ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav
iffi banner

55ನೇ ಐಎಫ್ಎಫ್ಐನಲ್ಲಿ 'ಗಡಿಗಳನ್ನು ಮಸುಕಾಗಿಸುವಿಕೆ: ಆಧುನಿಕ ಚಲನಚಿತ್ರಕ್ಕೆ ಪ್ರೇಕ್ಷಕರ ಸ್ವಾಗತವನ್ನು ಸಾರ್ವಜನಿಕ ಸಂಪರ್ಕ (ಪಿಆರ್)ಹೇಗೆ ರೂಪಿಸುತ್ತದೆ' ಕುರಿತು ಪ್ಯಾನಲ್ ಚರ್ಚೆ


"ಸಿನೆಮಾ, ಜೀವನದಂತೆ, ಸತ್ಯಾಸತ್ಯತೆಯ/ಅಧಿಕೃತತೆಯ ಮೇಲೆ ಬೆಳೆಯುತ್ತದೆ; ಪಿಆರ್ ಸತ್ಯವನ್ನು ವೈಭವೀಕರಿಸುವ ಸಾಧನವಾಗಬೇಕು, ಹೊರತು ಅದನ್ನು ತಿರುಚಬಾರದು": ರವಿ ಕೊಟ್ಟಾರಕ್ಕರ

"ಪಿಆರ್ ನ ಶಸ್ತ್ರೀಕರಣವು ಆಳವಾದ ಸಾಮಾಜಿಕ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ, ಅಲ್ಲಿ ಗ್ರಹಿಕೆಯು ಮೌಲ್ಯವನ್ನು ನಿರ್ಧರಿಸುವಲ್ಲಿ ವಾಸ್ತವವನ್ನು ಮೀರುತ್ತದೆ": ಶಂಕರ್ ರಾಮಕೃಷ್ಣನ್

"ಪಿಆರ್ ನ ಸಾರವು ಸುಳ್ಳು ನಿರೂಪಣೆಗಳನ್ನು ರಚಿಸುವುದರಲ್ಲಿಲ್ಲ, ಆದರೆ ಸಿನೆಮಾದ ಸತ್ಯವನ್ನು ಪ್ರಕಾಶಿಸಲು ಅನುವು ಮಾಡಿಕೊಡುವ ಅರ್ಥಪೂರ್ಣ ಸಂಪರ್ಕಗಳನ್ನು ಬೆಳೆಸುವುದರಲ್ಲಿದೆ": ಹಿಮೇಶ್ ಮಂಕಡ್

"ಪ್ರೇಕ್ಷಕರು ನಿರ್ಧರಿಸುತ್ತಾರೆಯೇ ಹೊರತು ಪಿ.ಆರ್-ಚಾಲಿತ ನಿರೂಪಣೆಗಳಲ್ಲ:" ಹಿಮೇಶ್ ಮಂಕಡ್

ಭಾರತದ 55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು "ಸಿನೆಮಾದಲ್ಲಿ ಸತ್ಯ ಮತ್ತು ಗ್ರಹಿಕೆಯ ನಡುವಿನ ರೇಖೆಗಳನ್ನು ಮಸುಕಾಗಿಸುವುದು" ಎಂಬ ಶೀರ್ಷಿಕೆಯ ಒಳನೋಟದ ಅಧಿವೇಶನದಲ್ಲಿ, ಸಾರ್ವಜನಿಕ ಸಂಪರ್ಕಗಳು (ಪಿಆರ್), ಪ್ರೇಕ್ಷಕರ ಗ್ರಹಿಕೆ ಮತ್ತು ಸಿನಿಮೀಯ ಸತ್ಯಾಸತ್ಯತೆಯ ವಿಕಸನದ ಪಾತ್ರವನ್ನು ಚರ್ಚಿಸಲು ಉದ್ಯಮ ತಜ್ಞರನ್ನು ಒಟ್ಟುಗೂಡಿಸಿತು. ಖ್ಯಾತ ಚಲನಚಿತ್ರ ತಯಾರಕ ಮತ್ತು ನಿರ್ಮಾಪಕ ಜಯಪ್ರದ್ ದೇಸಾಯಿ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಖ್ಯಾತ ಚಲನಚಿತ್ರ ನಿರ್ಮಾಪಕ ಮತ್ತು ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷ ರವಿ ಕೊಟ್ಟಾರಕ್ಕರ, ಖ್ಯಾತ ಚಲನಚಿತ್ರ ನಿರ್ಮಾಪಕ ಶಂಕರ್ ರಾಮಕೃಷ್ಣನ್; ಮತ್ತು ಹಿರಿಯ ಚಲನಚಿತ್ರ ಪತ್ರಕರ್ತ ಹಿಮೇಶ್ ಮಂಕಡ್ ಇದ್ದರು.

