ವಾರ್ತಾ ಮತ್ತು ಪ್ರಸಾರ ಸಚಿವಾಲಯ
iffi banner
1 0

ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಐ.ಸಿ.ಎಫ್‌.ಟಿ-ಯುನೆಸ್ಕೋ ಗಾಂಧಿ ಪದಕದ ಪುರಸ್ಕೃತರಾದ ನಾವು ಶಾಂತಿ ದೂತರು : 2017 ರ ಗಾಂಧಿ ಪದಕ ಪುರಸ್ಕೃತ ಮನೋಜ್ ಮೋಹನ್ ಕದಮ್


"ಯುವ ಚಲನಚಿತ್ರ ನಿರ್ಮಾತೃಗಳನ್ನು ಪೋಷಿಸಲು ಐಎಫ್‌ಎಫ್‌ಐನಿಂದ ಶ್ಲಾಘನೀಯ ಉಪಕ್ರಮಗಳು ": ಮನೋಜ್ ಮೋಹನ್ ಕದಮ್

ಗಾಂಧಿ ತತ್ವಗಳಿಗೆ ಸಿನಿ ಗೌರವ, ಐಎಫ್‌ಎಫ್‌ಐನಲ್ಲಿ ಪ್ರತಿಷ್ಠಿತ ಐಸಿಎಫ್‌ಟಿ –ಯುನೆಸ್ಕೋ ಗಾಂಧಿ ಪುರಸ್ಕಾರಕ್ಕೆ 10 ಚಲನಚಿತ್ರಗಳ ಸ್ಪರ್ಧೆ

ಸಿನಿಮಾ ಮೂಲಕ ಶಾಂತಿ ಮತ್ತು ಅಹಿಂಸೆಯ ಆಚರಣೆ:  55 ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನ.28 ರಂದು ಐ.ಸಿ.ಎಫ್‌.ಟಿ- ಯುನೆಸ್ಕೋ ಗಾಂಧಿ ಪದಕ ಪ್ರದಾನ

ಪತ್ರಿಕಾಗೋಷ್ಠಿಯಲ್ಲಿ ಐ.ಸಿ.ಎಫ್‌.ಟಿ-ಯುನೆಸ್ಕೋ ಗಾಂಧಿ ಪ್ರಶಸ್ತಿ ತೀರ್ಪುಗಾರರು

ಸಿನಿಮಾದ ಶ್ರೇಷ್ಠತೆ ಮತ್ತು ಗಾಂಧಿ ಮೌಲ್ಯಗಳನ್ನು ಗೌರವಿಸುವ ಸಂಪ್ರದಾಯವನ್ನು ಮುಂದುವರಿಸುತ್ತಾ, 55ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್‌ಎಫ್ಐ) ನಲ್ಲಿ ಐಸಿಎಫ್‌ಟಿ-ಯುನೆಸ್ಕೋ  ಗಾಂಧಿ ಪದಕ ಪ್ರದಾನ ಮಾಡಲಾಗುವುದು.

ಶಾಂತಿ, ಸಹಿಷ್ಣುತೆ ಮತ್ತು ಅಹಿಂಸೆಯನ್ನು ಆಚರಿಸುತ್ತಾ, ಈ ಪ್ರತಿಷ್ಠಿತ ಪ್ರಶಸ್ತಿಯು ಯುನೆಸ್ಕೋ ಮತ್ತು ಸಿನಿಮಾ, ದೂರದರ್ಶನ ಮತ್ತು ಶ್ರವ್ಯ-ದೃಶ್ಯ ಸಂವಹನಗಳ ಅಂತಾರಾಷ್ಟ್ರೀಯ ಮಂಡಳಿ (ಐಸಿಎಫ್‌ಟಿ) ನಡುವಿನ ಸಹಯೋಗವಾಗಿದೆ. ಐಸಿಎಫ್‌ಟಿ-ಯುನೆಸ್ಕೋ ಗಾಂಧಿ ಪದಕ ಪ್ರತಿನಿಧಿಗಳು ಮತ್ತು ತೀರ್ಪುಗಾರರು ಗೋವಾದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

