ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಐಎಫ್ಎಫ್ಐ ಚಲನಚಿತ್ರಗಳಾದ 'ಫಾರ್ ರಾಣಾ' ಮತ್ತು 'ದಿ ನ್ಯೂ ಇಯರ್ ದಟ್ ನೆವರ್ ಕಮ್' ಸ್ವಯಂ ಅನ್ವೇಷಣೆ ಮತ್ತು ತ್ಯಾಗ ಮತ್ತು ಶೋಷಣೆ ಮತ್ತು ದಬ್ಬಾಳಿಕೆಯ ಭಯಾನಕ ಛಾಯೆಗಳನ್ನು ನಿರೂಪಿಸುತ್ತದೆ
ಭಾರತೀಯ ಪ್ರೇಕ್ಷಕರು ಸಿನೆಮಾವನ್ನು ಆಳವಾಗಿ ಗೌರವಿಸುತ್ತಾರೆ. ಸಿನೆಮಾದೊಂದಿಗೆ ಉತ್ಸಾಹದಿಂದ ತೊಡಗುತ್ತಾರೆ: ನಿರ್ದೇಶಕ ಇಮಾನ್ ಯಾಜ್ದಿ
'ಫಾರ್ ರಾಣಾ' ಮಧ್ಯಮ ವರ್ಗದ ಜೀವನದ ಹೋರಾಟಗಳು ಮತ್ತು ದುರ್ಬಲತೆಗಳನ್ನು ನಿರೂಪಿಸುತ್ತದೆ: ನಿರ್ದೇಶಕ ಇಮಾನ್ ಯಾಜ್ದಿ
'ದಿ ನ್ಯೂ ಇಯರ್ ದಟ್ ನೆವರ್ ಕಮ್' ಸಿಂಫೋನಿಕ್ ದೃಷ್ಟಿಕೋನದೊಂದಿಗೆ ಡಾರ್ಕ್ ಕಾಮಿಡಿ: ನಿರ್ದೇಶಕ ಬೊಗ್ಡಾನ್ ಮುರೇಸಾನು
55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು (ಐಎಫ್ಎಫ್ಐ) ಎರಡು ಸಿನಿಮೀಯ ರತ್ನಗಳನ್ನು ಹೊರತಂದಿದೆ. ಅವುಗಳೆಂದರೆ ಪ್ರತಿಷ್ಠಿತ 'ಐಸಿಎಫ್ಟಿ ಯುನೆಸ್ಕೋ ಗಾಂಧಿ ಪದಕ'ಕ್ಕೆ ಸ್ಪರ್ಧಿಸುತ್ತಿರುವ ಇರಾನಿನ ಮೇರುಕೃತಿ 'ಫಾರ್ ರಾಣಾ' ಮತ್ತು ಗೌರವಾನ್ವಿತ 'ಅಂತರರಾಷ್ಟ್ರೀಯ ಸ್ಪರ್ಧೆ' ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ರೊಮೇನಿಯನ್ ಚಿತ್ರ 'ದಿ ನ್ಯೂ ಇಯರ್ ದಟ್ ನೆವರ್ ಕಮ್'. ದೂರದೃಷ್ಟಿಯ ನಿರ್ದೇಶಕರು ಮತ್ತು ನಿರ್ಮಾಪಕರಿಂದ ತಯಾರಿಸಲ್ಪಟ್ಟ ಈ ಚಲನಚಿತ್ರಗಳು ಸಾಮಾನ್ಯ ಕಥೆ ಹೇಳುವ ವೈಖರಿಯನ್ನು ಮೀರಿ, ಸ್ವಯಂ-ಅನ್ವೇಷಣೆ, ತ್ಯಾಗ ಮತ್ತು ಶೋಷಣೆ ಮತ್ತು ದಬ್ಬಾಳಿಕೆಯ ಭಯಾನಕ ನೆರಳುಗಳನ್ನು ಆಳವಾದ ನಿರೂಪಿಸುವತ್ತ ಸಾಗುತ್ತವೆ.
