ವಾರ್ತಾ ಮತ್ತು ಪ್ರಸಾರ ಸಚಿವಾಲಯ
iffi banner

55ನೇ ಐಎಫ್ಎಫ್ಐನಲ್ಲಿ ದಂತಕಥೆಯ ಜೀವನ ಮತ್ತು ಕೊಡುಗೆಗಳ ಬಗ್ಗೆ ಬೆಳಕು ಚೆಲ್ಲಿದ  'ತಪನ್ ಸಿನ್ಹಾ - ಶತಮಾನೋತ್ಸವ ಅಧಿವೇಶನ - ಸ್ಪೆಕ್ಟ್ರಮ್ ಮತ್ತು ಆತ್ಮ' ಕುರಿತ ಪ್ಯಾನಲ್ ಚರ್ಚೆ


"ಅವರು ಕೆಲವೇ ಮಾತುಗಳನ್ನಾಡುತ್ತಿದ್ದ ವ್ಯಕ್ತಿ ಮತ್ತು ಉತ್ತಮ ಕೇಳುಗರಾಗಿದ್ದರು:" ಶರ್ಮಿಳಾ ಟ್ಯಾಗೋರ್

"ತಪನ್ ಸಿನ್ಹಾ ಅವರ ಕೃತಿಗಳ ಬಗ್ಗೆ  ಸರಿಯಾಗಿ ಮೌಲ್ಯಮಾಪನ ಮಾಡದಿರುವುದು ವಿಮರ್ಶಕರ ಸಂಪೂರ್ಣ ವೈಫಲ್ಯ" ಎಂದು ಪ್ರೊ. ಎನ್. ಮನು ಚಕ್ರವರ್ತಿ

"ತಪನ್ ಸಿನ್ಹಾ ನನಗೆ ಹೇಳಿದ್ದರು -ನಾನು ನಿರ್ಮಾಪಕರ ಬಳಿಗೆ ಹೋಗುವ ಅಗತ್ಯವಿಲ್ಲ, ಅವರು ನನ್ನ ಬಳಿಗೆ ಬರುತ್ತಾರೆ :" ಅರ್ಜುನ್ ಚಕ್ರವರ್ತಿ

55ನೇ ಐಎಫ್ಎಫ್ಐನಲ್ಲಿ ಇಂದು ಬೆಳಿಗ್ಗೆ ಖ್ಯಾತ ಚಲನಚಿತ್ರ ನಿರ್ಮಾಪಕ ತಪನ್ ಸಿನ್ಹಾ ಅವರ ಜೀವನ ಮತ್ತು ಕಾರ್ಯಗಳನ್ನು ಅವರ ಶತಮಾನೋತ್ಸವ ಆಚರಣೆಯ ಅಂಗವಾಗಿ ಗೋವಾದ ಪಣಜಿಯಲ್ಲಿರುವ  ಕಲಾ ಅಕಾಡೆಮಿಯಲ್ಲಿ "ತಪನ್ ಸಿನ್ಹಾ-ಶತಮಾನೋತ್ಸವ ಅಧಿವೇಶನ-ಸ್ಪೆಕ್ಟ್ರಮ್ ಮತ್ತು ಆತ್ಮ" ಕುರಿತ ಶೀರ್ಷಿಕೆಯಲ್ಲಿ ನಡೆದ ಪ್ಯಾನಲ್ ಚರ್ಚೆಯಲ್ಲಿ  ವಿವೇಚಿಸಲಾಯಿತು.

