ವಾರ್ತಾ ಮತ್ತು ಪ್ರಸಾರ ಸಚಿವಾಲಯ
25 ವರ್ಷಗಳನ್ನು ಪೂರೈಸಿದ 'ತಾಲ್': 'ಮ್ಯಾಜಿಕ್, ಮೆಮೊರಿ ಮತ್ತು ನಾಸ್ಟಾಲ್ಜಿಯಾ' - 55ನೇ ಐಎಫ್ಎಫ್ಐನಲ್ಲಿ ಸುಭಾಷ್ ಘಾಯ್ ಅವರ 'ತಾಲ್' ವಿಶೇಷ ಪ್ರದರ್ಶನ
"ಇತ್ತೀಚಿನ ದಿನಗಳಲ್ಲಿ ಪ್ರಸಿದ್ದ ಸ್ಟುಡಿಯೋಗಳ ಒತ್ತಡದಿಂದಾಗಿ ನಿರ್ಜೀವ ಸಿನೆಮಾವನ್ನು ನಿರ್ಮಿಸಲಾಗುತ್ತಿದೆ" - ಚಲನಚಿತ್ರ ನಿರ್ಮಾಪಕ ಸುಭಾಷ್ ಘಾಯ್
ಇಂದು, 'ತಾಲ್'ನ 25ನೇ ವಾರ್ಷಿಕೋತ್ಸವವನ್ನು 'ಐಎಫ್ಎಫ್ಐ 2024'ರ ಸಂದರ್ಭದಲ್ಲಿ ಆಚರಿಸಲಾಯಿತು, ಚಿತ್ರದ ವಿಶೇಷ ಪ್ರದರ್ಶನದೊಂದಿಗೆ, ನಿರ್ದೇಶಕ ಸುಭಾಷ್ ಘಾಯ್, ಗಾಯಕಿ ಕವಿತಾ ಕೃಷ್ಣಮೂರ್ತಿ ಮತ್ತು ನಟಿ ಜೀವಿತಾ ಶರ್ಮಾ ಸೇರಿದಂತೆ 'ತಾಲ್' ತಂಡವು ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿತ್ತು.
ಇಂದಿಗೂ ಈ ಚಿತ್ರದ ಭಾರಿ ಜನಪ್ರಿಯತೆಯನ್ನು ಉಲ್ಲೇಖಿಸಿದ ಶ್ರೀ ಘಾಯ್ ಅವರು, ಈ ಚಿತ್ರವನ್ನು ನೋಡದ ಪ್ರೇಕ್ಷಕರಿಲ್ಲ ಎಂದು ಹೇಳಿದರು.
"ಕೆಲವು ಚಲನಚಿತ್ರಗಳು ದೀರ್ಘಾಯುಷ್ಯವನ್ನು ಹೊಂದಿವೆ. ಅವು ಪ್ರೇಕ್ಷಕರೊಂದಿಗೆ ಸದಾ ಉಳಿಯುತ್ತವೆ. ನಿಮಗೆ ಬೇಜಾರಾದಾಗ, ನೀವು ತಾಲ್ ನಂತಹ ಚಲನಚಿತ್ರವನ್ನು ನೋಡಲು ಬಯಸುತ್ತೀರಿ " ಎಂದು ಚಿತ್ರದ ಪ್ರಮುಖ ನಟ ಅನಿಲ್ ಕಪೂರ್ ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.
"ಸುಭಾಷ್ ಘಾಯ್ ಅವರು ಉದ್ಯಮದ ಮಾಸ್ಟರ್ ಶೋಮ್ಯಾನ್ ಆಗಿದ್ದು, ಅನೇಕ ಶ್ರೇಷ್ಠ ಕೃತಿಗಳನ್ನು ರಚಿಸಿದ್ದಾರೆ. ದೊಡ್ಡ ಪರದೆಯ ಬಗ್ಗೆ ಶ್ರೀ ಘಾಯ್ ಅವರ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಲು ನಾವೆಲ್ಲರೂ ತಾಲ್ ಅನ್ನು ನೋಡಬೇಕು " ಎಂದು ಚಿತ್ರದಲ್ಲಿ ನಟಿಸಿದ ಸೌರಭ್ ಶುಕ್ಲಾ ವೀಡಿಯೊ ಸಂದೇಶದ ಮೂಲಕ ಹೇಳಿದರು.