ಮಾಧ್ಯಮ ಸಂವಾದದ ಸಮಯದಲ್ಲಿ, 'ಫಾರ್ ರಾಣಾ' ನಿರ್ದೇಶಕರಾದ ಇಮಾನ್ ಯಾಜ್ದಿ, ಈ ಚಿತ್ರವು ಮಧ್ಯಮ ವರ್ಗದ ಜನರ ಹೋರಾಟಗಳು, ದೌರ್ಬಲ್ಯಗಳು ಮತ್ತು ಸಾಮಾಜಿಕ ಪರಿಣಾಮವನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದ್ದಾರೆ. ಐಎಫ್ಎಫ್ಐನಲ್ಲಿ ಅವರ ಅನುಭವದ ಬಗ್ಗೆ ಕೇಳಿದಾಗ, ಭಾರತೀಯ ಪ್ರೇಕ್ಷಕರು ಸಿನೆಮಾವನ್ನು ನಿಜವಾಗಿಯೂ ಗೌರವಿಸುತ್ತಾರೆ ಎಂದು ಉಲ್ಲೇಖಿಸಿದ ಅವರು, ಭಾರತದ ಜನರು ಚಲನಚಿತ್ರಗಳ ಬಗ್ಗೆ ಅನುಭವಿಸುವ ಉತ್ಸಾಹ ಮತ್ತು ಅದರ ಸಂಪರ್ಕವನ್ನು ಗಮನಿಸಿದರು. ಥ್ರಿಲ್ಲರ್ ಪ್ರಕಾರದ ಈ ಚಿತ್ರದ ಆಯ್ಕೆಯು ತಂದೆ-ಮಗನ ಸಂಬಂಧದಿಂದ ಪ್ರೇರಿತವಾಗಿದೆ ಎಂದು ಅವರು ಹೇಳಿದರು, ಸಾಮಾಜಿಕ ಒತ್ತಡಗಳು ಮತ್ತು ಸಂದರ್ಭಗಳು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ವ್ಯಕ್ತಿಗಳ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂಬುದನ್ನು ಈ ಚಿತ್ರವು ಎತ್ತಿ ತೋರಿಸುತ್ತದೆ.
ಈ ಮಧ್ಯೆ, 'ದಿ ನ್ಯೂ ಇಯರ್ ದಟ್ ನೆವರ್ ಕಮ್' ಚಿತ್ರದ ನಿರ್ದೇಶಕರಾದ ಬೊಗ್ಡಾನ್ ಮುರೇಸಾನು, ತಮ್ಮ ಚಿತ್ರವನ್ನು ಆ ಕಾಲದ ಕೆಲವೇ ದೂರದರ್ಶನ ಕ್ರಾಂತಿಗಳಲ್ಲಿ ಒಂದಾದ ರೊಮೇನಿಯನ್ ಕ್ರಾಂತಿಯ ಹಿನ್ನೆಲೆಯಲ್ಲಿ ರಚಿಸಲಾದ ದುರಂತ ಹಾಸ್ಯ ಎಂದು ಬಣ್ಣಿಸಿದ್ದಾರೆ. ಈ ವಿಷಯದ ಬಗ್ಗೆ ವ್ಯಾಪಕ ಸಂಶೋಧನೆ ಮಾಡಿದ ಅವರು ಆ ಅವಧಿಯ ನಾಟಕವನ್ನು ರಚಿಸುವಾಗ ತಮಗೆ ಎದುರಾದ ಸವಾಲುಗಳನ್ನು ಮುರೇಸಾನು ಅವರು ಉಲ್ಲೇಖಿಸಿದರು. ಈ ಚಲನಚಿತ್ರವನ್ನು ಮಾಡಲು ಪ್ರೇರೇಪಿಸಿದ ಇತಿಹಾಸದ ವ್ಯಂಗ್ಯವನ್ನು ಅವರು ನಿರೂಪಿದ್ದಾರೆ. ತಮ್ಮ ಐಎಫ್ಎಫ್ಐ ಅನುಭವವನ್ನು ವಿವರಿಸಿದ ಅವರು, ಚಲನಚಿತ್ರ ಮಾಧ್ಯಮವು ಸಾರ್ವತ್ರಿಕ ಭಾಷೆಯನ್ನು ನೀಡಿ, ವಿವಿಧ ದೇಶದ ಜನರು ಪರಸ್ಪರ ಸಂಪರ್ಕ ಹೊಂದಿ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದರು.
