ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ
ನಗರ ವಲಯದಲ್ಲಿ ಹೂಡಿಕೆಯಲ್ಲಿ 16 ಪಟ್ಟು ಹೆಚ್ಚಳ, 2047ರ ವೇಳೆಗೆ ವಿಕಸಿತ ಭಾರತ ನಿರ್ಮಾಣಕ್ಕಾಗಿ ಸರ್ಕಾರವು ಪ್ರಯತ್ನಗಳನ್ನು ಹೆಚ್ಚಿಸುತ್ತಿದೆ
ನಗರೀಕರಣದ ತ್ವರಿತ ಗತಿಯು ನಗರಾಭಿವೃದ್ಧಿಯನ್ನು ಭಾರತದ ಬೆಳವಣಿಗೆ ಕಾರ್ಯತಂತ್ರದ ಮೂಲಾಧಾರವನ್ನಾಗಿ ಮಾಡಿದೆ: ಶ್ರೀ ಮನೋಹರ್ ಲಾಲ್
Posted On:
10 DEC 2024 1:45PM by PIB Bengaluru
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳು ಮತ್ತು ವಿದ್ಯುತ್ ಸಚಿವರಾದ ಶ್ರೀ ಮನೋಹರ್ ಲಾಲ್ ಅವರು ಇಂದು ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಗರ ವಲಯದ ಹೂಡಿಕೆಗಳಲ್ಲಿ ಗಮನಾರ್ಹ ಹೆಚ್ಚಳವನ್ನು ಎತ್ತಿ ತೋರಿಸಿದರು. 2004-14ರ ನಡುವೆ ಅಂದಾಜು ₹1,78,053 ಕೋಟಿಯಿದ್ದ ಹೂಡಿಕೆಯು 2014 ರಿಂದ ₹28,52,527 ಕೋಟಿಗೆ 16 ಪಟ್ಟು ಹೆಚ್ಚಳವಾಗಿದೆ ಎಂದು ಅವರು ಹೇಳಿದರು. ಈ ಹೆಚ್ಚಳವು 2047 ರ ವೇಳೆಗೆ ವಿಕಸಿತ ಭಾರತ ಗುರಿಯನ್ನು ಸಾಧಿಸುವ ಸರ್ಕಾರದ ಬದ್ಧತೆಯನ್ನು ಒತ್ತಿಹೇಳುತ್ತದೆ ಎಂದು ಅವರು ಹೇಳಿದರು.
ನಗರೀಕರಣದ ತ್ವರಿತಗತಿಯು ನಗರಾಭಿವೃದ್ಧಿಯನ್ನು ಭಾರತದ ಬೆಳವಣಿಗೆಯ ಕಾರ್ಯತಂತ್ರದ ಮೂಲಾಧಾರವನ್ನಾಗಿ ಮಾಡಿದೆ ಎಂದು ಶ್ರೀ ಮನೋಹರ್ ಲಾಲ್ ಒತ್ತಿ ಹೇಳಿದರು. ಕಳೆದ ಆರು ತಿಂಗಳಿನಿಂದ, ನಗರಾಭಿವೃದ್ಧಿ ಯೋಜನೆಗಳನ್ನು ಹೆಚ್ಚಿನ ವೇಗ ಮತ್ತು ದಕ್ಷತೆಯೊಂದಿಗೆ ವಿಸ್ತರಿಸಲಾಗಿದೆ ಮತ್ತು ಕಾರ್ಯಗತಗೊಳಿಸಲಾಗಿದೆ ಎಂದು ಅವರು ಹೇಳಿದರು.
ಅಮೃತ್ ಅಡಿಯಲ್ಲಿ ಸಾಧನೆಗಳು
ಕೇಂದ್ರ ಸಚಿವರು ಪುನರುಜ್ಜೀವನ ಮತ್ತು ನಗರ ಪರಿವರ್ತನೆಗಾಗಿ ಅಟಲ್ ಮಿಷನ್ (ಅಮೃತ್) ಅಡಿಯಲ್ಲಿ ಪ್ರಮುಖ ಸಾಧನೆಗಳನ್ನು ವಿವರಿಸಿದರು, ಅದರಲ್ಲಿ ಇವುಗಳ ರಚನೆಯೂ ಸೇರಿದೆ:
- 4,649 ಎಂ ಎಲ್ ಡಿ ನೀರಿನ ಸಂಸ್ಕರಣಾ ಸಾಮರ್ಥ್ಯ.
- 4,429 ಎಂ ಎಲ್ ಡಿ ಒಳಚರಂಡಿ ಸಂಸ್ಕರಣಾ ಸಾಮರ್ಥ್ಯ.
