ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಅಹ್ಮದಾಬಾದ್ ನಲ್ಲಿ ಬಿಎಪಿಎಸ್ ಸ್ವಾಮಿನಾರಾಯಣ ಸಂಸ್ಥೆಯ 'ಕಾರ್ಯಕಾರ್ ಸುವರ್ಣ ಮಹೋತ್ಸವ'ವನ್ನುದ್ದೇಶಿಸಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಭಾಷಣ


ಭಗವಾನ್ ಸ್ವಾಮಿನಾರಾಯಣರಿಂದ ಪ್ರಾರಂಭವಾದ ಬಿಎಪಿಎಸ್ ಸಂಸ್ಥೆಯು ಭಕ್ತಿಯ ಮೇಲೆ ಮಾತ್ರವಲ್ಲ ಸಮಾಜದಲ್ಲಿ ಸಮಾಜ ಸೇವೆಯನ್ನೂ ಸಂಯೋಜಿಸಿದೆ

ಬಿಎಪಿಎಸ್ ಕಾರ್ಯಕರ್ತರು ಸಂಸ್ಕೃತಿ, ಧರ್ಮ, ಸಮಾಜ ಮತ್ತು ಸೇವೆಯ ಬದ್ಧತೆಯೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಕಲ್ಪನೆಯಂತೆ 2047ರ ವೇಳೆಗೆ 'ಅಭಿವೃದ್ಧಿ ಹೊಂದಿದ ಭಾರತ'ದ ನಿರ್ಮಾಣಕ್ಕೆ ಕೊಡುಗೆ ನೀಡುವ ಪ್ರತಿಜ್ಞೆ ಮಾಡಬೇಕು

ಪ್ರಮುಖ್ ಸ್ವಾಮಿ ಮಹಾರಾಜ್ ಅವರು ಸನ್ಯಾಸಿ ವ್ಯವಸ್ಥೆಯಲ್ಲಿ ಶಿಸ್ತು ಮತ್ತು ಸೇವಾ ಮನೋಭಾವವನ್ನು ತುಂಬಿದರು, ಸಾವಿರಾರು ಜನರು ಇದರಿಂದ ಸ್ಫೂರ್ತಿ ಪಡೆದರು

ಪ್ರಮುಖ್ ಸ್ವಾಮಿ ಮಹಾರಾಜ್ ಅವರು ಪ್ರೇರಣೆ, ನಂಬಿಕೆ, ಸವಾಲುಗಳನ್ನು ಎದುರಿಸುವ ಧೈರ್ಯ ಮತ್ತು ಒಂದು ನಿರ್ದಿಷ್ಟ ಉದ್ದೇಶದೊಂದಿಗೆ ಕೆಲಸ ಮಾಡುವ ರೀತಿಯೊಂದಿಗೆ  ಲಕ್ಷಾಂತರ ಜೀವನಗಳಿಗೆ ಸ್ಫೂರ್ತಿಯಾದರು

ಇಂದು, ದೇಶ ಮತ್ತು ವಿದೇಶಗಳಲ್ಲಿ 1,200 ಕ್ಕೂ ಹೆಚ್ಚು ಸ್ವಾಮಿನಾರಾಯಣ ದೇವಾಲಯಗಳು ಲಕ್ಷಾಂತರ ಜನರ ಜೀವನದಲ್ಲಿ ಬೆಳಕನ್ನು ಹರಡುತ್ತಿವೆ

ಈ ಸಂಸ್ಥೆಯು ಹಲವಾರು ಜನರನ್ನು ವ್ಯಸನಗಳಿಂದ ದೂರ ಮಾಡಿದೆ, ಅವರನ್ನು ಮತ್ತು ಅವರ ಇಡೀ ಕುಟುಂಬವನ್ನು ಚಿಂತೆಗಳಿಂದ ಮುಕ್ತಗೊಳಿಸಿದೆ

ಬೀಜಗಳು, ಮರಗಳು ಮತ್ತು ಹಣ್ಣುಗಳ ರೂಪದಲ್ಲಿ, ಈ ಸಂಸ್ಥೆಯು ಒಂದು ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರ ಮೂಲಕ ಸಮಾಜಕ್ಕೆ ಅನೇಕ ಸಕಾರಾತ್ಮಕ ಫಲಿತಾಂಶಗಳನ್ನು ತಂದಿದೆ