'ತಾಲ್' ವೆರೈಟಿಯ ಟಾಪ್ 10ರ ಬಾಕ್ಸ್ ಆಫೀಸ್ ಪಟ್ಟಿಯಲ್ಲಿ ಪ್ರವೇಶಿಸಿದ ಮೊದಲ ಭಾರತೀಯ ಚಿತ್ರವಾಗಿದೆ. ಈ ಚಿತ್ರಕ್ಕೆ ಸಂಗೀತ ಸಂಯೋಜಿಸಲು ಎ. ಆರ್. ರೆಹಮಾನ್ ಅವರನ್ನು ಹೇಗೆ ಮನವೊಲಿಸಿದರು ಎಂಬುದನ್ನು ಸುಭಾಷ್ ಘಾಯ್ ವಿವರಿಸಿದರು. ಅವರು ರೆಹಮಾನ್ ಅವರಿಗೆ, "ನಾನು ಈ ಸಂಗೀತಮಯ ಚಿತ್ರವನ್ನು ಮಾಡುತ್ತಿದ್ದೇನೆ. ಅಂದರೆ ನೀವು ನನ್ನ ಚಿತ್ರದ ನಾಯಕ ಮತ್ತು ನಾನು ಅದರ ನಿರ್ದೇಶಕ" ಎಂದು ಹೇಳಿದ್ದರಂತೆ!
ಶ್ರೀ ಘಾಯ್ ಅವರು ಈ ಚಲನಚಿತ್ರದ ಬಗ್ಗೆ ತಮ್ಮ ದೃಷ್ಟಿಕೋನ ಹಾಗೂ ಒಳನೋಟಗಳನ್ನು ಹಂಚಿಕೊಂಡರು. ಈ ಚಿತ್ರದ ನಾಯಕಿ ಪಾತ್ರವು ಈ ಚಿತ್ರ ಕೊನೆಗೊಳ್ಳುವವರೆಗೆ 7 ಹಂತಗಳ ಅಭಿವೃದ್ಧಿಯ ಮೂಲಕ ಸಾಗುತ್ತದೆ, ಇದು ಈ ಚಿತ್ರಕ್ಕೆ ಸಂಬಂಧಿಸಿದ 7 'ಸುರ್' (ಸಂಗೀತ ಸ್ವರಗಳು) ಅನ್ನು ಸಂಕೇತಿಸುತ್ತದೆ ಎಂದರು.
ಈ ಚಿತ್ರವು ಅಕ್ಷಯ್ ಖನ್ನಾ ಪ್ರತಿನಿಧಿಸುವ ಪ್ರೀತಿಯ ಶುದ್ಧತೆ ಮತ್ತು ಅನಿಲ್ ಕಪೂರ್ ಪ್ರತಿನಿಧಿಸುವ ಭೌತಿಕ ಪ್ರಪಂಚದ ನಡುವಿನ ಹೋರಾಟವನ್ನು ತೋರಿಸುತ್ತದೆ ಎಂದು ಶ್ರೀ ಘಾಯ್ ಹೇಳಿದರು.
