ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವಾಲಯ
azadi ka amrit mahotsav

2024ರ ವರ್ಷಾಂತ್ಯದ ಸಮೀಕ್ಷೆ: ಪಶು ಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ


ಭಾರತದ ಕೃಷಿ ಆರ್ಥಿಕತೆ ಬಲಗೊಳಿಸಲು ಜಾನುವಾರು ವಲಯದಿಂದ ಪ್ರಯತ್ನ ಮುಂದುವರಿಕೆ : 2014 ರಿಂದ ಸಿಎಜಿಆರ್ ಬೆಳವಣಿಗೆ 12.99% ರಷ್ಟು

ವೀರ್ಯ ವಿಂಗಡಣೆ ತಂತ್ರಜ್ಞಾನ ಮತ್ತು ಸ್ಥಳೀಯ ಐವಿಎಫ್ ಮಾಧ್ಯಮದ ಪ್ರಾರಂಭ; ದನ ಮತ್ತು ಎಮ್ಮೆಗಳ ಆನುವಂಶಿಕತೆಯ ಸುಧಾರಣೆಗೆ ಗೌ ಅಂಡ್ ಮಹಿಶ್ ಜೀನೋಮಿಕ್ ಚಿಪ್ಸ್

ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಕಾರ್ಯಕ್ರಮದ ಮೂಲಕ 10,000 ಹೊಸ ಹಾಲು ಉತ್ಪಾದನಾ ಒಕ್ಕೂಟಗಳ ಸ್ಥಾಪನೆ: ದಿನನಿತ್ಯ 14.20 ಲಕ್ಷ ಲೀಟರ್ ಹಾಲು ಸಂಗ್ರಹಣೆ ಗುರಿ

ರಾಷ್ಟ್ರೀಯ ಜಾನುವಾರು ಅಭಿಯಾನ ಜಾನುವಾರು ವಿಮೆಯ ಮೇಲೆ ಕೇಂದ್ರೀಕೃತ: ಫಲಾನುಭವಿಗಳಿಂದ ಈಗ ಕೇವಲ ಶೇ 15 ರಷ್ಟು ವಂತಿಕೆ ಪಾವತಿ

ರಾಷ್ಟ್ರೀಯ ಪ್ರಾಣಿಗಳ ರೋಗ ನಿಯಂತ್ರಣ ಕಾರ್ಯಕ್ರಮದಡಿ 2030 ರ ವೇಳೆಗೆ ಎಫ್‌ಎಂಡಿ ಮತ್ತು ಬ್ರೂಸೆಲೋಸಿಸ್ ನಿರ್ಮೂಲನೆ ಗುರಿ, 99.71 ಕೋಟಿಗೂ ಹೆಚ್ಚು ಲಸಿಕೆ ನೀಡಿಕೆ

ಎಲ್ಲಾ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ 21ನೇ ಜಾನುವಾರು ಮತ್ತು ಕೋಳಿ ಗಣತಿ, ದತ್ತಾಂಶ ಸಂಗ್ರಹ ಪ್ರಗತಿಯಲ್ಲಿ

Posted On: 19 DEC 2024 4:31PM by PIB Bengaluru

2024ರ ವರ್ಷದ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದಡಿ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯ ಪ್ರಮುಖ ಉಪಕ್ರಮಗಳು ಮತ್ತು ಸಾಧನೆಗಳ ನೋಟವನ್ನು ಕೆಳಕಂಡಂತೆ ನೀಡಲಾಗಿದೆ.

  1. ವಲಯದಲ್ಲಿ ಬೆಳವಣಿಗೆ

ಭಾರತದ ಕೃಷಿಯ ಆರ್ಥಿಕತೆಯಲ್ಲಿ ಜಾನುವಾರು ವಲಯ ಅತ್ಯಂತ ಪ್ರಮುಖ ಉಪ ವಲಯವಾಗಿದೆ. ಇದು 2014-15 ರಿಂದ 2022-23 ರವರೆಗೆ ಶೇ 12.99 ರ ಸಂಯೋಜಿತ ವಾರ್ಷಿಕ ಬೆಳವಣಿಗೆಯ ದರದಲ್ಲಿ (ಸಿಎಜಿಆರ್) ಪ್ರಗತಿ ಸಾಧಿಸಿದೆ. ಒಟ್ಟು ಕೃಷಿ ಮತ್ತು ಸಂಬಂಧಿತ ವಲಯದ ಒಟ್ಟು ಮೌಲ್ಯವರ್ಧಿತ (ಜಿವಿಎ)ದಲ್ಲಿ ಜಾನುವಾರು ವಲಯದ ಕೊಡುಗೆಯು 2014-15 ರಲ್ಲಿ ಶೇ 24.38 ರಿಂದ 2022-23 ರಲ್ಲಿ ಶೇ 30.23ಕ್ಕೆ (ಪ್ರಸ್ತುತ ಬೆಲೆಗಳಲ್ಲಿ) ಹೆಚ್ಚಾಗಿದೆ. ಜಾನುವಾರು ವಲಯವು 2022-23ರಲ್ಲಿ ಒಟ್ಟು ಜಿವಿಎಯ ಶೇ 5.50 ರಷ್ಟು ಕೊಡುಗೆ ನೀಡಿದೆ (ಪ್ರಸ್ತುತ ಬೆಲೆಗಳಲ್ಲಿ).

