯವಹಾರಗಳ ಸಚಿವಾಲಯವು "ಬುಡಕಟ್ಟು ಸಂಶೋಧನಾ ಸಂಸ್ಥೆ(ಚಿಆರ್ )ಗೆ ಬೆಂಬಲ" ಯೋಜನೆಯಡಿ, 2014ರಿಂದ ಆಂಧ್ರ ಪ್ರದೇಶ, ಉತ್ತರಾಖಂಡ, ಕರ್ನಾಟಕ, ಅರುಣಾಚಲ ಪ್ರದೇಶ, ಜಮ್ಮು-ಕಾಶ್ಮೀರ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ಮೇಘಾಲಯ ಮತ್ತು ಗೋವಾದ 10 ಹೊಸ ಟಿಆರ್ ಐಗಳ ಕಟ್ಟಡ ನಿರ್ಮಾಣಕ್ಕೆ ಹಣ ಮಂಜೂರು ಮಾಡಿದೆ.

ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಅವರು 2024 ನವೆಂಬರ್ 15ರಂದು ಸಂಸದರು, ಲೋಕಸಭಾ ಸದಸ್ಯರು, ಸಂಪುಟ ಸಚಿವರು ಮತ್ತು ಶಾಸಕರೊಂದಿಗೆ ಸೇರಿ, ಹೊಸದಾಗಿ ನಿರ್ಮಿಸಲಾದ ಟಿಆರ್ ಕಟ್ಟಡ ಉದ್ಘಾಟಿಸಿದರು

  • ಯೋಜನೆಯಡಿ, ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರಿಗೆ 2017-18ರಿಂದ ಗುಜರಾತ್, ಜಾರ್ಖಂಡ್, ಆಂಧ್ರ ಪ್ರದೇಶ, ಛತ್ತೀಸ್ಗಢ, ಕೇರಳ, ಮಧ್ಯಪ್ರದೇಶ, ತೆಲಂಗಾಣ, ಮಣಿಪುರ, ಮಿಜೋರಾಂ ಮತ್ತು ಗೋವಾ ರಾಜ್ಯಗಳಲ್ಲಿ ಸಚಿವಾಲಯವು 11 ವಸ್ತುಸಂಗ್ರಹಾಲಯಗಳನ್ನು ಮಂಜೂರು ಮಾಡಿದೆ.
  • 3 ವಸ್ತುಸಂಗ್ರಹಾಲಯಗಳಾದ ಭಗವಾನ್ ಬಿರ್ಸಾ ಮುಂಡಾ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರ ವಸ್ತುಸಂಗ್ರಹಾಲಯ, ರಾಂಚಿ, ಜಬಲ್ಪುರದಲ್ಲಿ ರಾಜ ಶಂಕರ್ ಶಂಕರ್ ಶಾ ರಘುನಾಥ್ ಷಾ ಮತ್ತು ಛಿಂದ್ವಾರಾದಲ್ಲಿ ಬಾದಲ್ ಭೋಯ್ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರ ಮ್ಯೂಸಿಯಂ ಪೂರ್ಣಗೊಂಡಿದೆ.

