ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
azadi ka amrit mahotsav

ಕ್ಲಿನಿಕಲ್ ಎಲೆಕ್ಟ್ರಿಕಲ್ ಥರ್ಮಾಮೀಟರ್‌ ಬಳಕೆಗಾಗಿ ಪ್ರಸ್ತಾವಿತ ನಿಯಮಗಳ ಕುರಿತು ಕೇಂದ್ರ ಸರ್ಕಾರವು ಡಿಸೆಂಬರ್ 30, 2024 ರವರೆಗೆ ಸಾರ್ವಜನಿಕರಿಂದ ಅಭಿಪ್ರಾಯವನ್ನು ಆಹ್ವಾನಿಸುತ್ತಿದೆ


ಗ್ರಾಹಕ ವ್ಯವಹಾರಗಳ ಇಲಾಖೆ, ಭಾರತ ಸರ್ಕಾರ, ಕಾನೂನು ಮಾಪನಶಾಸ್ತ್ರ (ಸಾಮಾನ್ಯ) ನಿಯಮಗಳು, 2011ರ ಅಡಿಯಲ್ಲಿ ಒಐಎಂಎಲ್ ಶಿಫಾರಸುಗಳ ಪ್ರಕಾರ ಭಾರತ ಸರ್ಕಾರದ  ಗ್ರಾಹಕ ವ್ಯವಹಾರಗಳ ಇಲಾಖೆಯು ತಿದ್ದುಪಡಿಯನ್ನು ಪ್ರಸ್ತಾಪಿಸಿದೆ

Posted On: 08 DEC 2024 11:26AM by PIB Bengaluru

ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳ ಇಲಾಖೆಯ ಅಡಿಯಲ್ಲಿ ಕಾನೂನು ಮಾಪನಶಾಸ್ತ್ರ ವಿಭಾಗವು ಸಾಧನಗಳ ತೂಕ ಮತ್ತು ಅಳತೆಯಲ್ಲಿ ನಿಖರತೆ ಮತ್ತು ವಿಶ್ವಾಸಾರ್ಹತೆಯನ್ನು ಖಾತ್ರಿಗೊಳಿಸುತ್ತದೆ, ಆ ಮೂಲಕ ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡುತ್ತದೆ. ಮಾನವ ಮತ್ತು ಪ್ರಾಣಿಗಳ ದೇಹದ ಉಷ್ಣತೆಯನ್ನು ಅಳೆಯಲು ವಿನ್ಯಾಸಗೊಳಿಸಲಾದ ಕ್ಲಿನಿಕಲ್ ಎಲೆಕ್ಟ್ರಿಕಲ್ ಥರ್ಮಾಮೀಟರ್‌ಗಳ ಪ್ರಮಾಣೀಕರಣ ಮತ್ತು ನಿಖರತೆಯನ್ನು ಹೆಚ್ಚಿಸಲು, ಕರಡು ನಿಯಮಗಳನ್ನು ಪ್ರಸ್ತಾಪಿಸಲಾಗಿದೆ. ಈ ನಿಯಮಗಳು ಅಂತಹ ಅಧುನಿಕ ಸಾಧನಗಳಿಗೆ ಅಸ್ತಿತ್ವದಲ್ಲಿರುವ ನಿಯಮಗಳನ್ನು ಸೂಕ್ತ ರೀತಿಯಲ್ಲಿ ಪರಿಷ್ಕರಿಸುವ ಗುರಿಯನ್ನು ಹೊಂದಿವೆ. ಇದು ಜ್ವರ ಮತ್ತು ದೇಹದ ಲಘೂಷ್ಣತೆಯಂತಹ ಪರಿಸ್ಥಿತಿಗಳನ್ನು ನಿರ್ಣಯಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.