ಜಾಗತಿಕ ಪಾಲಿನಲ್ಲಿ ಶೇ 24.76 ರಷ್ಟು ಸಾಧನೆ ಮಾಡುವ ಮೂಲಕ ಭಾರತ ಕ್ಷೀರೋತ್ಪಾದನೆಯಲ್ಲಿ ಅಗ್ರಸ್ಥಾನದಲ್ಲಿದೆ. ಹಾಲಿನ ಉತ್ಪಾದನೆಯು 2014-15ರಲ್ಲಿ 146.31 ದಶಲಕ್ಷ ಟನ್‌ಗಳಿಂದ 2023-24ರಲ್ಲಿ 239.30 ದಶಲಕ್ಷ ಟನ್‌ಗಳಿಗೆ ಏರಿಕೆ ಕಂಡಿದ್ದು, ಕಳೆದ 10 ವರ್ಷಗಳಲ್ಲಿ ಶೇ 5.62 ರ ಸಂಯೋಜಿತ ವಾರ್ಷಿಕ ಬೆಳವಣಿಗೆ ದರದಲ್ಲಿ (ಸಿಎಜಿಆರ್) ಪ್ರಗತಿ ಸಾಧಿಸುತ್ತಿದೆ. ವಿಶ್ವ ಹಾಲಿನ ಉತ್ಪಾದನೆಯು 2022 (ಆಹಾರ ಮುನ್ನೋಟ ನವೆಂಬರ್'2024) ಗೆ ಹೋಲಿಸಿದರೆ 2023 (ಅಂದಾಜು) ಸಮಯದಲ್ಲಿ 1.50% ರಷ್ಟು ಪ್ರಗತಿ ಕಂಡಿದೆ. ಜಗತ್ತಿನ ತಲಾವಾರು ಹಾಲು ಬಳಕೆ 2023 ರಲ್ಲಿ [ಇ.ಎಸ್.ಟಿ] 329 ಗ್ರಾಂ ಇದ್ದು, ಭಾರತದ ತಲಾವಾರು ಹಾಲು ಬಳಕೆ 471 ಗ್ರಾಂ ಇದೆ (ಆಹಾರ ಮುನ್ನೋಟ ನವೆಂಬರ್'2024).

ಆಹಾರ ಮತ್ತು ಕೃಷಿ ಸಂಸ್ಥೆಯ ಸಾಂಸ್ಥಿಕ ಅಂಕಿ ಅಂಶಗಳ ದತ್ತಾಂಶ  (ಎಫ್.ಎ.ಒ.ಎಸ್.ಟಿ.ಎ.ಟಿ) ಉತ್ಪಾದನಾ ದತ್ತಾಂಶದ (2022) ಪ್ರಕಾರ, ಭಾರತವು ಮೊಟ್ಟೆ ಉತ್ಪಾದನೆಯಲ್ಲಿ 2 ನೇ ಸ್ಥಾನದಲ್ಲಿದೆ ಮತ್ತು ವಿಶ್ವದಲ್ಲಿ ಮಾಂಸ ಉತ್ಪಾದನೆಯಲ್ಲಿ 5 ನೇ ಸ್ಥಾನದಲ್ಲಿದೆ. 2014 – 15 ರಲ್ಲಿ 78.48 ಶತಕೋಟಿ ಮೊಟ್ಟೆ ಉತ್ಪಾದಿಸುತ್ತಿದ್ದು, ಇದು 2023 – 24 ರ ವೇಳೆಗೆ 142.77 ಶತಕೋಟಿಗೆ ಹೆಚ್ಚಳವಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ಮೊಟ್ಟೆ ಉತ್ಪಾದನೆಯಲ್ಲಿ ಸಮಗ್ರ ವಾರ್ಷಿಕ ಬೆಳವಣಿಗೆ ದರ [ಸಿಎಜಿಆರ್] ಸರಾಸರಿ ಶೇ 6.87 ರಷ್ಟು ದಾಖಲಾಗುತ್ತಿದೆ. 2014 – 15 ರಲ್ಲಿ ವ್ಯಕ್ತಿಯೊಬ್ಬ ವಾರ್ಷಿಕ ಸರಾಸರಿ 62 ಮೊಟ್ಟೆಗಳನ್ನು ಸೇವಿಸುತ್ತಿದ್ದು, ಈ ಪ್ರಮಾಣ 2023 – 24 ರ ವೇಳೆಗೆ 103 ಮೊಟ್ಟೆಗಳಿಗೆ ಹೆಚ್ಚಳವಾಗಿದೆ. 2014 – 15 ರಲ್ಲಿ 6.69 ದಶಲಕ್ಷ ಟನ್ ನಷ್ಟಿದ್ದ ಮಾಂಸ ಉತ್ಪಾದನೆ, 2023 – 24 ರ ವೇಳೆಗೆ 10.25 ಲಕ್ಷ ಟನ್ ಗೆ ವೃದ್ಧಿಸಿದೆ. ದೇಶದಲ್ಲಿ ಮಾಂಸ ಉತ್ಪಾದನೆಯು ಕಳೆದ 10 ವರ್ಷಗಳಲ್ಲಿ ಸರಾಸರಿ ಶೇ 4.85 ರಷ್ಟು ಸಂಯೋಜಿತ ವಾರ್ಷಿಕ ಬೆಳವಣಿಗೆಯ ದರದಲ್ಲಿ (ಸಿಎಜಿಆರ್) ಬೆಳವಣಿಗೆಯಾಗುತ್ತಿದೆ.

ಪಶು ಸಂಗೋಪನೆ ಮತ್ತು ಹೈನುಗಾರಿಕೆ

  1. ರಾಷ್ಟ್ರೀಯ ಗೋಕುಲ್ ಮಿಷನ್ಸ್ಥಳೀಯ ತಳಿಗಳ ಅಭಿವೃದ್ಧಿ ಮತ್ತು ಸಂರಕ್ಷಣೆ ಮತ್ತು ಗೋವಿನ ಸಂಖ್ಯೆಯ ಆನುವಂಶಿಕ ವಲಯದ ಉನ್ನತೀಕರಣದ ಮೇಲೆ ಕೇಂದ್ರೀಕರಿಸಿ ಸರ್ಕಾರದಿಂದ ಪ್ರಾರಂಭಿಸಲಾ ಯೋಜನೆ ಇದಾಗಿದೆ. 2024 ರಲ್ಲಿ ಗೋವಿನ ಉತ್ಪಾದಕತೆಯನ್ನು ಹೆಚ್ಚಿಸಲು ಯೋಜನೆಯ ಅಡಿಯಲ್ಲಿ ಹಲವಾರು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ:

5.10.2024 ರಂದು ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ವೀರ್ಯ ವಿಂಗಡಣೆಯ ಉತ್ಪಾದನಾ  ತಂತ್ರಜ್ಞಾನವನ್ನು ಪ್ರಾರಂಭಿಸಿದರು. ಈ ಲಿಂಗ ವಿಂಗಡಣೆಯ ವೀರ್ಯವು ಸಮಂಜಸವಾದ ದರಗಳಲ್ಲಿ ಲಭ್ಯವಿದೆ ಮತ್ತು ತಂತ್ರಜ್ಞಾನವು ಶೇ 90 ರಷ್ಟು ನಿಖರತೆಯೊಂದಿಗೆ ಹೆಣ್ಣು ಕರುಗಳನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ, ಇದರಿಂದಾಗಿ ತಳಿ ಸುಧಾರಣೆ ಮತ್ತು ರೈತರ ಆದಾಯವನ್ನು ಹೆಚ್ಚಿಸಿದಂತಾಗಿದೆ.