ಬುಡಕಟ್ಟು ಭಾಷೆಗಳ ಸಂರಕ್ಷಣೆ

ಭಾರತ ಸರ್ಕಾರದ ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಟಿಆರ್ ಯೋಜನೆಗೆ ಬೆಂಬಲದ ಅಡಿ, ಬುಡಕಟ್ಟು ಭಾಷೆಗಳ ರಕ್ಷಣೆ, ಪೋಷಣೆ ಮತ್ತು ಪ್ರಚಾರಕ್ಕಾಗಿ ಕೈಗೊಂಡ ಯೋಜನೆಗಳು, ಚಟುವಟಿಕೆಗಳಿಗೆ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿನ ಬುಡಕಟ್ಟು ಸಂಶೋಧನಾ ಸಂಸ್ಥೆ(TRIs)ಗಳಿಗೆ ಹಣಕಾಸಿನ ನೆರವು ನೀಡುತ್ತದೆ. ಬುಡಕಟ್ಟು ಸಮುದಾಯಗಳನ್ನು ಸಮ್ಮೇಳನಗಳು, ವಿಚಾರಗೋಷ್ಠಿಗಳು, ಕಾರ್ಯಾಗಾರಗಳು ಮತ್ತು ವಿನಿಮಯ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಲಾಗುತ್ತದೆ. ಸರ್ಕಾರಿ ಆಶ್ರಮ ಶಾಲೆಗಳ ಶಿಕ್ಷಕರು ಮತ್ತು ಆಯಾ ಸಮುದಾಯಗಳ ಭಾಷಾ ಪರಿಣಿತರು ಬುಡಕಟ್ಟು ಉಪಭಾಷೆಗಳು ಮತ್ತು ಭಾಷೆಗಳಲ್ಲಿ ನಿಘಂಟು ಮತ್ತು ಪ್ರೈಮರ್ಗಳನ್ನು ಅಭಿವೃದ್ಧಿಪಡಿಸುವಲ್ಲಿ ತೊಡಗಿಸಿಕೊಂಡಿದ್ದಾರೆ, ಇದು ಬುಡಕಟ್ಟು ಭಾಷೆಗಳನ್ನು ಸಂರಕ್ಷಿಸುತ್ತದೆ ಮತ್ತು ಪೋಷಿಸುತ್ತದೆ. ಆದರೆ ಬುಡಕಟ್ಟು ವಿದ್ಯಾರ್ಥಿಗಳಿಗೆ 1ರಿಂದ 3ನೇ ತರಗತಿಯವರೆಗೆ ಮೂಲಭೂತ ಕಲಿಕೆ ಮತ್ತು ಸುಗಮ ಕಲಿಕೆಗೆ ಸಹಾಯ ಮಾಡುತ್ತದೆ. ಅವರು ಉನ್ನತ ತರಗತಿಗಳಿಗೆ ಹೋದಾಗ ಪರಿವರ್ತನೆಯಾಗಲು ಇದು ನೆರವಾಗುತ್ತದೆ. ಟಿಆರ್ ಐಗಳು ಕ್ಷೇತ್ರ ಕಾರ್ಯಕರ್ತರಿಗೆ (ಮುಂಭಾಗದ ಕೆಲಸಗಾರರಿಗೆ) ಬುಡಕಟ್ಟು ಭಾಷಾ ತರಬೇತಿ ಕಾರ್ಯಕ್ರಮವನ್ನು ಸಹ ಆಯೋಜಿಸುತ್ತವೆ.

ಎಸ್ಟಿಗಳ ಕಲ್ಯಾಣಕ್ಕಾಗಿ ಕೆಲಸ ಮಾಡುವ ಸ್ವಯಂಸೇವಾ ಸಂಸ್ಥೆಗಳಿಗೆ ಸಹಾಯಧನ:

ಕಳೆದ 10 ವರ್ಷಗಳಲ್ಲಿ, ಬುಡಕಟ್ಟು ಜನಸಂಖ್ಯೆಗೆ ಸಂಬಂಧಿಸಿದಂತೆ ಶಿಕ್ಷಣ, ಜೀವನೋಪಾಯ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಸುಮಾರು 250 ಯೋಜನೆಗಳಿಗಾಗಿ ಸುಮಾರು 200 ಎನ್ಜಿಒಗಳಿಗೆ ಸುಮಾರು 1,000 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

ಬುಡಕಟ್ಟು ಜನಸಂಖ್ಯೆಗೆ ಉತ್ತಮ ಆರೋಗ್ಯ ರಕ್ಷಣೆಗಾಗಿ ಉಪಕ್ರಮಗಳು:

ಬುಡಕಟ್ಟು ಸಮುದಾಯಗಳ ಯೋಗಕ್ಷೇಮ ಸುಧಾರಿಸುವ ಉದ್ದೇಶದಿಂದ ಸರ್ಕಾರವು ಹಲವಾರು ಪ್ರಮುಖ ಆರೋಗ್ಯ ಉಪಕ್ರಮಗಳನ್ನು ಪ್ರಾರಂಭಿಸಿದೆ.

