ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಡಿಸೆಂಬರ್ 17 ರಿಂದ 21 ರವರೆಗೆ ಆಂಧ್ರ ಪ್ರದೇಶ ಮತ್ತು ತೆಲಂಗಾಣಕ್ಕೆ ರಾಷ್ಟ್ರಪತಿ ಭೇಟಿ

Posted On: 16 DEC 2024 7:23PM by PIB Bengaluru

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಡಿಸೆಂಬರ್ 17 ರಿಂದ 21, 2024 ರವರೆಗೆ ಆಂಧ್ರಪ್ರದೇಶ ಮತ್ತು ತೆಲಂಗಾಣಕ್ಕೆ ಭೇಟಿ ನೀಡಲಿದ್ದಾರೆ. ಈ ಭೇಟಿಯ ಸಮಯದಲ್ಲಿ ರಾಷ್ಟ್ರಪತಿಗಳು ಸಿಕಂದರಾಬಾದ್‌ನ ಬೊಲಾರಂ, ರಾಷ್ಟ್ರಪತಿ ನಿಲಯಂನಲ್ಲಿ ತಂಗಲಿದ್ದಾರೆ.

ಡಿಸೆಂಬರ್ 17 ರಂದು ಆಂಧ್ರಪ್ರದೇಶದ ಮಂಗಳಗಿರಿಯ ಏಮ್ಸ್‌ನ ಘಟಿಕೋತ್ಸವ ಸಮಾರಂಭವನ್ನು ರಾಷ್ಟ್ರಪತಿಗಳು ಅಲಂಕರಿಸಲಿದ್ದಾರೆ.

ಡಿಸೆಂಬರ್ 18 ರಂದು, ರಾಷ್ಟ್ರಪತಿಗಳು ಸಿಕಂದರಾಬಾದ್‌ನ ಬೊಲಾರಮ್‌ನ ರಾಷ್ಟ್ರಪತಿ ನಿಲಯಂನಲ್ಲಿ ವಿವಿಧ ಯೋಜನೆಗಳ ಉದ್ಘಾಟನೆ ಹಾಗೂ ವಿವಿಧ ಯೋಜನೆಗಳಿಗೆ ಅಡಿಪಾಯ ಹಾಕಲಿದ್ದಾರೆ.

ಡಿಸೆಂಬರ್ 20 ರಂದು, ರಾಷ್ಟ್ರಪತಿಗಳು ಸಿಕಂದರಾಬಾದ್‌ನ ಕಾಲೇಜ್ ಆಫ್ ಡಿಫೆನ್ಸ್ ಮ್ಯಾನೇಜ್‌ಮೆಂಟ್‌ಗೆ ವಿಶೇಷ ಪುರಸ್ಕಾರ ಪ್ರದಾನ ಮಾಡಲಿದ್ದಾರೆ.. 

ಅದೇ ದಿನ ಸಂಜೆ, ಅವರು ರಾಷ್ಟ್ರಪತಿ ನಿಲಯದಲ್ಲಿ ರಾಜ್ಯದ ಗಣ್ಯರು, ಪ್ರಮುಖ ನಾಗರಿಕರು, ಶಿಕ್ಷಣತಜ್ಞರು ಇತ್ಯಾದಿಗಳಿಗೆ ಮನೆಯಲ್ಲಿ ವಿಶೇಷ ಔತಣ ಕೂಟ  ಆಯೋಜಿಸಲಾಗಿದೆ.

 

*****


(Release ID: 2085158) Visitor Counter : 17