2024ರ ಸೆಪ್ಟೆಂಬರ್ 13 ರಂದು ಭುವನೇಶ್ವರದಲ್ಲಿ ದೇಶೀಯ ಮಾಧ್ಯಮದ ಐವಿಎಫ್ ಫಲವತ್ತತೆ ಕಾರ್ಯಕ್ರಮ ಜಾರಿಗೊಳಿಸಲಾಯಿತು. ಸ್ಥಳೀಯ ಮಾಧ್ಯಮವು, ಸ್ಥಳೀಯ ತಳಿಗಳ ಪ್ರಾಣಿಗಳನ್ನು ಪ್ರಚಾರ ಮಾಡಲು ದುಬಾರಿ ಆಮದು ಮಾಧ್ಯಮಕ್ಕೆ ವೆಚ್ಚ-ಪರಿಣಾಮಕಾರಿ ಪರ್ಯಾಯವನ್ನು ನೀಡುತ್ತದೆ.

ದನಗಳಿಗೆ ಸಾಮಾನ್ಯ ಜೀನೋಮಿಕ್ ಚಿಪ್ ಗೌ ಚಿಪ್ ಮತ್ತು ಎಮ್ಮೆಗೆ ಮಹಿಶ್ ಚಿಪ್ ಅನ್ನು 5.10.2024 ರಂದು ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಿಡುಗಡೆ ಮಾಡಿದರು;

13.9.2024 ರಂದು ಭುವನೇಶ್ವರದಲ್ಲಿ ರಾಷ್ಟ್ರೀಯ ಹಾಲು ದಾಖಲೀಕರಣ ಕಾರ್ಯಕ್ರಮವನ್ನು ಆರಂಭಿಸಿದ್ದು, ಸ್ಥಳೀಯ ತಳಿಗಳ ಉತ್ತಮ ಪ್ರಾಣಿಗಳನ್ನು ಹಾಲಿನ ಪಾಕೆಟ್‌ಗಳಲ್ಲಿ/ಸಂತಾನೋತ್ಪತ್ತಿ ಪ್ರದೇಶದಲ್ಲಿ ಗುರುತಿಸಲು ಪ್ರಾರಂಭಿಸಲಾಯಿತು.
ಜಾನುವಾರು ಉತ್ಪನ್ನಗಳಿಗಾಗಿ ಪತ್ತೆ ಹಚ್ಚುವ ವೇದಿಕೆಯನ್ನು  2024ರ ಅಕ್ಟೋಬರ್ 22 ರಂದು ಗುಜರಾತ್‌ನಿಂದ ಪ್ರಾರಂಭಿಸಲಾಯಿತು.

ತಳಿ ಮೇಲ್ದರ್ಜೆಗೇರಿಸುವ ಕಾರ್ಯಕ್ರಮದ ಎಲ್ಲಾ ಉಪಕ್ರಮಗಳಿಂದಾಗಿ ದೇಶದಲ್ಲಿ ಗೋವಿನ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ. ಜಾನುವಾರು ಮತ್ತು ಹೈನುಗಾರಿಕೆ ವಲಯದಲ್ಲಿ “ರಾಷ್ಟ್ರೀಯ ಗೋಪಾಲ ರತ್ನ ಪ್ರಶಸ್ತಿ” ಪರಮೋಚ್ಛ ರಾಷ್ಟ್ರೀಯ ಪ್ರಶಸ್ತಿಯಾಗಿದೆ. ಈ ವರ್ಷದಿಂದ ಈಶಾನ್ಯ ರಾಜ್ಯಗಳಿಗೆ [ಎನ್.ಇ.ಆರ್] ವಿಶೇಷ ಪ್ರಶಸ್ತಿಯನ್ನು ಸರ್ಕಾರ ನೀಡುತ್ತಿದೆ. ಈ ಎಲ್ಲಾ ಮೂರು ವಲಯಗಳಲ್ಲಿ 2024 ರ ನವೆಂಬರ್ 26 ರಂದು ನವದೆಹಲಿಯಲ್ಲಿ 15 ಮಂದಿ ಪ್ರಶಸ್ತಿ ಪುರಸ್ಕೃತರನ್ನು ಗೌರವಿಸಲಾಯಿತು.

3. ಕೇಂದ್ರ ವಲಯದಿಂದ ಇಲಾಖೆಯು ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ದಿ ಕಾರ್ಯಕ್ರಮ [ಎನ್.ಪಿ.ಡಿ.ಸಿ] ಆರಂಭಿಸುತ್ತಿದ್ದು, ಈ ಮೂಲಕ ಗುಣಮಟ್ಟದ ಹಾಲು ಉತ್ಪಾದನೆ, ಹಾಲಿನ ಉತ್ಪನ್ನಗಳು, ಹಾಲು ಸಂಗ್ರಹ, ಸಂಸ್ಕರಣೆ, ಮೌಲ್ಯ ವರ್ಧನೆ ಮತ್ತು ಮಾರುಕಟ್ಟೆಯನ್ನು ಉತ್ತೇಜಿಸುವ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಈ ಯೋಜನೆಯಡಿ 19,010 ಹಾಲು ಸಹಕಾರ ಸಂಸ್ಥೆಗಳ ಸೃಜನೆ ಮತ್ತು ಪುನಶ್ಚೇತನಗೊಳಿಸಲು ಒತ್ತು ನೀಡಲಾಗುತ್ತಿದೆ. ಇದರೊಂದಿಗೆ 18.17 ಲಕ್ಷ ಹಾಲು ಒಕ್ಕೂಟಗಳಿಗೆ ಸದಸ್ಯರ ಸೇರ್ಪಡೆ ಹಾಗೂ 27.93 ಲಕ್ಷ ಲೀಟರ್ ಹಾಲು ಸಂಸ್ಕರಣೆ ಸಾಮರ್ಥ್ಯ ವೃದ್ಧಿಸಲಾಗಿದೆ. 