ಇಲಾಖೆಯು ರಚಿಸಿದ ಸಮಿತಿಯು ರಚಿಸಿದ ಕರಡು ನಿಯಮಗಳನ್ನು ಸಾರ್ವಜನಿಕ ಸಮಾಲೋಚನೆಗಾಗಿ 29 ನವೆಂಬರ್ 2024 ರಂದು ಇಲಾಖೆಯ ತನ್ನ ಜಾಲತಾಣದಲ್ಲಿ  ಪ್ರಕಟಿಸಲಾಗಿದೆ.  30ನೇ ಡಿಸೆಂಬರ್ 2024 ರೊಳಗೆ ತಮ್ಮ ಅಭಿಪ್ರಾಯಗಳು ಮತ್ತು ಸಲಹೆಗಳನ್ನು ಸಲ್ಲಿಸಲು ಮಧ್ಯಸ್ಥಗಾರರು ಮತ್ತು ಸಾರ್ವಜನಿಕರನ್ನು ಈ ಮೂಲಕ ಆಹ್ವಾನಿಸಲಾಗಿದೆ. ಈ ಕೆಳಗಿನ ಕೊಂಡಿಯಲ್ಲಿ ಕರಡು ನಿಯಮಗಳನ್ನು ಜಾಲತಾಣದಲ್ಲಿ ಪಡೆಯಬಹುದು (ಗರಿಷ್ಠ ಸಾಧನದೊಂದಿಗೆ ಕ್ಲಿನಿಕಲ್ ಎಲೆಕ್ಟ್ರಿಕಲ್ ಥರ್ಮಾಮೀಟರ್‌ ಬಳಕೆಗಾಗಿ ಕರಡು ನಿಯಮಗಳು):ಕೆಳಗಿನ

ಲಿಂಕ್:https://consumeraffairs.nic.in/sites/default/files/fileuploads/latestnews/Draft%20Rules%20for%20Clinical%20Electrical%20Thermometer%20with%20Maximum%20Device.pdf

ಸಾರ್ವಜನಿಕ ಮತ್ತು ಮಧ್ಯಸ್ಥಗಾರರ ಪ್ರತಿಕ್ರಿಯೆಯನ್ನು ಪರಿಶೀಲಿಸಿದ ನಂತರ ನಿಯಮ ಅಂತಿಮಗೊಳಿಸಿದರೆ, ಈ ನಿಯಮಗಳು ಕ್ಲಿನಿಕಲ್ ಎಲೆಕ್ಟ್ರಿಕಲ್ ಥರ್ಮಾಮೀಟರ್‌ ಗಳ ನಿಖರತೆ ಮತ್ತು ವಿಶ್ವಾಸಾರ್ಹತೆಯನ್ನು ಇನ್ನೂ ಹೆಚ್ಚು ಪ್ರಮಾಣೀಕರಿಸುತ್ತವೆ.  ನಿಗದಿತ ಮಾನದಂಡಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಈ ಸಾಧನಗಳ ಪರಿಶೀಲನೆ ಮತ್ತು ಮೊಹರು (ಸ್ಟಾಂಪಿಂಗ್) ಅನ್ನು ನಿಬಂಧನೆಗಳು ಕಡ್ಡಾಯಗೊಳಿಸುತ್ತವೆ, ಇದರಿಂದಾಗಿ ಮಾನವರು ಮತ್ತು ಪ್ರಾಣಿಗಳ ಆರೋಗ್ಯ ಮತ್ತು ಯೋಗಕ್ಷೇಮವನ್ನು ರಕ್ಷಿಸಲಾಗುತ್ತದೆ.

ಈ ಥರ್ಮಾಮೀಟರ್‌ಗಳನ್ನು ಮನೆಗಳು, ಆರೋಗ್ಯ ಸೌಲಭ್ಯಗಳು ಮತ್ತು ವಿವಿಧ ಕೈಗಾರಿಕೆಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.  ಪ್ರಸ್ತಾವಿತ ನಿಯಮಗಳು ಅವರ ಮಾಪನಗಳಲ್ಲಿ ನಂಬಿಕೆಯನ್ನು ಬೆಳೆಸುವ ಗುರಿಯನ್ನು ಹೊಂದಿವೆ, ರೋಗನಿರ್ಣಯ ಮತ್ತು ಚಿಕಿತ್ಸೆಯ ನಿರ್ಧಾರಗಳು ವಿಶ್ವಾಸಾರ್ಹ ಡೇಟಾವನ್ನು ಆಧರಿಸಿವೆ ಎಂದು ಈ ಮೂಲಕ ಖಚಿತಪಡಿಸುತ್ತದೆ.  ಈ ಉಪಕ್ರಮವು ಗ್ರಾಹಕರ ಸುರಕ್ಷತೆಯನ್ನು ಬಲಪಡಿಸುವ ಮತ್ತು ದೇಹದ ಉಷ್ಣತೆ ಅಳೆಯುವ ಮಾಪನದ ಮಾಪಕಗಳಲ್ಲಿ ಏಕರೂಪತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.

 

 *****


(Release ID: 2082186) Visitor Counter : 23