ಹಿರಿಯ ನಟಿ ಶ್ರೀಮತಿ ಶರ್ಮಿಳಾ ಟ್ಯಾಗೋರ್ ಅವರು ಶ್ರೀ ಸಿನ್ಹಾ ಅವರಲ್ಲಿದ್ದ ಮಾನವೀಯ ಗುಣಲಕ್ಷಣಗಳನ್ನು ಒತ್ತಿಹೇಳಿದರು. "ಅವರು ಕೆಲವೇ ಪದಗಳನ್ನು ಮಾತನಾಡುವ  ವ್ಯಕ್ತಿಯಾಗಿದ್ದರು  ಮತ್ತು ಉತ್ತಮ ಕೇಳುಗರಾಗಿದ್ದರು" ಎಂದು ಅವರು ಹೇಳಿದರು. "ನಮ್ಮಲ್ಲಿ ಹೇಳಲು ಏನೂ ಇಲ್ಲದ ಜನರಿದ್ದಾರೆ ಮತ್ತು ಅದರಿಂದಾಗಿಯೇ ಅವರು ಮೌನವಾಗಿರುತ್ತಾರೆ. ಆದರೆ ತಪನ್ ಬಾಬು ಅವರಿಗೆ ಹೇಳಲು ಅನೇಕ ವಿಷಯಗಳಿದ್ದವು, ಆದಾಗ್ಯೂ ಅವರಿಗೆ ಹೆಚ್ಚು ಮಾತನಾಡುವ ಅಗತ್ಯವಿಲ್ಲದಂತಾಗಿತ್ತು. ತಪನ್ ಸಿನ್ಹಾ ಅವರ ಬರಹಗಳ ಮೇಲೆ ರವೀಂದ್ರನಾಥ ಟ್ಯಾಗೋರ್ ಅವರ ಆಳವಾದ ಪ್ರಭಾವವನ್ನು ಕಾಣಬಹುದು “ ಎಂದು ಶ್ರೀಮತಿ ಟ್ಯಾಗೋರ್ ಅವರು ವಿವರವಾಗಿ ತಪನ್ ಸಿನ್ಹಾ ಕುರಿತು ಚರ್ಚಿಸಿದರು.

'ಜತುಗೃಹ', 'ಕ್ಷುಧಿತಾ ಪಾಶಾನ್', 'ಅಟಾಂಕಾ' ಮತ್ತು 'ಏಕ್ ಡಾಕ್ಟರ್ ಕಿ ಮೌತ್' ಮುಂತಾದ ಶೀರ್ಷಿಕೆಗಳನ್ನು  ಉಲ್ಲೇಖಿಸಿದ ಪ್ರೊ.ಎನ್.ಮನು ಚಕ್ರವರ್ತಿ, ಸಾಮಾಜಿಕ ವಾಸ್ತವತೆಯನ್ನು ಸಂಯೋಜಿಸಲು ಮತ್ತು ತಿಳಿಸಲು ತಪನ್ ಸಿನ್ಹಾ ತೋರಿಸಿದ ಸಾಟಿಯಿಲ್ಲದ ಸಮರ್ಪಣೆಯನ್ನು ವಿವರಿಸಿದರು. ಶ್ರೀ ಸಿನ್ಹಾ ಅವರು ತಮ್ಮನ್ನು ತಾವು ಬದ್ಧ ಮಾನವತಾವಾದಿ ಎಂದು ಬಣ್ಣಿಸುತ್ತಿದ್ದರು ಮತ್ತು ಅವರ ಎಲ್ಲಾ ಚಲನಚಿತ್ರಗಳು ಅದೇ ಸಿದ್ಧಾಂತದ ಸುತ್ತ ಸುತ್ತುತ್ತಿದ್ದವು ಎಂದು ಪ್ರೊ. ಚಕ್ರವರ್ತಿ ಹೇಳಿದರು.

ಸತ್ಯಜಿತ್ ರೇ, ಋತ್ವಿಕ್ ಘಾಟಕ್ ಅಥವಾ ಮೃಣಾಲ್ ಸೇನ್ ಅವರಂತಹ ಸಮಕಾಲೀನರ ಮಟ್ಟಕ್ಕೆ ಸಿನ್ಹಾ ಅವರ ಕೆಲಸವನ್ನು, ಕೃತಿಗಳನ್ನು  ಏಕೆ ಮೌಲ್ಯಮಾಪನ ಮಾಡಲು ಸಾಧ್ಯವಾಗಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರೊ.ಚಕ್ರವರ್ತಿ, "ತಪನ್ ಸಿನ್ಹಾ ಅವರ ಜೀವಿತಾವಧಿಯಲ್ಲಿ ಅವರ ಕೆಲಸವನ್ನು ಸರಿಯಾಗಿ ಮೌಲ್ಯಮಾಪನ ಮಾಡದಿರುವುದು ವಿಮರ್ಶಕರ ಸಂಪೂರ್ಣ ವೈಫಲ್ಯವಾಗಿದೆ" ಎಂದು ಹೇಳಿದರು. "'ಸಗಿನಾ ಮಹತೋ' ಮತ್ತು 'ಅಟಂಕಾ' ನಂತಹ ಚಲನಚಿತ್ರಗಳು ಸೆರೆಹಿಡಿದ ಆಳವಾದ ಬೌದ್ಧಿಕ ಆಯಾಮಗಳು ಕಾಲಾತೀತವಾಗಿವೆ" ಎಂದು ಅವರು ತಮ್ಮ ಮಾತುಗಳನ್ನು ಮುಕ್ತಾಯಗೊಳಿಸಿದರು.