ಹೈನುಗಾರಿಕೆ ಮತ್ತು ಪಶು ಸಂಗೋಪನೆ ಇಲಾಖೆಯು ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟವನ್ನು ಹೆಚ್ಚಿಸಲು, ಸಂಘಟಿತ ಮಾರುಕಟ್ಟೆಗಳು ರೈತರಿಗೆ ಕೈಗೆಟಕುವಂತೆ ಮಾಡುವ, ಹೈನುಗಾರಿಕೆ ಸಂಸ್ಕರಣಾ ಸೌಲಭ್ಯಗಳು ಲಭ್ಯವಾಗುವಂತೆ ನೋಡಿಕೊಳ್ಳುವ, ಮಾರುಕಟ್ಟೆ ಮೂಲ ಸೌಕರ್ಯ ಹೆಚ್ಚಿಸುವ ಮತ್ತು ಉತ್ಪಾದಕರ ಮಾಲೀಕತ್ವದ ಸಂಸ್ಥೆಗಳನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ. 1343.00 ಕೋಟಿ ರೂಪಾಯಿ ಮೊತ್ತದ 35 ಯೋಜನೆಗಳಿಗೆ ಈವರೆಗೆ ಮಂಜೂರಾತಿ ನೀಡಲಾಗಿದೆ. ಈ ಯೋಜನೆ ಪೂರ್ಣಗೊಳ್ಳುವ ವೇಳೆಗೆ ಹೊಸದಾಗಿ 10,000 ಹೊಸ ಹೈನುಗಾರಿಕೆ ಸಹಕಾರ ಸಂಸ್ಥೆಗಳು [ಡಿಸಿಗಳು] ಸೃಜನೆಯಾಗಲಿದ್ದು, ಸುಮಾರು 1.5 ಲಕ್ಷ ರೈತರು ಸದಸ್ಯರಾಗಲಿದ್ದಾರೆ ಮತ್ತು 14.20 ಲಕ್ಷ ಲೀಟರ್ ಹಾಲು ದಿನನಿತ್ಯ ಉತ್ಪಾದನೆಯಾಗಲಿದೆ. ಡೈರಿ ಸಂಸ್ಕರಣೆ ಮತ್ತು ಮೂಲ ಸೌಕರ್ಯ ಅಭಿವೃದ್ದಿ ನಿಧಿ [ಡಿಐಡಿಎಫ್]ಯಡಿ 12 ರಾಜ್ಯಗಳಲ್ಲಿ 6777 ಕೋಟಿ ರೂಪಾಯಿ ಮೊತ್ತದ 37 ಯೋಜನೆಗಳನ್ನು ಈತನ ಮಂಜೂರು ಮಾಡಲಾಗಿದ್ದು, ಹಾಲು ಸಂಸ್ಕರಣೆ ಸಾಮರ್ಥ್ಯ ಪ್ರತಿದಿನ 73.95 ಲಕ್ಷ ಲೀಟರ್ ಗೆ ಏರಿಕೆಯಾಗಿದೆ. ಈ ಯೋಜನೆಯನ್ನು ಹೈನುಗಾರಿಕೆ ಸಹಕಾರ ಸಂಸ್ಥೆಗಳು ಮತ್ತು ರೈತ ಉತ್ಪಾದಕ ಸಂಸ್ಥೆಗಳು [ಎಸ್.ಡಿ.ಸಿ.ಎಫ್.ಪಿ.ಒ] ಗಳು ಬೆಂಬಲಿಸುತ್ತಿವೆ. ವಾರ್ಷಿಕ ಶೇ 2 ರ ಬಡ್ಡಿ ರಿಯಾಯಿತಿಯನ್ನು ಒದಗಿಸುತ್ತದೆ. ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳಿಂದ ಅರ್ಹ ಭಾಗವಹಿಸುವ ಸಂಸ್ಥೆಗಳಿಗೆ (ಪಿಎಗಳು) ದುಡಿಯುವ ಬಂಡವಾಳವನ್ನು ಸಾಲದ ರೂಪದಲ್ಲಿ ಒದಗಿಸಲಾಗಿದೆ.

4. ರಾಷ್ಟ್ರೀಯ ಜಾನುವಾರು ಅಭಿಯಾನ[ಎನ್.ಎಲ್.ಎಂ] : ಯೋಜನೆಯ ಗಮನವು ಉದ್ಯೋಗ ಸೃಷ್ಟಿ, ಉದ್ಯಮಶೀಲತೆ ಅಭಿವೃದ್ಧಿಯ ಕಡೆಗೆ; ಪ್ರಾಣಿಗಳ ಉತ್ಪಾದಕತೆ ಹೆಚ್ಚಿಸುವುದು ಮತ್ತು ಮಾಂಸ, ಮೇಕೆ ಹಾಲು, ಮೊಟ್ಟೆ ಮತ್ತು ಉಣ್ಣೆಯ ಉತ್ಪಾದನೆಯನ್ನು ಹೆಚ್ಚಿಸುವ ಗುರಿ ಹೊಂದಿದೆ.