• 2023-24 ಕೇಂದ್ರ ಬಜೆಟ್ನಲ್ಲಿ ಕುಡಗೋಲು ಜೀವಕೋಶ ರಕ್ತಹೀನತೆ ನಿರ್ಮೂಲನೆ ಕಾರ್ಯಕ್ರಮ ಘೋಷಿಸಲಾಗಿದೆ

2023 ಜುಲೈ 1ರಂದು ಪ್ರಾರಂಭಿಸಲಾದ ಸಿಕಲ್ ಸೆಲ್ ಅನೀಮಿಯಾ ಎಲಿಮಿನೇಷನ್ ಮಿಷನ್, ಮಧ್ಯ, ಪಶ್ಚಿಮ ಮತ್ತು ದಕ್ಷಿಣ ಭಾರತದಲ್ಲಿ ಬುಡಕಟ್ಟು ಜನಸಂಖ್ಯೆಯ ಮೇಲೆ ವಿಶೇಷ ಒತ್ತು ನೀಡುವ ಮೂಲಕ ಜಾಗೃತಿ ಅಭಿಯಾನಗಳು, ಸಾರ್ವತ್ರಿಕ ತಪಾಸಣೆ ಮತ್ತು ಕೈಗೆಟುಕುವ ಆರೈಕೆಯ ಮೂಲಕ ಕುಡಗೋಲು ಜೀವಕೋಶ ರಕ್ತಹೀನತೆ ರೋಗ ನಿರ್ಮೂಲನೆ ಮಾಡಲು ಗಮನ ಹರಿಸುತ್ತಿದೆ. ರೋಗಪೀಡಿತ ಬುಡಕಟ್ಟು ಪ್ರದೇಶಗಳಲ್ಲಿ 40 ವರ್ಷದವರೆಗಿನ ವಯಸ್ಸಿನ 7 ಕೋಟಿ ಜನರ ಜಾಗೃತಿ ಮತ್ತು ಸಾರ್ವತ್ರಿಕ ತಪಾಸಣೆ ಮತ್ತು ಕೇಂದ್ರ ಸಚಿವಾಲಯಗಳು ಮತ್ತು ರಾಜ್ಯ ಸರ್ಕಾರಗಳ ಸಹಯೋಗದ ಪ್ರಯತ್ನಗಳ ಮೂಲಕ ಸಮಾಲೋಚನೆ ಮಾಡುವ ಗುರಿ ಹೊಂದಿದೆ. 7 ಕೋಟಿ ಜನರ ಪೈಕಿ, 4.5 ಕೋಟಿಗೂ ಹೆಚ್ಚು ಜನರ ಪರೀಕ್ಷೆ ಮಾಡಲಾಗಿದೆ.

2024 ವಿಶ್ವ ಕುಡಗೋಲು ಕೋಶ ನಿರ್ಮೂಲನೆ ದಿನದ ಸ್ಮರಣಾರ್ಥ, ಬುಡಕಟ್ಟು ವ್ಯವಹಾರಗಳ ಸಚಿವಾಲಯ ಮತ್ತು ದೆಹಲಿ ಏಮ್ಸ್ನ ಜ್ಞಾನ ಪಾಲುದಾರ ಸಂಸ್ಥೆ ಬಿರ್ಸಾ ಮುಂಡಾ ಸೆಂಟರ್, ಕುಡಗೋಲು ಕೋಶ ರೋಗ ಕುರಿತು ಜಾಗೃತಿ ಮೂಡಿಸಲು 2024 ಜೂನ್ 19ರಂದು ನವದೆಹಲಿಯಲ್ಲಿ ರಾಷ್ಟ್ರೀಯ ಸಮ್ಮೇಳನ ಆಯೋಜಿಸಿತ್ತು. ಘಟನೆಯು ರೋಗದ ಬಗ್ಗೆ ಅರಿವು ಮೂಡಿಸಲು ಮತ್ತು ಅಂತರ್-ಪೀಳಿಗೆ ಪ್ರಸರಣ ತಡೆಯಲು  ಉದ್ದೇಶಪೂರ್ವಕವಾಗಿ ತಜ್ಞರ ಗುಂಪನ್ನು ಒಟ್ಟುಗೂಡಿಸಿತು. ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಶ್ರೀ ಜುಯಲ್ ಓರಮ್ ಮತ್ತು ಬುಡಕಟ್ಟು ವ್ಯವಹಾರಗಳ ರಾಜ್ಯ ಸಚಿವ ಶ್ರೀ ಡಿ.ಡಿ. ಯುಕೆಯ್(Uikey) ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ದೇಶಾದ್ಯಂತ 17 ರಾಜ್ಯಗಳಲ್ಲಿ 340ಕ್ಕೂ ಹೆಚ್ಚಿನ ಕುಡಗೋಲು ರಕ್ತಹೀನತೆ-ಸಂಭವ ಜಿಲ್ಲೆಗಳಲ್ಲಿ 2 ವಾರಗಳ ದೀರ್ಘ ಜಾಗೃತಿ ಮತ್ತು ಪರೀಕ್ಷೆ ಅಭಿಯಾನ ಪ್ರಾರಂಭಕ್ಕೆ ದಿನ ಸಾಕ್ಷಿಯಾಯಿತು. 