2015ರಲ್ಲಿ ಸ್ಥಾಪನೆಯಾದ ಐಸಿಎಫ್‌ಟಿ-ಯುನೆಸ್ಕೋ ಗಾಂಧಿ ಪದಕವು ಮಹಾತ್ಮ ಗಾಂಧಿಯವರ ತತ್ವಗಳನ್ನು ಪ್ರತಿಬಿಂಬಿಸುವ ಚಲನಚಿತ್ರಗಳಿಗೆ ಪ್ರತಿಷ್ಠಿತ ಪ್ರಶಸ್ತಿಯಾಗಿದೆ. ಶಾಂತಿ, ಸಾಮಾಜಿಕ ಸಾಮರಸ್ಯ ಮತ್ತು ಸಹಿಷ್ಣುತೆಯ ವಿಷಯಗಳೊಂದಿಗೆ ಪ್ರೇಕ್ಷಕರನ್ನು ವಿಶೇಷವಾಗಿ ಯುವಜನರನ್ನು ಪ್ರೇರೇಪಿಸುವ ಮತ್ತು ಅವರು ತೊಡಗಿಕೊಳ್ಳುವಂತೆ ಮಾಡುವ ಶಕ್ತಿಗಾಗಿ ಈ ವರ್ಷ, ವಿವಿಧ ಭಾಷೆಗಳು, ಪ್ರಕಾರಗಳು ಮತ್ತು ಸಂಸ್ಕೃತಿಗಳ 10 ಅತ್ಯುತ್ತಮ ಚಲನಚಿತ್ರಗಳ ಕಿರುಪಟ್ಟಿಯನ್ನು ಆಯ್ಕೆ ಮಾಡಲಾಗಿದೆ.

ಈ ಕೆಳಗಿನ ಸದಸ್ಯರನ್ನು ಒಳಗೊಂಡ ಗೌರವಾನ್ವಿತ ತೀರ್ಪುಗಾರರ ಸಮಿತಿಯು ಆಯ್ಕೆ ಪ್ರಕ್ರಿಯೆಯ ಮೇಲ್ವಿಚಾರಣೆ ಮಾಡಿದೆ:

  • ಇಸಾಬೆಲ್ಲೆ ಡ್ಯಾನೆಲ್‌, ಸಿನಿ ವಿಮರ್ಶೆಯ ಅಂತಾರಾಷ್ಟ್ರೀಯ ಒಕ್ಕೂಟ – ಎಫ್ಐಪಿಆರ್‌ಇಎಸ್‌ಸಿಐ ನ ಗೌರವ ಅಧ್ಯಕ್ಷರು
  • ಸರ್ಜ್ ಮೈಕೆಲ್, ಸಿಐಸಿಟಿ – ಐಸಿಎಫ್ಟಿಯ ಉಪಾಧ್ಯಕ್ಷರು,
  • ಮಾರಿಯಾ ಕ್ರಿಸ್ಟಿನಾ ಇಗ್ಲೇಷಿಯಸ್, ಯುನೆಸ್ಕೋದ ಸಾಂಸ್ಕೃತಿಕ ವಲಯ ಕಾರ್ಯಕ್ರಮದ ಮಾಜಿ ಮುಖ್ಯಸ್ಥರು
  • ಡಾ. ಅಹ್ಮದ್ ಬೆಡ್ಜೌಯಿ, ಅಲ್ಜೀರ್ಸ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಕಲಾತ್ಮಕ ನಿರ್ದೇಶಕರು
  • ಕ್ಸುಯಾನ್‌ ಹನ್, ಸೃಜನಶೀಲತೆ ಮತ್ತು ನಾವಿನ್ಯತೆಗಾಗಿನ ವೇದಿಕೆ ಸಿಐಸಿಟಿ-ಐಸಿಎಫ್‌ಟಿಯ ಯುವ ಶಾಖೆಯ ನಿರ್ದೇಶಕರು

ಚಲನಚಿತ್ರಗಳ ನೈತಿಕತೆಯ ಆಳ, ಕಲಾತ್ಮಕ ಶ್ರೇಷ್ಠತೆ ಮತ್ತು ಅಂತರ್‌ ಸಾಂಸ್ಕೃತಿಕ ಸಂವಾದವನ್ನು ಪೋಷಿಸುವ ಸಾಮರ್ಥ್ಯವನ್ನು ಆಧರಿಸಿ ತೀರ್ಪುಗಾರರ ಸಮಿತಿಯು ಚಿತ್ರಗಳ ಮೌಲ್ಯಮಾಪನ ಮಾಡಿದೆ. ಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ವಿಜೇತರ ಹೆಸರನ್ನು ಘೋಷಿಸಲಾಗುವುದು.