ಅಮೃತ್ 2.0 ಅಡಿಯಲ್ಲಿ, ನೀರು ನಿಲ್ಲುವ ಸವಾಲುಗಳನ್ನು ನಿಭಾಯಿಸಲು ಸರ್ಕಾರವು ಮಳೆನೀರು ಒಳಚರಂಡಿ ವ್ಯವಸ್ಥೆಗಳಿಗೆ ಆದ್ಯತೆ ನೀಡುತ್ತಿದೆ ಮತ್ತು ಕುಡಿಯುವ ನೀರಿನ ಲಭ್ಯತೆ ಮತ್ತು ಒಳಚರಂಡಿ ವ್ಯವಸ್ಥೆಯನ್ನು ಸುಧಾರಿಸುವ ಪ್ರಯತ್ನಗಳನ್ನು ಮುಂದುವರೆಸಿದೆ. (ಅನುಬಂಧ 1- ಅಮೃತ್)
ಸ್ಮಾರ್ಟ್ ಸಿಟಿಗಳು ಮತ್ತು ಹೊಸ ನಗರಗಳ ಯೋಜನೆ
ಸ್ಮಾರ್ಟ್ ಸಿಟೀಸ್ ಮಿಷನ್ ಯಶಸ್ವಿಯಾಗಿ ಪೂರ್ಣಗೊಂಡ ನಂತರ, ತ್ವರಿತ ನಗರೀಕರಣದ ಒತ್ತಡವನ್ನು ನಿರ್ವಹಿಸಲು ಹೊಸ ನಗರಗಳ ಯೋಜನೆಯನ್ನು ರೂಪಿಸಲಾಗಿದೆ ಎಂದು ಶ್ರೀ ಮನೋಹರ್ ಲಾಲ್ ಘೋಷಿಸಿದರು. (ಅನುಬಂಧ 2- ಸ್ಮಾರ್ಟ್ ಸಿಟಿಗಳು) (ಅನುಬಂಧ 3 - ಹೊಸ ನಗರಗಳು)
ನಗರ ಸಂಚಾರ ಮತ್ತು ಸುಸ್ಥಿರ ಉಪಕ್ರಮಗಳು
ಇಂತಹ ಉಪಕ್ರಮಗಳ ಮೂಲಕ ನಗರಗಳ ಸಂಚಾರ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ಸರ್ಕಾರದ ಗಮನವನ್ನು ಸಚಿವರು ವಿವರಿಸಿದರು:
- ಪ್ರಾದೇಶಿಕ ತ್ವರಿತ ಸಂಚಾರ ವ್ಯವಸ್ಥೆ (ಆರ್ ಆರ್ ಟಿ ಎಸ್) ವಿಸ್ತರಣೆ
- ಮಾಲಿನ್ಯವನ್ನು ಕಡಿಮೆ ಮಾಡಲು ಮತ್ತು ಪರಿಸರ ಕಾಳಜಿಯನ್ನು ಪರಿಹರಿಸಲು ಇ-ಮೊಬಿಲಿಟಿ ಮತ್ತು ನಗರಗಳಲ್ಲಿ ನಡೆಯಲು ಯೋಗ್ಯವಾದ ಬೀದಿಗಳನ್ನು ಉತ್ತೇಜಿಸುವುದು. (ಅನುಬಂಧ 4- ನಗರ ಸಾರಿಗೆ)
ನಗರ ವಸತಿ ಮತ್ತು ಪಿಎಂಎವೈ 2.0
ನಗರ ವಸತಿ ಕುರಿತು ಮಾತನಾಡಿದ ಶ್ರೀ ಮನೋಹರ್ ಲಾಲ್ ಅವರು ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ) 2.0 ಅಡಿಯಲ್ಲಿ ಹೊಸ ಬಾಡಿಗೆ ವಸತಿ ಕಾರ್ಯಕ್ರಮವನ್ನು ಪರಿಚಯಿಸಲಾಗಿದೆ, ಇದು ವಲಸೆ ಜನಸಂಖ್ಯೆಗೆ ಪ್ರಯೋಜನವನ್ನು ನೀಡುತ್ತದೆ. ಪ್ರಮುಖ ಅಪ್ ಡೇಟ್ ಗಳಲ್ಲಿ ಇವುಗಳು ಸೇರಿವೆ:
- ಅಸ್ತಿತ್ವದಲ್ಲಿರುವ ಸರ್ಕಾರಿ ಅನುದಾನಿತ ಖಾಲಿ ಮನೆಗಳನ್ನು ಪಿಪಿಪಿ ಮಾದರಿ ಮೂಲಕ ಅಥವಾ ಸಾರ್ವಜನಿಕ ಏಜೆನ್ಸಿಗಳ ಮೂಲಕ ಎ ಆರ್ ಎಚ್ ಗೆ ಪರಿವರ್ತಿಸುವುದು.