ದೆಹಲಿಯ ಏಮ್ಸ್ ಆಯೋಜಿಸಿದ್ದ ಕಾರ್ಯಕ್ರಮದ ನೋಟ

ಅರಣ್ಯ ಹಕ್ಕು ಕಾಯಿದೆ

ಅರಣ್ಯ ಹಕ್ಕು ಕಾಯಿದೆ 2006 ಅಡಿ, ಒಟ್ಟು 23.73 ಲಕ್ಷ ವೈಯಕ್ತಿಕ ಹಕ್ಕುಪತ್ರಗಳು ಮತ್ತು ಒಟ್ಟು 1.16 ಲಕ್ಷ ಸಮುದಾಯ ಹಕ್ಕುಪತ್ರಗಳನ್ನು ವಿತರಿಸಲಾಗಿದೆ, ಸುಮಾರು 190.39 ಲಕ್ಷ ಎಕರೆ ಭೂಮಿ ವಿತರಿಸಲಾಗಿದೆ.

ಅರಣ್ಯ ಹಕ್ಕು ಕಾಯಿದೆ

ವಿತರಣೆಯಾದ ಹಕ್ಕುಪತ್ರಗಳ ಸಂಖ್ಯೆ

2013-14

ಸೆಪ್ಟೆಂಬರ್ 2024

ವ್ಯಕ್ತಿಗಳಿಗೆ ವಿತರಣೆಯಾದ ಹಕ್ಕುಪತ್ರಗಳ ಸಂಖ್ಯೆ

14.36 ಲಕ್ಷ

23.73 ಲಕ್ಷ

ಸಮುದಾಯಗಳಿಗೆ ವಿತರಣೆಯಾದ ಹಕ್ಕುಪತ್ರಗಳ ಸಂಖ್ಯೆ

23,000

1.16 ಲಕ್ಷ

ಕ್ಲೇಮುಗಳ ವಿತರಣೆ(ವಿಲೇವಾರಿ)

25.11 ಲಕ್ಷ

42.475 ಲಕ್ಷ

ಸ್ಥಾಪಿತ ಭೂಪ್ರದೇಶ

55 ಲಕ್ಷ ಎಕರೆ

190.39 ಲಕ್ಷ ಎಕರೆ

ಹಂಚಿಕೆಯಾದ ಭೂಮಿಯ ಒಟ್ಟು ವಿಸ್ತೀರ್ಣವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ: ಅರಣ್ಯ ಹಕ್ಕುಗಳ ಕಾಯಿದೆ ಪ್ರಾರಂಭದಿಂದ 2014 ಮೇ ತನಕ, ಒಟ್ಟು 55.30 ಲಕ್ಷ ಎಕರೆ ಭೂಮಿ ವಿತರಿಸಲಾಗಿದೆ. ಆದರೆ, 2014ರಿಂದ 2024 ನವೆಂಬರ್ ತನಕ 190.39 ಲಕ್ಷ ಎಕರೆ ಭೂಮಿ ನೀಡಲಾಗಿದೆ, ಇದು 2014 ಮೇ ಅವಧಿಯಲ್ಲಿನ ಸುಮಾರು ಮೂರೂವರೆ ಪಟ್ಟು ಹೆಚ್ಚು. ದೇಶಾದ್ಯಂತ 30.11.2024 ವರೆಗೆ ಒಟ್ಟು 190.39 ಲಕ್ಷ ಎಕರೆ ಅರಣ್ಯ ಭೂಮಿ ಅಂದರೆ ವ್ಯಕ್ತಿಗಳಿಗೆ 50.77 ಲಕ್ಷ ಎಕರೆ ಮತ್ತು ಸಮುದಾಯಕ್ಕೆ 139.62 ಲಕ್ಷ ಎಕರೆ ವಿತರಿಸಲಾಗಿದೆ.