ವಿಶ್ವಾದ್ಯಂತ ಒಂದು ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರನ್ನು ಹೊಂದಿರುವ ಇಂತಹ ಸಂಸ್ಥೆಯನ್ನು ಹುಡುಕುವುದು ಊಹಿಸಲಾಗದ, ಸಾಟಿಯಿಲ್ಲದ ಮತ್ತು ಅಸಾಧ್ಯವಾದಂತಹ ಕೆಲಸ

Posted On: 07 DEC 2024 10:13PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ಅಹ್ಮದಾಬಾದ್ ನಲ್ಲಿ ಬಿಎಪಿಎಸ್ ಸ್ವಾಮಿನಾರಾಯಣ ಸಂಸ್ಥೆಯ 'ಕಾರ್ಯಕಾರ್ ಸುವರ್ಣ ಮಹೋತ್ಸವ'ವನ್ನುದ್ದೇಶಿಸಿ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.

1 (3).JPG

ವಿಶ್ವದ ಅತಿದೊಡ್ಡ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದಿನ ಕಾರ್ಯಕ್ರಮವು ಅತ್ಯಂತ ಶುಭ ಘಟನೆಗಳ ಮೂಲಕ  ಕಾಕತಾಳೀಯ ಘಟನೆಗೆ ಕಾರಣವಾಗಿದೆ,  ಏಕೆಂದರೆ ಇಂದು ಪ್ರಮುಖ್ ಸ್ವಾಮಿ ಮಹಾರಾಜ್ ಅವರ 103 ನೇ ಜನ್ಮ ದಿನಾಚರಣೆ ಮತ್ತು ಬಿಎಪಿಎಸ್ ನ 'ಕಾರ್ಯಕಾರ ಸುವರ್ಣ ಮಹೋತ್ಸವ' ಎರಡನ್ನೂ ಆಚರಿಸಲಾಗುತ್ತಿದೆ ಎಂದು ಶ್ರೀ ಅಮಿತ್ ಶಾ ತಮ್ಮ ಭಾಷಣದಲ್ಲಿ ಹೇಳಿದರು. ಸ್ವಾಮಿನಾರಾಯಣರಿಂದ ಪ್ರಾರಂಭವಾದ ಬಿಎಪಿಎಸ್ ಸಂಸ್ಥೆಯು ಕೇವಲ ಭಕ್ತಿಯ ಮೇಲೆ ಮಾತ್ರ ಗಮನ ಹರಿಸದೆ ಸಮಾಜದಲ್ಲಿ  ಸಮಾಜಸೇವೆಯನ್ನು ಸಂಯೋಜಿಸಿದೆ ಎಂದರು.

2 (3).JPG

ಪ್ರಮುಖ್ ಸ್ವಾಮಿ ಮಹಾರಾಜ್ ಅವರು ತಮ್ಮ 18ನೇ ವಯಸ್ಸಿನಲ್ಲಿ ತಮ್ಮ ಗುರುವಿನ ಸೇವೆಗಾಗಿ ಲೌಕಿಕ ಜೀವನವನ್ನು ತ್ಯಜಿಸಿ, ಇಡೀ ದೇಶಕ್ಕೆ ಸ್ಮರಣೀಯ ವ್ಯಕ್ತಿಯಾಗಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಪ್ರಮುಖ್ ಸ್ವಾಮಿ ಮಹಾರಾಜ್ ಅವರು ಸನ್ಯಾಸಿ ಸಂಸ್ಥೆಯಲ್ಲಿ ಶಿಸ್ತು ಮತ್ತು ಸೇವಾ ಮನೋಭಾವವನ್ನು ತುಂಬಿದರು, ಇದರಿಂದ ಸಾವಿರಾರು ಜನರು ಸ್ಫೂರ್ತಿ ಪಡೆದರು ಎಂದು ಅವರು ಹೇಳಿದರು. ಪ್ರಮುಖ್ ಸ್ವಾಮಿ ಮಹಾರಾಜ್ ಅವರು ಲಕ್ಷಾಂತರ ಜನರಿಗೆ ಹೇಗೆ ಸ್ಫೂರ್ತಿ ನೀಡಿದರು, ನಂಬಿಕೆಯ ಮಂತ್ರವನ್ನು ಸ್ಥಾಪಿಸಿದರು, ಸವಾಲುಗಳನ್ನು ಎದುರಿಸಲು ಧೈರ್ಯವನ್ನು ನೀಡಿದರು ಮತ್ತು ಪರಿಣಾಮಕಾರಿ ಕೆಲಸಗಳನ್ನು ಕೈಗೊಳ್ಳಲು ಜನರನ್ನು ಹೇಗೆ ಪ್ರೇರೇಪಿಸಿದರು ಎಂಬುದನ್ನು ಶ್ರೀ ಶಾ ಎತ್ತಿ ತೋರಿಸಿದರು. ಇಂದು ವಿಶ್ವದಾದ್ಯಂತ 1,200 ಕ್ಕೂ ಹೆಚ್ಚು ಸ್ವಾಮಿನಾರಾಯಣ ದೇವಾಲಯಗಳು ಜನರ ಜೀವನದಲ್ಲಿ ಆಧ್ಯಾತ್ಮಿಕತೆಯ ದೀಪವನ್ನು ಬೆಳಗಿಸುತ್ತಿವೆ ಎಂದೂ  ಅವರು ಹೇಳಿದರು.