ಚಲನಚಿತ್ರೋದ್ಯಮದ ಭೂದೃಶ್ಯವನ್ನು ರೂಪಿಸುವಲ್ಲಿ ಪಿಆರ್ ಪರಿವರ್ತಕ ಪಾತ್ರದ ಬಗ್ಗೆ ಸಂವಾದವು ಕೇಂದ್ರೀಕೃತವಾಗಿತ್ತು, ವಿಶೇಷವಾಗಿ ಸಾಮಾಜಿಕ ಮಾಧ್ಯಮ ಮತ್ತು ಪ್ರೇಕ್ಷಕರ ತಕ್ಷಣದ ಪ್ರತಿಕ್ರಿಯೆ/ಹಿಮ್ಮಾಹಿತಿಗಳು  ಪ್ರಾಬಲ್ಯ ಹೊಂದಿರುವ ಈ ಯುಗದಲ್ಲಿ. ಪ್ರಚಾರ ತಂತ್ರಗಳು ಹೆಚ್ಚಾಗಿ ಸಿನೆಮಾದ ಸಾರವನ್ನು ಮರೆಮಾಡುವುದರಿಂದ, ವಿಷಯಕ್ಕಿಂತ ಹೆಚ್ಚಾಗಿ ಚಿತ್ರದ ಬಗ್ಗೆ ನಿರ್ಮಿಸಲಾದ ಇಮೇಜಿನ ಬಗ್ಗೆ  ಹೆಚ್ಚು ಗಮನ ಕೇಂದ್ರೀಕರಿಸುವುದರಿಂದ ಸತ್ಯ ಮತ್ತು ಗ್ರಹಿಕೆಯ ನಡುವಿನ ರೇಖೆಗಳು ಹೆಚ್ಚು ಮಸುಕಾಗುತ್ತಿವೆ ಎಂದು ಅಭಿಪ್ರಾಯಪಟ್ಟಿತು.

ಒಂದು ಕಾಲದಲ್ಲಿ ಸಂಬಂಧಗಳನ್ನು ಬೆಳೆಸುವತ್ತ ಗಮನ ಹರಿಸಿದ್ದ ಪಿಆರ್ ಈಗ ಹೇಗೆ ಕೆರಳಿಸುವ ಕುಶಲತೆಯತ್ತ ಸಾಗಿದೆ ಎಂಬುದನ್ನು ಹಿಮೇಶ್ ಮಂಕಡ್ ಎತ್ತಿ ತೋರಿಸಿದರು. "ಚಲನಚಿತ್ರಗಳನ್ನು ಹೆಚ್ಚಾಗಿ ವ್ಯೂಹಾತ್ಮಕ ಕಾರ್ಯತಂತ್ರದ ಅಭಿಯಾನಗಳ ಮೂಲಕ ಅವುಗಳಿಗೆ ಪೂರಕ ಪಕ್ಷಪಾತ ಧೋರಣೆಯನ್ನು ಬಿಂಬಿಸಿ  ಮಂಡಿಲಾಗುತ್ತದೆ, ಅದು ಪ್ರೇಕ್ಷಕರನ್ನು ದಾರಿತಪ್ಪಿಸುತ್ತದೆ ಮತ್ತು ವಿಶ್ವಾಸಾರ್ಹತೆಯನ್ನು ನಾಶಪಡಿಸುತ್ತದೆ" ಎಂದು ಅವರು ಉಲ್ಲೇಖಿಸಿದರು. ಅವರು ಸತ್ಯಾಸತ್ಯತೆಯ ಮಹತ್ವವನ್ನು ಒತ್ತಿಹೇಳಿದರು, "ಪಿಆರ್-ಚಾಲಿತ ನಿರೂಪಣೆಗಳನ್ನು ಲೆಕ್ಕಿಸದೆ ಪ್ರೇಕ್ಷಕರು ಚಿತ್ರದ ಯಶಸ್ಸಿನ ಅಂತಿಮ ತೀರ್ಪುಗಾರರಾಗಿ ಉಳಿಯುತ್ತಾರೆ" ಎಂದು ಅವರು ನುಡಿದರು.