ಪ್ರಶಸ್ತಿಯ ಮಹತ್ವದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಎನ್ಎಫ್ಡಿಸಿಯ ಕಲಾತ್ಮಕ ನಿರ್ದೇಶರಾದ ಶ್ರೀ ಪಂಕಜ್ ಸಕ್ಸೇನಾ ಅವರು, “ಈ ಪದಕವು ಐಎಫ್ಎಫ್ಐನ ಪ್ರಮುಖ ಮೌಲ್ಯಗಳನ್ನು ಪ್ರತಿನಿಧಿಸುತ್ತದೆ. ಇಂದಿನ ಜಗತ್ತಿನಲ್ಲಿ, ಅಂತರ್‌ ಸಾಂಸ್ಕೃತಿಕ ಸಂವಾದದ ಅಗತ್ಯ ಅತಿಮುಖ್ಯವಾಗಿದೆ. ಅರ್ಥೈಸುವಿಕೆ, ಸಹಿಷ್ಣುತೆ ಮತ್ತು ಪ್ರೀತಿಯ ಮೌಲ್ಯಗಳನ್ನು ಪೋಷಿಸುತ್ತಾ ವೈವಿಧ್ಯಮಯ ಸಂಸ್ಕೃತಿಗಳನ್ನು ಒಟ್ಟುಗೂಡಿಸುವ ಶಕ್ತಿಯನ್ನು ಸಿನಿಮಾ ಹೊಂದಿದೆ. ಅದಕ್ಕಾಗಿಯೇ ನಾವು ಈ ಪಾಲುದಾರಿಕೆಯ 10 ನೇ ವಾರ್ಷಿಕೋತ್ಸವವನ್ನು ಆಚರಿಸಲು ಹೆಮ್ಮೆಪಡುತ್ತೇವೆ.

ತೀರ್ಪುಗಾರರ ಸದಸ್ಯರಾದ ಕ್ಸುಯಾನ್‌ ಹನ್ ಅವರು, 2015 ರಿಂದ ಸಹಯೋಗದ ವಿಕಸನದ ಬಗ್ಗೆ ವಿವರಿಸಿದರು. “ಪ್ರತಿ ವರ್ಷ, ನಾವು ಯುನೆಸ್ಕೋದ ತತ್ವಗಳು ಹಾಗೂ ಗಾಂಧಿಯವರ ಶಾಂತಿ ಮತ್ತು ಅಹಿಂಸೆಯ ಬೋಧನೆಗಳಿಗೆ ಹೊಂದಿಕೆಯಾಗುವ ಚಲನಚಿತ್ರಗಳನ್ನು ಆಯ್ಕೆ ಮಾಡುತ್ತೇವೆ. ಈ ವರ್ಷ, ಕ್ರಾಸಿಂಗ್, ಫಾರ್ ರಾಣಾ, ಲೆಸನ್ ಲರ್ನ್ಡ್, ಮೀಟಿಂಗ್ ವಿತ್ ಪೋಲ್ ಪಾಟ್, ಸಾತು -ಇಯರ್ ಆಫ್ ದಿ ರಾಬಿಟ್, ಟ್ರಾನ್ಸ್ಅಮಜೋನಿಯಾ, ಅನ್ಸಿಂಕಬಲ್, ಅಮರ್ ಬಾಸ್, ಜೂಐಫೂಲ್ ಮತ್ತು ಶ್ರೀಕಾಂತ್ನಂತಹ ಅಸಾಮಾನ್ಯ ಚಿತ್ರಗಳು ಈ ವರ್ಷದ ಪ್ರದರ್ಶನ ಪಟ್ಟಿಯಲ್ಲಿವೆ. ಕಥಾ ನಿರೂಪಣೆಯ ವೈವಿಧ್ಯತೆಯು ಅತ್ಯಂತ ಸ್ಪೂರ್ತಿದಾಯಕವಾಗಿದೆ” ಎಂದು ಅವರು ವಿವರಿಸಿದರು.

ಸಿನಿಮಾದ ಮೂಲಕ ಯುವಕರನ್ನು ತೊಡಗಿಸಿಕೊಳ್ಳುವುದರ ಮಹತ್ವವನ್ನು ಒತ್ತಿ ಹೇಳಿದ ಅವರು, ತರಬೇತಿ ಕಾರ್ಯಾಗಾರಗಳು ಅವಕಾಶಗಳೊಂದಿಗೆ ಯುವ ಚಲನಚಿತ್ರ ನಿರ್ಮಾತೃಗಳನ್ನು ಸಬಲೀಕರಣಗೊಳಿಸುವ ಮತ್ತು ಜಾಗತಿಕ ಮಟ್ಟದಲ್ಲಿ ಅವರ ಕೆಲಸವನ್ನು ಪ್ರದರ್ಶಿಸುವ ಯುನೆಸ್ಕೋದ ದೂರದೃಷ್ಟಿಯನ್ನು ಹಂಚಿಕೊಂಡರು.