3 (3).JPG

ಮೌಲ್ಯಗಳು ಮತ್ತು ಚಾರಿತ್ರ್ಯ ನಿರ್ಮಾಣಕ್ಕೆ ಒತ್ತು ನೀಡಿರುವುದು ಸ್ವಾಮಿನಾರಾಯಣ ಸಂಸ್ಥೆಯ ದೊಡ್ಡ ಕೊಡುಗೆಯಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಸಂಸ್ಥೆಯು ಅನೇಕ ವ್ಯಕ್ತಿಗಳನ್ನು ವ್ಯಸನಗಳಿಂದ ಮುಕ್ತಗೊಳಿಸಿದೆ, ಆ ಮೂಲಕ ಅವರನ್ನು ಮತ್ತು ಅವರ ಕುಟುಂಬಗಳನ್ನು ಒತ್ತಡ ಮತ್ತು ಚಿಂತೆಯಿಂದ ಮುಕ್ತಗೊಳಿಸಿದೆ ಎಂದು ಅವರು ಉಲ್ಲೇಖಿಸಿದರು. ಸಮಾಜದ ನೋವಿನೊಂದಿಗೆ ಸಹಾನುಭೂತಿ ಹೊಂದಿರುವ ಮತ್ತು ಸಾಮಾನ್ಯ ಗುರಿಯತ್ತ ಕೆಲಸ ಮಾಡಲು ಅವರನ್ನು ಪ್ರೇರೇಪಿಸುವ ಲಕ್ಷಾಂತರ ಕಾರ್ಯಕರ್ತರನ್ನು ಸೃಷ್ಟಿಸುವುದು ನಂಬಲಾಗದಷ್ಟು ಸವಾಲಿನ ಕೆಲಸವಾಗಿದೆ ಎಂದು ಅವರು ಹೇಳಿದರು. ಪ್ರಮುಖ್ ಸ್ವಾಮಿ ಮಹಾರಾಜ್ ಅವರು ತಮ್ಮ ಜೀವನ ಮತ್ತು ಕ್ರಿಯೆಗಳ ಮೂಲಕ ಇದನ್ನು ಸಾಧಿಸಿದ್ದಾರೆ ಎಂದು ಶ್ರೀ ಶಾ ಗಮನ ಸೆಳೆದರು. ಶಿಕ್ಷಣ ಕ್ಷೇತ್ರದಲ್ಲಿ ಸ್ವಾಮಿನಾರಾಯಣ ಸಂಪ್ರದಾಯದ ಮಹತ್ವದ ಕೊಡುಗೆಗಳನ್ನು ಅವರು ಒತ್ತಿ ಹೇಳಿದರು.