ಜಮ್ಮು-ಕಾಶ್ಮೀರದಲ್ಲಿ ಅರಣ್ಯ ಹಕ್ಕುಗಳ ಕಾಯಿದೆ ಅನುಷ್ಠಾನ: ಜಮ್ಮು-ಕಾಶ್ಮೀರದಲ್ಲಿ 2019 ಅಕ್ಟೋಬರ್ 31ರಿಂದ ಅರಣ್ಯ ಹಕ್ಕುಗಳ ಕಾಯಿದೆ ಜಾರಿಗೆ ತರಲಾಗಿದೆ, ಇದೀಗ ಒಟ್ಟು 4,505 ಹಕ್ಕುಪತ್ರಗಳನ್ನು (305 ವೈಯಕ್ತಿಕ ಹಕ್ಕುಗಳು ಮತ್ತು 4,190 ಸಮುದಾಯ ಹಕ್ಕುಪತ್ರ) ನೀಡಲಾಗಿದೆ.

ಭಗವಾನ್ ಬಿರ್ಸಾ ಮುಂಡಾ ಜನ್ಮದಿನದಂದು ಅವರಿಗೆ ಗೌರವ ಸಲ್ಲಿಸಲು ಪ್ಯಾನ್-ಇಂಡಿಯಾ ಆಚರಣೆಯಾಗಿ 2024 ನವೆಂಬರ್ 15ರಂದು ಜನಜಾತಿಯ ಗೌರವ್ ದಿವಸ್ ಎಂದು ಗುರುತಿಸಲಾಗಿದೆ

ಭಾರತ ಸರ್ಕಾರ 2021 ರಲ್ಲಿ ಎಲ್ಲಾ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರನ್ನು ಗೌರವಿಸಲು ಮತ್ತು ಅವರ ಕೊಡುಗೆ ಸ್ಮರಿಸುವ ಸ್ಮರಣಾರ್ಥ 2021ರಲ್ಲಿ ದೇಶದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮತ್ತು ಬುಡಕಟ್ಟು ನಾಯಕ ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನವಾದ ನವೆಂಬರ್ 15 ಅನ್ನು ಜನಜಾತಿಯ ಗೌರವ್ ದಿವಸ್ ಎಂದು ಘೋಷಿಸಿದೆ. ಸ್ವಾತಂತ್ರ್ಯ ಹೋರಾಟ ಮತ್ತು ಸಾಂಸ್ಕೃತಿಕ ಪರಂಪರೆ ಮತ್ತು ರಾಷ್ಟ್ರೀಯ ಹೆಮ್ಮೆಯನ್ನು ರಕ್ಷಿಸಲು ಮುಂಬರುವ ಪೀಳಿಗೆಯನ್ನು ಪ್ರೇರೇಪಿಸುತ್ತದೆ. ಇದು ಬುಡಕಟ್ಟು ಪ್ರದೇಶಗಳ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯ ಪ್ರಯತ್ನಗಳನ್ನು ಪುನಃ ಶಕ್ತಿಯುತಗೊಳಿಸುವ ಒಂದು ಹೆಜ್ಜೆಯಾಗಿದೆ. ಕಳೆದ 3 ವರ್ಷಗಳಿಂದ ಭಾರತ ಸರ್ಕಾರವು ಹೊಸ ಯೋಜನೆಗಳು ಮತ್ತು ಮಿಷನ್ಗಳನ್ನು ಪ್ರಾರಂಭಿಸುವ ಮೂಲಕ ರಾಷ್ಟ್ರವ್ಯಾಪಿ ಆಚರಣೆಗಳೊಂದಿಗೆ ರಾಷ್ಟ್ರದ ಇತಿಹಾಸ ಮತ್ತು ಸಂಸ್ಕೃತಿಗೆ ಬುಡಕಟ್ಟು ಸಮುದಾಯಗಳ ಕೊಡುಗೆಗಳನ್ನು ಸ್ಮರಿಸಲು ದಿನ ಆಚರಿಸುತ್ತಿದೆ.

 