- ಎಂಒಯುಗಳಿಗೆ ಸಹಿ ಹಾಕುವ ರಾಜ್ಯಗಳ ಜನಸಂಖ್ಯೆಯ ಆಧಾರದ ಮೇಲೆ ಯೋಜಿತ 1 ಕೋಟಿ ನಗರ ಮನೆಗಳಲ್ಲಿ ಸುಮಾರು ಶೇ.7 ರಷ್ಟು ತಾತ್ಕಾಲಿಕ ಮಂಜೂರಾತಿಗಳು. ಇದು ಸಮಯೋಚಿತ ಹಂಚಿಕೆಯನ್ನು ಖಚಿತಪಡಿಸುತ್ತದೆ ಮತ್ತು ಪ್ರಕ್ರಿಯೆಯನ್ನು ತ್ವರಿತಗೊಳಿಸುತ್ತದೆ.
ಕಾರ್ಯಾಚರಣೆಗಳನ್ನು ಸುಗಮಗೊಳಿಸಲು, ಮಾರ್ಚ್ 31 ರೊಳಗೆ ಸ್ವೀಕರಿಸಿದ ಬೇಡಿಕೆಯ ಆಧಾರದ ಮೇಲೆ ರಾಜ್ಯಗಳಿಗೆ ಅನುಮೋದನೆಗಳನ್ನು ಅಂತಿಮಗೊಳಿಸಲಾಗುತ್ತದೆ, ಇದರಿಂದಾಗಿ ವಾರ್ಷಿಕ ವಸತಿ ಹಂಚಿಕೆಯಲ್ಲಿ ಸ್ಪಷ್ಟತೆಯನ್ನು ತರಲಾಗುತ್ತದೆ. (ಅನುಬಂಧ 5 - ಪಿಎಂಎವೈ)
ಪರಿಷ್ಕೃತ ಎನ್ ಯು ಎಲ್ ಎಂ ಮಿಷನ್ ನ ಪ್ರಾರಂಭ
ಪ್ರಸ್ತುತ 25 ನಗರಗಳಲ್ಲಿ ನಡೆಯುತ್ತಿರುವ ಪ್ರಾಯೋಗಿಕ ಯೋಜನೆಯ ಫಲಿತಾಂಶಗಳ ಮೂಲಕ, ಪರಿಷ್ಕೃತ ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್ (ಎನ್ ಯು ಎಲ್ ಎಂ) ಅನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಕೇಂದ್ರ ಸಚಿವರು ಘೋಷಿಸಿದರು.
(ಅನುಬಂಧ 6 - ಎನ್ ಯು ಎಲ್ ಎಂ)
ನಗರಾಭಿವೃದ್ಧಿಯನ್ನು ಉತ್ತೇಜಿಸಲು ಬಜೆಟ್ ಬೆಂಬಲ, ಉದ್ಯೋಗಿಗಳ ತರಬೇತಿ ಮತ್ತು ಸುಧಾರಿತ ತಂತ್ರಜ್ಞಾನಗಳನ್ನು ಒದಗಿಸುವ ಮೂಲಕ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಕೆಲಸ ಮಾಡುವ ಕೇಂದ್ರ ಸರ್ಕಾರದ ಬದ್ಧತೆಯನ್ನು ಸಚಿವರು ಪುನರುಚ್ಚರಿಸಿದರು.
ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಡಿ ವಿತರಿಸಲಾದ ಸಾಲಗಳ ಮೊತ್ತವು ₹13,422 ಕೋಟಿ.
ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ, 9 ಜೂನ್ 2024 ರಿಂದ, ಸರ್ಕಾರವು ರೂ 1,123 ಕೋಟಿಗಿಂತ ಹೆಚ್ಚು ಬಿಡುಗಡೆ ಮಾಡಿದೆ. ಜೂನ್ 9 ರಿಂದ ಕಳೆದ ಆರು ತಿಂಗಳ ಅವಧಿಯಲ್ಲಿ, ಅಹಮದಾಬಾದ್ ಮತ್ತು ಹೈದರಾಬಾದ್ ನಲ್ಲಿನ ಎರಡು ಪ್ರಮುಖ ತ್ಯಾಜ್ಯ ಸುರಿಯುವ ಸ್ಥಳಗಳನ್ನು ಸಂಪೂರ್ಣವಾಗಿ ನಿವಾರಿಸಲಾಗಿದೆ, ಸರಿಸುಮಾರು 2.5 ಲಕ್ಷ ಮೆಟ್ರಿಕ್ ಟನ್ ಹಳೆಯ ತ್ಯಾಜ್ಯವನ್ನು ಯಶಸ್ವಿಯಾಗಿ ವಿಲೇವಾರಿ ಮಾಡಲಾಗಿದೆ. (ಅನುಬಂಧ 7 – ಎಸ್ ಬಿ ಎಂ)
*****
(Release ID: 2082815)
Visitor Counter : 11