21.02.2024 ರಿಂದ, ಒಂಟೆ, ಕುದುರೆ, ಕತ್ತೆ, ಹೇಸರಗತ್ತೆಗಳ ಅಭಿವೃದ್ಧಿಗೆ ಹೊಸ ಚಟುವಟಿಕೆಗಳನ್ನು ಅಳವಡಿಸಲು ಯೋಜನೆಗೆ ತಿದ್ದುಪಡಿ ಮಾಡಲಾಗಿದೆ. ವೈಯಕ್ತಿಕ, ಎಫ್‌ಪಿಒ, ಎಸ್‌ಎಚ್‌ಜಿ, ಜೆಎಲ್‌ಜಿ, ಎಫ್‌ಸಿಒ ಮತ್ತು ಸೆಕ್ಷನ್ 8 ಕಂಪನಿಗಳ ಪ್ರೋತ್ಸಾಹದ ಮೂಲಕ ಮೊದಲ ಬಾರಿಗೆ ಪ್ರಾಣಿಗಳ ತಳಿ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಹಸಿರು ಮೇವಿನ ಅವಶ್ಯಕತೆಯನ್ನು ಪೂರೈಸುವ ಸಲುವಾಗಿ, ಸಾಮಾನ್ಯ ಹುಲ್ಲುಗಾವಲು ಭೂಮಿ, ಹಾಳಾದ ಅರಣ್ಯ ಭೂಮಿ, ಪಾಳು ಭೂಮಿ ಮತ್ತು ಅರಣ್ಯ ಭೂಮಿಯನ್ನು ಬಳಸಿಕೊಂಡು ಮೇವು ಉತ್ಪಾದನಾ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಇದು ಮೇವು ಬೆಳೆಯುವ ಪ್ರದೇಶವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಕೇಂದ್ರ ಸರ್ಕಾರ ಜಾನುವಾರು ವಿಮಾ ಕಾರ್ಯಕ್ರಮವನ್ನು  ಸರಳೀಕರಿಸಿದೆ. ಫಲಾನುಭವಿಯ ವಂತಿಗೆಯ ಕೊಡುಗೆಯ ಪಾಲನ್ನು ಶೇ 15ಕ್ಕೆ ಇಳಿಸಲಾಗಿದೆ, ಇದು ಮೊದಲು ವಿವಿಧ ಫಲಾನುಭವಿಗಳು ಮತ್ತು ರಾಜ್ಯಗಳ ವರ್ಗಕ್ಕೆ ವಂತಿಗೆಯ ಪಾಲು 20% ರಿಂದ 50% ರ ನಡುವೆ ಇತ್ತು. ಈಗ ಫಲಾನುಭವಿಯು ವಂತಿಗೆಯ ಮೊತ್ತದ ಕೇವಲ 15% ರಷ್ಟು ಕೊಡುಗೆ ನೀಡುವ ಮೂಲಕ ತಮ್ಮ ಪ್ರಾಣಿಗಳಿಗೆ ವಿಮೆಯನ್ನು ಪಡೆಯಬಹುದು ಮತ್ತು ವಂತಿಗೆಯ ಪಾಲನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರವು ಸಾಮಾನ್ಯ ರಾಜ್ಯಗಳಿಗೆ 60:40 ಅನುಪಾತದ ಆಧಾರದ ಮೇಲೆ, 90:10 ಅನುಪಾತದ ಅನ್ವಯ ಈಶಾನ್ಯ ಮತ್ತು ಹಿಮಾಲಯನ್ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಶೇ 100 ರಷ್ಟು ಆಧಾರದ ಮೇಲೆ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ, ಒಬ್ಬ ಫಲಾನುಭವಿಯಿಂದ ವಿಮೆ ಮಾಡಬೇಕಾದ ಪ್ರಾಣಿಗಳ ಸಂಖ್ಯೆಯನ್ನು 5 ಜಾನುವಾರು ಘಟಕದಿಂದ (1 ಜಾನುವಾರು ಘಟಕ = ಒಂದು ದೊಡ್ಡ ಪ್ರಾಣಿ ಅಥವಾ 10 ಸಣ್ಣ ಪ್ರಾಣಿ) 10 ಜಾನುವಾರು ಘಟಕಕ್ಕೆ ಹೆಚ್ಚಿಸಲಾಗಿದೆ. ಈಗ ಒಬ್ಬ ಫಲಾನುಭವಿಯು 100 ಸಣ್ಣ ಪ್ರಾಣಿಗಳಾದ ಹಂದಿ ಮತ್ತು ಮೊಲಗಳಿಗೆ, ಪ್ರಾಣಿಗಳ ಸಂಖ್ಯೆ 5 ಜಾನುವಾರು ಘಟಕವಾಗಿರುತ್ತದೆ. ಪ್ರಸ್ತುತ, ವಿಮಾ ಶೇಕಡಾವಾರು ಕೇವಲ ಶೇ 0.98 ರಷ್ಟು ಆಗಿದೆ, ಸರ್ಕಾರವು ದೇಶದ ಒಟ್ಟು ಪ್ರಾಣಿಗಳ ಜನಸಂಖ್ಯೆಯ ಶೇ 5 ರಷ್ಟನ್ನು ಒಳಗೊಳ್ಳಲು ಉಪಕ್ರಮಗಳನ್ನು ತೆಗೆದುಕೊಂಡಿದೆ. 10 ದೊಡ್ಡ ಪ್ರಾಣಿಗಳಿಗೆ ವಿಮೆ ಮಾಡಿಸಬಹುದಾಗಿದೆ.

ಹಣಕಾಸು ಪ್ರಗತಿ: 2024- 25 ನೇ ಸಾಲಿಗೆ 324 ಕೋಟಿ ರೂಪಾಯಿ ಮಂಜೂರು ಮಾಡಿದ್ದು, ಈವರೆಗೆ 190 ಕೋಟಿ ರೂಪಾಯಿ ಬಳಕೆ ಮಾಡಿಕೊಳ್ಳಲಾಗಿದೆ. ಡಿಎಎಚ್ಡಿ ಅಡಿ ಇಲ್ಲಿಯತನಕ 2858 ಅರ್ಜಿಗಳಿಗೆ ಅನುಮೋದನೆ ನೀಡಲಾಗಿದೆ ಮತ್ತು 235.30 ಕೋಟಿ ರೂಪಾಯಿ ಮೊತ್ತವನ್ನು 1168 ಫಲಾನುಭವಿಗಳಿಗೆ ಸಬ್ಸಿಡಿ ರೂಪದಲ್ಲಿ ಬಿಡುಗಡೆ ಮಾಡಲಾಗಿದೆ.