ನವೆಂಬರ್ 15ರಂದು ಬೆಳಗ್ಗೆ ನವದೆಹಲಿಯ ಸಂಸತ್ ಭವನದ ಪ್ರೇರಣಾ ಸ್ಥಳದಲ್ಲಿ ಆಯೋಜಿಸಲಾದ ಆಕರ್ಷಕ ಕಾರ್ಯಕ್ರಮದಲ್ಲಿ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಧರ್ತಿ ಆಬಾ ಭಗವಾನ್ ಬಿರ್ಸಾ ಮುಂಡಾ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು. ರಾಷ್ಟ್ರೀಯ ಕಾರ್ಯಕ್ರಮಗಳ ಜೊತೆಗೆ, 29 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಆಯೋಜಿಸಲಾದ ರಾಜ್ಯ ಮಟ್ಟದ ಕಾರ್ಯಕ್ರಮಗಳು ಮತ್ತು ಜಿಲ್ಲಾ ಮಟ್ಟದ ಕಾರ್ಯಗಳು ಜರುಗಿದವು. ಕಾರ್ಯಕ್ರಮಗಳು ಗ್ರಾಮ ಪಂಚಾಯಿತಿ ಮುಖಂಡರು ಮತ್ತು ಫಲಾನುಭವಿಗಳಿಗೆ ಸರ್ಕಾರದ ವಿವಿಧ ಕಾರ್ಯಕ್ರಮಗಳ ಬಗ್ಗೆ ತಿಳಿಸುವ ಗುರಿ ಹೊಂದಿದ್ದು, ಗಣ್ಯರು ಸವಲತ್ತುಗಳನ್ನು ವಿತರಿಸುವುದು ಮತ್ತು ಮಂಜೂರಾತಿ ಪತ್ರಗಳನ್ನು ವಿತರಿಸುವುದು. ಆಯಾ ರಾಜ್ಯಗಳಲ್ಲಿ ಮಾನ್ಯ ಮುಖ್ಯಮಂತ್ರಿಗಳು, ರಾಜ್ಯಪಾಲರು ಮತ್ತು ಸಂಪುಟ ಸಚಿವರು ಭಾಗವಹಿಸುತ್ತಾರೆ. ಆರೋಗ್ಯ ಶಿಬಿರಗಳು, ಬುಡಕಟ್ಟು ಕುಶಲಕರ್ಮಿ ಮೇಳಗಳು, ಬೀದಿ ನಾಟಕಗಳು ಮತ್ತು ಫಲಾನುಭವಿಗಳ ಸಂವಾದ ಮತ್ತಿತರ ಕಾರ್ಯಕ್ರಮಗಳು ಜರುಗಿದವು. ಇವೆಲ್ಲವೂ ಬುಡಕಟ್ಟು ಸಮುದಾಯಗಳ ಪ್ರಭಾವವನ್ನು ಎತ್ತಿ ತೋರಿಸುತ್ತದೆ. ಬುಡಕಟ್ಟು ವ್ಯವಹಾರಗಳ ಸಚಿವಾಲಯವು 2024 ನವೆಂಬರ್ 5 ರಿಂದ ನವೆಂಬರ್ 26 ವರೆಗೆ 4ನೇ ಜನಜಾತಿಯ ಗೌರವ್ ದಿವಸ್ ಆಚರಿಸಿತು, ಇದು ಧರ್ತಿ ಆಬಾ ಜನಜಾತಿಯಾ ಗ್ರಾಮ ಉತ್ಕರ್ಷ್ ಅಭಿಯಾನದ ಜತೆಗೆ ಮಾಗಿತಿ, ಶಿಕ್ಷಣ ಮತ್ತು ಸಂವಹನ ಅಭಿಯಾನದ ಜತೆಗೆ ದೇಶಾದ್ಯಂತ ಸಂವಿಧಾನ ದಿನಾಚರಣೆಯೊಂದಿಗೆ ಸಂಯೋಜಿಸಲ್ಪಟ್ಟಿದೆ.