ಈ ಚಲನಚಿತ್ರಗಳ ಬಗ್ಗೆ:
- 1. 'ಫಾರ್ ರಾಣಾ': ಆರೀಫ್ ಎಂಬ ಪಾತ್ರವು ತನ್ನ ಪತ್ನಿ ಮತ್ತು ಮಗಳು ರಾಣಾ ಅವರೊಂದಿಗೆ ವಾಸಿಸುತ್ತಿದ್ದು, ಮೋಟಾರ್ ಸೈಕಲ್ ರಾಂಪ್ ಜಂಪ್ ನಲ್ಲಿ ವಿಶ್ವ ದಾಖಲೆಯನ್ನು ಮುರಿಯುವ ಕನಸು ಕಾಣುತ್ತಾನೆ. ಅವನು ಈ ಮಹತ್ವಾಕಾಂಕ್ಷೆಯ ಗುರಿ ಸಾಧಿಸಲು ತಯಾರಿ ನಡೆಸುತ್ತಿರುವಾಗ, ಅವನು ಕುಟುಂಬದ ಸಂದಿಗ್ಧತೆಯ ಸಂಘಟನೆಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ, ಅದನ್ನು ಅವನು ಹೇಗೆ ಎದುರಿಸಿ ನಿಲ್ಲುತ್ತಾನೆ ಎಂಬುದು ಈ ಚಿತ್ರದ ಸಾರಾಂಶ.
- 2. 'ದಿ ನ್ಯೂ ಇಯರ್ ದಟ್ ನೆವರ್ ಕಮ್': ಸೆಯುಸೆಸ್ಕು ಅವರ ಸರ್ವಾಧಿಕಾರದ ಅಡಿಯಲ್ಲಿ ದಶಕಗಳ ಕ್ರೂರ ದಬ್ಬಾಳಿಕೆಯ ನಂತರ, ರೊಮೇನಿಯಾ ಕ್ರಾಂತಿಯ ಅಂಚಿನಲ್ಲಿದ್ದು, ಆಡಳಿತವನ್ನು ಅಪಹಾಸ್ಯ ಮಾಡುವ ಬೀದಿ ಪ್ರದರ್ಶನಗಳು ಮತ್ತು ವಿದ್ಯಾರ್ಥಿ ಕಲೆಯ ನಡುವೆ, ಕುಟುಂಬಗಳ ವೈಯಕ್ತಿಕ ಸಂಘರ್ಷಗಳು ಮತ್ತು ಸದಾ ಗಮನಿಸುತ್ತಿರುವ ರಹಸ್ಯ ಪೊಲೀಸರೊಂದಿಗೆ ಅವರ ರಹಸ್ಯ ಹೋರಾಟ. ಒಂದೇ ದಿನದಲ್ಲಿ, ಸಂಬಂಧವಿಲ್ಲದ ಆರು ವ್ಯಕ್ತಿಗಳ ಪರಸ್ಪರ ಭೇಟಿ, ಬದಲಾವಣೆಯ ಭರವಸೆಯನ್ನು ಹುಟ್ಟುಹಾಕಿ ಭಯದಲ್ಲಿ ಬದುಕುವ ಚಿತ್ರಣವನ್ನು ಬಹಿರಂಗಪಡಿಸುತ್ತವೆ. ಉದ್ವಿಗ್ನತೆಗಳು ಉಲ್ಬಣಗೊಳ್ಳುತ್ತಿದ್ದಂತೆ, ಒಂದು ನಿರ್ಣಾಯಕ ಕ್ಷಣವು ಅವರನ್ನು ಒಗ್ಗೂಡಿಸುತ್ತದೆ. ಇದು ಸೆಸೆಸ್ಕು ಮತ್ತು ಕಮ್ಯುನಿಸ್ಟ್ ಆಡಳಿತದ ನಾಟಕೀಯ ಪತನಕ್ಕೆ ಕಾರಣವಾಗುತ್ತದೆ. ಇದು ಈ ಚಿತ್ರದ ಸಾರಾಂಶ
ಪತ್ರಿಕಾಗೋಷ್ಠಿಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ:
*****
(Release ID: 2078296)
Visitor Counter : 20