ಯುವ ಚಲನಚಿತ್ರ ನಿರ್ಮಾತೃಗಳನ್ನು ಪೋಷಿಸಲು ಒತ್ತು ನೀಡುವ “ಕ್ಷಿತಿಜ್ - ಎ ಹಾರಿಜಾನ್” ಗಾಗಿ 2017 ರ ಗಾಂಧಿ ಪದಕ ಪುರಸ್ಕೃತರಾದ ಶ್ರೀ ಮನೋಜ್ ಮೋಹನ್ ಕದಮ್ ಅವರು " ಯುವ ಚಲನಚಿತ್ರ ನಿರ್ಮಾತೃಗಳು  ಸಾಮಾಜಿಕ ಮೌಲ್ಯಗಳನ್ನು ಪ್ರತಿಬಿಂಬಿಸುವ ವಿಷಯಾಧಾರಿತ ಚಲನಚಿತ್ರಗಳನ್ನು ತೆರೆಗೆ ತರುವುದನ್ನು ನೋಡುವುದು ಸಂತೋಷಕರ” ಎಂದು ಉದ್ಗರಿಸಿದ್ದಾರೆ.

ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ಶ್ರೀ ಮನೋಜ್ ಕದಂ ಅವರು ಗಾಂಧಿ ಪದಕದಲ್ಲಿ ಮೂಡಿಸಿರುವ "ಕತ್ತಲೆಯ ನಡುವೆ, ಬೆಳಕಿನ ಮೇಲುಗೈ" ಎಂಬಂತೆ ಎಲ್ಲಾ ವರ್ಗದಲ್ಲಿರುವ ಎಲ್ಲಾ ಚಲನಚಿತ್ರಗಳು ಭರವಸೆ, ಶಾಂತಿ ಮತ್ತು ಸಾಮಾಜಿಕ ಸಾಮರಸ್ಯದ ಆಶಾಕಿರಣವನ್ನು ಪ್ರತಿಬಿಂಬಿಸುತ್ತವೆ” ಎಂದು ಹೇಳಿದರು.

ಯುನೆಸ್ಕೋ ಮಹಾನಿರ್ದೇಶಕ ಆಡ್ರೆ ಅಜೌಲೆ ಅವರು ಶಾಂತಿ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ಸಿನಿಮಾದ ಪಾತ್ರವನ್ನು ಬೆಂಬಲಿಸಿದ್ದಾರೆ ಮತ್ತು ಭವಿಷ್ಯದಲ್ಲಿ ಜಾಗತಿಕ ಸಾಮರಸ್ಯವನ್ನು ಪ್ರೇರೇಪಿಸುವ ಕಥೆ ಹೇಳುವಿಕೆಯನ್ನು ಉತ್ತೇಜಿಸಲು ಐಸಿಎಫ್‌ಟಿ ಹಲವಾರು ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಹೇಳಿದ್ದಾರೆ.

ಐಸಿಎಫ್‌ಟಿ-ಯುನೆಸ್ಕೋ ಗಾಂಧಿ ಪದಕವು ಪ್ರಸ್ತುತದ ಜಗತ್ತಿನಲ್ಲಿ ಮಹಾತ್ಮ ಗಾಂಧಿಯವರ ಅಚ್ಚಳಿಯ ಕೊಡುಗೆಯನ್ನು ಗೌರವಿಸುತ್ತಾ ಶಾಂತಿ ಮತ್ತು ಸೌಹಾರ್ದತೆಯ ವೇಗವರ್ಧಕವಾಗಿ ಸಿನಿಮಾದ ಶಕ್ತಿಯನ್ನು ಉದಾಹರಿಸುತ್ತದೆ. 

ಹೆಚ್ಚಿನ ಓದಿಗೆ: https://pib.gov.in/PressReleseDetailm.aspx?PRID=2072716&reg=1&lang=1

ಪತ್ರಿಕಾಗೋಷ್ಠಿಯನ್ನು ಇಲ್ಲಿ ವೀಕ್ಷಿಸಿ: 

 

*****

iffi reel

(Release ID: 2078308) Visitor Counter : 8