ಜನಜಾತಿಯ ಗೌರವ್ ದಿವಸ್ 4ನೇ ವರ್ಷಾಚರಣೆಯ ಸಂದರ್ಭದಲ್ಲಿ, ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಿಹಾರದ ಜಮುಯಿಯಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಬುಡಕಟ್ಟು ಜನರಿಗೆ ಕೆಲವು ಯೋಜನೆಗಳು, ಕಾರ್ಯಕ್ರಮಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿ, ಮಾತನಾಡಿದರು. ವೇದಿಕೆಯಲ್ಲಿ ಬಿಹಾರದ ಮಾನ್ಯ ಮುಖ್ಯಮಂತ್ರಿ ನಿತೀಶ್ ಕುಮಾರ್, ಗೌರವಾನ್ವಿತ ಬುಡಕಟ್ಟು ವ್ಯವಹಾರಗಳ ಸಚಿವ ಶ್ರೀ. ಜುಯಲ್ ಓರಮ್, ಮಾನ್ಯ ಕೇಂದ್ರ ಪಂಚಾಯತ್ ರಾಜ್ ಸಚಿವ ಎಸ್. ರಾಜೀವ್ ರಂಜನ್ ಸಿಂಗ್, ಗೌರವಾನ್ವಿತ ಜವಳಿ ಸಚಿವ ಶೇ. ಗಿರಿರಾಜ್ ಸಿಂಗ್, ಬಿಹಾರದ ಗೌರವಾನ್ವಿತ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್, ಗೌರವಾನ್ವಿತ ಕೇಂದ್ರದ ಎಂಎಸ್ಎಂಇ ಸಚಿವ ಎಸ್. ಜಿತನ್ ರಾಮ್ ಮಾಂಝಿ, ಗೌರವಾನ್ವಿತ ಆಹಾರ ಸಂಸ್ಕರಣಾ ಉದ್ಯಮಗಳ ಸಚಿವ ಶೇ. ಚಿರಾಗ್ ಪಾಸ್ವಾನ್ ಮತ್ತು ಗೌರವಾನ್ವಿತ ಬುಡಕಟ್ಟು ವ್ಯವಹಾರಗಳ ರಾಜ್ಯ ಸಚಿವ ಎಸ್. ದುರ್ಗಾದಾಸ್ ಯುಕೆಯ್ ಉಪಸ್ಥಿತರಿದ್ದರು. ರಾಷ್ಟ್ರೀಯ ಕಾರ್ಯಕ್ರಮವನ್ನು ದ್ವಿಮುಖ ಸಂಪರ್ಕದ ಮೂಲಕ 100 ಆಯ್ದ ಜಿಲ್ಲೆಗಳಿಗೆ ಸಂಪರ್ಕಿಸಲಾಗಿದೆ. ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2024 ನವೆಂಬರ್ 15ರಿಂದ 2025 ನವೆಂಬರ್  15 ವರೆಗೆ, ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆಯನ್ನು ಸ್ಮರಿಸುತ್ತಾ ಒಂದು ವರ್ಷವನ್ನು ಜನಜಾತಿಯಾ ಗೌರವ ವರ್ಷ ಎಂದು ಆಚರಿಸಲಾಗುವುದು ಎಂದು ಘೋಷಿಸಿದ್ದಾರೆ.

 

ಗೌರವಾನ್ವಿತ ಪ್ರಧಾನ ಮಂತ್ರಿ ಅವರು ಇಎಂಆರ್ಎಸ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಅಂಚೆ ಚೀಟಿ ಬಿಡುಗಡೆ ಮಾಡಿದರು.

ಇ ಎಂ ಆರ್ ಎಸ್ ವಿದ್ಯಾರ್ಥಿಗಳು, ಪಿಎಂ-ಜನ್ಮನ್ ಫಲಾನುಭವಿಗಳು ಮತ್ತು ವಿಡಿವಿಕೆಗಳು ನವದೆಹಲಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಿದ್ದರು

78ನೇ ಸ್ವಾತಂತ್ರ್ಯ ದಿನಾಚರಣೆಯಂದು ದೇಶಾದ್ಯಂತದ ಇಎಂಆರ್ಎಸ್ ವಿದ್ಯಾರ್ಥಿಗಳು, ಪಿಎಂ-ಜನ್ಮನ್ ಫಲಾನುಭವಿಗಳು ಮತ್ತು ವಿಡಿವಿಕೆಗಳನ್ನು ದೆಹಲಿಗೆ ಅತಿಥಿಗಳಾಗಿ ಆಹ್ವಾನಿಸಲಾಗಿತ್ತು. ಅವರು ಲಾಲ್ ಕ್ವಿಲಾದಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದರು. ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯ, ಸಂಸತ್ ಭವನ ಮತ್ತು ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಿದ್ದರು.

ರಾಷ್ಟ್ರಪತಿ ಭವನ ಮತ್ತು ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿದ ತ್ತಿರುವ ಇಎಂಆರ್ಎಸ್ ವಿದ್ಯಾರ್ಥಿಗಳು, ಪಿಎಂ-ಜನ್ಮನ್ ಫಲಾನುಭವಿಗಳು ಮತ್ತು  ವಿಡಿವಿಕೆಗಳನ್ನು ಭಾರತದ ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನದಲ್ಲಿ ಸ್ವಾಗತಿಸಿದರು.

 

***** 

 


(Release ID: 2091414) Visitor Counter : 7