ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕುವೈತ್ ನ ಪ್ರಧಾನಮಂತ್ರಿಯವರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ 

Posted On: 22 DEC 2024 6:38PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಕುವೈತ್ ರಾಷ್ಟ್ರದ ಪ್ರಧಾನಮಂತ್ರಿಯವರಾದ ಗೌರವಾನ್ವಿತ ಶೇಖ್ ಅಹ್ಮದ್ ಅಲ್-ಅಬ್ದುಲ್ಲಾ ಅಲ್-ಅಹ್ಮದ್ ಅಲ್-ಸಬಾಹ್ ಅವರೊಂದಿಗೆ ಮಾತುಕತೆ ನಡೆಸಿದರು.

ರಾಜಕೀಯ, ವ್ಯಾಪಾರ, ಹೂಡಿಕೆ, ಇಂಧನ, ರಕ್ಷಣೆ, ಭದ್ರತೆ, ಆರೋಗ್ಯ, ಶಿಕ್ಷಣ, ತಂತ್ರಜ್ಞಾನ, ಸಾಂಸ್ಕೃತಿಕ ಮತ್ತು ಜನರ ನಡುವಿನ ಸಂಬಂಧಗಳು ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸುವ ಮಾರ್ಗಸೂಚಿಯ ಬಗ್ಗೆ ಉಭಯ ನಾಯಕರು ಚರ್ಚಿಸಿದರು. ಉಭಯ ದೇಶಗಳ ನಡುವಿನ ಆರ್ಥಿಕ ಸಹಕಾರವನ್ನು ಉತ್ತಮಗೊಳಿಸಲು ಉಭಯ ನಾಯಕರು ಒತ್ತು ನೀಡಿದರು. ಇಂಧನ, ರಕ್ಷಣೆ, ವೈದ್ಯಕೀಯ ಸಾಧನಗಳು, ಔಷಧ, ಫುಡ್ ಪಾರ್ಕ್ ಗಳು ಮುಂತಾದ ಕ್ಷೇತ್ರಗಳಲ್ಲಿನ ಹೊಸ ಅವಕಾಶಗಳನ್ನು ಹುಡುಕಲು ಭಾರತಕ್ಕೆ ಭೇಟಿ ನೀಡುವಂತೆ ಕುವೈತ್ ಹೂಡಿಕೆ ಪ್ರಾಧಿಕಾರ ಮತ್ತು ಇತರ ಮಧ್ಯಸ್ಥಗಾರರನ್ನು ಒಳಗೊಂಡ ನಿಯೋಗವನ್ನು ಪ್ರಧಾನಿಯವರು ಆಹ್ವಾನಿಸಿದರು. ಸಾಂಪ್ರದಾಯಿಕ ಔಷಧ ಮತ್ತು ಕೃಷಿ ಸಂಶೋಧನೆಯಲ್ಲಿನ ಸಹಕಾರದ ಬಗ್ಗೆಯೂ ಉಭಯ ನಾಯಕರು ಚರ್ಚಿಸಿದರು. ಸಹಕಾರಕ್ಕಾಗಿ ಜಂಟಿ ಆಯೋಗಕ್ಕೆ ಇತ್ತೀಚೆಗೆ ಅಂಕಿತ ಹಾಕಿರುವುದನ್ನು ಅವರು ಸ್ವಾಗತಿಸಿದರು, ಇದರ ಅಡಿಯಲ್ಲಿ ಆರೋಗ್ಯ, ಮಾನವಶಕ್ತಿ ಮತ್ತು ಹೈಡ್ರೋಕಾರ್ಬನ್ ಗಳ ಕುರಿತು ಅಸ್ತಿತ್ವದಲ್ಲಿರುವ ಜಂಟಿ ಕಾರ್ಯ ಗುಂಪುಗಳ ಜೊತೆಗೆ ವ್ಯಾಪಾರ, ಹೂಡಿಕೆ, ಶಿಕ್ಷಣ, ತಂತ್ರಜ್ಞಾನ, ಕೃಷಿ, ಭದ್ರತೆ ಮತ್ತು ಸಂಸ್ಕೃತಿ ಕ್ಷೇತ್ರಗಳಲ್ಲಿ ಹೊಸ ಜಂಟಿ ಕಾರ್ಯ ಗುಂಪುಗಳನ್ನು ಸ್ಥಾಪಿಸಲಾಗಿದೆ.

ಮಾತುಕತೆಯ ನಂತರ ದ್ವಿಪಕ್ಷೀಯ ಒಪ್ಪಂದಗಳು ಮತ್ತು ತಿಳುವಳಿಕಾ ಒಡಂಬಡಿಕೆಗಳಿಗೆ ಉಭಯ ನಾಯಕರು ಸಹಿದರು. ಇವುಗಳಲ್ಲಿ ರಕ್ಷಣಾ ಸಹಕಾರ ಕುರಿತಾದ ತಿಳಿವಳಿಕಾ ಒಪ್ಪಂದ, ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ, ಕ್ರೀಡಾ ಕ್ಷೇತ್ರದಲ್ಲಿನ ಸಹಕಾರ ಕುರಿತಾದ ಕಾರ್ಯಕಾರಿ ಕಾರ್ಯಕ್ರಮ ಮತ್ತು ಅಂತಾರಾಷ್ಟ್ರೀಯ ಸೌರ ಒಕ್ಕೂಟಕ್ಕೆ ಕುವೈತ್ ಸೇರುವ ಚೌಕಟ್ಟು ಒಪ್ಪಂದ ಸೇರಿವೆ.

ಪ್ರಧಾನಮಂತ್ರಿಯವರು ಭಾರತಕ್ಕೆ ಭೇಟಿ ನೀಡುವಂತೆ ಕುವೈತ್ ನ ಘನತೆವೆತ್ತ ಪ್ರಧಾನಮಂತ್ರಿಯವರಿಗೆ ಆಹ್ವಾನ ನೀಡಿದರು.

 

*****


(Release ID: 2087129) Visitor Counter : 8