5. ಪಶುಸಂಗೋಪನೆ ಮೂಲಸೌಕರ್ಯ ಅಭಿವೃದ್ಧಿ ನಿಧಿ [ಎ.ಎಚ್.ಐ.ಡಿ.ಎಫ್]; ಖಾಸಗಿ ಕಂಪನಿಗಳು, ಖಾಸತಿ ಉದ್ದಿಮೆದಾರರು ರೈತ ಉತ್ಪಾದಕರ ಸಂಸ್ಥೆಗಳು (ಇಪಿಓಗಳು), ಮತ್ತು ವಿಭಾಗ 8 ಕಂಪನಿಗಳಿಂದ ಹೂಡಿಕೆಗಳನ್ನು ಪ್ರೋತ್ಸಾಹಿಸಲು ಯೋಜನೆಯಡಿ ಅವಕಾಶ ಕಲ್ಪಿಸಲಾಗಿದೆ. (i) ಹೈನುಗಾರಿಕೆ ಸಂಸ್ಕರಣೆ ಮತ್ತು ಮೌಲ್ಯವರ್ಧನೆಯ ಮೂಲಸೌಕರ್ಯ, (ii) ಮಾಂಸ ಸಂಸ್ಕರಣೆ ಮತ್ತು ಮೌಲ್ಯವರ್ಧನೆಯ ಮೂಲಸೌಕರ್ಯ ಮತ್ತು. iii) ಪಶುಗಳ ಹಸಿರು ಆಹಾರ (iv) ತಳಿ ಸುಧಾರಣೆ ತಂತ್ರಜ್ಞಾನ ಮತ್ತು ತಳಿ ಗುಣಾಕಾರ ಘಟಕಗಳು (v) ಪಶುವೈದ್ಯಕೀಯ ಔಷಧಗಳು ಮತ್ತು ಲಸಿಕೆ ಮೂಲಸೌಕರ್ಯ ಮತ್ತು (vi) ತ್ಯಾಜ್ಯ ಸಂಪತ್ತಿನ ನಿರ್ವಹಣೆಯನ್ನು ಇದು ಒಳಗೊಂಡಿದೆ. ಈ ಯೋಜನೆ 2023-24 ವರೆಗೆ ಮಾತ್ರ ಇತ್ತು. ನಂತರ ಇದನ್ನು 2025-26 ರ ಸಾಲಿಗೂ ವಿಸ್ತರಿಸಲಾಗಿದೆ. ಈ ಯೋಜನೆಯನ್ನು 01.02.2024 ರಂದು ಪರಿಷ್ಕರಿಸಲಾಗಿದೆ. ಯೋಜನೆಯ ಅಡಿಯಲ್ಲಿ ಪ್ರಯೋಜನ ಪಡೆಯಲು ಹೈನುಗಾರಿಕೆಯಡಿ ಸಹಕಾರಿಗಳನ್ನು ಸಹ ಸೇರಿಸಲಾಗಿದೆ. ಇದಲ್ಲದೇ, ಹೈನುಗಾರಿಕೆ ಮೂಲಸೌಕರ್ಯ ಅಭಿವೃದ್ಧಿ ನಿಧಿಯನ್ನು (ಡಿಐಡಿಎಫ್) ಎ.ಎಚ್.ಐ.ಡಿ.ಎಫ್ ನಲ್ಲಿ ಒಳಪಡಿಸಲಾಗಿದೆ ಮತ್ತು ಪರಿಷ್ಕೃತ ವೆಚ್ಚವು ಈಗ 29610 ಕೋಟಿ ರೂಪಾಯಿ ಆಗಿದೆ. ಯೋಜನೆಯಡಿಯಲ್ಲಿ ಶೇ 3 ರ ಬಡ್ಡಿ ಸಹಾಯಧನವನ್ನು ಒದಗಿಸಲಾಗಿದೆ ಮತ್ತು ಒಬ್ಬ ಫಲಾನುಭವಿಯು ತೆಗೆದುಕೊಳ್ಳಬಹುದಾದ ಸಾಲಕ್ಕೆ ಯಾವುದೇ ಮಿತಿಯಿಲ್ಲ. ಎಂ.ಎಸ್.ಎಂ.ಇ ಗಾಗಿ ಬಡ್ಡಿದರವು ಇಬಿಎಲ್ಆರ್ ಮತ್ತು 200 ಮೂಲ ಅಂಕಗಳನ್ನು ನಿಗದಿಮಾಡಲಾಗಿದೆ. ಯೋಜನೆಯಡಿಯಲ್ಲಿ ಸಂಯೋಜಿತ ಎಎಚ್‌ಐಡಿಎಫ್ ಯೋಜನೆಗೆ 270 ಕೋಟಿ ರೂ.ಗಳನ್ನು ವಿನಿಯೋಗಿಸಲಾಗಿದ್ದು, ಈ ಪೈಕಿ 231.79 ಕೋಟಿ ರೂಪಾಯಿಯನ್ನು ಬಳಸಿಕೊಳ್ಳಲಾಗಿದೆ. ಇಲ್ಲಿಯವರೆಗೆ 486 ಅನುಮೋದಿತ ಯೋಜನೆಗಳಲ್ಲಿ 13306.50 ಕೋಟಿ ರೂಪಾಯಿ ಹೂಡಿಕೆ ಮಾಡಲಾಗಿದೆ. ಸರ್ಕಾರದ ಮಧ್ಯಸ್ಥಿಕೆಯಿಂದಾಗಿ ಹೈನುಗಾರಿಕೆ, ಮಾಂಸ, ಪ್ರಾಣಿಗಳ ಆಹಾರದ ಸಂಸ್ಕರಣಾ ಸಾಮರ್ಥ್ಯದಲ್ಲಿ ಶೇ 2-4 ರಷ್ಟು ಹೆಚ್ಚಳವಾಗಿದೆ.

6. ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಕಾರ್ಯಕ್ರಮ [ಎಲ್.ಎಚ್.ಡಿ.ಸಿ.ಪಿ] ಅನುಷ್ಠಾನಗೊಳಿಸಲಾಗಿದೆ. ಜಾನುವಾರುಗಳ ರೋಗ ನಿವಾರಣೆ ಮತ್ತು ಪಶುವೈದ್ಯಕೀಯ ಆರೋಗ್ಯ ಮೂಲಸೌಕರ್ಯವನ್ನು ಹೆಚ್ಚಿಸಲು ಯೋಜನೆ ಸಹಕಾರಿಯಾಗಿದೆ. ಈ ಉಪಕ್ರಮವು ಜಾನುವಾರುಗಳ ಉತ್ಪಾದಕತೆಯನ್ನು ವರ್ಧಿಸಲು ಮತ್ತು ರೈತರ ಆದಾಯವನ್ನು ಹೆಚ್ಚಿಸುವ ಗುರಿ ಹೊಂದಿದೆ, ವಿಶೇಷವಾಗಿ ತಮ್ಮ ಜೀವನೋಪಾಯಕ್ಕಾಗಿ ಜಾನುವಾರುಗಳನ್ನು ಅವಲಂಬಿಸಿರುವವರಿಗೆ ಸಹಕಾರಿಯಾಗಲಿದೆ. ಯೋಜನೆಯಡಿಯಲ್ಲಿ ಮಾಡಿದ ಸಾಧನೆಗಳು ಕೆಳಗಿನಂತಿವೆ:

6.1 ಪ್ರಾಣಿಗಳ ರಾಷ್ಟ್ರೀಯ ರೋಗ ನಿಯಂತ್ರಣ ಕಾರ್ಯಕ್ರಮ [ಎನ್.ಎ.ಡಿ.ಸಿ.ಪಿ]:  2019 ರಲ್ಲಿ ಪ್ರಾರಂಭವಾದ ಕಾರ್ಯಕ್ರಮವು ಜಾಗತಿಕವಾಗಿ ಬೃಹತ್ ಮಟ್ಟದ್ದಾಗಿದೆ. ಬರುವ 2030 ರ ವೇಳೆಗೆ ಎಫ್‌ಎಂಡಿ ಮತ್ತು ಬ್ರೂಸೆಲೋಸಿಸ್ ಅನ್ನು ನಿರ್ಮೂಲನೆ ಮಾಡುವ ಗುರಿ ಹೊಂದಿದೆ. ಜಾನುವಾರು ಮತ್ತು ಎಮ್ಮೆಗಳಲ್ಲಿ ಕಾಲು ಮತ್ತು ಬಾಯಿ ರೋಗ (ಎಫ್‌ಎಂಡಿ) ವಿರುದ್ಧ 99.71 ಕೋಟಿಗೂ ಹೆಚ್ಚು ಲಸಿಕೆಗಳನ್ನು ನೀಡಲಾಗಿದ್ದು, ಇದುವರೆಗೆ 7.18 ಕೋಟಿ ರೈತರಿಗೆ ಪ್ರಯೋಜನವನ್ನು ದೊರಕಿಸಿಕೊಡಲಾಗಿದೆ. ಪೆಸ್ಟೆ ಡೆಸ್ ಪೆಟಿಟ್ಸ್ ರೂಮಿನಾಂಟ್ಸ್ (ಪಿಪಿಆರ್) ಮತ್ತು ಕ್ಲಾಸಿಕಲ್ ಹಂದಿ ಜ್ವರ (ಸಿಎಸ್ಎಫ್)ದಂತಹ ಇತರ ಕಾಯಿಲೆಗಳಿಗೆ ಲಸಿಕೆ ಅಭಿಯಾನಗಳು ಸಹ ಗಣನೀಯ ಪ್ರಗತಿಯನ್ನು ಕಂಡಿವೆ, ಲಕ್ಷಾಂತರ ಲಸಿಕೆಗಳು ಪೂರ್ಣಗೊಂಡಿವೆ. 2024 ರಲ್ಲಿ ಗ್ರಾಮೀಣ ಕುರಿಗಳು ಮತ್ತು ಮೇಕೆಗಳನ್ನು ಸೇರಿಸಲು ಎಫ್.ಎಂ.ಡಿ ಲಸಿಕೆಯನ್ನು ವ್ಯಾಪ್ತಿಗೆ ಒಳಪಡಿಸಲಾಗಿದೆ.

6.2 ಸಂಚಾರಿ ಪಶು ಚಿಕಿತ್ಸಾ ಘಟಕಗಳು [ಎಂವಿಯುಗಳು]: 4016 ಎಂವಿಯುಗಳನ್ನು 28 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವಂತೆ ವ್ಯವಸ್ಥೆ ಮಾಡಲಾಗಿದೆ, ಶುಲ್ಕ ರಹಿತ ಸಹಾಯವಾಣಿ ಸಂಖ್ಯೆ 1962 ಮೂಲಕ ರೈತರ ಮನೆ ಬಾಗಿಲಿಗೆ ಪಶುವೈದ್ಯಕೀಯ ಸೇವೆಗಳನ್ನು ಒದಗಿಸಲಾಗುತ್ತಿದೆ. 62.24 ಲಕ್ಷಕ್ಕೂ ಹೆಚ್ಚು ರೈತರು ಮತ್ತು 131.05 ಲಕ್ಷ ಪ್ರಾಣಿಗಳು ಇದರಿಂದ ಪ್ರಯೋಜನ ಪಡೆದಿದ್ದಾರೆ.  ಎಂವಿಯುಗಳು ಹೈನುಗಾರಿಕೆ ಪ್ರಾಣಿಗಳನ್ನು ಸಾಕುವುದರಲ್ಲಿ ರೈತರ ವಿಶ್ವಾಸವನ್ನು ಹೆಚ್ಚಿಸಿವೆ, ಹೈನುಗಾರಿಕೆಯನ್ನು ವಾಣಿಜ್ಯಿ ಚಟುವಟಿಕೆಯ ಕಾರ್ಯಸಾಧ್ಯವಾದ ಉದ್ಯಮವನ್ನಾಗಿ ಪರಿವರ್ತಿಸಲು ಸಹಕಾರಿಯಾಗಿದೆ.   

6.3 ಪ್ರಾಣಿಗಳ ರೋಗ ನಿಯಂತ್ರಣಕ್ಕಾಗಿ ರಾಜ್ಯಗಳಿಗೆ ನೆರವು [ಎ.ಎಸ್.ಸಿ.ಎ.ಡಿ]: ಲಂಪಿ ಚರ್ಮರೋಗ (ಎಲ್‌ಎಸ್‌ಡಿ)ದಂತಹ ಆರ್ಥಿಕವಾಗಿ ಮತ್ತು ಪ್ರಾಣಿಶಾಸ್ತ್ರಗಳ ಗಮನಾರ್ಹವಾದ ಮಹತ್ವದ ರೋಗಗಳ ವಿರುದ್ಧ ಲಸಿಕೆಗಳಿಗೆ ಆರ್ಥಿಕ ಮತ್ತು ತಾಂತ್ರಿಕ ಬೆಂಬಲವನ್ನು ಒದಗಿಸಲಾಗಿದೆ. 2022 ರಿಂದ ಸುಮಾರು 25.6 ಕೋಟಿ ಜಾನುವಾರುಗಳಿಗೆ ಲಂಪಿ ಚರ್ಮರೋಗ ವಿರುದ್ಧ ಲಸಿಕೆ ನೀಡಲಾಗಿದೆ ಮತ್ತು 2022 ರಲ್ಲಿ 33.5 ಲಕ್ಷದಿಂದ ಪ್ರಕರಣಗಳ ಸಂಖ್ಯೆಯು ಈವರೆಗೆ ಕೇವಲ 47 ಸಕ್ರಿಯ ಪ್ರಕರಣಗಳಿಗೆ ತಗ್ಗಿದೆ.