1972ರಲ್ಲಿ ಪ್ರಮುಖ್ ಸ್ವಾಮಿ ಮಹಾರಾಜ್ ಅವರು ಚದುರಿಹೋಗಿದ್ದ ಗುಂಪನ್ನು ಸಂಘಟಿಸುವ, ಅದನ್ನು ಒಂದು ಸಂಸ್ಥೆಯಾಗಿ ಪರಿವರ್ತಿಸುವ ಮತ್ತು ಅದರ ಪ್ರಯತ್ನಗಳನ್ನು ಸಾಂಸ್ಥಿಕಗೊಳಿಸುವ ಕಾರ್ಯವನ್ನು ಕೈಗೊಂಡರು ಎಂದು ಶ್ರೀ ಅಮಿತ್ ಶಾ ಹೇಳಿದರು. ಕೇವಲ ಎಂಟು ಕಾರ್ಯಕರ್ತರೊಂದಿಗೆ ಪ್ರಾರಂಭವಾದ ಸಂಸ್ಥೆ ಈಗ ಲಕ್ಷಾಂತರ ಸ್ವಯಂಸೇವಕರೊಂದಿಗೆ ಕಾರ್ಯನಿರ್ವಹಿಸುತ್ತಿದೆ, ಇದು ಸಂತರು ನಮ್ಮ ಜೀವನದ ಮೇಲೆ ಬೀರಬಹುದಾದ ಆಳವಾದ ಪ್ರಭಾವವನ್ನು ಪ್ರದರ್ಶಿಸುತ್ತದೆ ಎಂಬುದರತ್ತ ಅವರು ಬೆಟ್ಟು ಮಾಡಿದರು. ಬೀಜಗಳು ಬೆಳೆದು ಗಿಡಗಳಾಗಿ ಅವುಗಳು  ಹಣ್ಣುಗಳನ್ನು ನೀಡುವ ಮರಗಳಾಗಿ ಬೆಳೆಯುವಂತೆ, ಈ ಸಂಸ್ಥೆಯು ಒಂದು ಲಕ್ಷಕ್ಕೂ ಹೆಚ್ಚು ಸಮರ್ಪಿತ ಕಾರ್ಯಕರ್ತರ ಮೂಲಕ ಸಮಾಜಕ್ಕೆ ಅದರ ಪ್ರಯೋಜನಗಳನ್ನು ತಲುಪಿಸಿದೆ ಎಂದು ಶ್ರೀ ಶಾ ಹೇಳಿದರು. ಪ್ರಮುಖ್ ಸ್ವಾಮಿ ಮಹಾರಾಜ್ ಅವರ ಸ್ಫೂರ್ತಿಯು ಸಂಸ್ಕೃತಿ, ಧರ್ಮ, ಸಮಾಜ ಮತ್ತು ಸೇವೆಯನ್ನು ಪರಿಣಾಮಕಾರಿಯಾಗಿ ವರ್ಗೀಕರಿಸಿ ಪ್ರವಹಿಸುವಂತೆ ಮಾಡಿದೆ ಎಂದು ಅವರು ಹೇಳಿದರು.

4 (3).jpg

ವಿಶ್ವಾದ್ಯಂತ ಕಾರ್ಯನಿರ್ವಹಿಸುತ್ತಿರುವ ಒಂದು ಲಕ್ಷಕ್ಕೂ ಹೆಚ್ಚು ಬದ್ಧತೆಯುಳ್ಳ  ಸ್ವಯಂಸೇವಕರ ಇಂತಹ ಸಂಘಟನೆಗೆ ಬೇರೆ ಸಾಟಿಯಿಲ್ಲ ಎಂದು ಕೇಂದ್ರ ಗೃಹ ಸಚಿವರು ಒತ್ತಿ ಹೇಳಿದರು. ಇದು ಊಹಿಸಲಾಗದ, ಹೋಲಿಕೆ ಇಲ್ಲದ  ಮತ್ತು ಅಸಾಧಾರಣ ಸಂಗತಿ ಎಂದು ಬಣ್ಣಿಸಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ ಪ್ರೇರಿತರಾಗಿ, 140 ಕೋಟಿ ಭಾರತೀಯರು ಭಾರತದ ಸ್ವಾತಂತ್ರ್ಯದ ಶತಮಾನೋತ್ಸವವನ್ನು ಆಚರಿಸುವ 2047ರ ವೇಳೆಗೆ ಶ್ರೇಷ್ಠ ಭಾರತವನ್ನು ನಿರ್ಮಿಸಲು ಸಂಕಲ್ಪ ಮಾಡಿದ್ದಾರೆ ಎಂದು ಶ್ರೀ ಶಾ ಹೇಳಿದರು. ಪ್ರತಿಯೊಬ್ಬರೂ ಸಂಸ್ಕೃತಿ, ಧರ್ಮ, ಸಮಾಜ, ಸೇವೆ ಮತ್ತು ಶ್ರೇಷ್ಠ ಭಾರತವನ್ನು ನಿರ್ಮಿಸುವ ದೃಷ್ಟಿಕೋನದೊಂದಿಗೆ ತಮ್ಮ ಜೀವನವನ್ನು ನವೀಕರಿಸಿಕೊಳ್ಳಬೇಕೆಂದು ಅವರು ಆಗ್ರಹಿಸಿದರು.

 

*****


(Release ID: 2082193) Visitor Counter : 14


Read this release in: English , Urdu , Hindi , Gujarati