"ಈ ಚಿತ್ರದಲ್ಲಿ ಸಂಗೀತ, ಸಂಯೋಜನೆ, ನಟನೆ, ವೇಷಭೂಷಣ ಎಲ್ಲವೂ ಒಂದಕ್ಕೊಂದು ಸಿಂಕ್ ಆಗಿತ್ತು, ಏಕೆಂದರೆ ಇಂದಿನಂತೆ ಚಲನಚಿತ್ರಗಳಿಗೆ ಹಣಕಾಸು ಒದಗಿಸುವ ಯಾವುದೇ ದೊಡ್ಡ ಸ್ಟುಡಿಯೋಗಳಿಂದ ನಾನು ಒತ್ತಡಕ್ಕೆ ಒಳಗಾಗಲಿಲ್ಲ. ನಾನು ಬಾಕ್ಸ್ ಆಫೀಸ್ ಅಂಕಿಅಂಶಗಳ ಬಗ್ಗೆಯೂ ತಲೆ ಕೆಡಿಸಿಕೊಳ್ಳಲಿಲ್ಲ. ಒಬ್ಬ ನಿರ್ದೇಶಕನು ಚಿತ್ರದ ಹಣಕಾಸಿನ ಬಗ್ಗೆ ಅತಿಯಾಗಿ ಯೋಚಿಸಿದಾಗ ಅದು ಖಂಡಿತವಾಗಿಯೂ ನಿರ್ದೇಶನದ ಕೆಲಸದ ಪರಿಣಾಮ ಬೀರುತ್ತದೆ" ಎಂದು ಶ್ರೀ ಘಾಯ್ ವಿಷಾದಿಸಿದರು.
ಪರಿಪೂರ್ಣ ಧ್ವನಿಯನ್ನು ಪಡೆಯಲು ಕವಿತಾ ಕೃಷ್ಣಮೂರ್ತಿಯವರು ಗಂಟೆಗಳ ಕಾಲ ಹಾಡಬೇಕಾಯಿತು ಎಂದು ಸುಭಾಷ್ ಘಾಯ್ ಚಿತ್ರ ನಿರ್ಮಾಣದ ಸಮಯದಲ್ಲಿ ಕಲಾವಿದರ ಸಮರ್ಪಣೆಯನ್ನು ವಿವರಿಸಿದರು.
"ಭಾರತೀಯ ಕೇಳುಗರಿಗೆ ಮಾತ್ರವಲ್ಲದೆ ಪ್ರಪಂಚದಾದ್ಯಂತದ ಕೇಳುಗರಿಗೆ ಇಷ್ಟವಾಗುವ ರೀತಿಯಲ್ಲಿ ಹಾಡಲು ನಾನು ಪ್ರಯತ್ನಿಸಿದ್ದೇನೆ" ಎಂದು ಖ್ಯಾತ ಗಾಯಕಿ ಕವಿತಾ ಕೃಷ್ಣಮೂರ್ತಿಯವರು 'ತಾಲ್' ಗಾಗಿ ಹಾಡಿದ ಸೂಪರ್ ಹಿಟ್ ಹಾಡುಗಳನ್ನು ನೆನಪಿಸಿಕೊಂಡರು.
"ನಾನು ಉದ್ಯಮಕ್ಕೆ ಹೊಸಬಳಾಗಿದ್ದೆ. ತಾಲ್ ಚಿತ್ರದ ಅವಕಾಶವು ಉದ್ಯಮದ ಅತ್ಯುತ್ತಮರಿಂದ ಕಲಿಯಲು ನನಗೆ ಪರಿಪೂರ್ಣ ಅವಕಾಶವನ್ನು ನೀಡಿತು" ಎಂದು ಚಿತ್ರದಲ್ಲಿ ಇಳಾ (ಐಶ್ವರ್ಯಾ ರೈ, ಪ್ರಮುಖ ಪಾತ್ರದ ಸಹೋದರಿಯರಲ್ಲಿ ಒಬ್ಬರು) ಪಾತ್ರವನ್ನು ನಿರ್ವಹಿಸಿದ ಜೀವಿಧಾ ಶರ್ಮಾ ಹೇಳಿದರು.
ಪತ್ರಿಕಾಗೋಷ್ಠಿ ಇಲ್ಲಿದೆ ನೋಡಿ:
*****
(Release ID: 2078297)
Visitor Counter : 28