7. ಪಶುವೈದ್ಯಕೀಯ ಶಿಕ್ಷಣಕ್ಕಾಗಿ ಕಾಲೇಜುಗಳ ಜಾಲವನ್ನು ವಿಸ್ತರಿಸುವುದು: ದೇಶದಲ್ಲಿ ಅರ್ಹ ಪಶುವೈದ್ಯಕೀಯ ವ್ಯವಸ್ಥೆಯನ್ನು ಬಲಗೊಳಿಸಲು 1984 ರ ಐವಿಸಿ ಕಾಯ್ದೆಯಡಿ ಹೊಸ ವೈದ್ಯಕೀಯ ಕಾಲೇಜುಗಳನ್ನು ನಿಬಂಧನೆಗಳಿಗೆ ಒಳಪಟ್ಟು ಪ್ರಾರಂಭಿಸಲು ಅನುಮತಿ ನೀಡಲಾಗಿದೆ. 2014 ರಲ್ಲಿ 36 ರಷ್ಟಿದ್ದ ಪಶು ವೈದ್ಯಕೀಯ ಕಾಲೇಜುಗಳ ಸಂಖ್ಯೆ 2024 ರ ವೇಳೆಗೆ [ಈ ದಿನಾಂಕದವರೆಗೆ] 79 ಕ್ಕೆ ಏರಿಕೆಯಾಗಿದೆ. ನೀಟ್ ಪರೀಕ್ಷೆಯಲ್ಲಿನ ಅಂಕಗಳು ಮತ್ತು ಆನ್ ಲೈನ್ ಕೌನ್ಸಿಲಿಂಗ್ ವ್ಯವಸ್ಥೆಯನ್ನು ಪಶು ವೈದ್ಯಕೀಯ ಶಿಕ್ಷಣಕ್ಕೂ ಅಳವಡಿಸಲಾಗಿದೆ.

8. ಜಾನುವಾರು ಗಣತಿ ಮತ್ತು ಸಮಗ್ರ ಮಾದರಿ ಸಮೀಕ್ಷಾ ಯೋಜನೆ: 

8.1 ಸಮಗ್ರ ಮಾದರಿ ಸಮೀಕ್ಷೆ: ಹಾಲು, ಮೊಟ್ಟೆ, ಮಾಂಸ ಮತ್ತು ಉಣ್ಣೆಯಂತಹ ಪ್ರಮುಖ ಜಾನುವಾರು ಉತ್ಪನ್ನಗಳ (ಎಂ.ಎಲ್.ಪಿ) ಅಂದಾಜುಗಳನ್ನು ಹೊರತರಲು. ಅಂದಾಜುಗಳನ್ನು ಇಲಾಖೆಯ ಮೂಲ ಪಶುಗಳ ಸಂಖ್ಯೆಗಳನ್ನು [ಬಿಎಎಚ್ಎಸ್]  ವಾರ್ಷಿಕ ವರದಿಯಲ್ಲಿ ಪ್ರಕಟಿಸಲಾಗಿದೆ. 2023-24ರ ಅವಧಿಯ ಮೂಲ ಪಶುಸಂಗೋಪನೆ ಅಂಕಿಅಂಶಗಳು [ಬಿಎಎಚ್ಎಸ್]  -2024 ಅನ್ನು ಇತ್ತೀಚೆಗೆ ಪ್ರಕಟಿಸಲಾಗಿದೆ.

8.2 ಜಾನುವಾರು ಸಮೀಕ್ಷೆ: ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಪಾಲ್ಗೊಳ್ಳುವಿಕೆಯ ಮೂಲಕ 20 ನೇ ಜಾನುವಾರು ಗಣತಿ ಕಾರ್ಯವನ್ನು 2019 ರಲ್ಲಿ ಕೈಗೆತ್ತಿಕೊಳ್ಳಲಾಗಿತ್ತು. ಜಾನುವಾರುಗಳ ಜಾತಿವಾರು ಮತ್ತು ರಾಜ್ಯವಾರು ಜನಸಂಖ್ಯೆಯನ್ನು ಒಳಗೊಂಡಿರುವ “20ನೇ ಜಾನುವಾರು ಗಣತಿ-2019” ಎಂಬ ಅಖಿಲ ಭಾರತ ವರದಿಯನ್ನು ಪ್ರಕಟಿಸಲಾಗಿದೆ. ಮೇಲಿನವುಗಳ ಜೊತೆಗೆ, ಇಲಾಖೆಯು ಜಾನುವಾರು ಮತ್ತು ಕೋಳಿ (20 ನೇ ಜಾನುವಾರು ಗಣತಿಯನ್ನು ಆಧರಿಸಿ) ತಳಿವಾರು ವರದಿಯನ್ನು ಸಹ ಪ್ರಕಟ ಮಾಡಿದೆ. 21 ನೇ ಜಾನುವಾರು ಗಣತಿಯನ್ನು ಮಾನ್ಯ ಸಚಿವರಾದ ಶ್ರೀ ರಾಜೀವ್ ರಂಜನ್ ಸಿಂಗ್ [ಲಾಲನ್ ಸಿಂಗ್] ಅವರು 2024ರ 25 ನೇ ಅಕ್ಟೋಬರ್ ನಲ್ಲಿ ಪ್ರಾರಂಭಿಸಿದರು. ಅಂದಿನಿಂದ, 21 ನೇ ಎಲ್.ಸಿ ತಂತ್ರಾಂಶದ ಮೂಲಕ ಎಲ್ಲಾ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾನುವಾರು ಮತ್ತು ಕೋಳಿಗಳ ದತ್ತಾಂಶವನ್ನು ಸಂಗ್ರಹಿಸಲಾಗುತ್ತಿದೆ.

9. ರೈತರ ಹಾಲು ಸಹಕಾರ ಸಂಘಗಳು ಮತ್ತು ಹಾಲು ಉತ್ಪಾದಕ ಸಂಸ್ಥೆಗಳಿಗೆ ಕಿಸಾನ್ ಕ್ರಿಡಿಟ್ ಕಾರ್ಡ್ [ಕೆಸಿಸಿ]: 15.11.2024 ರ ವರೆಗೆ ಎ.ಎಚ್.ಡಿ ರೈತರಿಗೆ 41.66 ಲಕ್ಷಕ್ಕೂ ಅಧಿಕ ಕಿಸಾನ್ ಕ್ರಿಡಿಟ್ ಕಾರ್ಡ್ ಗಳನ್ನು ಮಂಜೂರು ಮಾಡಲಾಗಿದೆ.

 

*****


(Release ID: 2086354) Visitor Counter : 83