ರವಿ ಕೊಟ್ಟಾರಕ್ಕರ ಅವರು ಡಿಜಿಟಲ್ ಪ್ಲಾಟ್ಫಾರ್ಮ್ಗಳ ಹೆಚ್ಚುತ್ತಿರುವ ಪ್ರಭಾವವನ್ನು ಎತ್ತಿ ತೋರಿಸಿದರು, ಅಲ್ಲಿ ವಿಮರ್ಶೆಗಳು ಮತ್ತು ಪ್ರಭಾವ ಬೀರುವವರ  ಅಭಿಪ್ರಾಯಗಳು ಚಲನಚಿತ್ರವನ್ನು ಗೆಲ್ಲಿಸಬಹುದು ಅಥವಾ ಸೋಲಿಸಬಹುದು.   "ಅಕಾಲಿಕ, ಅಪಕ್ವ, ದಾರಿತಪ್ಪಿದ ವಿಮರ್ಶೆಗಳಿಂದಾಗಿ ಸತ್ವಯುತವಾದ ಚಿತ್ರವೂ ಸಹ ಎಡವಬಹುದು" ಎಂದು ಅವರು ಹೇಳಿದರು. ಒಟಿಟಿ ಪ್ಲಾಟ್ಫಾರ್ಮ್ಗಳು ಆದ್ಯತೆಗಳನ್ನು ಹೇಗೆ ಕುಶಲತೆಯಿಂದ ದುರುಪಯೋಗ ಮಾಡಿಕೊಂಡು ನಿರ್ವಹಿಸುತ್ತವೆ ಎಂಬುದರ ಬಗ್ಗೆಯೂ ಅವರು ಗಮನಸೆಳೆದರು, "ಕ್ಯುರೇಟೆಡ್ 'ಟಾಪ್ 10' ಪಟ್ಟಿಗಳು ಹೆಚ್ಚಾಗಿ ಆಂತರಿಕ ಆದ್ಯತೆಗಳಿಂದ ಕೂಡಿರುತ್ತವೆಯೇ ಹೊರತು, ನಿಜವಾದ ವೀಕ್ಷಕರ ಪ್ರವೃತ್ತಿಗಳಿಂದಲ್ಲ." ಎಂದವರು ಅಭಿಪ್ರಾಯಪಟ್ಟರು.

ಶಂಕರ್ ರಾಮಕೃಷ್ಣನ್ ಅವರು ಕೇರಳ ಚಲನಚಿತ್ರೋದ್ಯಮದ ಒಳನೋಟಗಳನ್ನು ಹಂಚಿಕೊಂಡರು, ಚಲನಚಿತ್ರಕ್ಕೆ ಲಭಿಸುವ  ಸ್ವಾಗತವನ್ನು ರೂಪಿಸುವಲ್ಲಿ ಸಾಂಸ್ಕೃತಿಕ ಸೂಕ್ಷ್ಮತೆ ಮತ್ತು ಸಾಮಾಜಿಕ ಮಾಧ್ಯಮಗಳ ಪಾತ್ರವನ್ನು ಒತ್ತಿ ಹೇಳಿದರು. ಪಿಆರ್ ಕಡಿಮೆ-ಪ್ರಸಿದ್ಧ ಚಲನಚಿತ್ರಗಳನ್ನು ಉನ್ನತೀಕರಿಸಬಹುದು ಆದರೆ ಪ್ರತಿಸ್ಪರ್ಧಿಗಳ ವಿರುದ್ಧವೂ ಅದು ಶಸ್ತ್ರ ಝಳಪಿಸಬಹುದು  ಎಂಬುದರತ್ತ ಅವರು ಬೆಟ್ಟು ಮಾಡಿದರು, "ಕೆಲವು ಸಂದರ್ಭಗಳಲ್ಲಿ, ಪಿಆರ್ ಪ್ರಚಾರದ ಬಗ್ಗೆ ಕಡಿಮೆ ಗಮನ ಕೊಡುತ್ತದೆ ಮತ್ತು ತೀವ್ರ ಸ್ಪರ್ಧಾತ್ಮಕ ಭೂದೃಶ್ಯದಲ್ಲಿ ಬದುಕುಳಿಯುವ ಬಗ್ಗೆ ಹೆಚ್ಚು ಗಮನ ಕೊಡುತ್ತದೆ." ಎಂದವರು ಹೇಳಿದರು.