ಇನ್ನೊಬ್ಬ ಪ್ಯಾನೆಲಿಸ್ಟ್ ಮತ್ತು ಶ್ರೀ ಸಿನ್ಹಾ ಅವರ ಐದು ಶೀರ್ಷಿಕೆಗಳಲ್ಲಿ ನಟಿಸಿದ್ದ,  ಶ್ರೀ ಅರ್ಜುನ್ ಚಕ್ರವರ್ತಿ ಅವರು, "ನಿರ್ಜನ್ ಸೈಕಟೆ" ಕಥೆಯನ್ನು ಪ್ರೀತಿಯಿಂದ ನೆನಪಿಸಿಕೊಂಡರು. ಸ್ಕ್ರಿಪ್ಟ್ ಅನ್ನು ಓದಿದ ನಂತರ, ಶ್ರೀ ಚಕ್ರವರ್ತಿ ಸಂಪೂರ್ಣ ಅಪನಂಬಿಕೆಯಿಂದ ಶ್ರೀ ಸಿನ್ಹಾ ಅವರನ್ನು ಕೇಳಿದ್ದರು- ಇಂತಹ ಕಥೆಯನ್ನು ನಿರ್ಮಾಪಕರಿಗೆ ಹೇಗೆ ಹೇಳುತ್ತೀರಿ?. ಶ್ರೀ ಸಿನ್ಹಾ ಅವರ ಸರಳ ಆದರೆ ಗಮನಾರ್ಹ ಉತ್ತರವೆಂದರೆ, "ನಾನು ನಿರ್ಮಾಪಕರ ಬಳಿಗೆ ಹೋಗುವ ಅಗತ್ಯವಿಲ್ಲ, ಅವರು ನನ್ನ ಬಳಿಗೆ ಬರುತ್ತಾರೆ."

ಶ್ರೀಮತಿ ಶರ್ಮಿಳಾ ಠಾಗೋರ್ ಅವರ ಎಲ್ಲಾ ಪ್ರತಿಬಿಂಬಗಳು, ಶ್ರೀ ಅರ್ಜುನ್ ಚಕ್ರವರ್ತಿ ಅವರ ಸಂಗೀತ ಮತ್ತು ಪ್ರೊ. ಮನು ಚಕ್ರವರ್ತಿ ಅವರ ವಿಮರ್ಶಾತ್ಮಕ ಛೇದನಗಳು ಮತ್ತು ಮೌಲ್ಯಮಾಪನಗಳಿಗೆ ಅವಕಾಶ ಕಲ್ಪಿಸಲು ಸುಮಾರು ಅರ್ಧ ಗಂಟೆ ಕಾಲ ವಿಸ್ತರಿಸಿದ ಅಧಿವೇಶನವನ್ನು ಶ್ರೀಮತಿ ರತ್ನೋಟೋಮಾ ಸೇನ್ ಗುಪ್ತಾ ನಿರ್ವಹಿಸಿದರು.

55ನೇ ಐಎಫ್ಎಫ್ಐನ ಉತ್ಸವ ನಿರ್ದೇಶಕರಾದ ಶ್ರೀ ಶೇಖರ್ ಕಪೂರ್ ಅವರು ನಾಲ್ವರು ದಂತಕಥೆಗಳ ಶತಮಾನೋತ್ಸವದ ಅಂಗವಾಗಿ ಬಿಡುಗಡೆ ಮಾಡಿದ ವಿಶೇಷ ಅಂಚೆ ಚೀಟಿ ಮತ್ತು ಸ್ಮರಣಿಕೆಯನ್ನು ಗಣ್ಯರಿಗೆ ಪ್ರದಾನ ಮಾಡಿದರು.

ಶತಮಾನೋತ್ಸವ ಆಚರಣೆಯ ಬಗ್ಗೆ ಹೆಚ್ಚಿನ ಉಪಕ್ರಮಗಳನ್ನು ಓದಲು:

https://pib.gov.in/PressReleasePage.aspx?PRID=2070826

 

*****

iffi reel

(Release ID: 2078395) Visitor Counter : 21