ಪಿಆರ್ ಅತ್ಯಗತ್ಯ ಸಾಧನ-ಸಲಕರಣೆಯಾಗಿದ್ದರೂ ಅದರ ದುರುಪಯೋಗವು ಚಲನಚಿತ್ರೋದ್ಯಮದ ವಿಶ್ವಾಸಾರ್ಹತೆಯನ್ನು ನಾಶಪಡಿಸುತ್ತದೆ ಎಂದು ಪ್ಯಾನೆಲಿಸ್ಟ್ ಗಳು ಒಟ್ಟಾಗಿ ಒಪ್ಪಿಕೊಂಡರು. ಸಿನೆಮಾದ ಕಲಾತ್ಮಕತೆಯನ್ನು ದುರ್ಬಲಗೊಳಿಸುವ ಬದಲು ಪಿಆರ್ ಬೆಂಬಲಿಸುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಅಧಿವೇಶನದಲ್ಲಿ ನೈತಿಕ ಅಭ್ಯಾಸಗಳನ್ನು/ಅನುಸರಣೆಗಳನ್ನು ಪ್ರತಿಪಾದಿಸಲಾಯಿತು. ಜಯಪ್ರದ್ ದೇಸಾಯಿ ಅವರು, "ಪಿಆರ್  ಎಂಬುದು ಎರಡು ಅಂಚಿನ ಖಡ್ಗ. ಇದು ಚಲನಚಿತ್ರದ ವ್ಯಾಪ್ತಿಯನ್ನು/ತಲುಪುವಿಕೆಯನ್ನು ಹೆಚ್ಚಿಸಬಹುದಾದರೂ, ಅತಿಯಾದ ಪ್ರಚಾರವು ವಿಶ್ವಾಸಾರ್ಹತೆಯ ಬಗ್ಗೆ ಬಿಕ್ಕಟ್ಟನ್ನು ಉಂಟುಮಾಡುತ್ತದೆ, ಚಲನಚಿತ್ರ ನಿರ್ಮಾಪಕರು ಮತ್ತು ಪ್ರೇಕ್ಷಕರ ನಡುವಿನ ನಂಬಿಕೆಯನ್ನು ದುರ್ಬಲಗೊಳಿಸುತ್ತದೆ” ಎಂದರು.

ಪರಿಣಾಮಕಾರಿ ಪಿಆರ್ ಮತ್ತು ಅಧಿಕೃತ ಕಥೆ ಹೇಳುವಿಕೆಯ ನಡುವೆ ಸಮತೋಲನದ ಅಗತ್ಯದ ಬಗ್ಗೆ ಅಧಿವೇಶನವು ವೈವಿಧ್ಯಮಯ ದೃಷ್ಟಿಕೋನಗಳನ್ನು ಒದಗಿಸಿತು. ಗ್ರಹಿಕೆಯನ್ನು ವಾಸ್ತವದೊಂದಿಗೆ ಹೊಂದಿಸಲು ನೈತಿಕ ಪಿ.ಆರ್. ಸಹಾಯ ಮಾಡುತ್ತದೆ, ಪ್ರೇಕ್ಷಕರೊಂದಿಗೆ ಪಾರದರ್ಶಕ ಮತ್ತು ವಿಶ್ವಾಸಾರ್ಹ ಸಂಬಂಧವನ್ನು ಬೆಳೆಸುತ್ತದೆ ಎಂಬ ಭವಿಷ್ಯದ ಆಶಾವಾದವನ್ನು  ಪ್ಯಾನೆಲಿಸ್ಟ್ ಗಳು ವ್ಯಕ್ತಪಡಿಸಿದರು.

 

*****

iffi reel

(Release ID: 2078390)